ಭಾರತದಲ್ಲಿ ಮೂವರು ಬಾಲಿವುಡ್ ಸೆಲೆಬ್ರಿಟಿಗಳು ಮಾತ್ರ ಪ್ರೈವೇಟ್ ಐಲ್ಯಾಂಡ್ ಹೊಂದಿದ್ದಾರೆ. ಅದರಲ್ಲಿ ಈ ನಟಿಯೂ ಒಬ್ಬಳು. ಈಕೆ ಕನ್ನಡದಲ್ಲೂ ನಟಿಸಿದ್ದಾಳೆ. ಯಾರೀಕೆ? ಬನ್ನಿ ನೋಡೋಣ.
ಭಾರತದ ಪ್ರಜೆಗಳಿಗೆ ಒಂದು ತುಂಡು ಭೂಮಿಯನ್ನು ಹೊಂದುವುದೆಂದರೆ ಪ್ರತಿಷ್ಠೆಯ ವಿಷಯ, ಬದುಕಿನ ವಿಷಯ. ದೊಡ್ಡ ಪ್ರಮಾಣದ ಭೂಮಿ ಹೊಂದುವುದು ಜಮೀನು ಮಾಡುವವರ, ರೈತರ ಜೀನ್ ಹೊಂದಿರುವವರ ಕನಸು. ಆದರೆ ವಿಶ್ವದಲ್ಲೇ ಅತ್ಯಂತ ಕಡಿಮೆ ಮಂದಿ ಮಾತ್ರ ಸ್ವಂತ ದ್ವೀಪ, ಪ್ರೈವೇಟ್ ಐಲ್ಯಾಂಡ್ ಹೊಂದಿ ಮಜಾ ಉಡಾಯಿಸುತ್ತಾರೆ. ಹಾಲಿವುಡ್‌ನ ಅನೇಕ ತಾರೆಯರು, ಬಿಲಿಯನೇರ್ ಉದ್ಯಮಿಗಳು ಹೀಗೆ ಪ್ರೈವೇಟ್ ಐಲ್ಯಾಂಡ್ ಹೊಂದಿದ್ದಾರೆ. ಭಾರತದಲ್ಲಿ ಹೀಗೆ ಸ್ವಂತ ದ್ವೀಪ ಹೊಂದಿದವರು ಬಹಳ ಕಡಿಮೆ. ಬಾಲಿವುಡ್‌ನ ಒಂದಿಬ್ಬರು ನಟ- ನಟಿ ಮಾತ್ರ ಸ್ವಂತ ದ್ವೀಪ ಹೊಂದಿದ್ದಾರೆ. ಅವರಲ್ಲಿ ನಮ್ಮ ಕನ್ನಡದಲ್ಲಿ ನಟಿಸಿದ ಒಬ್ಬಾಕೆ ನಟಿಯೂ ಇದ್ದಾಳೆ ಎಂದರೆ ನೀವು ಅಚ್ಚರಿಪಡಬಹುದು.
ಹೌದು. ಈ ಸಾಧನೆ ತುಂಬಾ ಅಪರೂಪ. ಕೇವಲ ಮೂವರು ಬಾಲಿವುಡ್ ಸೆಲೆಬ್ರಿಟಿಗಳು ಮಾತ್ರ ತಮ್ಮದೇ ಆದ ದ್ವೀಪಗಳನ್ನು ಹೊಂದಿದ್ದಾರೆ. ಅವರಲ್ಲಿ ಮಹಿಳೆ ಒಬ್ಬಾಕೆ ಮಾತ್ರ. ಖಾಸಗಿ ದ್ವೀಪವನ್ನು ಹೊಂದಿರುವ ಏಕೈಕ ಭಾರತೀಯ ನಟಿ ಈಕೆ. ಐಶ್ವರ್ಯಾ ರೈ ಇಂದು ಅತ್ಯಂತ ಶ್ರೀಮಂತ ಭಾರತೀಯ ನಟಿ ಆದರೆ ಆಕೆ ದ್ವೀಪವನ್ನು ಹೊಂದಿಲ್ಲ. ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ಕೂಡ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರು. ಆದರೆ ಅವರೂ ದ್ವೀಪಗಳನ್ನು ಖರೀದಿಸಿಲ್ಲ. ಅದೇ ರೀತಿ, ಆಲಿಯಾ ಭಟ್, ಕತ್ರಿನಾ ಕೈಫ್, ಸಮಂತಾ ರುತ್ ಪ್ರಭು, ಕರೀನಾ ಕಪೂರ್ ಕೂಡ ಶ್ರೀಮಂತರು. ಆದರೆ ಖಾಸಗಿ ದ್ವೀಪಗಳ ಮಾಲೀಕರಲ್ಲ. ಈ ಗೌರವ ಸಲ್ಲುವುದು 15 ವರ್ಷಗಳಿಂದ ಬಾಲಿವುಡ್‌ನಲ್ಲಿ ಸಕ್ರಿಯವಾಗಿರುವ, ಕನ್ನಡದಲ್ಲಿ ಕಿಚ್ಚ ಸುದೀಪ್ ಜೊತೆ ನಟಿಸಿರುವ, ಶ್ರೀಲಂಕಾ ಮೂಲದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಮಾತ್ರ!
ಜಾಕ್ವೆಲಿನ್ ಈಗ ಬಾಕ್ಸ್ ಆಫೀಸ್‌ನ ದೊಡ್ಡ ಫಿಗರ್ ಅಲ್ಲದಿರಬಹುದು. ಆದರೆ ಒಂದು ದಶಕದ ಹಿಂದೆ ಆಕೆ ಕೆಲವು ಬ್ಯಾಕ್-ಟು-ಬ್ಯಾಕ್ ಹಿಟ್‌ಗಳನ್ನು ಕೊಟ್ಟು ಬಾಲಿವುಡ್ ಉದ್ಯಮದಲ್ಲಿ ಅಗ್ರ ನಟಿಯರಲ್ಲಿ ಒಬ್ಬಳಾಗಿದ್ದಳು. ಆಕೆಯ ಮರ್ಡರ್ 2, ಹೌಸ್‌ಫುಲ್ 2, ರೇಸ್ 2 ಮತ್ತು ಕಿಕ್ ಇವೆಲ್ಲ ಸೂಪರ್ ಹಿಟ್ ಆಗಿದ್ದವು. ಆಕೆಯ ಕೊನೆಯ ಹಿಟ್ 2016ರಲ್ಲಿ ಬಂತು. ಅದು ಹೌಸ್‌ಫುಲ್ 3. ಅದಕ್ಕೂ ಮೊದಲು ಜಾಕ್ವೆಲಿನ್ 2011-14ರಿಂದ ವೃತ್ತಿ ಟಾಪ್‌ನಲ್ಲಿದ್ದಳು. 2012ರಲ್ಲಿ ಜಾಕ್ವೆಲಿನ್ ತನ್ನ ತಾಯ್ನಾಡು ಶ್ರೀಲಂಕಾದ ಕರಾವಳಿಯ ಪಕ್ಕದಲ್ಲಿ ಒಂದು ಖಾಸಗಿ ದ್ವೀಪವನ್ನು ಖರೀದಿಸಿದಳು.
ವರದಿಗಳ ಪ್ರಕಾರ, ಜಾಕ್ವೆಲಿನ್ 2012ರಲ್ಲಿ ದ್ವೀಪವನ್ನು ಖರೀದಿಸಿದಳು. ಅಲ್ಲಿ ಐಷಾರಾಮಿ ವಿಲ್ಲಾವನ್ನು ನಿರ್ಮಿಸಲು ಯೋಜಿಸಿದ್ದಾಳೆ. ಜಾಕ್ವೆಲಿನ್ ಆ ದ್ವೀಪವನ್ನು ಖಾಸಗಿ ನಿವಾಸವಾಗಿ ಬಳಸಲು ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಅದನ್ನು ಬಾಡಿಗೆಗೆ ನೀಡಲು ಬಯಸಿದ್ದಾಳೆ. ಮರ್ಡರ್ 2 ಮತ್ತು ಹೌಸ್‌ಫುಲ್ 2 ಯಶಸ್ಸಿನ ನಂತರ ಮತ್ತು ರೇಸ್ 2ಗೆ ಸಹಿ ಹಾಕುವ ಮೊದಲು ಅವಳು ದ್ವೀಪವನ್ನು ಖರೀದಿಸಿದ್ದಾಳೆ. ಈ ದ್ವೀಪಕ್ಕೆ ಆಕೆ ಉದ್ಯಮಿ ಸುಕೇಶ್ ಚಂದ್ರಶೇಖರ್ ಜೊತೆಗೆ ಆಗಾಗಾ ಆಗಮಿಸಿದ್ದುಂಟು. ಇಲ್ಲಿಗೆ ಹೋಗಿ ಬರಲು ಈಕೆ ಪ್ರೈವೇಟ್ ಬೋಟ್‌ಗಳನ್ನು ಇಟ್ಟುಕೊಂಡಿದ್ದಾಳೆ. ಪ್ರೈವೇಟ್ ಹೆಲಿಕಾಪ್ಟರ್‌ಗಳನ್ನೂ ಬಳಸುತ್ತಾಳೆ. ಇಲ್ಲಿ ತಾತ್ಕಾಲಿಕವಾಗಿ ಉಳಿದುಕೊಂಡು ಮಜಾ ಮಾಡಲು ಬೇಕಾದ ಬೇಜಾನ್ ಸೌಲಭ್ಯಗಳು ಇಲ್ಲಿವೆ. ಈಕೆಯ ಕೆರಿಯರ್‌ನಲ್ಲಿ ಸಹಾಯ ಮಾಡಿದ ಹಲವು ಶ್ರೀಮಂತರು ಇಲ್ಲಿ ಬಂದು ಮಜಾ ಉಡಾಯಿಸಿ ಹೋದ ನಿದರ್ಶನಗಳು ಇವೆ. ಇತ್ತೀಚೆಗೆ ಈಕೆಯ ಗೆಳೆಯ, ಉದ್ಯಮಿ ಸುಕೇಶ್ ಚಂದ್ರಶೇಖರ್ ಮಹಾವಂಚನೆ ಕೇಸಿನಲ್ಲಿ ಸಿಕ್ಕಿಹಾಕಿಕೊಂಡು ಜೈಲಿನಲ್ಲಿದ್ದಾನೆ. ಜಾಕ್ವೆಲಿನ್ ಮೇಲೂ ಇಡಿ ತನಿಖೆಯ ತೂಗುಗತ್ತಿ ತೂಗುತ್ತಿದೆ.
'ಆ ಸಮಯ ಮತ್ತೆ ಬರೋಲ್ಲ...' ರಿಯಾ ಚಕ್ರವರ್ತಿ ಮುಂದೆ ಕಣ್ಣೀರು ಹಾಕಿದ ಆಮೀರ್ ಖಾನ್
ಜಾಕ್ವೆಲಿನ್ ಶ್ರೀಲಂಕಾದ ಮಾಜಿ ಬ್ಯೂಟಿ ಕ್ವೀನ್. 2009ರಲ್ಲಿ ಅಲಾದಿನ್ ಫಿಲಂನಲ್ಲಿ ಬಾಲಿವುಡ್ ಪ್ರವೇಶಿಸಿದಳು. ಎರಡು ವರ್ಷಗಳ ನಂತರ ಮರ್ಡರ್ 2ನಲ್ಲಿ ಭಾರಿ ಯಶಸ್ಸನ್ನು ಅನುಭವಿಸಿದಳು. ಐದು ವರ್ಷಗಳಲ್ಲಿ ಐದು ದೊಡ್ಡ ಹಿಟ್‌ಗಳನ್ನು ನಿಡಿದಳು. ಈ ಗೋಲ್ಡನ್ ಸಮಯದ ಬಳಿಕ ಜಾಕ್ವೆಲಿನ್ ತನ್ನ ವೃತ್ತಿಜೀವನದಲ್ಲಿ ಸ್ವಲ್ಪ ಏಳುಬೀಳು ಕಂಡಳು. ನಂತರ ಆಕೆಯ ಏಳು ಫ್ಲಾಪ್‌ಗಳು ಬಂದವು. ಒಂದೆರಡು ಹಿಟ್‌ಗಳೂ ಬಂದವು. ಕೊನೆಯದಾಗಿ 2022ರ ಬಾಕ್ಸ್ ಆಫೀಸ್ ಬಾಂಬ್ ಸರ್ಕಸ್ ಮತ್ತು 2023ರಲ್ಲಿ ಬಿಡುಗಡೆಯಾದ ಸೆಲ್ಫಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಳು. ಕನ್ನಡದಲ್ಲಿ ಜಾಕ್ವೆಲಿನ್ ಕಿಚ್ಚು ಸುದೀಪ್ ಜೊತೆಗೆ ವಿಕ್ರಾಂತ್ ರೋಣ ಫಿಲಂನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಳು. ಪ್ರಸ್ತುತ ವೆಲ್ಕಮ್ ಟು ದಿ ಜಂಗಲ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾಳೆ.
ಈ ಸೆಕ್ಸೀ ನಟಿ ತನ್ನ ಸೂಪರ್ ಸ್ಟಾರ್ ಗಂಡನಿಗಿಂತ 3 ವರ್ಷ ದೊಡ್ಡವಳು ಅಂದ್ರೆ ನಂಬ್ತೀರಾ?