5 ಸಾವಿರ ಹಿಡಿದು ಭಾರತಕ್ಕೆ ಬಂದ ಈ ಮಾದಕ ಚೆಲುವೆ ಈಗ 50 ಕೋಟಿ ರೂಪಾಯಿ ಒಡತಿ! ಬಾರ್ ಗರ್ಲ್ನಿಂದ ಬಾಲಿವುಡ್ವರೆಗೆ ನಟಿ ನೋರಾ ಫತೇಹಿ ಜರ್ನಿ ಹೇಗಿತ್ತು?
ಬಾಲಿವುಡ್ನ ಹಾಟ್ ಬ್ಯೂಟಿ ಎಂದೇ ಫೇಮಸ್ ಆಗಿರೋ ನಟಿ ನೋರಾ ಫತೇಹಿ. ಹಿಂದಿ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಹಾಟ್ನೆಸ್ನಿಂದಲೇ ಫೇಮಸ್ ಆಗಿರೋ ನಟಿ ಈಕೆ. ಇಂದು ಅಂದ್ರೆ ಫೆ.6 ಈ ನಟಿಗೆ 32ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಅಂದಹಾಗೆ, ನೋರಾ ಫತೇಲಿ ಕುರಿತು ಹೇಳುವುದಾದರೆ, ನೋರಾ ಫತೇಹಿ ಐಟಂ ಗರ್ಲ್ ಎಂದೇ ಫೇಮಸ್ಸು. ಈಕೆ ನೃತ್ಯ ಮಾಡುವುದಕ್ಕೆ ನಿಂತರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುವುದು ಇದೆ. ಅಂದಹಾಗೆ ನಟಿ, ಯಾವುದೇ ನೃತ್ಯ ತರಬೇತಿ ಪಡೆದಿಲ್ಲ. ಸ್ವಯಂ ಅಭ್ಯಾಸದ ಮೂಲಕ ತಮ್ಮ ಅದ್ಭುತ ಡ್ಯಾನ್ಸರ್ ಆಗಿ ಬೆಳೆದಿದ್ದಾರೆ. ಇಂದು ಅವರ ನೃತ್ಯವನ್ನು ಮಾಧುರಿ ದೀಕ್ಷಿತ್ ಮತ್ತು ಮಲೈಕಾ ಅರೋರಾ ಅವರಂತಹ ನಟಿಯರೊಂದಿಗೆ ಹೋಲಿಸಲಾಗುತ್ತದೆ. ಇವರು ಸೊಂಟ ಕುಣಿಸುತ್ತಾ ಬೆಲ್ಲಿ ಡ್ಯಾನ್ಸ್ ಮಾಡಿದರೆ ಕಣ್ ಕಣ್ ಬಿಟ್ಟು ನೋಡಬೇಕು ಹಾಗಿರುತ್ತದೆ!
ಬಾಲಿವುಡ್‌ನಲ್ಲಿ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿರುವ ನೋರಾ, ಮೂಲತಃ ಕೆನಡಾದವರು. ಹಿಂದಿ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅವರು ನರ್ತಿಸಿದ ಹಾಡುಗಳು ಯೂಟ್ಯೂಬ್‌ನಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಾಣುತ್ತವೆ. ಹಿಂದಿ ಮಾತ್ರವಲ್ಲದೆ ದಕ್ಷಿಣ ಭಾರತದ ಚಿತ್ರರಂಗದಲ್ಲೂ ನೋರಾ ನಟಿಸಿದ್ದಾರೆ. ಬಾಹುಬಲಿ ಸಿನಿಮಾದ 'ಮನೋಹರಿ..' ಹಾಡಿನ ಮೂಲಕ ನೋರಾಗೆ ದೊಡ್ಡ ಬ್ರೇಕ್ ಸಿಕ್ಕಿತ್ತು. ಕನ್ನಡ ಕೆಡಿ ಸಿನಿಮಾದಲ್ಲಿಯೂ ನೋರಾ ಫತೇಹಿ ಕಾಣಿಸಿಕೊಳ್ಳಲಿದ್ದಾರೆ. ಇವೆಲ್ಲವುಗಳ ನಡುವೆಯೇ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜೊತೆ ನಟಿಯ ಹೆಸರು ಥಳಕು ಹಾಕಿಕೊಂಡಿದೆ. ಆರ್ಯನ್ಗಿಂತ ಐದು ವರ್ಷ ದೊಡ್ಡವಳಾಗಿರುವ ನೋರಾ, ಆರ್ಯನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಹಲವು ಫೋಟೋಗಳು ವೈರಲ್ ಆಗಿವೆ.
ಐದು ವರ್ಷ ಹಿರಿಯ ಬಾರ್ ಡ್ಯಾನ್ಸರ್, ನೈಟ್ ಗರ್ಲ್ ಜೊತೆ ಆರ್ಯನ್ ಡೇಟಿಂಗ್? ಈಕೆ ಬಾಲಿವುಡ್ ಹಾಟ್ ನಟಿ!
ಹುಟ್ಟುಹಬ್ಬದ ಸಂದರ್ಭದಲ್ಲಿ ಇವರ ಕುರಿತು ರೋಚಕ ವಿಷಯವೊಂದು ಬೆಳಕಿಗೆ ಬಂದಿದೆ. ‘ಬಾಹುಬಲಿ: ದಿ ಬಿಗಿನಿಂಗ್’, ‘ಕಿಕ್ 2’ ನಂತಹ ಸೂಪರ್ಹಿಟ್ ಚಿತ್ರಗಳನ್ನು ನೀಡಿ, ಇದೀಗ ದೊಡ್ಡ ಸ್ಟಾರ್ ಎನಿಸಿಕೊಂಡಿರುವ ನೋರಾ, ಈ ನಟಿ ‘ಬಿಗ್ ಬಾಸ್ 9’ ಮತ್ತು ‘ಝಲಕ್ ದಿಖ್ಲಾ ಜಾ’ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿದ್ದರು. ‘ಸತ್ಯಮೇವ ಜಯತೆ’ ಚಿತ್ರದ ‘ದಿಲ್ಬರ್’ ಹಾಡಿನಲ್ಲಿ ತಮ್ಮ ಅದ್ಭುತ ನೃತ್ಯದಿಂದ ಮನ ಗೆದ್ದರು. ಮೊದಲೇ ಹೇಳಿದಂತೆ ಬಾರ್ ಗರ್ಲ್ ಆಗಿದ್ದವರು. ಬಾಲಿವುಡ್‌ನಲ್ಲಿ ಬಣ್ಣ ಹಚ್ಚಲು ಭಾರತಕ್ಕೆ ಬಂದಿದ್ದ ನಟಿ, ಬರುವಾಗ ತಂದದ್ದು ಕೇವಲ 5 ಸಾವಿರ ರೂಪಾಯಿಗಳು ಮಾತ್ರ. ಇದೀಗ ಅವರ ಒಟ್ಟೂ ಆಸ್ತಿ 50 ಕೋಟಿಗೂ ಅಧಿಕ ಎನ್ನಲಾಗುತ್ತದೆ.
ಅಷ್ಟಕ್ಕೂ ನೋರಾ ಅವರ ಬಗ್ಗೆ ಕೆಲವೊಂದು ನೆಗೆಟಿವ್ ಸುದ್ದಿಗಳೂ ಸದ್ದು ಮಾಡುತ್ತಲೇ ಇರುತ್ತವೆ. ಪತ್ರಕರ್ತ ಮತ್ತು ಸಿನಿಮಾ ವಿಮರ್ಶಕ ಅನ್ನೋ ಟೈಟಲ್ ಜತೆಗೆ ಹಿಂದಿ ಸಿನಿಮಾಗಳ ವಿದೇಶಿ ಸೆನ್ಸಾರ್ ಬೋರ್ಡ್‌ನ ಸದಸ್ಯನಾಗಿಯೂ ಕಾರ್ಯ ನಿರ್ವಹಿಸುತ್ತಿರೋ ಉಮೈರ್ ಸಂಧು ಈ ಹಿಂದೆ ನೋರಾ ಬಗ್ಗೆ ಅತ್ಯಂತ ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಐಟಂ ಡ್ಯಾನ್ಸರ್ ಕೂಡ ಆಗಿರುವ ನೋರಾ ಫತೇಹಿ ಬಗ್ಗೆ ಉಮೈರ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು. ಅಷ್ಟಕ್ಕೂ ಅವರು ಹೇಳಿದ್ದೇನೆಂದರೆ, ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಅತ್ಯಂತ ದುಬಾರಿ ನೈಟ್ ಗರ್ಲ್ ಯಾರೆಂದರೆ ಅದು ನೋರಾ ಫತೇಹಿ. ಪ್ರತಿಯೊಬ್ಬ ನಟ, ರಾಜಕಾರಣಿ, ಉದ್ಯಮಿಗಳು ಅದರಲ್ಲೂ ಅಂಬಾನಿ ಸಹ ಈಕೆ ಜತೆ ಮಲಗಲು ಇಷ್ಟಪಡುತ್ತಾರೆ ಎಂದು ಬರೆದುಕೊಂಡಿದ್ದರು. ಅದಕ್ಕೆ ಪರ ವಿರೋಧ ನಿಲುವು ವ್ಯಕ್ತವಾಗಿತ್ತು.
ಮಾಜಿ ಪತ್ನಿ ಜೊತೆ ಕೆಲ್ಸ ಮಾಡ್ಬಾರ್ದಂತ ಯಾವುದಾದ್ರೂ ಡಾಕ್ಟರ್ ಹೇಳಿದ್ದಾರಾ? ಆಮೀರ್ ಖಾನ್ ಗರಂ