ದೀಪಿಕಾ ಆಯ್ತು ಈಗ ಮಾಧುರಿ- ಕರಿಶ್ಮಾ ಹಾಡಿಗೆ ಪ್ಲಸ್ ಸೈಜ್ ಯುವತಿ ಮಸ್ತ್ ಡಾನ್ಸ್ ಮಾಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದ ಬೇಷರಮ್ ರಂಗ್ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದ ಡಾನ್ಸರ್ ತನ್ವಿ ಗೀತಾ ರವಿಶಂಕರ್ ಇದೀಗ ಮತ್ತೊಮ್ಮೆ ಕುಣಿದು ಗಮನ ಸೆಳೆದಿದ್ದಾರೆ. ಡಾನ್ಸರ್ ತನ್ವಿ ಈ ಬಾರಿ ಸ್ಟ್ಯಾಂಡ್ಅಪ್ ಕಾಮಿಡಿಯನ್ ಅಂಜನಾ ಬಾಪಟ್ ಜೊತೆಗೆ ಮಸ್ತ್ ಡಾನ್ಸ್ ಮಾಡಿದ್ದಾರೆ. ಈ ಬಾರಿ ತನ್ವಿ ಗೀತಾ ರವಿಶಂಕರ್ ಬಾಲಿವುಡ್ ಖ್ಯಾತ ನಟಿಯರಾದ ಮಾಧುರಿ ದೀಕ್ಷಿತ್ ಮತ್ತಿ ಕರಿಶ್ಮಾ ಕಪೂರ್ ಅವರ ಡಾನ್ಸ್ ಮರುಸೃಷ್ಟಿಸಿದ್ದಾರೆ. ಮಾಧುರಿ ಮತ್ತು ಕರಿಶ್ಮ ಜೋಡಿಯ ಸೂಪರ್ ಹಿಟ್ ಡಾನ್ಸ್ ಆಫ್ ಎನ್ವಿ ಹಾಡಿಗೆ ಸಖತ್ ಡಾನ್ಸ್ ಮಾಡಿದ್ದಾರೆ. ಈ ಮೂಲಕ 90ರ ದಶಕದ ಮಸ್ತ್ ಡಾನ್ಸ್ ನ ನೆನಪು ಮಾಡಿದೆ.
ಮಾಧುರಿ ದೀಕ್ಷಿತ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಮಾಧುರಿ ಹುಟ್ಟುಹಬ್ಬಕ್ಕೆ ತನ್ವಿ ಗೀತಾ ರವಿಶಂಕರ್ ವಿಶೇಷ ಡಾನ್ಸ್ ಮೂಲಕ ವಿಶ್ ಮಾಡಿದ್ದಾರೆ. ಡಾನ್ಸ್ ವಿಡಿಯೋ ಶೇರ್ ಮಾಡಿ ದೀರ್ಘವಾದ ಪೋಸ್ಟ್ ಶೇರ್ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಟ್ಯಾಗ್ ಮಾಡಿ ಎಂದು ಹೇಳಿದ್ದಾರೆ. ಕೊನೆಯಲ್ಲಿ ನನ್ನ ಸ್ಫೂರ್ತಿ, ನನ್ನ ಐಕಾನ್ ಎಂದು ಹಾಡಿಹೊಗಳಿದ್ದಾರೆ.
ಬಿಕಿನಿ ಧರಿಸಿ ದೀಪಿಕಾ ರೀತಿ ಕುಣಿದು ಕುಪ್ಪಳಿಸಿದ ಯುವತಿ: ವಿಡಿಯೋ ವೈರಲ್
ಮಾಧುರಿ ಹಾಗೂ ಕರಿಶ್ಮಾ ಹಾಗೆಯೇ ಡ್ರೆಸಪ್ ಮಾಡಿಕೊಂಡು ಇಬ್ಬರೂ ಡಾನ್ಸ್ ಮಾಡಿದ್ದಾರೆ. ಇಬ್ಬರ ಬೋಲ್ಡ್ ನೃತ್ಯಕ್ಕೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ. ವಿಡಿಯೋ ಶೇರ್ ಮಾಡಿ ಕೆಲವೇ ಗಂಟೆಗಳಲ್ಲಿ ಲಕ್ಷ ಗಟ್ಟಲೇ ವೀಕ್ಷಣೆ ಕಂಡಿದೆ. ಅಭಿಮಾನಿಗಳು ಕಾಮೆಂಟ್ ಮಾಡಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಪ್ಲಸ್ ಸೈಜ್ ಇದ್ದರೂ ಮಸ್ತ್ ಡಾನ್ಸ್ ಮಾಡುವುದನ್ನು ನೋಡಿ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ. ಜೀರೋ ಸೈಜ್ ಮಾಧುರಿ ಹಾಗೂ ಕರಿಶ್ಮಾ ಡಾನ್ಸ್ ಅನ್ನು ಸ್ವಲ್ಪವೂ ಮಿಸ್ ಆಗದಂತೆ ಥೇಟ್ ಹಾಗೆ ಮಾಡಿದ್ದಾರೆ ಈ ಪ್ಲಸ್ ಸೈಜ್ ಯುವತಿಯರು.
ಭಾರತಕ್ಕೆ ಬಂದಿರುವ ಆಪಲ್ ಸಿಇಒ ಟಿಮ್ ಕುಕ್‌ಗೆ ವಡಾ ಪಾವ್ ಪಾರ್ಟಿ ಕೊಡಿಸಿದ ಮಾಧುರಿ ದೀಕ್ಷಿತ್; ಫೋಟೋ ವೈರಲ್
ತನ್ವಿ ಇನ್‌ಸ್ಟಾಗ್ರಾಂನಲ್ಲಿ ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದು, ಡಿಜಿಟಲ್ ಕ್ರಿಯೇಟರ್ ಆಗಿದ್ದಾರೆ. ತನ್ವಿ ಯಾವ ಹೀರೋಯಿನ್ಗೂ ಕಮ್ಮಿ ಇಲ್ಲ ಎನ್ನುವಂತೆಯೇ ನರ್ತಿಸುತ್ತಿದ್ದಾರೆ. ದಪ್ಪ ಎಂದು ಸುಮ್ಮನೆ ಕೂರದ ತನ್ವಿ ಡಾನ್ಸ್ ಕಲಿತು ಮಸ್ತ್ ಡಾನ್ಸ್ ಮಾಡುತ್ತಿದ್ದಾರೆ. ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ. ಅನೇಕ ಫಾಲೋವರ್ಸ್ ಹೊಂದಿರುವ ತನ್ವಿ ಮತ್ತಷ್ಟು ಡಾನ್ಸ್ ವಿಡಿಯೋಗಳನ್ನು ಶೇರ್ ಮಾಡುವ ಯೋಜನೆ ಹೊಂದಿದ್ದಾರೆ.