ಶಾರುಖ್‌ಗೆ ನಟನೆಯೇ ಗೊತ್ತಿಲ್ಲ, ನೋಡೊಕು ಚೆನ್ನಾಗಿಲ್ಲ: ಪಾಕ್ ನಟಿಯ ಶಾಕಿಂಗ್ ಹೇಳಿಕೆ ವೈರಲ್

Published : Jul 07, 2023, 05:22 PM ISTUpdated : Jul 07, 2023, 05:25 PM IST
ಶಾರುಖ್‌ಗೆ ನಟನೆಯೇ ಗೊತ್ತಿಲ್ಲ, ನೋಡೊಕು ಚೆನ್ನಾಗಿಲ್ಲ: ಪಾಕ್ ನಟಿಯ ಶಾಕಿಂಗ್ ಹೇಳಿಕೆ ವೈರಲ್

ಸಾರಾಂಶ

ಶಾರುಖ್‌ಗೆ ನಟನಯೇ ಗೊತ್ತಿಲ್ಲ, ನೋಡೊಕು ಚೆನ್ನಾಗಿಲ್ಲ ಎಂದು ಪಾಕಿಸ್ತಾನದ ನಟಿ ಮಹ್ನೂರ್ ಬಲೋಚ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. 

ಕಿಂಗ್ ಖಾನ್ ಶಾರುಖ್ ಖಾನ್ ವಿಶ್ವ ಮಟ್ಟದ ಖ್ಯಾತಿ ಗಳಿಸಿದ ಬಾಲಿವುಡ್ ಸ್ಟಾರ್. ಕೇವಲ ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಕಿಂಗ್ ಖಾನ್‌ಗೆ ಅಭಿಮಾನಿಗಳಿಗಳಿದ್ದಾರೆ. ಆಕ್ಟಿಂಗ್, ಲುಕ್ ಸೇರಿದಂತೆ ಅನೇಕ ವಿಚಾರಗಳಿಗೆ ಕಿಂಗ್ ಖಾನ್ ಅವರನ್ನು ಪ್ರೀತಿಸುತ್ತಾರೆ. ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಸಿನಿಮಾರಂಗಕ್ಕೆ ಬಂದು 3 ವರ್ಷಗಳ ಮೇಲಾದರೂ ಅದೇ ಫೇಮ್, ಸ್ಟಾರ್‌ಗಿರಿ ಉಳಿಸಿಕೊಂಡಿದ್ದಾರೆ. ಇಂದಿಗೂ ಶಾರುಖ್ ಸಿನಿಮಾಗಾಗಿ ಅಭಿಮಾನಿಗಳು ನಿದ್ದೆಗೆಟ್ಟು ಕಾಯುತ್ತಾರೆ. ಕಲಾವಿದರ ಜೀವನದ್ಲಲಿ ಸೋಲು ಮತ್ತು ಗೆಲುವು ಇದ್ದೇ ಇರುತ್ತದೆ. ಸಾಲು ಸಾಲು ಸೋಲಿನ ಸುಳಿಯಲ್ಲಿದ್ದ ಶಾರುಖ್ ಪಠಾಣ್ ಮೂಲಕ ಮತ್ತೆ ಟ್ರ್ಯಾಕ್‌ಗೆ ಮರಳಿದ್ದಾರೆ. 

ಕೇವಲ ಲುಕ್ ವ್ಯಕ್ತಿಯ ನಿರ್ಧರಿಸುವುದಿಲ್ಲ. ಶಾರುಖ್ ಒಬ್ಬ ಮಹಾನ್ ಉದ್ಯಮಿ ಎಂದು ಪಾಕ್ ನಟಿ ಮಹ್ನೂರ್ ಬಲೋಚ್ ಹೇಳಿದ್ದಾರೆ. 'ತನ್ನನ್ನು ತಾನು ಹೇಗೆ ಮಾರ್ಕೆಟ್ ಮಾಡಿಕೊಳ್ಳಬೇಕು ಎನ್ನುವುದು ಶಾರುಖ್ ಖಾನ್‌ಗೆ ಗೊತ್ತು' ಎಂದು ಮಹ್ನೂರ್ ಬಲೋಚ್  ಹೇಳಿದ್ದಾರೆ. 

'ಶಾರುಖ್ ಖಾನ್ ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಸೌಂದರ್ಯದ ಎಂದು ಏನಂತ ಕರಿತಾರಲ್ಲ ಅದರ ಅಡಿಯಲ್ಲಿ ಶಾರುಖ್ ಬರಲ್ಲ' ಎಂದಿದ್ದಾರೆ. 'ಶಾರುಖ್ ಖಾನ್ ಅವರಿಗೆ ನಟನೆ ಗೊತ್ತಿಲ್ಲ. ಆದರೆ ಅವರೊಬ್ಬ ದೊಡ್ಡ ಉದ್ಯಮಿ. ಅವರಿಗೆ ತಮ್ಮನ್ನು ತಾವು ಹೇಗೆ ಮಾರ್ಕೆಟ್ ಮಾಡಿಕೊಳ್ಳಬೇಕು ಎನ್ನುವುದು ಗೊತ್ತಿದೆ. ಇದು ಅವರ ಅಭಿಮಾನಿಗಳಿಗೆ ಇಷ್ಟವಾಗದೇ ಇರಬಹುದು ಅದರೂ ಪರವಾಗಿಲ್ಲ. ಅನೇಕ ಉತ್ತಮ ನಟರಿದ್ದಾರೆ ಆದರೆ ಅವರು ಯಶಸ್ವಿಯಾಗಲಿಲ್ಲ' ಎಂದು ಹೇಳಿದ್ದಾರೆ.  

ಬಾಲಿವುಡ್ ಸ್ಟಾರ್ ಶಾರುಖ್ ಖಾನ್‌ಗೆ ಅಪಘಾತ: ತೀವ್ರ ರಕ್ತಸ್ರಾವ, ಅಮೆರಿಕಾದಲ್ಲಿ ಚಿಕಿತ್ಸೆ

ಮಹ್ನೂರ್ ಬಲೋಚ್ ಹೇಳಿಕೆಗೆ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ. ಎಷ್ಟು ಕೆಟ್ಟದಾಗಿ ಹೇಳುತ್ತಿದ್ದಾರೆ. ಶಾರುಖ್ ಎಂತ ಕ್ವಾಲಿಟಿ ನಟ ಮತ್ತು ಲೆಜೆಂಡ್. ಅವರು ಹೇಳಿದ್ದು ತುಂಬಾ ದೊಡ್ಡ ತಪ್ಪು' ಎಂದು ಹೇಳಿದ್ದಾರೆ. ಇನ್ನೂ ಅನೇಕ ಅಭಿಮಾನಿಗಳು ಮಹ್ನೂರ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಶಾರುಖ್ ಬಗ್ಗೆ ಹೀಗೆಲ್ಲ ಹೇಳಬೇಡಿ ಎಂದು ಹೇಳುತ್ತಿದ್ದಾರೆ. 

ಆರ್ಯನ್​ ಡ್ರಗ್ಸ್​ ಕೇಸ್​ಗೆ ಟ್ವಿಸ್ಟ್​: 25 ಕೋಟಿ ಲಂಚ ಕೇಸಲ್ಲಿ ಸಿಲುಕಿದ ಶಾರುಖ್​ಗೆ ಬಂಧನದ ಭೀತಿ? 

ಶಾರುಖ್ ಖಾನ್ ಸದ್ಯ ಎರಡು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪಠಾಣ್ ಸಕ್ಸಸ್‌ನಲ್ಲಿರುವ ಶಾರುಖ್ ಖಾನ್ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ತಮಿಳು ನಿರ್ದೇಶಕ ಆಟ್ಲಿ ಕುಮಾರ್ ಜೊತೆ ಜವಾನ್ ಹಾಗೂ ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಜೊತೆ ಡಂಕಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಎರಡು ಸಿನಿಮಾಗಳ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಎರಡು ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!