'ಲಸ್ಟ್ ಸ್ಟೋರೀಸ್‌'ನ ಕಿಯಾರಾ ಪಾತ್ರಕ್ಕೆ ಕರಣ್ ಆಯ್ಕೆ ಮಾಡಿದ್ದು ಈ ನಟಿಯನ್ನು, ಮುಂದೇನಾಯ್ತು?

Published : Jan 09, 2024, 10:50 AM IST
'ಲಸ್ಟ್ ಸ್ಟೋರೀಸ್‌'ನ ಕಿಯಾರಾ ಪಾತ್ರಕ್ಕೆ ಕರಣ್ ಆಯ್ಕೆ ಮಾಡಿದ್ದು ಈ ನಟಿಯನ್ನು, ಮುಂದೇನಾಯ್ತು?

ಸಾರಾಂಶ

2018ರ ನೆಟ್‌ಫ್ಲಿಕ್ಸ್ ಚಿತ್ರ 'ಲಸ್ಟ್ ಸ್ಟೋರೀಸ್'‌ನಲ್ಲಿ ಕಿಯಾರಾ ಅಡ್ವಾಣಿಯ ಆರ್ಗ್ಯಾಸಂ ಸೀನೊಂದು ಬಹಳ ಸದ್ದು ಮಾಡಿತ್ತು. ಈ ಚಿತ್ರ ಕಿಯಾರಾಗೆ ಹೆಚ್ಚಿನ ಅವಕಾಶಗಳನ್ನೂ ತಂತು. ಈ ಪಾತ್ರಕ್ಕೆ ಕರಣ್ ಜೋಹರ್ ಮೊದಲು ಆಯ್ಕೆ ಮಾಡಿದ್ದು ಮತ್ತೊಬ್ಬ ಜನಪ್ರಿಯ ನಟಿಯನ್ನು. ಆದರೆ, ಆಕೆಯ ತಾಯಿ ಒಪ್ಪದ ಕಾರಣ ಪಾತ್ರ ಕಿಯಾರಾಗೆ ಸಿಕ್ಕಿತು. ಯಾರೀ ನಟಿ?

'ಲಸ್ಟ್ ಸ್ಟೋರೀಸ್' ಕಿಯಾರಾ ಅಡ್ವಾನಿಯ ವೃತ್ತಿ ಜೀವನಕ್ಕೆ ಮಹತ್ವದ ತಿರುವು ತಂದು ಕೊಟ್ಟ ಚಿತ್ರ. ಈ ಚಿತ್ರದಲ್ಲಿ ಕಿಯಾರಾ ಕುಟುಂಬ ಸದಸ್ಯರ ಮುಂದೆ ಲೈಂಗಿಕ ಉತ್ಕಟತೆ ಅನುಭವಿಸುವ ಸೀನೊಂದು ಬಹಳ ಸದ್ದು ಮಾಡಿತು. ಹೆಚ್ಚು ಸರ್ಚ್‌ಗೆ ಒಳಗಾಯಿತು. ಅವರ ಅಭಿನಯಕ್ಕೆ ಮೆಚ್ಚುಗೆಯೂ ದೊರೆಯಿತು. ಆದರೆ, ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ಎದುರು ನಟಿಸಲು ಮೊದಲ ಆಯ್ಕೆ ಕಿಯಾರಾ ಆಗಿರಲಿಲ್ಲ. ಆದರೆ, ನಿರ್ದೇಶಕ ಕರಣ್ ಜೋಹರ್ ಮೊದಲು ಸಂಪರ್ಕಿಸಿದ ನಟಿಗೆ ಈ ಪಾತ್ರ ಮಾಡಲು ತಾಯಿಯ ಒಪ್ಪಿಗೆ ಸಿಗಲಿಲ್ಲ. ಹಾಗಾಗಿ, ಪಾತ್ರ ಕಿಯಾರಾ ಪಾಲಾಯಿತು. ಯಾರು ಈ ನಟಿ?

ಕರಣ್ ಜೋಹರ್ ಅವರು ತಮ್ಮ 'ಲಸ್ಟ್ ಸ್ಟೋರೀಸ್' ಕಿರುಚಿತ್ರಗಳ ಸಂಕಲನದಲ್ಲಿ ಸಧ್ಯ ಕಿಯಾರಾ ಅಭಿನಯಿಸಿರುವ ಪಾತ್ರಕ್ಕಾಗಿ ಕೃತಿ ಸನನ್‌‌ರನ್ನು ಸಂಪರ್ಕಿಸಿದ್ದರು. ಆದರೆ, ಅವರ ತಾಯಿ ಈ ಪಾತ್ರವನ್ನು ತೆಗೆದುಕೊಳ್ಳಲು ಅವಕಾಶ ನೀಡಲಿಲ್ಲ. ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಳೆದ ವರ್ಷ ಕಾಫಿ ವಿತ್ ಕರಣ್‌ಗೆ ಬಂದಾಗ ಈ ವಿಷಯವನ್ನು ಬಹಿರಂಗಪಡಿಸಿದ್ದರು. 
ಈ ಸಂದರ್ಭದಲ್ಲಿ ಕೃತಿ ಕರಣ್‌ಗೆ, 'ನನ್ನ ತಾಯಿ ನಿಮ್ಮ (ಕರಣ್ ಜೋಹರ್) ಪಾತ್ರಕ್ಕೆ ಸ್ಕ್ರಿಪ್ಟ್‌ ಆರಾಮದಾಯಕವಾಗಿಲ್ಲ ಎಂಬ ಕಾರಣಕ್ಕೆ ಇಲ್ಲ ಎಂದು ಹೇಳಿದರು. ಈ ಸ್ಕ್ರಿಪ್ಟ್‌ನಲ್ಲಿ ಗಮನವನ್ನು ಕೇವಲ ಇಂದ್ರಿಯಾಧಾರಿತ ದೃಶ್ಯಗಳ ಮೇಲೆ ಕೇಂದ್ರೀಕರಿಸಲಾಗಿದೆ. ಅದಕ್ಕಾಗಿಯೇ ಅವರು ಅದನ್ನು ಮಾಡದಿರುವುದು ಉತ್ತಮ ಎಂದು ಹೇಳಿದರು. ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವಳು ಮತ್ತು ತಾಯಿಗೆ, ಈ ರೀತಿಯ ವಿವಾದಾತ್ಮಕ ವಿಷಯಗಳು ಸ್ವಲ್ಪ ಆಘಾತಕಾರಿ ಎನಿಸಬಹುದು' ಎಂದಿದ್ದರು. 

ಮದ್ವೆ ಸುದ್ದಿ ಬೆನ್ನಲ್ಲೇ ಹಾಟ್ ಅವತಾರದಲ್ಲಿ ರಶ್ಮಿಕಾ, VIROSH ಎಂಗೇಜ್‌ಮೆಂಟ್ ಯಾವಾಗ ಎಂದ ಫ್ಯಾನ್ಸ್‌!

ನಂತರ 2022ರಲ್ಲಿ, ಕೃತಿ ಮತ್ತು ಅವರ ತಾಯಿ ಗೀತಾ ಸನನ್ ಇಂಡಿಯಾ ಟುಡೆಗೆ ಸಂದರ್ಶನವನ್ನು ನೀಡಿದರು. ಅಲ್ಲಿ ಆದಿಪುರುಷ್ ನಟಿ, 'ಇದು ಕಿರುಚಿತ್ರ, ಪೂರ್ಣ ಪ್ರಮಾಣದ ಚಲನಚಿತ್ರವಲ್ಲ, ಆದ್ದರಿಂದ ನನ್ನ ತಾಯಿ ಇದು ಕೇವಲ 20 ನಿಮಿಷಗಳ ಸಿನಿಮಾ. ಅದರಲ್ಲಿ ಹೆಣ್ಣಿನ ಲೈಂಗಿಕ ಪರಾಕಾಷ್ಠೆಯನ್ನೇ ತೋರಿಸುವುದಾಗಿದೆ. ನೀನು ಪೂರ್ಣ ಪ್ರಮಾಣದ ಚಿತ್ರದಲ್ಲಿ 20 ನಿಮಿಷಗಳ ಕಾಲ ಇಂಥ ಸೀನಲ್ಲಿ ಮಾಡಿದರೆ ಪರವಾಗಿರಲಿಲ್ಲ ಎಂದರು. ಹಾಗಾಗಿ ಇಂಥ ಪಾತ್ರ ನಾನು ಮಾಡಬಾರದು ಎಂದು ನನಗೆ ಅನಿಸಿತು' ಎಂದಿದ್ದಾರೆ. 

ಆಕೆಯ ತಾಯಿ ಗೀತಾ, 'ಅವಳ ವೃತ್ತಿಜೀವನದ ಆರಂಭದಲ್ಲಿ ಅವಳು ಅಂತಹ ದೃಶ್ಯ ಅಭಿನಯಿಸಿದ್ದನ್ನು ನೋಡುವುದು ಕಂಫರ್ಟ್ ಎನಿಸುವುದಿಲ್ಲ ಎಂದು ನಾನು ಭಾವಿಸಿದೆವು, ಅದು ಕೇವಲ ಆರ್ಗ್ಯಾಸಂ ಬಗ್ಗೆಯಾಗಿತ್ತು' ಎಂದಿದ್ದಾರೆ. 

ಡೈರೆಕ್ಟ್ರೇ ಸೀರಿಯಲ್‌ ತುಂಬಾ ಚೆನ್ನಾಗಿದೆ, ತುಂಬಾ ಎಳಿಯದೇ ಸೀತಾ-ರಾಮನನ್ನು ಒಂದುಮಾಡಿ ಎಂದ ಫ್ಯಾನ್ಸ್!

2018 ರ ಈ 'ಲಸ್ಟ್ ಸ್ಟೋರೀಸ್' ನೆಟ್‌ಫ್ಲಿಕ್ಸ್ ಸಂಕಲನವು ಅನುರಾಗ್ ಕಶ್ಯಪ್, ಜೋಯಾ ಅಖ್ತರ್ ಮತ್ತು ದಿಬಾಕರ್ ಬ್ಯಾನರ್ಜಿಯವರ ಕಿರುಚಿತ್ರಗಳನ್ನು ಒಳಗೊಂಡಿತ್ತು, ಇದರಲ್ಲಿ ರಾಧಿಕಾ ಆಪ್ಟೆ, ಭೂಮಿ ಪೆಡ್ನೇಕರ್, ನೀಲ್ ಭೂಪಾಲಂ, ಮನೀಶಾ ಕೊಯಿರಾಲಾ, ಸಂಜಯ್ ಕಪೂರ್ ಮತ್ತು ಜೈದೀಪ್ ಅಹ್ಲಾವತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?