ಹಿಂದು ಧಾರ್ಮಿಕ ಭಾವನೆಗೆ ಧಕ್ಕೆ; 'ಓಂ' ಮೇಲೆ ಕಾಲಿಟ್ಟ ನಟ ಶ್ರೇಯಸ್ ವಿರುದ್ಧ ಆಕ್ರೋಶ

By Vaishnavi ChandrashekarFirst Published Feb 14, 2023, 1:10 PM IST
Highlights

ಕಮಾಲ್ ಧಮಾಲ್ ಮಲಾಮಾಲ್ ಚಿತ್ರದ 30 ಸೆಕೆಂಟ್ ವಿಡಿಯೋ ವೈರಲ್. ಓಂ ಚಿನ್ನೆ ಮೇಲೆ ಕಾಲಿಟ್ಟ ನಟ ಕ್ಷಮೆ ಕೇಳಬೇಕು ಎಂದು ಆಕ್ರೋಶ..... 

ನಟ, ನಿರ್ಮಾಪಕ ಕಮ್ ನಿರ್ದೇಶಕ ಶ್ರೇಯಸ್ ತಲ್ಪಾಡೆ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. 2012ರಲ್ಲಿ ಬಿಡುಗಡೆ ಕಂಡ ಕಮಾಲ್ ಧಮಾಲ್ ಮಲಾಮಾಲ್ ಚಿತ್ರದ 30 ಸೆಕೆಂಡ್ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇದರಲ್ಲಿ ಕ್ರಿಶ್ಚಿಯನ್ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರೇಯಸ್ ಲಾರಿಯನ್ನು ನಿಲ್ಲಿಸಲು ತಮ್ಮ ಕಾಲನ್ನು Om ಮೇಲೆ ಇಡುತ್ತಾರೆ. ಲಾರಿ ನಿಲ್ಲಿಸಿದ್ದು ತಪ್ಪಲ್ಲ ಆದರೆ ಅದರ ಮೇಲಿರುವ ಚಿನ್ನೆ ಮೇಲೆ ಕಾಲಿಟ್ಟಿರುವುದು ತಪ್ಪು ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. 

ಹೌದು! ಪ್ರಿಯಾ ದರ್ಶನ್ ನಿರ್ದೇಶನ ಮಾಡಿರುವ ಕಮಾಲ್ ಧಮಾಲ್ ಮಲಾಮಾಲ್ ಚಿತ್ರದಲ್ಲಿ 30 ಸೆಕೆಂಡ್ ದೃಶ್ಯದಲ್ಲಿ ಶ್ರೇಯಸ್‌ ಲಾರಿ ನಿಲ್ಲಿಸಲು ತಮ್ಮ ಕಾಲನ್ನು ಲಾರಿ ಗಾಜಿನ ಮೇಲೆ ಇಡುತ್ತಾರೆ ಆ ಜಾಗದಲ್ಲಿ 'ಓಂ' ಎಂದು ಸ್ಟಿಕರ್ ಹಾಕಲಾಗಿರುತ್ತದೆ. ಓಂ ಮೇಲೆ ಕಾಲಿಡುವ ಮೂಲಕ ಹಿಂದು ಭಾವನೆಗೆ ದಕ್ಕೆಯಾಗಿದೆ ಎನ್ನಲಾಗಿದೆ. ಗೊತ್ತಿಲ್ಲದೆ ಸಿನಿಮಾ ಚಿತ್ರೀಕರಣ ಮಾಡಲು ಸಾಧ್ಯವಿಲ್ಲ ಇದು ಗೊತ್ತಿತ್ತು ಮಾಡಿರುವುದು ನಟ ಕ್ಷಮೆ ಕೇಳಬೇಕು ಎಂದು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. 

Latest Videos

ಮಂಗಳೂರಿನ ಪಿಲಿಕುಳದಲ್ಲಿ ರಜನಿಕಾಂತ್ 'ಜೈಲರ್' ಚಿತ್ರೀಕರಣ: ಪ್ರವೇಶ ‌ನಿರ್ಬಂಧ!

'ಸಿನಿಮಾ ಶೂಟಿಂಗ್ ಮಾಡುವಾಗ ಹಲವಾರು ಅಂಶಗಳನ್ನು ತಲೆಯಲ್ಲಿ ಇಟ್ಟುಕೊಳ್ಳಬೇಕು. ಆ ಸಮಯದಲ್ಲಿ ವ್ಯಕ್ತಿಯ ಮನಸ್ಥಿತಿ  ಅದರಲ್ಲೂ ಆಕ್ಷನ್ ಸೀನ್‌ ಮಾಡುವಾಗ ಮುಖ್ಯವಾಗುತ್ತದೆ. ನಿರ್ದೇಶಕರ ನಿರೀಕ್ಷೆ, ಸಮಯ ಪ್ರಜ್ಞೆ ಸೇರಿದಂತೆ ಹಲವು ವಿಚಾರಗಳು ಇರುತ್ತದೆ. ಆದರೆ ಇಲ್ಲಿ ನಡೆದ ಘಟನೆಯನ್ನು ವಿವರಿಸುತ್ತಿಲ್ಲ ಅಥವಾ ಮಾಡಿದ ತಪ್ಪಿಗೆ ಸಮಜಾಯಿಷಿ ಕೊಡುತ್ತಿಲ್ಲ. ವಿಡಿಯೋದಲ್ಲಿ ನೋಡಿರುವುದು ಸತ್ಯ ಆದರೆ ಉದ್ದೇಶವಿಲ್ಲ ನಡೆದಿರುವ ಘಟನೆ ಇದು. ಹೀಗಾಗಿ ನಾನು ದಯವಿಟ್ಟು ಕ್ಷಮೆ ಕೇಳುತ್ತೇನೆ. ಈ ವಿಚಾರವನ್ನು ನಾನು ನೋಡಿ ನಿರ್ದೇಶಕರ ಗಮನಕ್ಕೆ ತರಬೇಕಿತ್ತು. ಮತ್ತೊಬ್ಬರಿಗೆ ನೋವು ಮಾಡಬೇಕು ಅನ್ನೋದು ನನ್ನ ಉದ್ದೇಶವಿಲ್ಲ ಈ ರೀತಿ ಮತ್ತೆ ಮಾಡಬಾರದು ಅಂದುಕೊಂಡಿರುವೆ.' ಎಂದು ಶ್ರೇಯಸ್ ತಲ್ಪಾಡೆ ಸ್ಪಷ್ಟನೆ ನೀಡಿದ್ದಾರೆ.

ಮರಾಠಿ ಧಾರಾವಾಹಿ ಮೂಲಕ 1998ರಲ್ಲಿ ಶ್ರೀಯಸ್‌ ಬಣ್ಣದ ಜರ್ನಿ ಆರಂಭಿಸಿದ್ದರು. ಸೀರಿಯಲ್‌ನಲ್ಲಿ ಲೀಡ್‌ ಪಾತ್ರ ಪಡೆದುಕೊಂಡಿದ ಕಾರಣ ನಾಗೇಶ್‌ ನಿರ್ದೇಶನ ಮಾಡಿರುವ Iqbal ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಕ್ರಿಕೆಟರ್‌ ಆಗಬೇಕು ಎಂದು ಕನಸು ಕಂಡಿರುವ ಅಂದ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್‌ ಜೊತೆ ಓಂ ಶಾಂತಿ ಓಂನಲ್ಲಿ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ಶ್ರೀಯಶ್‌ ಕೈ ತುಂಬಾ ಆಫರ್‌ಗಳು ಸೇರಿತ್ತು. 

ನಾರ್ಮಲ್‌ ಡೆಲಿವರಿ ಆದ ತಕ್ಷಣ ಹೊಟ್ಟೆಗೆ ಬಟ್ಟೆ ಕಟ್ಟಿದ ನಟಿ ಅಮೃತಾ; ಮಗು ಆದ್ಮೇಲೆ ಸಣ್ಣ ಆಗೋದು ಹೀಗೆ

ಬಾಂಬೆ ಟು ಬ್ಯಾಂಕಾಕ್‌, ಗೋಲ್‌ಮಾಲ್‌ ರಿಟರ್ನ್‌, ಕ್ಲಿಕ್‌, ದಿ ಹಂಗಾಮ, ಗೋಲ್‌ಮಾಲ್‌ 3, ಹೌಸ್‌ಫುಲ್‌ 2, ಜೋಕರ್, ಗೋಲ್‌ಮಾಲ್ ಅಗೇನ್,ಸಿಂಬಾ, ಎಮರ್ಜೆನ್ಸಿ ಸೇರಿದಂತೆ ಬಿಗ್ ಬಜೆಟ್‌ ಸಿನಿಮಾದಲ್ಲಿ ಶ್ರೀಯಸ್ ಅಭಿನಯಿಸಿದ್ದಾರೆ. ದಿ ಲಯನ್‌ ಕಿಂಗ್‌ ಸಿನಿಮಾ ಹಿಂದಿಯಲ್ಲಿ ಡಬ್ ಆಗಿದ್ದು ನಾಯಕ ಬಿಲ್ಲಿಗೆ ಶ್ರೀಯಸ್ ಧ್ವನಿ ನೀಡಿದ್ದಾರೆ. ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಹಿಂದಿಯಲ್ಲಿ ಬಿಡುಗಡೆಯಾಗಿದ್ದು ಅದಕ್ಕೂ ಶ್ರೀಯಸ್‌ ಧ್ವನಿ ನೀಡಿದ್ದಾರೆ. ಒಟ್ಟು 8 ಮರಾಠಿ ಸಿನಿಮಾಗಳಲ್ಲಿ ಶ್ರೀಯಸ್ ಅಭಿನಯಿಸಿದ್ದಾರೆ.

 

pic.twitter.com/bFb474kLpq

— Gems of Bollywood Fan (@FilmyKhichdii)
click me!