ಸಕ್ಸಸ್ ಆಕಸ್ಮಿಕವಾಗಿ ಸಿಗುತ್ತದೆ ಹೊರತೂ ನಮ್ಮ ಪ್ರಯತ್ನದಿಂದಲ್ಲ; ಶಾರುಖ್ ಮಾತಿನ ಮರ್ಮವೇನು?

Published : Mar 10, 2024, 06:57 PM ISTUpdated : Mar 10, 2024, 07:02 PM IST
ಸಕ್ಸಸ್ ಆಕಸ್ಮಿಕವಾಗಿ ಸಿಗುತ್ತದೆ ಹೊರತೂ ನಮ್ಮ ಪ್ರಯತ್ನದಿಂದಲ್ಲ; ಶಾರುಖ್ ಮಾತಿನ ಮರ್ಮವೇನು?

ಸಾರಾಂಶ

ಸಿನಿಮಾ ಸಕ್ಸಸ್ ಆಗಿದ್ದು ಅದೊಂದು ಆಕಸ್ಮಿಕ ಅಷ್ಟೇ. ಎಲ್ಲ ಸಿನಿಮಾಗಳನ್ನೂ ಯಶಸ್ಸು ಸಿಗಬೇಕು ಎಂದೇ ಮಾಡುತ್ತಾರೆ. ಆದರೆ ನನ್ನ ಪ್ರಕಾರ ಸಕ್ಸಸ್ ಸಿಗುವುದು ನಮ್ಮ ಪ್ರಯತ್ನದಿಂದಲ್ಲ. ಬದಲಿಗೆ ಅದು ಆಕಸ್ಮಿಕವಾಗಿ ಸಂಭವಿಸುತ್ತದೆ ಅಷ್ಟೇ...

ನನ್ನ ಪೋಷಕರು ಸತ್ತಾಗ ನನಗೆ ಉಳಿದಿದ್ದು ಕೇವಲ ಬಡತನ ಮತ್ತು ಸೋಲು ಅಷ್ಟೇ. ನಾನು ಸೀರಿಯಲ್, ಸಿನಿಮಾ ಕೆಲಸಗಳನ್ನು ಮಾಡಿದ್ದು ನನ್ನ ಬಡತನವನ್ನು ಹೋಗಲಾಡಿಸಿಕೊಳ್ಳಲು ಮಾತ್ರ. ನಾನು ಸಹಿ ಮಾಡಿದ ಅದೆಷ್ಟೋ ಸಿನಿಮಾಗಳು ನನಗೆ ಬಂದಿದ್ದು ಅದನ್ನು ಬೇರೆಯವರು ಮಾಡಿಲ್ಲ ಎಂಬ ಕಾರಣಕ್ಕೆ ಹೊರತೂ ನಾನೇ ಅದನ್ನು ಮಾಡಬೇಕು ಎಂಬ ಕಾರಣಕ್ಕೆ ಅಲ್ಲ. ನಾನು ನಿರುದ್ಯೋಗಿ ಆಗಿರಬಾರದು ಎಂಬ ಕಾರಣಕ್ಕೆ ನಾನು ಸಾಕಷ್ಟು ಸಿನಿಮಾಗಳನ್ನು ಒಪ್ಪಿ ನಟಿಸಿದ್ದೇನೆ. ನನಗೆ ಬೇರೆ ಕೆಲಸ ಮಾಡಲು ಗೊತ್ತಿಲ್ಲ. ನನಗೆ ನಟನೆ ಮಾಡುವುದಷ್ಟೇ ಗೊತ್ತು. 

ಸಿನಿಮಾ ಸಕ್ಸಸ್ ಆಗಿದ್ದು ಅದೊಂದು ಆಕಸ್ಮಿಕ ಅಷ್ಟೇ. ಎಲ್ಲ ಸಿನಿಮಾಗಳನ್ನೂ ಯಶಸ್ಸು ಸಿಗಬೇಕು ಎಂದೇ ಮಾಡುತ್ತಾರೆ. ಆದರೆ ನನ್ನ ಪ್ರಕಾರ ಸಕ್ಸಸ್ ಸಿಗುವುದು ನಮ್ಮ ಪ್ರಯತ್ನದಿಂದಲ್ಲ. ಬದಲಿಗೆ ಅದು ಆಕಸ್ಮಿಕವಾಗಿ ಸಂಭವಿಸುತ್ತದೆ ಅಷ್ಟೇ. ನಾವು ಸೋಲುವ ಭಯದಿಂದಲೇ ಗೆಲ್ಲುತ್ತೇವೆ ಎನ್ನಬಹುದು. ನಿಜವಾಗಿ ಹೇಳಬೇಕೆಂದರೆ, ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ, ಮಾಡುತ್ತಿದ್ದೇನೆ ಹಾಗೂ ಮುಂದೆಯೂ ಮಾಡುತ್ತೇನೆ. ಸಕ್ಸಸ್ ಸಿಗುವುದು ನನ್ನ ಕಂಟ್ರೋಲ್‌ನಲ್ಲಿ ಇಲ್ಲ ಎಂಬುದು ನನಗೆ ಮನದಟ್ಟಾಗಿದೆ. ಇದು ಹಲವರಿಗೆ ಅನುಭವಕ್ಕೆ ಬಂದಿರಬಹುದು, ಕೆಲವರಿಗೆ ಈ ಅನುಭವ ಆಗದಿರಬಹುದು ಅಷ್ಟೇ' ಎಂದಿದ್ದಾರೆ ನಟ ಶಾರುಖ್ ಖಾನ್. 

ನಮ್ಮಂಥವರಿಗೆಲ್ಲ ಮಕ್ಕಳು ಇರಬಾರದು ಎಂದಿದ್ದರಂತೆ ನಟಿ ಕಲ್ಪನಾ; ಯಾರಿಗೆ, ಯಾಕೆ ಹಾಗೆ ಹೇಳಿದ್ರು?

ನಟ ಶಾರುಖ್ ಖಾನ್ 'ಜೀರೋ' ಲೆವಲ್‌ನಿಂದ ಬೆಳೆದು ಬಂದಿರುವ ನಟ. ತಮ್ಮ ಕೆರಿಯರ್ ಶುರುವಿನಲ್ಲಿ ನಟ ಶಾರಖ್ ಖಾನ್ ಟಿವಿ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಆ ಬಳಿಕವೇ ಅವರಿಗೆ ನಾಯಕನ ಪಟ್ಟ ಸಿಕ್ಕಿದ್ದು ಹಾಗೂ ಶಾರುಖ್ ಸೂಪರ್ ಸ್ಟಾರ್ ಆಗಿ ಬೆಳೆದಿದ್ದು. ಸ್ಟಾರ್ ನಟರಾಗಿ ಬೆಳೆದ ಮೇಲೂ ಅವರು ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ. ಸತತ ನಾಲ್ಕು ವರ್ಷಗಳ ಸೋಲು ಕಂಡು ಮತ್ತೆ ಒಂದೇ ವರ್ಷದಲ್ಲಿ ಎಲ್ಲ ಸೋಲನ್ನೂ ಮರೆಸುವಂಥ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. 

ಮಹೇಶ್ ಬಾಬು ಜತೆ ಕಿಸ್ ಮಾಡಿದ್ದೀರಾ ಎಂದ ಫ್ಯಾನ್ಸ್‌ಗೆ ರಶ್ಮಿಕಾ ಮಂದಣ್ಣ ಏನಂದ್ರು ನೋಡಿ!

ಜೀರೋ ಸಿನಿಮಾ ಸೋಲಿನ ಬಳಿಕ ನಟ ಶಾರುಖ್ ಖಾನ್ ಸಿನಿಮಾ ನಟನೆಯನ್ನು ಬಿಟ್ಟುಬಿಡಬೇಕು ಎಂದು ಅದೆಷ್ಟೋ ಬಾರಿ ಯೋಚಿಸಿದ್ದರಂತೆ . ಜವಾನ್ ಹಾಗೂ ಪಠಾಣ್ ಸಿನಿಮಾಗೆ ಸಹಿ ಹಾಕುವ ಮೊದಲು ನಟ ಶಾರುಖ್ ಖಾನ್ ಸಾಕಷ್ಟು ಸಿನಿಮಾಗಳ ಅವಕಾಶವನ್ನು ಕೈ ಚೆಲ್ಲಿದ್ದರು. ಆ ಸಮಯದ ಬಗ್ಗೆ ನಟ ಶಾರುಖ್ ಖಾನ್ ಒಮ್ಮೆ ಬಾಯಿಬಿಟ್ಟು ಸತ್ಯವನ್ನು ಹೇಳಿದ್ದಾರೆ. ನನಗೆ ಆ ವೇಳೆಯಲ್ಲಿ ಸಿನಿಮಾ ನಟನೆ ಮಾಡುವುದು ಬೇಡ ಎಂದೇ ಎನಿಸಿಬಿಟ್ಟಿತ್ತು. ಮನೆಯಲ್ಲಿ ಕೂಡ ಆ ಬಗ್ಗೆ ಯಾರೂ ಏನೂ ಮಾತನಾಡುತ್ತಿರಲಿಲ್ಲ. ಆ ನಾಲ್ಕು ವರ್ಷಗಳನ್ನು ನಾನು ನನ್ನನ್ನು ಹಾಗು ಜೀವನವನ್ನು ಅರಿತುಕೊಳ್ಳಲು ಕಳೆದಿದ್ದೇನೆ ಎನ್ನಬಹುದು. 

ಕುಬೇರನಾದ್ರೂ ಚೆನ್ನೈನಲ್ಲಿ ಭಿಕ್ಷೆ ಬೇಡುತ್ತಿರುವ ಧನುಷ್; ಪಕ್ಕದಲ್ಲಿ ರಶ್ಮಿಕಾ ಮಂದಣ್ಣ ಯಾಕೆ ಗುರೂ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?