ಅಭಿಷೇಕ್ ಬಚ್ಚನ್‌ಗೆ ಬರ್ತ್‌ಡೇ ವಿಶ್ ಮಾಡಿ ಡೈವೋರ್ಸ್ ವದಂತಿಗಳಿಗೆ ಬೈ ಹೇಳಿದ ಐಶ್ವರ್ಯಾ ರೈ

By Suvarna News  |  First Published Feb 6, 2024, 10:35 AM IST

ಫೆಬ್ರವರಿ 5ರಂದು ನಟ ಅಭಿಷೇಕ್ ಬಚ್ಚನ್ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಐಶ್ವರ್ಯಾ ರೈ ಪತಿಗೆ ತಮ್ಮ ಸಿಹಿಯಾದ ವಿಶ್ ಮೂಲಕ ಇಬ್ಬರ ಡೈವೋರ್ಸ್ ರೂಮರ್ಸ್ ತಳ್ಳಿ ಹಾಕಿದ್ದಾರೆ.


ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಬಾಲಿವುಡ್‌ನ ಬ್ಯೂಟಿಫುಲ್ ಕಪಲ್. ಆದರೆ, ಇತ್ತೀಚೆಗೆ ಇವರಿಬ್ಬರ ನಡುವೆ ಎಲ್ಲವೂ ಸರಿ ಇಲ್ಲ, ವಿಚ್ಚೇದನ ಪಡೆವ ಹಂತಕ್ಕೆ ಹೋಗಿದ್ದಾರೆ ಎಂಬ ವದಂತಿಗಳು ಜೋರಾಗಿ ಹಬ್ಬಿವೆ. ಇದರ ನಡುವೆಯೇ ಸೋಮವಾರ ಪತಿ ಅಭಿಷೇಕ್ ಬಚ್ಚನ್ 48ನೇ ಹುಟ್ಟುಹಬ್ಬಕ್ಕೆ ವಿಶ್ ಮಾಡುವ ಮೂಲಕ ಐಶ್ವರ್ಯಾ ಡೈವೋರ್ಸ್  ವದಂತಿಗಳನ್ನು ತಳ್ಳಿ ಹಾಕಿದ್ದಾರೆ.

ತಮ್ಮ ಇನ್ಸ್ಟಾ ಖಾತೆಯಲ್ಲಿ ಅಭಿಷೇಕ್ ಜೊತೆಗಿನ ಎರಡು ಫೋಟೋಗಳನ್ನು ಹಂಚಿಕೊಂಡಿರುವ ನಟಿ, ಪತಿಗಾಗಿ ಸಿಹಿ ಟಿಪ್ಪಣಿ ಬರೆದಿದ್ದಾರೆ. ಆದರೆ, ಈ ಟಿಪ್ಪಣಿಯಲ್ಲೂ ಪ್ರೀತಿ ಮಿಸ್ ಹೊಡೀತಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು.

Tap to resize

Latest Videos

'ನಿಮಗೆ ಜನ್ಮದಿನದ ಶುಭಾಶಯಗಳು 🎊🌈ತುಂಬಾ ಸಂತೋಷ, ಪ್ರೀತಿ, ಶಾಂತಿ ಮತ್ತು ಉತ್ತಮ ಆರೋಗ್ಯದೊಂದಿಗೆ ದೇವರು ಆಶೀರ್ವದಿಸಲಿ 🌈💝ಹೊಳೆಯುತ್ತಿರಿ!🌟' ಎಂದು ಐಶ್ವರ್ಯಾ ಬರೆದಿದ್ದಾರೆ. 

ಮೊದಲ ಫೋಟೋದಲ್ಲಿ, ಐಶ್ವರ್ಯಾ, ಅಭಿಷೇಕ್ ಮತ್ತು ಅವರ ಮಗಳು ಆರಾಧ್ಯ ಬಚ್ಚನ್ ಮೂವರೂ ಕೆಂಪು ಬಟ್ಟೆಯಲ್ಲಿ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಎರಡನೇ ಚಿತ್ರದಲ್ಲಿ ಪುಟಾಣಿ ಅಭಿಷೇಕ್ ಫೋಟೋವಿದೆ. 

ಬಿಗ್ ಬಾಸ್ ಮನೆಯಿಂದ ತವರು ಮನೆಗೆ ಸಂಗೀತಾ ಶೃಂಗೇರಿಗೆ ಅದ್ಧೂರಿ ಸ್ವಾಗತ; ಇಲ್ಲಿದೆ ವಿಡಿಯೋ

ಅಭಿಷೇಕ್ ಗೆ ಐಶ್ವರ್ಯಾ ರೈ ಹುಟ್ಟುಹಬ್ಬದ ಪೋಸ್ಟ್ ನೋಡಿ ನೆಟ್ಟಿಗರು ಖುಷಿಯಾಗಿದ್ದಾರೆ. ಒಂದು ಕಾಮೆಂಟ್‌ನಲ್ಲಿ, 'ವಿಚ್ಛೇದನದ ವದಂತಿಗಳನ್ನು ಕೊನೆಗೊಳಿಸಿದಿರಿ' ಎಂದು ಬರೆಯಲಾಗಿದೆ. ಮತ್ತೊಬ್ಬರು ಹೀಗೆ ಬರೆದಿದ್ದಾರೆ, 'ವಿಚ್ಛೇದನದ ವದಂತಿಗಳನ್ನು ತೆರವುಗೊಳಿಸಿದ್ದಕ್ಕಾಗಿ ಧನ್ಯವಾದಗಳು, ನನ್ನ ನಾನಿ ಸಾಕಷ್ಟು ಆತಂಕಕ್ಕೊಳಗಾಗಿದ್ದರು.' ಮತ್ತೊಬ್ಬ ಬಳಕೆದಾರ, 'ತಮ್ಮ ವಿಚ್ಛೇದನದ ಬಗ್ಗೆ ವದಂತಿಗಳನ್ನು ಹರಡುವವರಿಗೆ ಕಪಾಳಮೋಕ್ಷ ಇದಾಗಿದೆ' ಎಂದು ಬರೆದಿದ್ದಾರೆ.

ಆದರೂ ನಿಲ್ಲದ ಅನುಮಾನ
ಆದರೆ, ಐಶ್ವರ್ಯಾ ಪೋಸ್ಟ್‌ಗೆ ಅಭಿಷೇಕ್ ರಿಪ್ಲೈ ಮಾಡಿಲ್ಲ ಎಂದು ಸಾಕಷ್ಟು ಜನರು ಆಕ್ಷೇಪ ತೆಗೆದಿದ್ದಾರೆ. ಆತ ರಿಪ್ಲೈ ಮಾಡದಿರುವುದನ್ನು ನೋಡಿದರೆ ಎಲ್ಲವೂ ಸರಿ ಇಲ್ಲ ಎಂದು ಗೊತ್ತಾಗುತ್ತದೆ. ಅಂಥವರಿಗೆ ವಿಶ್ ಮಾಡಿ ಆತ್ಮ ಗೌರವಕ್ಕೆ ಧಕ್ಕೆ ತಂದುಕೊಳ್ಳುತ್ತಿದ್ದೀರಿ ಎಂದೂ ಕೆಲವರು ಹೇಳಿದ್ದಾರೆ. ಇನ್ನು, ಐಶ್ವರ್ಯಾ ಟಿಪ್ಪಣಿಯಲ್ಲಿ ಕೂಡಾ ಐ ಲವ್ಯೂ ಎಂಬುದಾಗಲೀ, ಲವ್ ಸಿಂಬಲ್‌ಗಳಾಗಲಿ ಇಲ್ಲದಿರುವುದು- ರೂಮರ್ಸ್‌ಗೆ ತುಪ್ಪ ಸುರಿದಂತಿದೆ ಎಂದು ಕೆಲ ನೆಟ್ಟಿಗರ ಅಭಿಪ್ರಾಯ. 

ಇತ್ತ ಸೋದರಿ ಶ್ವೇತಾ ಬಚ್ಚನ್ ಶುಭ ಹಾರೈಸಿದ ಪೋಸ್ಟ್‌ಗೆ ಮಾತ್ರ ಅಭಿಷೇಕ್ ಪ್ರತಿಕ್ರಿಯಿಸಿದ್ದು, ಲವ್ಯೂ ಎಂದಿದ್ದಾರೆ. ಸಾಲದೆಂಬಂತೆ ಆರಾಧ್ಯ ಹುಟ್ಟುಹಬ್ಬಕ್ಕೆ ಬಚ್ಚನ್ ಕುಟುಂಬದ ಯಾರೊಬ್ಬರೂ ಪ್ರತಿಕ್ರಿಯಿಸಿಲ್ಲ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಒಟ್ನಲ್ಲಿ ಈ ರೂಮರ್‌ಗಳಿಗೆ ನೇರ ಉತ್ತರ ಕೊಟ್ಟೇ ಸೆಲೆಬ್ರಿಟಿ ಕಪಲ್ ಅನುಮಾನ ಪರಿಹರಿಸಬೇಕಿದೆ. 

'ಹ್ಯಾಪಿ ಹ್ಯಾಪಿ ಬರ್ತ್‌ಡೇ ಸಂಜ್'; ರಮ್ಯಾಳಿಂದ ಬರ್ತ್‌ಡೇ ಬಿಗ್ ಸರ್ಪ್ರೈಸ್ ಪಾರ್ಟಿ ಪಡೆದ ಈ ಸಂಜು ಯಾರು?

ಅಭಿಷೇಕ್ ಬಚ್ಚನ್ ಕೊನೆಯದಾಗಿ ಘೂಮರ್ ಚಿತ್ರದಲ್ಲಿ ಸೈಯಾಮಿ ಖೇರ್ ಜೊತೆ ಕಾಣಿಸಿಕೊಂಡಿದ್ದರು. ಆರ್ ಬಾಲ್ಕಿ ಅವರು ನಿರ್ದೇಶಿಸಿದ ಈ ಚಿತ್ರದಲ್ಲಿ ಅಂಗದ್ ಬೇಡಿ ಮತ್ತು ಶಬಾನಾ ಅಜ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮತ್ತೊಂದೆಡೆ, ಐಶ್ವರ್ಯಾ ಕೊನೆಯದಾಗಿ ಮಣಿರತ್ನಂ ಅವರ ಚಲನಚಿತ್ರ ಪೊನ್ನಿಯಿನ್ ಸೆಲ್ವನ್ - 2 ನಲ್ಲಿ ಕಾಣಿಸಿಕೊಂಡರು.

click me!