ಕೆಂಪು ಜರಿ ಸೀರೆ ಉಟ್ಟು ತಿರುಪತಿ ವೆಂಕಟೇಶ್ವರ ಸನ್ನಿಧಿಯಲ್ಲಿ ಕಂಡ ನಟಿ ಜಾಹ್ನವಿ ಕಪೂರ್

By Shriram Bhat  |  First Published Mar 7, 2024, 2:52 PM IST

ಮಾರ್ಚ್ 6 ರಂದು ತಮ್ಮ 27 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ನಟಿ ಜಾಹ್ನವಿ ಕಪೂರ್ , ತಾವು ಈ ಸಮಯದಲ್ಲಿ ತೆಗೆಸಿಕೊಂಡಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. 


ಸುರಸುಂದರಿ ಶ್ರೀದೇವಿ ಮಗಳು, ಬಾಲಿವುಡ್‌ ನಟಿ ಜಾಹ್ನವಿ ಕಪೂರ್‌ ನಿನ್ನೆ (ಮಾರ್ಚ್‌ 6) ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಹುಟ್ಟುಹಬ್ಬದ ನಿಮಿತ್ತ ನಿನ್ನೆ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಹುಟ್ಟುಹಬ್ಬದ ಕ್ಷಣವನ್ನು ಸಾರ್ಥಕ ಮಾಡಿಕೊಂಡಿದ್ದಾರೆ. ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ ಈ ಸಂದರ್ಭದಲ್ಲಿ ನಟಿ ಜಾಹ್ನವಿ ಕಪೂರ್ ದಕ್ಷಿಣ ಭಾರತ ಶೈಲಿಯ ಜರಿ ಸೀರೆ ಉಟ್ಟಿದ್ದರು.

ಮಾರ್ಚ್ 6 ರಂದು ತಮ್ಮ 27 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ನಟಿ ಜಾಹ್ನವಿ ಕಪೂರ್ , ತಾವು ಈ ಸಮಯದಲ್ಲಿ ತೆಗೆಸಿಕೊಂಡಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಗುಲಾಬಿ ಬಣ್ಣದ ಸೀರೆ ಉಟ್ಟಿರುವ ನಟಿ, ತುಂಬಾ ಮುದ್ದು ಮುದ್ದಾಗಿ ಕಾಣುತ್ತಿದ್ದು, ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತಿದ್ದರು. 'ಬರ್ತ್ ಡೇ ಗರ್ಲ್' ಜಾಹ್ನವಿ ಕಪೋರ್ ಗ್ಲಾಮರಸ್ ಲುಕ್‌ ನೋಡಿ ಅಲ್ಲಿದ್ದವರು ಬೆರಗಾಗಿದ್ದರು.  

Tap to resize

Latest Videos

ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್‌ ಜನ್ಮದಿನ; ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ತಮ್ಮ ಹುಟ್ಟುಹಬ್ಬದ ಸುಸಂದರ್ಭದಲ್ಲಿ  ನಟಿ ಜಾಹ್ನವಿ ಕಪೂರ್ ಸುಂದರವಾದ ದಕ್ಷಿಣ ಭಾರತದ ಶೈಲಿಯ ಸೀರೆಯನ್ನು ಧರಿಸಿದ್ದು, ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ  ಪ್ರಾರ್ಥನೆ ಸಲ್ಲಿಸಿದರು. ಈ ಸಂಬಂಧ ಜಾನ್ವಿ ಕಪೂರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜತೆಗೆ, 'ನನ್ನ ಹುಟ್ಟುಹಬ್ಬದ ಈ ದಿನದಂದು ಪ್ರೀತಿಯಿಂದ ವಿಶ್‌ ಮಾಡಿದ ನಿಮಗೆಲ್ಲರಿಗೂ ಧನ್ಯವಾದಗಳು' ಎಂದು ಜಾಹ್ನವಿ ಸೋಷಿಯಲ್‌ ಮೀಡಿಯಾದಲ್ಲಿ ಬರೆದಿದ್ದಾರೆ.

ಮಿಸ್‌ ವರ್ಲ್ಡ್ ಆಗಿದ್ದರೂ ಸಿನಿಮಾದಲ್ಲಿ ಮಿಂಚಲಾಗದ ನಟಿ ಈಗ ಸಾಮಾಜಿಕ ಕಾರ್ಯಕರ್ತೆ!

ಸದ್ಯ ನಟಿ ಜಾಹ್ನವಿ ಕಪೂರ್ ಅವರು ಜೂನಿಯರ್ ಎನ್‌ಟಿಆರ್ ನಟನೆಯ ದೇವರ' ಹೆಸರಿನ ತೆಲುಗಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಿನ್ನೆ, ತಮ್ಮ ಚಿತ್ರದ ನಾಯಕಿ ಜಾಹ್ನವಿ ಕಪೂರ್ ಹುಟ್ಟುಹಬ್ಬದಂದು ಚಿತ್ರತಂಡ ದೇವರ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದೆ. ಸದ್ಯ ಜೂನಿಯರ್ ಎನ್‌ಟಿಆರ್ ಚಿತ್ರಕ್ಕೆ ಹೀರೋಯಿನ್ ಆಗಿರುವ ಜಾಹ್ನವಿ, ಮುಂದೆ ಮೆಗಾಸ್ಟಾರ್ ರಾಮ್ ಚರಣ್ ಮತ್ತು ನಿರ್ದೇಶಕ ಬುಚ್ಚಿ ಬಾಬು ಜೋಡಿಯ ಮುಂಬರುವ ಚಿತ್ರಕ್ಕೂ ನಾಯಕಿಯಾಗಿ ನಟಿಸಲಿದ್ದಾರೆ. ಸದ್ಯಕ್ಕೆ ಜಾಹ್ನವಿ ತಮ್ಮ ಬರ್ತ್‌ಡೇ ಮೂಡ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. 

ಅರೆರೆ ಎಂಥ ನಟನೆ, ರಶ್ಮಿಕಾಗೆ ಸಿಕ್ತು ಪುಷ್ಪಾ ಹೀರೋ ಸರ್ಟಿಫಿಕೇಟ್; ಏನಂದ್ರು ಅಲ್ಲು ಅರ್ಜುನ್?

click me!