ನಿರ್ಮಾಪಕಿಯಾಗಿ ದಿನಕ್ಕೊಂದು ಹೊಸ ವಿಚಾರಗಳನ್ನು ಕಲಿಯುತ್ತಿರುವೆ ಎಂದು ಹೇಳಿಕೊಂಡಿರುವ ಮಮ್ಮಿ ಟು ಬಿ ಆಲಿಯಾ ಭಟ್...
ಬಾಲಿವುಡ್ ಬಬ್ಲಿ ಹುಡುಗಿ ಆಲಿಯಾ ಭಟ್ ಪ್ರೆಗ್ನೆನ್ಸಿ ವಿಚಾರವಾಗಿ ದಿನವೂ ನ್ಯೂಸ್‌ನಲ್ಲಿರುತ್ತಾರೆ. ಮದುವೆ, ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್ ಪ್ರೆಗ್ನೆನ್ಸಿ, ಮನೆ ನಿರ್ಮಾಣ...ಒಟ್ಟಿನಲ್ಲಿ ಆಲಿಯಾ ಲೈಫ್ ಸಖತ್ ಫಾಸ್ಟ್ ಆಗಿದೆ ಎನ್ನಬಹುದು. ಸ್ಟುಡೆಂಟ್ ಆಫ್ ದಿ ಇಯರ್ ಚಿತ್ರದಲ್ಲಿ ಶನಾಯ ಪಾತ್ರದಿಂದ ಗಂಗೂಭಾಯ್ ಸಿನಿಮಾದಲ್ಲಿ ನಟಿಸಿ, ಡಾರ್ಲಿಂಗ್ ಚಿತ್ರದ ಮೂಲಕ ನಿರ್ಮಾಪಕಿಯಾಗಿರುವ ಆಲಿಯಾ ಭರ್ಟ್ ಒಮ್ಮೆ ಮೆಚ್ಚಲೇ ಬೇಕು.
ಸಿನಿ ಜರ್ನಿಯಲ್ಲಿ ಆಲಿಯಾ ಭಟ್ ತಮ್ಮದೇ ವಿಭಿನ್ನ ಛಾಪು ಮೂಡಿಸಿದ್ದಾರೆ. ಸದ್ಯಕ್ಕೆ ಡಿಮ್ಯಾಂಡ್‌ನಲ್ಲಿರುವ ನಟಿ Forbes podium ನಡೆಸಿದ Tycoons of Tomorrow ಕಾರ್ಯಕ್ರಮದಲ್ಲಿ ನಿರ್ಮಾಪಕಿ ಆದ ಮೇಲೆ ಜೀವನ ಹೇಗಿದೆ? ಕೆಲಸ ಹೇಗಿದೆ? ಬಿ-ಟೌನ್‌ನಲ್ಲಿ ನಿರ್ಮಾಪಕಿಯರು ಏನೆಲ್ಲಾ ಫೇಸ್ ಮಾಡಬೇಕು ಎಂದು ಮಾತನಾಡಿದ್ದಾರೆ. ನಿಷ್ಪಕ್ಷಪಾತ ಆಯ್ಕೆಗಳು, ಹೂಡಿಕೆಗಳು ಮತ್ತು ಇತ್ತೀಚಿನ ಚಲನಚಿತ್ರ ನಿರ್ಮಾಣದ ಪ್ರಯತ್ನ ಬಗ್ಗೆ ಚರ್ಚೆ ಮಾಡಿದ್ದಾರೆ.
ಡಾರ್ಲಿಂಗ್ ಸಿನಿಮಾ ಮೂಲಕ ಆಲಿಯಾ ನಿರ್ಮಾಪಕಿಯಾಗಿದ್ದಾರೆ. 'ನಿರ್ಮಾಪಕಿ ಆಗಬೇಕು ಎಂದು ಚಿಂತಿಸಿದಾಗ ಮೊದಲು ಶುರುವಾಗಿದ್ದು ನಮ್ಮ ಹಣಕಾಸಿನ ಲೆಕ್ಕಚಾರ ಆನಂತರ ನಿರ್ಮಾಪಕಿಯಾಗಲು ದೃಢ ನಿರ್ಧಾರ ತೆಗೆದುಕೊಂಡೆ. ಡಾರ್ಲಿಂಗ್ ಸಿನಿಮಾ ತಂಡ ನನ್ನನ್ನು ಸಂಪರ್ಕ ಮಾಡಿದಾಗ ಆಗ ನಿರ್ಮಾಣ ಸಂಸ್ಥೆಯನ್ನು ಸಂಪರ್ಕ ಮಾಡುವುದಾಗಲಿ ಅಥವಾ ಲೋನ್ ತೆಗೆದುಕೊಳ್ಳಲು ನನ್ನ ಮನಸ್ಸು ಒಪ್ಪಲಿಲ್ಲ. ಹೀಗಾಗಿ ನಾನು ಕಡಿಮೆ ಸಂಭಾವನೆ ಪಡೆದು ಸಿನಿಮಾದ ಬ್ಯಾಕೆಂಡ್ ವಹಿಸಿಕೊಂಡೆ. ಈ ಸಿನಿಮಾ ಮಾಡುವ ಪ್ರಾಸೆಸ್‌ನಲ್ಲಿ ನನಗೆ ಒಂದು ವಿಚಾರ ಚೆನ್ನಾಗಿ ಅರ್ಥವಾಗಿದೆ, ಏನೆಂದರೆ ನನಗೆ ಸಿನಿಮಾ ನಿರ್ಮಾಣ ಮಾಡುವುದಕ್ಕಿಂತ ಹೆಚ್ಚಾಗಿ ಸಿನಿಮಾ ಹಿಂದೆ ಹೇಗೆ ಕೆಲಸ ನಡೆಯುತ್ತದೆ ಏನೆಲ್ಲಾ ಅಗತ್ಯವಿದೆ ಎಂದು ಕುತೂಹಲ ಹೆಚ್ಚಾಗಿತ್ತು. 10 ವರ್ಷಗಳಿಂದ ನಾನು ಚಿತ್ರರಂಗದಲ್ಲಿರುವೆ ನನ್ನ ಮೊದಲ ಓಟಿಟಿ ಸಿನಿಮಾಗೆ ನಿರ್ಮಾಪಕಿಯಾಗಿರುವೆ. ಡಾರ್ಲಿಂಗ್ ರೀತಿ ಸಿನಿಮಾ ಮಾಡುವಾಗ ನಾನು ದಿನವೂ ಹೊಸ ಹೊಸ ವಿಚಾರ ಕಲಿಯುತ್ತಿದ್ದೆ. ದಿನಕ್ಕೊಂದು ಹೊಸ ವಿಚಾರ ಕಲಿಯಬೇಕು ಅನ್ನೊದು ನನ್ನ ಗೋಲ್. ಜೀವನದಲ್ಲಿ ನಾನು ಕಲಿಯಬೇಕು ಹಾಗೂ ಬೆಳೆಯಬೇಕು. ನಾನು ಪ್ರಶ್ನೆ ಕೇಳುವುದಕ್ಕೆ ಯೋಚನೆ ಮಾಡಬಾರದು ಏಕೆಂದರೆ ಮತ್ತೊಬ್ಬರು ನಿಮಗೆ ಪ್ರಶ್ನೆ ಕೇಳಿದಾಗ ನಿಮಗೆ ಉತ್ತರ ಗೊತ್ತಿಲ್ಲ ಅಂದ್ರೆ ಹೇಗೆ? ನನಗೆ ಮಾತ್ರವಲ್ಲ ಬಿಲ್ ಗೇಟ್ಸ್‌ಗೂ ಇರುವುದಿಲ್ಲ' ಎಂದು ಆಲಿಯಾ ಮಾತನಾಡಿದ್ದಾರೆ.
ಬೇಬಿ ಶವರ್ ಫೋಟೋಗಳನ್ನು ಹಂಚಿಕೊಂಡ ಆಲಿಯಾ ಭಟ್!
'ಸಿನಿಮಾ ನಿರ್ಮಾಣ ಮಾಡುವುದರಿಂದ ನಾನು ಆರ್ಥಿಕವಾಗಿ ಗಟ್ಟಿಯಾಗಿರುವೆ. ಖುಷಿಯಾಗುತ್ತಿದೆ ಸಿನಿಮಾ ನಿರ್ಮಾಣ ಮಾಡುವಷ್ಟು ಶಕ್ತಿ ಹೊಂದಿರುವೆ ಎಂದು. ಇದರಿಂದ ನನ್ನಲಿರುವ ಕ್ರಿಯೇಟಿವಿಟಿ ಹೆಚ್ಚಾಗಿದೆ. ಕಂಟೆನ್ಟ್ ಇರುವ ಸಿನಿಮಾ ಆಯ್ಕೆ ಮಾಡುವುದಕ್ಕಿಂತ ಹೆಚ್ಚಾಗಿ ಒಂದು ವಿಚಾರದ ಬಗ್ಗೆ ಸಂದೇಶ ಹೊರಡಿಸಬೇಕು ಇದರಿಂದ ಸಿನಿಮಾ ಆದರೂ ಆಗಲಿ ಶೋ ಆದರೂ ಆಗಲಿ ಅಥವಾ ಪಾಡ್‌ಕಾಸ್ಟ್ ಆಗಲಿ. ಏನೇ ಇದ್ದರೂ ಜನರು ಮೆಚ್ಚಿಕೊಳ್ಳಬೇಕು'ಎಂದು ಆಲಿಯಾ ಹೇಳಿದ್ದಾರೆ.
'ಏನೇ ಕೇಸ್ ಇರಲಿ ನನಗೆ ಗೊತ್ತು ಒಳ್ಳೆಯ ವಿಚಾರಗಳನ್ನು ತೋರಿಸಬೇಕು ಇದರಿಂದ ಜನರಿಗೆ ಎಮೋಷನಲ್ ಕೋರ್ ಕನೆಕ್ಟ್ ಆಗಬೇಕು. ಫಿಲ್ಮ್ ಮೇಕಿಂಗ್‌ನಲ್ಲಿ ನಾನು ತೊಡಗಿಸಿಕೊಳ್ಳಬೇಕು ಕ್ಯಾಮೆರಾ ಮುಂದಿರುವುದಕ್ಕಿಂತ ಹಿಂದಿರುವ ಕೆಲಸಗಳನ್ನು ಅರ್ಥ ಮಾಡಿಕೊಳ್ಳಬೇಕು' ಎಂದಿದ್ದಾರೆ ಆಲಿಯಾ.
Alia bhatt ಹಾಸಿಗೆಯಲ್ಲಿ ಹೊರಳಾಡುತ್ತಾಳೆ ನಾನು ಮೂಲೆಯಲ್ಲಿ ಮಲಗುವೆ: ರಣಬೀರ್ ಕಪೂರ್
ಡಾರ್ಲಿಂಗ್ ಸಿನಿಮಾ:
ಡಾರ್ಲಿಂಗ್ ಸಿನಿಮಾದಲ್ಲಿ ಆಲಿಯಾ ಭಟ್ ಬಾದ್ರೂ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕುಡಿತಕ್ಕೆ ಬಿದ್ದಿರುವ ಪತಿ ಕುಡಿತ ಬಿಟ್ಟರೆ ಸಂಸಾರ ಸರಿ ಹೋಗುತ್ತದೆ ಎಂದು ಸದಾ ಒಂದಲ್ಲ ಒಂದು ಪ್ರಯತ್ನ ಮಾಡುತ್ತಿರುವ ಪತ್ನಿ ಪಾತ್ರವಿದು. ಕಂಟ್ರೋಲ್ ಮೀರಿದಾಗ ಬಾದ್ರೂ ಮತ್ತು ಆಕೆ ತಾಯಿ ಸೇರಿಕೊಂಡು ರಿವೇಂಜ್ ತೆಗೆದುಕೊಳ್ಳಲು ಮುಂದಾಗುತ್ತಾರೆ. ಈ ಸಿನಿಮಾ ಸೂಪರ್ ಆಗಿದೆ ಎಂದು ಪಬ್ಲಿಕ್ ಮತ್ತು ಕ್ರಿಟಿಕ್‌ಗಳು ಹೇಳಿದ್ದಾರೆ.