'ಆ ಸಮಯ ಮತ್ತೆ ಬರೋಲ್ಲ...' ರಿಯಾ ಚಕ್ರವರ್ತಿ ಮುಂದೆ ಕಣ್ಣೀರು ಹಾಕಿದ ಆಮೀರ್ ಖಾನ್

By Bhavani Bhat  |  First Published Aug 28, 2024, 5:58 PM IST

ಸುಶಾಂತ್ ಸಿಂಗ್ ರಜಪೂತ್‌ನ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ, ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳ ಜೊತೆ ಪಾಡ್‌ಕ್ಯಾಸ್ಟ್ ನಡೆಸಿಕೊಡುತ್ತಿದ್ದಾರೆ. ಇಂಥ ಒಂದು ಇತ್ತಿಚಿನ ಪಾಡ್‌ಕ್ಯಾಸ್ಟ್‌ನಲ್ಲಿ ಆಮೀರ್ ಖಾನ್ ಹಿಂದಿನ ದಿನಗಳಗಳನ್ನು ನೆನೆದುಕೊಂಡು ಕಣ್ಣೀರು ಹಾಕಿದ್ದಾನೆ.


ರಿಯಾ ಚಕ್ರವರ್ತಿ ನಡೆಸಿಕೊಡುವ ಚಾಪ್ಟರ್ 2 ಪಾಡ್‌ಕ್ಯಾಸ್ಟ್‌ನ ಇತ್ತೀಚಿನ ಸಂಚಿಕೆಯಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ ಮಾತನಾಡಿ,  ತನ್ನ ಮನದಾಳದ ಕೆಲವು ದುಗುಡವನ್ನು ಹೊರಹಾಕಿದ್ದಾನೆ. ಮುಖ್ಯವಾಗಿ, ಕೊಡಬೇಕಾದ ಸಮಯದಲ್ಲಿ  ತಮ್ಮ ಮೂವರು ಮಕ್ಕಳಿಗೆ ಸಾಕಷ್ಟು ಸಮಯ ಮತ್ತು ಗಮನವನ್ನು ಕೊಡದಿದ್ದುದರ ಬಗ್ಗೆ ವಿಷಾದ ಅವರ ಮಾತುಗಳಲ್ಲಿತ್ತು. 

"ಆ ಸಮಯದಲ್ಲಿ ಇರಾ ಡಿಪ್ರೆಶನ್ ಜೊತೆಗೆ ಹೋರಾಡುತ್ತಿದ್ದಳು. ಈಗ ಗುಣಮುಖಳಾಗಿದ್ದಾಳೆ. ಆದರೆ ಆಗ ಅವಳಿಗೆ ನನ್ನ ಅಗತ್ಯವಿತ್ತು. ಈಗ ಜುನೈದ್ ತನ್ನ ವೃತ್ತಿಜೀವನವನ್ನು ಪ್ರಾರಂಭಿಸುತ್ತಿದ್ದಾನೆ. ಅವನು ಇದುವರೆಗೆ ನಾನಿಲ್ಲದೆ ತನ್ನ ಜೀವನವನ್ನು ನಡೆಸಿದ್ದಾನೆ. ಈಗ ತನ್ನ ಜೀವನದ ಬಹುಮುಖ್ಯ ಹೆಜ್ಜೆಯನ್ನು ತನ್ನ ವೃತ್ತಿಜೀವನದ ಕಡೆಗೆ ತೆಗೆದುಕೊಳ್ಳುತ್ತಿದ್ದಾನೆ. ಈ ಸಮಯದಲ್ಲಿ ನಾನು ಅವನೊಂದಿಗೆ ಇಲ್ಲದಿದ್ದರೆ, ಆಮೇಲೆ ಏನು ಪ್ರಯೋಜನ? ಆಜಾದ್‌ಗೆ ಈಗ 9 ವರ್ಷ. ಇನ್ನು 3 ವರ್ಷಗಳಲ್ಲಿ ಆತ ಹದಿಹರೆಯದವನಾಗುತ್ತಾನೆ. ಅವನ ಬಾಲ್ಯ ಮರಳಿ ಬರುವುದಿಲ್ಲ." ಎಂದಿದ್ದಾನೆ ಆಮೀರ್.

Tap to resize

Latest Videos

“ನನ್ನ ಮಕ್ಕಳ ಬಗ್ಗೆ ನನಗೆ ಬಲವಾದ ಪ್ರೀತಿ ಇರಲಿಲ್ಲ ಅಂತಲ್ಲ. ನನ್ನ ಕುಟುಂಬಕ್ಕಾಗಿ ನಾನು ತುಂಬಾ ಕೆಲಸ ಮಾಡಿದ್ದೇನೆ. ಆದರೆ ಆ ವೇಳೆಯಲ್ಲಿ ನನ್ನ ಸುತ್ತ ನನ್ನ ವೃತ್ತಿಕ್ಷೇತ್ರದ ಆಪ್ತರು ಹೆಚ್ಚಾಗಿದ್ದರು. ನಾನು ಪ್ರೇಕ್ಷಕರನ್ನು ಗೆಲ್ಲಬೇಕಾಗಿತ್ತು. ನನ್ನ ಚಿತ್ರಗಳು ಮತ್ತು ಕಥೆಗಳ ಮೂಲಕ ನಾನು ಅವರೊಂದಿಗೆ ಇದ್ದೆ. ಅವರನ್ನು ಎಂಟರ್‌ಟೇನ್ ಮಾಡುವ ಭರವಸೆಯನ್ನು ನಾನು ನೀಡಿದ್ದೆ. ಆದರೆ ಇರಾ ಮತ್ತು ಜುನೈದ್ ಐದಾರು ವರ್ಷದವರಾಗಿದ್ದಾಗ, ಅವರ ಭಾವನೆಗಳ ಬಗ್ಗೆ, ಅವರ ಸಮಸ್ಯೆಗಳೇನು, ಆಗ ಅವರಿಗೆ ಏನು ಬೇಕಿತ್ತು ಅಥವಾ ಅವರ ಸವಾಲುಗಳ ಬಗ್ಗೆ ನನಗೆ ಏನೂ ತಿಳಿದಿರಲಿಲ್ಲ” ಎಂದು ಆಮೀರ್ ವಿಷಾದಪಟ್ಟುಕೊಂಡಿದ್ದಾರೆ. 

ಆ ಸಮಯವನ್ನು ತನಗೆ ತುಂಬಾ ಕಷ್ಟಕರವಾಗಿತ್ತು. ಆದರೆ ಈಗ ಇರಾ ಮತ್ತು ಜುನೈದ್ ಅವರ ಬಾಲ್ಯ ಹಿಂತಿರುಗುವುದಿಲ್ಲವಲ್ಲ! ಕಳೆದ 30 ವರ್ಷಗಳಲ್ಲಿ ನಾನು ನನ್ನ ತಂದೆ-ತಾಯಿಯೊಂದಿಗೂ ಹೆಚ್ಚು ಸಮಯ ಕಳೆಯಬಹುದಿತ್ತು. ಆದರೆ ನಾನು ಹಾಗೆ ಮಾಡಲಿಲ್ಲ. ಆ ಸಮಯ ಎಂದಿಗೂ ಹಿಂತಿರುಗುವುದಿಲ್ಲ ಎಂಬುದು ಆಮೀರ್ ದುಃಖ. 

ಕುಟುಂಬದಿಂದ ದೂರವಿದ್ದ ಸಮಯ ಶಾಶ್ವತವಾಗಿ ಕಳೆದುಹೋದಂತೆ. ಇದನ್ನು ಅರಿತುಕೊಂಡಾಗ ನಿಮ್ಮಲ್ಲಿ ವಿಷಾದವೇನೋ ಉಂಟಾಗಬಹುದು. ಆದರೆ ನಿಮ್ಮ ಮಕ್ಕಳೊಂದಿಗೆ ಮರುಸಂಪರ್ಕ ಸಾಧಿಸುವುದು, ಕಳೆದುಹೋದ ಸಮಯವನ್ನು ಹೇಗೆ ಸರಿದೂಗಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಮನಶ್ಶಾಸ್ತ್ರಜ್ಞೆ ಅಂಜಲಿ ಗುರ್ಸಾಹನಿ ಎಂಬವರು ಹೇಳುವ ಪ್ರಕಾರ ಅನೇಕ ಪೋಷಕರು ತಮ್ಮ ಮಕ್ಕಳ ಜೀವನದಲ್ಲಿ ಅವರ ಮೊದಲ ಮಾತುಗಳು, ಮೊದಲ ಹೆಜ್ಜೆಗಳು, ಶಾಲೆಯ ಪ್ರದರ್ಶನಗಳು, ಜನ್ಮದಿನಗಳು ಅಥವಾ ಇತರ ವಿಶೇಷ ಸಂದರ್ಭಗಳಲ್ಲಿ ಪ್ರಮುಖ ಮೈಲಿಗಲ್ಲುಗಳಿಗೆ ತಾವು ಹಾಜರಾಗಲಿಲ್ಲ ಎಂದು ವಿಷಾದಿಸುತ್ತಾರೆ. ಈ ತಪ್ಪಿದ ಕ್ಷಣಗಳು ಆಮೇಲೆ ವಿಷಾದ ಹುಟ್ಟಿಸುತ್ತವೆ. ಯಾಕೆಂದರೆ ಅವು ಶಾಶ್ವತವಾದ ನೆನಪುಗಳಾಗಿ ಉಳಿಯುವಂಥವು.

ಅಣ್ಣಾವ್ರು 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ' ಹಣವನ್ನು ಮನೆಗೆ ತೆಗೆದುಕೊಂಡು ಹೋಗ್ಲೇ ಇಲ್ಲ!

ಮಕ್ಕಳು ತಮ್ಮ ಪೋಷಕರಿಂದ ಅವರಿಗೆ ಅಗತ್ಯವಿರುವ ಗಮನ ಮತ್ತು ಕಾಳಜಿಯನ್ನು ಪಡೆಯದಿದ್ದಾಗ, ತಾವು ನಿರ್ಲಕ್ಷಿಸಲ್ಪಟ್ಟಿದ್ದೇವೆ ಎಂದು ಭಾವಿಸಬಹುದು. ಈ ಭಾವನಾತ್ಮಕ ಸಂಪರ್ಕದ ಕೊರತೆಯು ಅವರ ಸುರಕ್ಷಿತತೆಯ ಭಾವನೆ ಮತ್ತು ಬಾಂಧವ್ಯದ ಪ್ರಜ್ಞೆಯ ಮೇಲೆ ಪರಿಣಾಮ ಬೀರಬಹುದು. ಇದು ಅವರ ಮತ್ತು ಅವರ ಪೋಷಕರ ನಡುವಿನ ಅಂತರವನ್ನು ಹೆಚ್ಚಿಸಬಹುದು. 

ಮಕ್ಕಳೊಂದಿಗೆ ಕ್ವಾಲಿಟಿ ಸಮಯ ಕಳೆಯುವುದು, ಅವರೊಂದಿಗೆ ಪ್ರವಾಸ ಹೋಗುವುದು, ಸಣ್ಣಪುಟ್ಟ ಖುಷಿಗಳನ್ನು ಹಂಚಿಕೊಳ್ಳುವುದು, ವೃತ್ತಿಜೀವನದಲ್ಲಿ ಎದುರಿಸುವ ಸಂಕಷ್ಟದ ಬಗ್ಗೆ ಪ್ರಾಮಾಣಿಕ ಸತ್ಯಗಳನ್ನು ಹಂಚಿಕೊಳ್ಳುವುದು, ಯಾರಾದರೂ ಒಬ್ಬ ಪೋಷಕರು ಜೊತೆಯಲ್ಲಿ ಇಲ್ಲದಿದ್ದಾಗ ಆ ಬಗ್ಗೆ ಸತ್ಯವನ್ನೇ ಹೇಳುವುದು- ಇವೆಲ್ಲ ಮಕ್ಕಳ ಪ್ರೀತಿ ಉಳಿಸಿಕೊಳ್ಳಲು ಮುಖ್ಯವಂತೆ. 

ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾದ ಖುಷ್ಬೂ ಹೇಮಾ ಕಮಿಟಿ ವರದಿ ಬಗ್ಗೆ ಹೇಳಿದ್ದಿಷ್ಟು!
 

click me!