ಮಾಜಿ ಪತ್ನಿ ಜೊತೆ ಕೆಲ್ಸ ಮಾಡ್ಬಾರ್ದಂತ ಯಾವುದಾದ್ರೂ ಡಾಕ್ಟರ್​ ಹೇಳಿದ್ದಾರಾ? ಆಮೀರ್​ ಖಾನ್​ ಗರಂ

By Suvarna News  |  First Published Feb 6, 2024, 12:27 PM IST

ಮಾಜಿ ಪತ್ನಿಯ ಜೊತೆ ಕೆಲ್ಸ ಮಾಡಲು ಡಾಕ್ಟರ್​ ಏನಾದ್ರೂ ರಿಸ್ಟ್ರಿಕ್ಷನ್​ ಹಾಕಿದ್ದಾರಾ ಅಂತ ನಟ ಆಮೀರ್​ ಖಾನ್​ ಗರಂ ಆಗಿದ್ದೇಕೆ? 
 


ಬಾಲಿವುಡ್​ ಮಿಸ್ಟರ್​ ಪರ್ಫೆಕ್ಟ್​ ಎಂದೇ ಖ್ಯಾತಿ ಪಡೆದಿರುವ ಆಮೀರ್​ ಖಾನ್​ ಅವರು, ಕೆಲವು ಬಾಲಿವುಡ್ ನಟರಂತೆ   ಹಿಂದೂ ಯುವತಿಯರನ್ನೇ ಮದ್ವೆಯಾದವರು. ಇವರ ಇಬ್ಬರು  ಪತ್ನಿಯರೂ ಹಿಂದೂಗಳೇ ಎನ್ನುವುದು ವಿಶೇಷ, ಈಗ  ಇಬ್ಬರಿಗೂ ಡಿವೋರ್ಸ್​ ಕೊಟ್ಟಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಅವರಿಂದ ಇರಾ ಖಾನ್​ ಮತ್ತು ಜುನೈದ್​ ಖಾನ್​ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದು, ಎರಡನೆಯ ಪತ್ನಿ ಕಿರಣ್​ ರಾವ್​ ಅವರಿಂದ ಆಜಾದ್​ ರಾವ್​ ಖಾನ್​ರನ್ನು ಪಡೆದಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಜೊತೆ 1986–2002ರವರೆಗೆ ಸಂಸಾರ ನಡೆಸಿದ್ದ ಆಮೀರ್​ 2005ರಲ್ಲಿ ಕಿರಣ್​ ರಾವ್​ ಅವರನ್ನು ಮದುವೆಯಾಗಿದ್ದು, 2021ರಲ್ಲಿ ಅವರಿಗೂ ಡಿವೋರ್ಸ್​ ಕೊಟ್ಟಿದ್ದಾರೆ.  ವಿಚ್ಛೇದನ ಕೊಟ್ಟರೂ ಇಬ್ಬರೂ ಪತ್ನಿಯರ ಜೊತೆ ನಟನ ಸಂಬಂಧ ಚೆನ್ನಾಗಿಯೇ ಇದೆ. ಕಳೆದ  ಡಿಸೆಂಬರ್​ 3ರಂದು ಮೊದಲ ಪತ್ನಿ ರೀನಾ ದತ್ತಾ ಅವರಿಂದ ಪಡೆದಿರುವ ಮಗಳು, ನಟಿ ಇರಾ ಖಾನ್​ ಅವರ ಮದುವೆ ಸಮಾರಂಭಕ್ಕೆ ಕಿರಣ್​ ಅವರು ಕೂಡ ಹಾಜರಿದ್ದುದು ಇದಕ್ಕೆ ಸಾಕ್ಷಿ.
 
 
 ಮದುವೆಯ ದಿನ ನಡೆದ ಫೋಟೋ ಸೆಷನ್​ನಲ್ಲಿ ಮೊದಲಿಗೆ ಆಮೀರ್​ ಖಾನ್​ ಮತ್ತು ಎರಡನೆಯ ಪತ್ನಿ ಕಿರಣ್​ ರಾವ್​ ನಿಂತಿದ್ದರು. ಫೋಟೋ ಸೆಷನ್​ ನಡೆಯುತ್ತಿದ್ದಂತೆಯೇ ಮೊದಲ ಪತ್ನಿ ಅಂದರೆ ಮದುಮಗಳು ಇರಾ ಖಾನ್​ ತಾಯಿ ರೀನಾ ದತ್ತಾ ಹಾಜರಾದರು. ಅವರು ಅರಿವಿಲ್ಲದೇ ಮೊದಲು ಕಿರಣ್​ ಅವರ ಪಕ್ಕದಲ್ಲಿಯೇ  ನಿಂತರು. ನಂತರ ಆಮೀರ್​ ಖಾನ್​ ಇನ್ನೊಂದು ಮೂಲೆಗೆ ಹೋಗುತ್ತಿದ್ದಂತೆಯೇ ನಿಧಾನವಾಗಿ ಕಿರಣ್​ ರಾವ್​ ಪಕ್ಕದಿಂದ ತಪ್ಪಿಸಿಕೊಂಡ ರೀನಾ ದತ್ತಾ ಆಮೀರ್​ ಖಾನ್​ ಪಕ್ಕದಲ್ಲಿ ಹೋಗಿ ನಿಂತರು. ಆಗ ಕಿರಣ್​ ರಾವ್​ ಅವರ  ಮುಖ ಸಪ್ಪಗಾಯಿತು. ಇದರ ವಿಡಿಯೋ ವೈರಲ್​ ಆಗುತ್ತಿದ್ದಮತೆಯೇ ಇಬ್ಬರು ಮಾಜಿ ಪತ್ನಿಯರ ಗಂಡ ಆಮೀರ್​ ಖಾನ್​ ಕುರಿತು ಥಹರೇವಾರಿ ಕಮೆಂಟ್​ಗಳು ಹರಿದಾಡಿದವು. ಜೊತೆಗೆ ಇಬ್ಬರನ್ನೂ ಡಿವೋರ್ಸ್​ ಕೊಟ್ಟ ಬಗ್ಗೆ ಆಮೀರ್​ ಬಗ್ಗೆ ಇನ್ನಿಲ್ಲದ ಮಾತುಗಳು ಕೇಳಿಬರುತ್ತಿವೆ.

ಶ್ರೀದೇವಿ ಸಾವಿನ ಹಿಂದೆ ಭಾರಿ ರಹಸ್ಯ: ಲೇಡಿ ಯುಟ್ಯೂಬರ್​ ವಿರುದ್ಧ ಸಿಬಿಐ ಚಾರ್ಜ್​ಷೀಟ್​ ಸಲ್ಲಿಕೆ

Tap to resize

Latest Videos

ಇದರ ನಡುವೆಯೇ, Laapataa ಎಂಬ ಚಿತ್ರದಲ್ಲಿ ಆಮೀರ್​ ಖಾನ್​ ಮತ್ತು ಕಿರಣ್​ ಅವರು ಒಟ್ಟಿಗೇ ಕೆಲಸ ಮಾಡುತ್ತಿದ್ದಾರೆ.  ಈ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ ಚಿತ್ರವು ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (TIFF) ಪ್ರದರ್ಶನಗೊಂಡಿತು. 15 ವರ್ಷಗಳ ದಾಂಪತ್ಯದ ಬಳಿಕ  ಆಮೀರ್ ಮತ್ತು ಕಿರಣ್ ಬೇರೆ ಬೇರೆಯಾದವರು. ಇದೀಗ ಡಿವೋರ್ಸ್​ ಬಳಿಕ ಮತ್ತೆ ಪತಿ-ಪತ್ನಿ ಒಂದೇ ಕಡೆ ಕೆಲಸ ಮಾಡುತ್ತಿರುವುದನ್ನು ಕಂಡ ಹಲವರು ಹುಬ್ಬೇರಿಸಿದ್ದಾರೆ. ಆದ್ದರಿಂದ ವಿಚ್ಛೇದನದ ಬಳಿಕ ಒಟ್ಟಿಗೆ ಅದ್ಹೇಗೆ ಕೆಲಸ ಮಾಡುತ್ತೀರಿ ಎಂಬ ಪ್ರಶ್ನೆ ಆಮೀರ್​ ಖಾನ್​ ಅವರಿಗೆ ಎದುರಾಗುತ್ತಿದ್ದಂತೆಯೇ, ಆಮೀರ್​ ಸ್ವಲ್ಪ ಗರಂ ಆದರು. ಪಾಪರಾಜಿಗಳು ಈ ಪ್ರಶ್ನೆ ಕೇಳಿದಾಗ ಸ್ವಲ್ಪ ಸಿಟ್ಟುಕೊಂಡರೂ ಸುಧಾರಿಸಿಕೊಂಡ ಆಮೀರ್​ ಖಾನ್​, ಯಾಕೆ ಪತಿ-ಪತ್ನಿ ದೂರದೂರವಾದ ಮೇಲೆ ಒಟ್ಟಿಗೇ ಕೆಲಸ ಮಾಡಬಾರದು ಎಂದು ಯಾವುದಾದ್ರೂ ಡಾಕ್ಟರ್​ ಹೇಳಿದ್ದಾರಾ ಎಂದು ಪ್ರಶ್ನಿಸಿದರು. 

ಇದೇ ವೇಳೆ ತಮ್ಮ ಮಾಜಿ ಪತ್ನಿ ಕಿರಣ್ ಅವರನ್ನು ಹೊಗಳಿದ ಅವರು, ಕಿರಣ್​ ನನ್ನ ಜೀವನದಲ್ಲಿ ಬಂದಿದ್ದು ನನ್ನ ಅದೃಷ್ಟವೆಂದು ಪರಿಗಣಿಸುತ್ತೇನೆ ಮತ್ತು ಆಕೆಯಿಂದ ನಾನು ಸಾಧನೆ ಮಾಡಿದ್ದೇನೆ.  ನಾವು ಬೇರೆ ಬೇರೆಯಾಗಿರಬಹುದು. ಆದರೆ ಮಾನವೀಯ ನೆಲೆಗಟ್ಟಿನಲ್ಲಿ ಮತ್ತು ಭಾವನಾತ್ಮಕವಾಗಿ ಒಟ್ಟಿಗೇ ಇದ್ದೇವೆ ಎಂದಿದ್ದಾರೆ. ಈ ಮಾತಿಗೂ ಟ್ರೋಲಿಗರು ಸಕತ್​ ಕಮೆಂಟ್​ ಮಾಡುತ್ತಿದ್ದಾರೆ. ಅವರು ನಿಮ್ಮ ಜೀವನದಲ್ಲಿ ಬಂದದ್ದು ಅದೃಷ್ಟ ಎಂದು 15 ವರ್ಷದ ದಾಂಪತ್ಯದಿಂದ ಡಿವೋರ್ಸ್​ ಪಡೆದ ಬಳಿಕ ಗೊತ್ತಾಯ್ತಾ ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಆಮೀರ್​ ಖಾನ್​ ಸದ್ಯ ಈ ರೀತಿಯಾಗಿ ಸುದ್ದಿಯಲ್ಲಿದ್ದಾರೆ. 

ಚಿತ್ರ ಬಿಡುಗಡೆ ದಿನ ನಾಯಕಿಯ ಬೆಡ್​ರೂಂ ದೃಶ್ಯಗಳೇ ಮಾಯ! ನಿರ್ಮಾಪಕರಿಗೆ ಶಾಕ್​- ದೂರು ದಾಖಲು

click me!