'ನನಗೆ ಹಾಲಿವುಡ್ ಪಾಡ್‌ಕಾಸ್ಟ್‌ನಲ್ಲಿ ನನ್ನ ಲೈಫ್ ಜರ್ನಿ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಹೀಗಾಗಿ ನಾನು ಪ್ರಶ್ನೆಗೆ ಉತ್ತರ ರೂಪದಲ್ಲಿ ಅದನ್ನು ಹೇಳಿದ್ದೇನೆ. ಯಾವುದನ್ನೇ ಆದರೂ ಕೇಳಿದಾಗ, ಹೇಳಬೇಕಾದ ಸಮಯದಲ್ಲಿ ಹೇಳಲೇಬೇಕಾಗುತ್ತದೆ.
ದಶಕಗಳ ಹಿಂದೆ ಬಾಲಿವುಡ್ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದಿದ್ದ ನಟಿ ಪ್ರಿಯಾಂಕಾ ಚೋಪ್ರಾ ಈಗೇನಿದ್ದರೂ ಹಾಲಿವುಡ್ ಕಡೆ ತಮ್ಮ ದೃಷ್ಟಿ ನೆಟ್ಟಿದ್ದಾರೆ. ಸದ್ಯ ನಟಿ ಪ್ರಿಯಾಂಕಾ ಚೋಪ್ರಾ ಯಾವುದೇ ಹಿಂದಿ ಚಿತ್ರದಲ್ಲಿ ನಟಿಸುತ್ತಿಲ್ಲ, ಯಾವುದೇ ಬಾಲಿವುಡ್ ಚಿತ್ರದ ಆಫರ್‌ಅನ್ನು ಅವರು ಒಪ್ಪಿಕೊಂಡಿಲ್ಲ. ಹಾಲಿವುಡ್ ಸಿನಿಮಾ, ಸೀರಿಯಲ್ ಹಾಗು ವೆಬ್ ಸಿರೀಸ್‌ನಲ್ಲಿ ಮಾತ್ರ ನಟಿಸುತ್ತಿದ್ದಾರೆ. ಆಗಾಗ ಹಾಲಿವುಡ್ ಪಾಡ್‌ಕಾಸ್ಟ್ ಮತ್ತು ಸಂದರ್ಶನಗಳಲ್ಲಿ ಭಾಗಿಯಾಗುವ ಪ್ರಿಯಾಂಕಾ ತಮ್ಮ ಲೈಫ್ ಜರ್ನಿ ಬಗ್ಗೆ ಹೇಳಿಕೊಳ್ಳುತ್ತಾರೆ.
ಇತ್ತೀಚೆಗೆ ಹಾಲಿವುಡ್ ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡುತ್ತ ನಟಿ ಪ್ರಿಯಾಂಕಾ, ಹಿಂದೊಮ್ಮೆ ತಮ್ಮನ್ನು ಬಾಲಿವುಡ್‌ನಲ್ಲಿ ಮೂಲೆಗುಂಪು ಮಾಡಲಾಗಿತ್ತು ಎಂಬ ಸಂಗತಿಯನ್ನು ರಿವೀಲ್ ಮಾಡಿದ್ದಾರೆ. ಆ ಬಗ್ಗೆ ಇನ್ನೊಂದು ಇಂಟರ್‌ವ್ಯೂನಲ್ಲಿ ಸಂದರ್ಶಕಿ ಪ್ರಿಯಾಂಕಾ ಚೋಪ್ರಾ ಗಮನಸೆಳೆದು, 'ನೀವು ಬಾಲಿವುಡ್‌ನಲ್ಲಿ ಹಲವು ವರ್ಷಗಳ ಹಿಂದೆ ನಿಮ್ಮನ್ನು ಮೂಲೆಗುಂಪು ಮಾಡಿರುವ ಬಗ್ಗೆ ಈಗ ಏಕೆ ಮಾತನಾಡಿದಿರಿ ಎಂದು ನಾನು ತಿಳಿದುಕೊಳ್ಳಬಹುದೇ?' ಎಂದು ಕೇಳಿದ್ದಾರೆ. ಅದಕ್ಕೆ ಪ್ರಿಯಾಂಕಾ ನೇರವಾಗಿಯೇ ಉತ್ತರ ನೀಡಿದ್ದಾರೆ.
ಶುರುವಾಯ್ತು 'ಸೋಮು ಸೌಂಡ್ ಇಂಜಿನಿಯರ್' ಹವಾ; ಶಿಷ್ಯ ಅಭಿಗೆ ಸುಕ್ಕ ಸೂರಿ ಸಾಥ್
'ನನಗೆ ಹಾಲಿವುಡ್ ಪಾಡ್‌ಕಾಸ್ಟ್‌ನಲ್ಲಿ ನನ್ನ ಲೈಫ್ ಜರ್ನಿ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಹೀಗಾಗಿ ನಾನು ಪ್ರಶ್ನೆಗೆ ಉತ್ತರ ರೂಪದಲ್ಲಿ ಅದನ್ನು ಹೇಳಿದ್ದೇನೆ. ಯಾವುದನ್ನೇ ಆದರೂ ಕೇಳಿದಾಗ, ಹೇಳಬೇಕಾದ ಸಮಯದಲ್ಲಿ ಹೇಳಲೇಬೇಕಾಗುತ್ತದೆ. ನನ್ನನ್ನು ಬಾಲಿವುಡ್‌ನಲ್ಲಿ ಮೂಲೆಗುಂಪು ಮಾಡಲು ಬೇಕಾದಷ್ಟು ವೇಳೆ ಪ್ಲಾನ್ ಮಾಡಲಾಗಿತ್ತು. ಆದರೆ, ಕೆಲವು ಬಾರಿ ಮಾತ್ರ ಅದರಲ್ಲಿ ಅವರು ಸಫಲರಾಗಿದ್ದಾರೆ. ಆದರೆ ಆಗ ನನಗೆ ಅದನ್ನು ಅನುಭವಿಸುವುದನ್ನು ಬೇರೆ ದಾರಿ ಇರಲಿಲ್ಲ. ವಿರೋಧಿಸುವ ಧೈರ್ಯವಾಗಲೀ, ಆ ಬಗ್ಗೆ ಮಾತನಾಡುವ ಕಾನ್ಫಿಡೆನ್ಸ್ ಆಗಲೀ ಇರಲೇ ಇಲ್ಲ.
ಸಲ್ಮಾನ್ ಖಾನ್ ಅಳಿಯ, ಕಾಂಗ್ರೆಸ್ ಧುರೀಣರ ಮೊಮ್ಮಗನಾಗಿದ್ದೂ ಬಾಲಿವುಡ್‌ನಲ್ಲಿ ಚಾನ್ಸ್ ಗಗನಕುಸುಮ!
ಆದರೆ ಈಗ ನಾನಿರುವ ಸ್ಥಿತಿಯಲ್ಲಿ, ನನ್ನ ಹಿಂದಿನ ಜರ್ನಿ ಬಗ್ಗೆ ಮುಕ್ತವಾಗಿ ಮಾತನಾಡುವ ಧೈರ್ಯವಿದೆ. ನಾನೀಗ ಆ ಜಾಗದಲ್ಲಿ ಇಲ್ಲ; ಆ ಜಾಗಕ್ಕೆ ಮತ್ತೆ ಹೋಗುವ ಯೋಚನೆಯೂ ಇಲ್ಲ. ಅಲ್ಲಿ ನನಗಾದ ಅನ್ಯಾಯವನ್ನು ಮರೆಯಲೂ ಸಾಧ್ಯವಿಲ್ಲ, ಮರೆಯಬೇಕಾಗಿಯೂ ಇಲ್ಲ. ಈಗ ನನಗೆ ಆ ಬಗ್ಗೆ ಯಾವುದೇ ಅಳುಕಿಲ್ಲ, ಅಸಹಾಯಕತೆಯೂ ಇಲ್ಲ. ಯಾರಾದರೂ ನನ್ನ ಜೀವನದಲ್ಲಿ ನಡೆದ ಘಟನೆ ಬಗ್ಗೆ ಕೇಳಿದರೆ ಮುಕ್ತವಾಗಿ ಮಾತನಾಡಬಲ್ಲೆ' ಎಂದಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಮಾತು ಕೇಳಿದರೆ, ಆ ಸಂದರ್ಶಕಿ ಮಾತ್ರವಲ್ಲ, ಯಾರಾದರು ತಲೆದೂಗಲೇಬೇಕು.
ನಾಗರಹಾವು ಚಿತ್ರಕ್ಕೆ ವಿಷ್ಣುವರ್ಧನ್ ಆಯ್ಕೆಯಾಗಿದ್ದು ಹೇಗೆ, ಯಾಕೆ? ಪುಟ್ಟಣ್ಣ ಕಣಗಾಲ್ ಅಂದು ಹೇಳಿದ್ದೇನು?