
ಸಂಪೂರ್ಣ ಬೆತ್ತಲಾಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಆಗಮಿಸುವ ಮೂಲಕ WWE ಸೂಪರ್ ಸ್ಟಾರ್ ಜಾನ್ ಸೀನಾ ಅವರು ಜಾಗತಿಕ ಸಿನಿಮಾ ಸ್ಟಾರ್‌ಗಳನ್ನು ಅಚ್ಚರಿಗೆ ದೂಡಿದ ಘಟನೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಡೆದಿದೆ. ಆಸ್ಕರ್ ಅಕಾಡೆಮಿಯ 96ನೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಸ್ಟ್ ಕಾಸ್ಟ್ಯೂಮ್ ಪ್ರಶಸ್ತಿ ನೀಡಲು ರೆಸ್ಲರ್ ಜಾನ್ ಸೀನಾರನ್ನು ಕರೆಸಲಾಗಿತ್ತು. ಆದರೆ ಇವರು ಯಾವುದೇ ಕಾಸ್ಟ್ಯೂಮ್ ಇಲ್ಲದೇ ಹುಟ್ಟುಡುಗೆಯಲ್ಲಿ ಸಮಾರಂಭಕ್ಕೆ ಆಗಮಿಸುವ ಮೂಲಕ ಸಿನಿಮಾಗಳಲ್ಲಿ ಅರೆಬರೆ ದೇಹ ಪ್ರದರ್ಶನ ಮಾಡುವ ಹಾಲಿವುಡ್ ನಟ ನಟಿಯರು ಸೇರಿದಂತೆ ಕಾರ್ಯಕ್ರಮದಲ್ಲಿದ್ದ ಎಲ್ಲರನ್ನು ಅಚ್ಚರಿಗೆ ದೂಡಿದರು.
ಅಮೆರಿಕಾ ಕ್ಯಾಲಿಫೋರ್ನಿಯಾದಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದೆ. ಪ್ರಶಸ್ತಿ ಪ್ರದಾನ ಮಾಡುವ ಮೊದಲು ಆಸ್ಕರ್ ಸಮಾರಂಭದಲ್ಲಿ ಹೀಗೆ ಬೆತ್ತಲಾಗಿ ಕಾಣಿಸಿಕೊಳ್ಳುವ ಮೂಲಕ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಿರೂಪಿಸುತ್ತಿದ್ದ ಹಾಲಿವುಡ್ ನಟ ಜಿಮ್ಮಿ ಕಿಮ್ಮೆಲ್ ಅವರಿಗೆ ಮೊದಲಿಗೆ ಜಾನ್ ಸೀನಾ ಅಣಕಿಸಿದಂತೆ ಕಂಡು ಬಂತು. ಜೊತೆಗೆ ಸಿನಿಮಾದಲ್ಲಿ ಕಾಸ್ಟ್ಯೂಮ್ ವಿಭಾಗವೂ ಎಷ್ಟು ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ತೋರಿಸಲು ಜಾನ್ ಸೀನಾ ಹೀಗೆ ಬೆತ್ತಲೆ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
WWEಗೆ ಮತ್ತೆ ಎಂಟ್ರಿ ಕೊಡ್ತಾರಾ ಅಂಡರ್‌ಟೆಕರ್ & ಜಾನ್ಸೀನಾ..!
ಪ್ರಶಸ್ತಿ ಪ್ರದಾನಕ್ಕೆ ಆಗಮಿಸುವ ಮೊದು ಜಿಮ್ಮಿ ಕಿಮ್ಮೆಲ್ ಜೊತೆ ತಾನು ಹೀಗೆ ಬೆತ್ತಲಾಗಿ ವೀಕ್ಷಕರ ಮುಂದೆ ಬರುವುದಕ್ಕೆ ಮುಜುಗರವಾಗುತ್ತಿದೆ ಎಂದು ಹೇಳುವುದನ್ನು ಕಾಣಬಹುದು. ಅಲ್ಲದೇ ತನಗೆ ಹೀಗೆ ವೇದಿಕೆ ಮೇಲೆ ಬೆತ್ತಲಾಗಿ ಬರುವಂತೆ ಮಾಡಲು ವಹಿಸಿದ ಕೆಲಸವನ್ನು ಅವರು ಖಂಡಿಸಿದ್ದರು.
ಮೊದಲಿಗೆ ನಿರೂಪಕ ಕಿಮ್ಮೆಲ್ ಪರೋಕ್ಷವಾಗಿ 1974ರಲ್ಲಿ ಆಸ್ಕರ್‌ನ 46ನೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಡೆದ ಘಟನೆಯನ್ನು ವೀಕ್ಷಕರಿಗೆ ವಿವರಿಸುತ್ತಾ, (ಆಗ ವ್ಯಕ್ತಿಯೋರ್ವ ಸ್ಟೇಜ್ ಮೇಲೆ ಬೆತ್ತಲಾಗಿ ಓಡಾಡಿದ್ದ) ನೀವು ಬೆತ್ತಲೆ ವ್ಯಕ್ತಿಯೋರ್ವ ಇಂದು ಸ್ಟೇಜ್ ಉದ್ದಕ್ಕೂ ಓಡಾಡುವುದನ್ನು ಕಲ್ಪಿಸಿಕೊಳ್ಳುತ್ತೀರಾ ಎಂದು ಕೇಳುತ್ತಾರೆ . ಇದೇ ವೇಳೆ ಜಾನ್ ಸೀನ್ ಅವರು ಪಾರದರ್ಶಕ ತೆರೆ ಹಿಂದೆ ಬೆತ್ತಲಾಗಿ ಕಾಣಿಸುತ್ತಾರೆ. ಈ ವೇಳೆ ವೀಕ್ಷಕರು ಜೋರಾಗಿ ನಗುತ್ತಿದ್ದಂತೆ ಜಾನ್ ಸೀನಾ ತಮ್ಮ ಖಾಸಗಿ ಭಾಗ ಕಾಣದಂತೆ ಅಡ್ಡಲಾಗಿ ಪಟಟಿಯೊಂದನ್ನು ಹಿಡಿದುಕೊಂಡು ಸ್ಟೇಜ್ ಮೇಲೆ ಬರುತ್ತಾರೆ. ಹಾಗೂ ಬೆಸ್ಟ್ ಕಾಸ್ಟ್ಯೂಮ್ ಪ್ರಶಸ್ತಿಯನ್ನು ಘೋಷಣೆ ಮಾಡುತ್ತಾರೆ. ಅಲ್ಲದೇ ಕಾಸ್ಟ್ಯೂಮ್ ತುಂಬಾ ಅಗತ್ಯವಾದುದು ಎಂದು ಹೇಳುತ್ತಾರೆ. ಹಾಲಿವುಡ್ 'ಪೂರ್ ತಿಂಗ್' ಉತ್ತಮವಾದ ಕಾಸ್ಟ್ಯೂಮ್ ಪ್ರಶಸ್ತಿ ಸಿಕ್ಕಿದೆ. ಈ ಸಿನಿಮಾದಲ್ಲಿ ಹಾಲಿ ವಾಡಿಂಗ್ಟನ್ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ.
ಜಾನ್ ಸೀನಾಗೆ ಕ್ರಿಕೆಟ್ ಪಾಠ ಹೇಳಿಕೊಟ್ಟ ವ್ಯಾಟ್ಸನ್..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.