ಶಿವರಾಜ್‌ಕುಮಾರ್ ಅಭಿನಯದ 'ಜೈಲರ್' ಸಾಂಗ್​ ರಿಲೀಸ್: ತಮನ್ನಾ ಹಾಟ್​ನೆಸ್​ಗೆ ಫ್ಯಾನ್ಸ್​ ಫಿದಾ

By Suvarna News  |  First Published Jul 7, 2023, 4:32 PM IST

ರಜನಿಕಾಂತ್ ಹಾಗೂ ತಮನ್ನಾ ಅಭಿನಯದ ಜೈಲರ್​ ಚಿತ್ರದ ಸಾಂಗ್​ ರಿಲೀಸ್​ ಆಗಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.
 


ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಹಾಗೂ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಜೊತೆ ನಟ ಶಿವರಾಜ್​ ಕುಮಾರ್​ (Shivaraj Kumar) ನಟಿಸುತ್ತಿರೋ  ಜೈಲರ್ ಸಿನಿಮಾದ ಮಾಸ್ ಲಿರಿಕ್ ಸಾಂಗ್ ನಿನ್ನೆ (ಜುಲೈ 6) ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದು ಸಕತ್​ ವೈರಲ್​ ಆಗಿದೆ.  ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಈ ಗೀತೆಯಲ್ಲಿ ರಜನಿಗೆ ಜೋಡಿಯಾಗಿ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಸನ್‌ ಪಿಕ್ಚರ್ಸ್‌ ಬ್ಯಾನರ್‌ ಅಡಿ ನೆಲ್ಸನ್‌ ಆಕ್ಷನ್‌ ಕಟ್‌ ಹೇಳಿರುವ ಜೈಲರ್‌ ಚಿತ್ರದ ಮೊದಲ ಹಾಡು ಇದಾಗಿದೆ.  ಇಡೀ ಹಾಡನ್ನ ಆದಿವಾಸಿ ಸೆಟ್‌ನಲ್ಲಿಯೇ ಚಿತ್ರೀಕರಿಸಲಾಗಿದೆ. ಈ ಹಾಡು ರಿಲೀಸ್ ಆದ ಒಂದೇ ಗಂಟೆಯಲ್ಲಿ 10 ಲಕ್ಷಕ್ಕೂ ಅಧಿಕ  ವೀವ್ಸ್ ಬಂದಿದೆ.  ಚಿತ್ರದ ಹಾಡುಗಳಿಗೆ ಅನಿರುದ್ಧ್‌ ರವಿಚಂದರ್‌ ಟ್ಯೂನ್ ಹಾಕಿದ್ದು ರಜನಿಕಾಂತ್‌ ಹಾಗೂ ತಮನ್ನಾ ಭಾಟಿಯಾ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. 'ಜೈಲರ್‌' ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಸಿನಿಮಾ ಆಗಸ್ಟ್‌ನಲ್ಲಿ ತೆರೆ ಕಾಣುತ್ತಿದೆ.  ಜೈಲರ್‌ ಚಿತ್ರದ ಮೊದಲ ಹಾಡನ್ನು ನೋಡಿ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

ಚಿತ್ರದ ಕಾವಾಲಯ್ಯ (Kavalayya) ಎಂಬ ಹಾಡು ಇದಾಗಿದೆ.  ಟ್ರೈಬಲ್‌ ಥೀಮ್‌ನಲ್ಲಿ ಈ ಹಾಡು ತಯಾರಾಗಿದ್ದು ತಮನ್ನಾ ಭಾಟಿಯಾ ಹಾಟ್​ ಲುಕ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.  ರಜನಿಕಾಂತ್‌ ಕೂಡಾ ಈ ಹಾಡಿನಲ್ಲಿ ಸಾಲ್ಟ್‌ ಪೆಪ್ಪರ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಅವರ ಸಿನಿ ಪಯಣದಲ್ಲಿ  ಜೈಲರ್ ಚಿತ್ರ ವಿಶೇಷವಾಗಿದೆ. ಆದ್ದರಿಂದ ಈ ಸಿನಿಮಾದ ಮೇಲೆ ಅವರ ನಿರೀಕ್ಷೆ ಕೂಡ ಹೆಚ್ಚಾಗಿದೆ. ತಮನ್ನಾ ಭಾಟಿಯಾ ಅವರು ಐಟಂ ಸಾಂಗ್​ಗಳಲ್ಲಿ ನಟಿಸಿದ್ದು ಇದೇ ಮೊದಲೇನಲ್ಲ. ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದ ‘ಜೋಕೆ ನಾನು ಬಳ್ಳಿಯ ಮಿಂಚು..’ ಹಾಡಿನಲ್ಲಿ ತಮನ್ನಾ ಸ್ಟೆಪ್​ ಹಾಕಿದ ಪರಿಗೆ ಪಡ್ಡೆ ಹುಡುಗರು ಫಿದಾ ಆಗಿದ್ದರು. ತೆಲುಗು, ತಮಿಳಿನ ಸಿನಿಮಾಗಳಲ್ಲೂ ಅವರು ಐಟಂ ಡ್ಯಾನ್ಸ್​ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರು ‘ಜೈಲರ್​’ ಚಿತ್ರದಲ್ಲಿ ಸ್ಟೆಪ್​  ಹಾಕಿದ್ದಾರೆ.

Tap to resize

Latest Videos

ಆರ್ಯನ್​ ಡ್ರಗ್ಸ್​ ಕೇಸ್​ಗೆ ಟ್ವಿಸ್ಟ್​: 25 ಕೋಟಿ ಲಂಚ ಕೇಸಲ್ಲಿ ಸಿಲುಕಿದ ಶಾರುಖ್​ಗೆ ಬಂಧನದ ಭೀತಿ? ​
  
ಜೈಲರ್ ಸಿನಿಮಾದ ಸಂಗೀತ ಕೂಡ ಜಬರ್‌ದಸ್ತ್ ಆಗಿದೆ. ಅನಿರುದ್ಧ್ ರವಿಚಂದರ್ (Aniruddh Ravichandar) ಸಂಗೀತದಲ್ಲಿ ಮಸ್ತ್ ಮಾಸ್ ಸಾಂಗ್ ಬಂದಿದೆ. ಕೇಳುವ ಪ್ರತಿಯೊಬ್ಬರು ಕುಳಿತಲ್ಲಿಯೇ ಹೆಜ್ಜೆ ಹಾಕೋ ರೀತಿಯಲ್ಲಿಯೆ ಇಡೀ ಹಾಡು ಸಂಯೋಜನೆ ಆಗಿದೆ. ಶಿಲ್ಪಾ ರಾವ್‌ ಹಾಗೂ ಅನಿರುದ್ಧ್‌ ರವಿಚಂದರ್‌ ಈ ಹಾಡಿಗೆ ದನಿಯಾಗಿದ್ದಾರೆ. ಇದು ರಜನಿಕಾಂತ್‌ ಅಭಿನಯದ 169ನೇ ಸಿನಿಮಾ ಆಗಿದ್ದು ಅಭಿಮಾನಿಗಳು ಕೂಡಾ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದ್ದಾರೆ.‌ ಪಾತ್ರವರ್ಗದ ಕಾರಣದಿಂದ ‘ಜೈಲರ್​’ ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ. ರಜನಿಕಾಂತ್​ ಜೊತೆ ರಮ್ಯಾ ಕೃಷ್ಣನ್​, ಯೋಗಿ ಬಾಬು, ವಿನಾಯಕನ್​, ವಸಂತ್​ ರವಿ, ಶಿವರಾಜ್​ಕುಮಾರ್​, ಮೋಹನ್​ಲಾಲ್​, ತಮನ್ನಾ ಭಾಟಿಯಾ, ಜಾಕಿ ಶ್ರಾಫ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.  

'ಜೈಲರ್‌' (Jailer) ಸಿನಿಮಾ ಚಿತ್ರೀಕರಣ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಬ್ಯುಸಿ ಆಗಿದೆ. ಆಗಸ್ಟ್‌ 10ಕ್ಕೆ ಸಿನಿಮಾ ವಿಶ್ವಾದ್ಯಂತ ತೆರೆ ಕಾಣುತ್ತಿದೆ. ಜಾನಿ ಮಾಸ್ಟರ್ ಕೋರಿಯೋಗ್ರಫಿ ಮಾಡಿದ್ದಾರೆ. ಪಲ್ಲವಿ ಸಿಂಗ್ ಕಾಸ್ಟೂಮ್ ಡಿಸೈನ್ ಮಾಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಕಾವಾಲಯ್ಯ ಹಾಡಿನ ಶೂಟಿಂಗ್‌ ಮುಗಿಸಿದ್ದ ಜೈಲರ್‌ ತಂಡ, ಕೇಕ್‌ ಕತ್ತರಿಸಿ ಸೆಲೆಬ್ರೇಟ್‌ ಮಾಡಿತ್ತು.  ಡೈರೆಕ್ಟರ್ ನೆಲ್ಸನ್ ನಿರ್ದೇಶನದ ಈ ಚಿತ್ರದಲ್ಲಿ ಆ್ಯಕ್ಷನ್ ಇದೆ. ಕಾಮಿಡಿಗೂ ಏನೂ ಕೊರತೆ ಇಲ್ಲ. ಈ ಚಿತ್ರ 200 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿದೆ.   

Viral Video ನೋಡಿ, ಕನ್ನಡ ಅಂದ್ರೆ ಬಾರ್ಬಿ ಡಾಲ್ ನಿವೇದಿತಾಗೆ ಆಗಿ ಬರಲ್ವಾ ಅಂತ ಕೇಳ್ತಿದ್ದಾರೆ ಫ್ಯಾನ್ಸ್​!

It’s time to vibe for 💃🏼. Lyric video is out now!💥

▶️ https://t.co/Pd7nBg8h4l

— Sun Pictures (@sunpictures)
click me!