ಸುಭಾಷ್ ಚಂದ್ರಬೋಸ್ ಜೀವನ ರಹಸ್ಯ ಬಿಚ್ಚಿಡಲು 'ಸ್ಪೈ' ಆದ ನಟ ನಿಖಿಲ್: ರಾಜ್ ಪಥ್‌ನಲ್ಲಿ ಟೀಸರ್ ರಿಲೀಸ್

By Shruthi Krishna  |  First Published May 16, 2023, 5:44 PM IST

ಸುಭಾಷ್ ಚಂದ್ರಬೋಸ್ ಜೀವನ ರಹಸ್ಯ ಬಿಚ್ಚಿಡಲು ನಟ ನಿಖಿಲ್ 'ಸ್ಪೈ' ಆಗಿದ್ದಾರೆ. ರಾಜ್ ಪಥ್‌ನಲ್ಲಿ ಟೀಸರ್ ರಿಲೀಸ್ ಮಾಡಲಾಗಿದೆ.  


ಟಾಲಿವುಡ್‌ನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಸ್ಪೈ'. ಕಾರ್ತಿಕೇಯ-2 ಬಳಿಕ ನಿಖಿಲ್ ಸಿದ್ದಾರ್ಥ್ ನಟಿಸುತ್ತಿರುವ ಆಕ್ಷನ್ ಪ್ಯಾಕ್ಡ್ ಕಥಾಹಂದರ ಇರುವ ಆ ಚಿತ್ರದ ಟೀಸರ್ ಈಗ ರಿಲೀಸ್ ಆಗಿದೆ. ವಿಶೇಷ ಎಂದರೆ ದೆಹಲಿಯ ರಾಜ್ ಪಥ್ ನಲ್ಲಿರುವ ಸುಭಾಷ್ ಚಂದ್ರಬೋಸ್ ಪುತ್ಥಳಿ ಮುಂದೆಯೇ ಅನಾವರಣ ಮಾಡಲಾಗಿದೆ. 

ಭಾರತದ ಟಾಪ್ ಸೀಕ್ರೆಟ್ ರಹಸ್ಯಗಳು, ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಸಾವನ್ನಪ್ಪಿದ್ದಾರೆ ಎನ್ನಲಾದ ವಿಚಾರಗಳನ್ನು ಬೆನ್ನತ್ತುವ ಗೂಢಚಾರಿ ಪಾತ್ರದಲ್ಲಿ ನಟ ನಿಖಿಲ್ ಸಿದ್ದಾರ್ಥ್ ಅಭಿನಯಿಸಿದ್ದಾರೆ. ಸಿದ್ಧಾರ್ಥ್‌ಗೆ ನಾಯಕಿಯಾಗಿ ಐಶ್ವರ್ಯ ಮೆನನ್ ಕಾಣಿಸಿಕೊಂಡಿದ್ದಾರೆ. ಸನ್ಯಾ ಠಾಕೂರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.  

Tap to resize

Latest Videos

ಖ್ಯಾತ ನಿರ್ದೇಶಕ ಹಾಗೂ ಸಂಕಲನಕಾರರು ಆಗಿರುವ ಗ್ಯಾರಿ ಬಿ ಹೆಚ್ ಸ್ಪೈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಎವರು ಮತ್ತು ಹಿಟ್ ಸಿನಿಮಾಗಳ ನಿರ್ಮಾಪಕ ಕೆ.ರಾಜಶೇಖರ್ ರೆಡ್ಡಿ ED ಎಂಟರ್‌ಟೈನ್‌ಮೆಂಟ್‌ನಡಿ ಚರಣ್ ರಾಜ್ ಉಪ್ಪಲಪತಿ ಜೊತೆಗೂಡಿ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದಾರೆ. 

ಸ್ಪೈ ಸಿನಿಮಾದ ಪೋಸ್ಟರ್ ಹಾಗೂ ಗ್ಲಿಂಪ್ಸ್ ನಿರೀಕ್ಷೆ ಹೆಚ್ಚಿಸಿದ್ದು, ನಿಖಿಲ್‌ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ‌ ಮೂಡಿ ಬರ್ತಿರುವ ಚಿತ್ರಕ್ಕೆ ರಾಜಶೇಖರ್ ರೆಡ್ಡಿ ನಿರ್ಮಾಣದ ಜೊತೆಗೆ ಕಥೆ ಕೂಡ ಬರೆದಿದ್ದಾರೆ. ಗ್ಯಾರಿ ಬಿ.ಎಚ್. ನಿರ್ದೇಶನದ ಜೊತೆಗೆ ಸಂಕಲನದ ಹೊಣೆ ಹೊತ್ತಿದ್ದಾರೆ. ಆಕ್ಷನ್ ಪ್ಯಾಕ್ಡ್ ಸ್ಪೈ ಥ್ರಿಲ್ಲರ್ ಸಿನಿಮಾದಲ್ಲಿ‌ ನಿಖಿಲ್‌ಗೆ ಮತ್ತು ಐಶ್ವರ್ಯ ಮೆನನ್ ಜೊತೆಗೆ ಅಭಿನವ್ ಗೌತಮ್, ಮಕರಂದ್ ದೇಶಪಾಂಡೆ, ನಿತಿನ್ ಮೆಹ್ತಾ, ರವಿವರ್ಮ, ಕೃಷ್ಣ ತೇಜ, ಪ್ರಿಶಾ ಸಿಂಗ್, ಸೋನಿಯಾ ನರೇಶ್ ಮತ್ತು ಇತರರು ತಾರಾಬಳಗದಲ್ಲಿದ್ದಾರೆ. 

ರಿಲೀಸ್​ಗೂ ಮುನ್ನವೇ ದಾಖಲೆ ನಿಖಿಲ್ ನಟನೆಯ SPY: ಬಾಚಿತು 40 ಕೋಟಿ ರೂ!

ಹೈ ಬಜೆಟ್‌ನಲ್ಲಿ ತಯಾರಾಗಲಿರುವ ಸ್ಪೈ ಸಿನಿಮಾಗೆ ಹಾಲಿವುಡ್ ತಂತ್ರಜ್ಞರ ಮೆರಗು ಸಿಕ್ಕಿದೆ. ಜೂನಿಯನ್ ಅಮರು ಸೂರಿಸೆಟ್ಟಿ ಛಾಯಾಗ್ರಹಣ, ಶ್ರೀಚರಣ್ ಪಕಳ ಸಂಗೀತ, ಅರ್ಜುನ್ ಸೂರಿಸೆಟ್ಟಿ ಕಲಾ ನಿರ್ದೇಶನ ಸಿನಿಮಾಕ್ಕಿದೆ. ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ತಯಾರಾಗಿರುವ ಸ್ಪೈ ಜೂನ್ 29ರಂದು ವರ್ಲ್ಡ್ ವೈಡ್ ರಿಲೀಸ್ ಆಗಲಿದೆ.

ಲಾಕ್‌ಡೌನ್‌ ನಡುವೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ನಿಖಿಲ್ -ಪಲ್ಲವಿ!

ನಟ ನಿಖಿಲ್ ಸಿದ್ಧಾರ್ಥ್ ಸಕ್ಸಸ್‌ನ ಖುಷಿಯಲ್ಲಿದ್ದಾರೆ. ಸಿದ್ಧಾರ್ಥ್ ನಟನೆಯ 18 ಪೇಜ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಕಾರ್ತಿಕೇಯ, ಸಿನಿಮಾ ಕೂಡ ಸಕ್ಸಸ್ ತಂದುಕೊಟ್ಟಿತ್ತು. ಇದೀಗ ಸ್ಪೈ ಮೂಲಕ ಮತ್ತೊಂದು ಹಿಟ್‌ಗಾಗಿ ಕಾಯುತ್ತಿದ್ದಾರೆ. ಈ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣುವ ನಿರೀಕ್ಷೆಯಲ್ಲಿದ್ದಾರೆ. ನಿಖಿಲ್. 

click me!