ಆದಿಪುರುಷ್ ಚಿತ್ರದಲ್ಲಿ ಸೈಪ್ ಅಲಿ ಖಾನ್ ಪಾತ್ರ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ಈ ಬಗ್ಗೆ ನಿರ್ದೇಶಕ ಓಂ ರಾವುತ್ ಪ್ರತಿಕ್ರಿಯೆ ನೀಡಿದ್ದು ರಾವಣ ಪಾತ್ರವನ್ನು ಸಮರ್ಥಿಸಿಕೊಂಡಿದ್ದಾರೆ.
ತೆಲುಗು ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾದ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಚಿತ್ರದ ಟೀಸರ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆದಿಪುರುಷ್ ಟೀಸರ್ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ಅದರಲ್ಲೂ ರಾವಣ ಪಾತ್ರಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಅಲ್ಲದೇ ಕಳಪೆ ವಿಎಫ್‌ಎಕ್ಸ್ ಕೂಡ ಪ್ರಭಾಸ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ನಿರ್ದೇಶಕ ಓಂ ರಾವುತ್ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ರಾವಣನ ಪಾತ್ರವನ್ನು ಕಿಲ್ಜಿ ದೊರೆಯ ಹಾಗೆ ತೋರಿಸಲಾಗಿದೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ನಿರ್ದೇಶಕ ಓಂ ರಾವುತ್ ಪ್ರತಿಕ್ರಿಯೆ ನೀಡಿದ್ದು ರಾವಣ ಪಾತ್ರವನ್ನು ಸಮರ್ಥಿಸಿಕೊಂಡಿದ್ದಾರೆ.
ರಾವಣ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ಟೀಸರ್ ರಿಲೀಸ್ ಆದಾಗಿಂತ ಸೈಫ್ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ಈ ಬಗ್ಗೆ ಓಂ ರಾವುತ್ ಪ್ರತಿಕ್ರಿಯೆ ನೀಡಿದ್ದಾರೆ. ಆಜ್ ತಕ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಓಂ ರಾವುತ್, 'ಇಂದಿನ ಕಾಲದ ರಾವಣ ರಾಕ್ಷಸ, ತುಂಬಾ ಕ್ರೂರ. ನಮ್ಮ ಸೀತಾದೇವಿಯನ್ನು ಅಪಹರಿಸಿದವನು ಕ್ರೂರಿ. ಇಂದಿನ ಕಾಲದಲ್ಲಿ ರಾವಣ ಹೇಗಿರುತ್ತಾನೆ ಎಂಬುದನ್ನು ತೋರಿಸಿದ್ದೇವೆ. ಇದು ನಮಗೆ ಸಿನಿಮಾ ಅಥವಾ ಪ್ರಾಜೆಕ್ಟ್ ಅಲ್ಲ. ಇದು ನಮಗೆ ಧ್ಯೇಯವಾಗಿದೆ' ಎಂದು ಹೇಳಿದರು.
'ನಮ್ಮ ಚಿತ್ರ ಭಕ್ತಿಯ ಪ್ರತೀಕವಾಗಿದ್ದು ಇದಕ್ಕೆ ಎಲ್ಲರ ಆಶೀರ್ವಾದ ಬೇಕು. ಚಿತ್ರದ ಬಗ್ಗೆ ಮಾತನಾಡುತ್ತಿರುವ ನಮ್ಮ ಹಿರಿಯರ ಮಾತನ್ನು ನಾನು ಕೇಳುತ್ತಿದ್ದೇನೆ ಮತ್ತು ಎಲ್ಲವನ್ನೂ ಗಮನಿಸುತ್ತಿದ್ದೇನೆ. 2023 ರ ಜನವರಿಯಲ್ಲಿ ನೀವು ಚಿತ್ರವನ್ನು ನೋಡಿದಾಗ, ನಾನು ಯಾರನ್ನೂ ನಿರಾಶೆಗೊಳಿಸುವುದಿಲ್ಲ ಎಂದು' ಓಂ ರೌವುತ್ ಹೇಳಿದರು.
‘ಆದಿಪುರುಷ’ ರಾಮನ ಪಾತ್ರಕ್ಕೆ ಪ್ರಭಾಸ್ ಸಂಭಾವನೆ ಎಷ್ಟು?
ಈ ಮೊದಲು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಓಂ ರಾವುತ್ ವಿಎಫ್ಎಕ್ಸ್ ಕೆಲಸದ ಬಗ್ಗೆ ಮಾತನಾಡಿದ್ದರು. 'ನನಗೆ ನಿರಾಸೆಯಾಗಿದ್ದು ನಿಜ. ಆಶ್ಚರ್ಯವೇನಿಲ್ಲ, ಯಾಕೆಂದರೆ ಈ ಸಿನಿಮಾವನ್ನು ದೊಡ್ಡ ಪರದೆ ಮೇಲೆ ನೋಡಬೇಕು, ದೊಡ್ಡ ಮಾಧ್ಯಮಕ್ಕಾಗಿ ನಿರ್ಮಿಸಲಾಗಿದೆ. ಇದನ್ನು ಮೊಬೈಲ್ ಫೋನ್‌ನಲ್ಲಿ ನೋಡಲು ಮಾಡಿಲ್ಲ. ನಾನು ಇದನ್ನು ಯೂಟ್ಯೂಬ್‌ಗಾಗಿ ಮಾಡಿಲ್ಲ' ಎಂದು ಹೇಳಿದ್ದರು.
'ಆದಿಪುರುಷ್' ದೊಡ್ಡ ಪರದೆಗಾಗಿ ಮಾಡಿದ್ದು; ಟ್ರೋಲಿಗರಿಗೆ ನಿರ್ದೇಶಕ ಓಂ ರಾವುತ್ ತಿರುಗೇಟು
ಆದಿಪುರುಷ್ ಬಗ್ಗೆ
ಆದಿಪುರುಷ್ ಸಿನಿಮಾದಲ್ಲಿ ರಾಮನಾಗಿ ಪ್ರಭಾಸ್ ನಟಿಸಿದ್ರೆ, ಸೀತೆಯಾಗಿ ಬಾಲಿವುಡ್ ನಟಿ ಕೃತಿ ಸನೂನ್ ಕಾಣಿಸಿಕೊಂಡಿದ್ದಾರೆ. ರಾವಣ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಮಿಂಚಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾ ಹಿಂದಿ ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ಅಂದಹಾಗೆ ಆದಿಪುರುಷ್ ಮುಂದಿನ ವರ್ಷ ಜನವರಿ 12ರಂದು ಸಿನಿಮಾ ರಿಲೀಸ್ ಆಗುತ್ತಿದೆ.