ಸಲ್ಮಾನ್‌ ಖಾನ್ ಅಳಿಯ, ಕಾಂಗ್ರೆಸ್‌ ಧುರೀಣರ ಮೊಮ್ಮಗನಾಗಿದ್ದೂ ಬಾಲಿವುಡ್‌ನಲ್ಲಿ ಚಾನ್ಸ್ ಗಗನಕುಸುಮ!

By Shriram Bhat  |  First Published Mar 7, 2024, 5:24 PM IST

ಹಿಮಾಚಲ ಪ್ರದೇಶದ ಮಾಜಿ ಮಂತ್ರಿ, ಹಿರಿಯ ಕಾಂಗ್ರೆಸ್ ಧುರೀಣರಾದ ಪಂಡಿತ್ ಸುಖ್ ರಾಮ್ ಅವರ ಮೊಮ್ಮಗ. 1990ರಲ್ಲಿ ಜನಿಸಿದ  ಈ ನಟನ ತಂದೆ 4 ಬಾರಿ ಎಂಎಲ್‌ಎ ಆಗಿದ್ದವರು.


ಬಾಲಿವುಡ್ ಅಂಗಳದಲ್ಲಿ ಒಂದು ಮಾತು ಜನಜನಿತವಾಗಿದೆ. 'ಸಿನಿಮಾ ಕುಟುಂಬದ ಹಿನ್ನೆಲೆಯಿಲ್ಲದೇ ಬಂದರೆ ಅಲ್ಲಿ ಯಶಸ್ಸು ಸಿಗುವುದಿಲ್ಲ. ಅಥವಾ, ಬಾಲಿವುಡ್‌ ಸಿನಿಮಾದಲ್ಲಿ ಅವಕಾಶ ಸಿಗಬೇಕು ಎಂದರೆ ಸಿನಿಮಾ ಉದ್ಯಮದ ಹಿನ್ನೆಲೆ ಇರಬೇಕು ಎಂದು ಎಲ್ಲರೂ ಮಾತನಾಡುತ್ತಾರೆ. ಆದರೆ ಇಲ್ಲೊಬ್ಬರು ನಟ, ಸಿನಿಮಾ ಹಾಗೂ ರಾಜಕೀಯ ಹಿನ್ನೆಲೆ ಎರಡೂ ಇದ್ದರೂ ಅವಕಾಶ ಸಿಗದೇ, ಸಿಕ್ಕ ಅವಕಾಶದಲ್ಲೂ ಯಶಸ್ಸು ಸಿಗದೇ ಪರದಾಡುತ್ತಿದ್ದಾರೆ. ಅಂಥವರೊಬ್ಬರ ಸ್ಟೋರಿ ಇಲ್ಲಿದೆ ನೋಡಿ..

ಈ ನಟ ಸಲ್ಮಾನ್ ಖಾನ್ (Salman Khan) ಅವರ ಸಹೋದರಿಯ ಮಗ. ಬಾಲಿವುಡ್ ಸೂಪರ್ ಸ್ಟಾರ್ ಸಹೋದರಿಯ ಮಗನಾಗಿದ್ದರೂ, ಸ್ವತಃ ಸಲ್ಮಾನ್ ಖಾನ್ ಅವರೇ ಆಯುಷ್ ಶರ್ಮಾರ ಸಿನಿಮಾ ನಿರ್ಮಾಣ ಮಾಡಿದ್ದರೂ, ಆ ನಟನಿಗೆ ಸಿನಿಮಾರಂಗದಲ್ಲಿ ಯಶಸ್ಸು ಸಿಗಲಿಲ್ಲ. ಬೇರೆ ನಿರ್ಮಾಪಕರು ಆತನಿಗೆ ಚಾನ್ಸ್ ನೀಡದ ಕಾರಣ ಸ್ವತಃ ಸಲ್ಮಾನ್ ಖಾನ್ ಅವರೇ ನಿರ್ಮಾಣ ಮಾಡಬೇಕಾಯಿತು ಎಂಬ ಮಾತೂ ಕೇಳಿ ಬಂದಿದೆ. 2018ರಲ್ಲಿ 'ಲವ್‌ಯಾತ್ರಿ (Loveyatri) ಸಿನಿಮಾ ಮೂಲಕ ಆಯುಷ್ ಶರ್ಮಾ ಬಾಲಿವುಡ್ ಪ್ರವೇಶ ಪಡೆದರು. ಆದರೆ ಸಿನಿಮಾ ಪ್ಲಾಪ್ ಆಯ್ತು. ಆ ನಟನ ಹೆಸರು ಆಯುಷ್ ಶರ್ಮಾ (Aayush Sharma).

Tap to resize

Latest Videos

ಕೆಂಪು ಜರಿ ಸೀರೆ ಉಟ್ಟು ತಿರುಪತಿ ವೆಂಕಟೇಶ್ವರ ಸನ್ನಿಧಿಯಲ್ಲಿ ಕಂಡ ನಟಿ ಜಾಹ್ನವಿ ಕಪೂರ್

2020ರಲ್ಲಿ ಮ್ಯೂಸಿಕ್ ವೀಡಿಯೋ ಒಂದರಲ್ಲಿ ಸಾಯಿ ಮಾಂಜ್ರೇಕರ್ ಜತೆ ಕಾಣಿಸಿಕೊಂಡರು ಆಯುಷ್ ಶರ್ಮಾ. ಆದರೆ, ಅವರು 2021ರಲ್ಲಿ ನಟ ಸಲ್ಮಾನ್ ಖಾನ್ ಅವರೊಂದಿಗೆ 'ಆಂಟಿಮ್; ದಿ ಫೈನಲ್ ಟ್ರುಥ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಅವರ ಕೆರಿಯರ್‌ನಲ್ಲಿ ದಿ ಬೆಸ್ಟ್ ರೋಲ್ ಎನ್ನಬಹುದು. ಇಂಥ ನಟ ಆಯುಷ್ ಶರ್ಮಾ ಇಲ್ಲಿಯವರೆಗೆ ಕೇವಲ 2 ಸಿನಿಮಾಗಳು ಹಾಗು 3 ಮ್ಯೂಸಿಕ್ ವೀಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್‌ ಜನ್ಮದಿನ; ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ಬಹಳಷ್ಟು ಜನರಿಗೆ ಗೊತ್ತಿಲ್ಲದ ಸಂಗತಿ ಎಂದರೆ, ಆಯುಷ್ ಶರ್ಮಾ ಅವರು ಹಿಮಾಚಲ ಪ್ರದೇಶದ ಮಾಜಿ ಮಂತ್ರಿ, ಹಿರಿಯ ಕಾಂಗ್ರೆಸ್ ಧುರೀಣರಾದ ಪಂಡಿತ್ ಸುಖ್ ರಾಮ್ ಅವರ ಮೊಮ್ಮಗ. 1990ರಲ್ಲಿ ಜನಿಸಿದ ಆಯುಷ್ ಶರ್ಮಾ, ಈಗಷ್ಟೇ 35 ವರ್ಷ ವಯಸ್ಸಿನವರು. ಆಯುಷ್ ತಂದೆ 4 ಬಾರಿ ಎಂಎಲ್‌ಎ ಆಗಿದ್ದವರು. ಆದರೆ, ಯಾವ ರಾಜಕೀಯ ಹಾಗು ಸಿನಿಮಾ ಹಿನ್ನೆಲೆ ಆಯುಷ್ ಶರ್ಮಾಗೆ ಸಿನಿಮಾರಂಗದಲ್ಲಿ ಅವಕಾಶ ಸಿಗಲು ಮೆಟ್ಟಿಲಾಗಲಿಲ್ಲ. ಸಲ್ಮಾನ್ ಖಾನ್ ಅಳಿಯನಾದರೂ ಚಾನ್ಸ್‌ಗಾಗಿ, ಸಕ್ಸಸ್‌ಗಾಗಿ ಈಗಲೂ ಪರದಾಡುತ್ತಲೇ ಇದ್ದಾರೆ. 

click me!