ಮೆಗಾ ಸ್ಟಾರ್ ಚಿರಂಜೀವಿ ಸಹೋದರ ನಾಗೇಂದ್ರ ಬಾಬು ಅವರ ಪುತ್ರಿ ನಿಹಾರಿಕಾ ಕೊನಿಡೆಲಾ ನೀಡಿರುವ ಹೇಳಿಕೆಯೊಂದು ಸಕತ್ ವೈರಲ್ ಆಗಿದ್ದು, ಟ್ರೋಲ್ಗೂ ಒಳಗಾಗುತ್ತಿದೆ. ಈಕೆ ಹೇಳಿದ್ದೇನು?
ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಸಹೋದರ ನಾಗೇಂದ್ರ ಬಾಬು ಅವರ ಪುತ್ರಿ ನಿಹಾರಿಕಾ ಕೊನಿಡೆಲಾ (Niharika Konidela) ಸದ್ಯ ಸುದ್ದಿಯಲ್ಲಿರುವ ನಟಿ. ಟಾಲಿವುಡ್‌ನಲ್ಲಿ ಮೆಗಾ ಡಾಟರ್ ಅಂತಲೇ ಜನಪ್ರಿಯರಾಗಿರೋ ಈಕೆ ನಟಿಯಾಗಿ, ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. 2020ರಲ್ಲಿ ನಿಹಾರಿಕಾ ಜೊನ್ನಲಗಡ್ಡ ವೆಂಕಟ ಚೈತನ್ಯ ಎಂಬುವವರನ್ನು ವಿವಾಹವಾಗಿದ್ದರು. ನಿಹಾರಿಕಾ ಮತ್ತು ಚೈತನ್ಯ ಅವರದ್ದು ಪ್ರೇಮ ವಿವಾಹ. 2020ರ ಡಿಸೆಂಬರ್ 9ರಂದು ರಾಜಸ್ಥಾನದ ಉದಯಪುರದಲ್ಲಿ ಇವರ ಮದುವೆ ನಡೆಯಿತು. ವಿವಾಹಕಾರ್ಯ ತುಂಬಾನೇ ಅದ್ದೂರಿಯಾಗಿ ನಡೆದಿತ್ತು. ಆದರೆ ಇವರಿಬ್ಬರ ಸಂಸಾರದಲ್ಲಿ ಬಿರುಕು ಬಿಟ್ಟಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ಸ್ಟಾಗ್ರಾಮ್ನಲ್ಲಿ ಪತಿಯನ್ನು ಅನ್ಫಾಲೋ ಮಾಡಿರೋದು, ಅವರ ಜೊತೆಗಿನ ಫೋಟೋ ಡಿಲೀಟ್ ಮಾಡಿರುವುದರಿಂದ ಅವರ ಡಿವೋರ್ಸ್ ವಿಚಾರ ಚರ್ಚೆಗೆ ಬಂದಿದೆ.
2016ರಲ್ಲಿ ರಿಲೀಸ್ ಆದ ‘ಒಕ ಮನಸು’ ಸಿನಿಮಾ ಮೂಲಕ ನಿಹಾರಿಕಾ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಇದು ಅವರು ನಟಿಸಿದ ಮೊದಲ ಸಿನಿಮಾ. ಸ್ಟಾರ್ ಕಿಡ್ ಆಗಿದ್ದರಿಂದ ಅವರಿಗೆ ಅವಕಾಶ ಸುಲಭವಾಗಿ ಸಿಕ್ಕಿತ್ತು. 2019ರಲ್ಲಿ ರಿಲೀಸ್ ಆದ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ನಿಹಾರಿಕಾ (Niharika) ಬಣ್ಣ ಹಚ್ಚಿದ್ದರು. ಇದಾದ ಬಳಿಕ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ವಿವಾಹದ ಬಳಿಕ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದರು. ಆದರೆ ಈಗ ಮತ್ತೆ ನಟನೆ ಕಮ್ ಬ್ಯಾಕ್ ಮಾಡಿದ್ದು, ವೆಬ್ ಸೀರಿಸ್‌ವೊಂದರಲ್ಲಿ ನಟಿಸಿದ್ದಾರೆ. ಅದರ ಹೆಸರು ‘ಡೆಡ್ ಪಿಕ್ಸೆಲ್’ (Dead Pixels)
Janhvi Kapoor: ಮೇಲೆ-ಕೆಳಗೆ ಸರಿ ಮಾಡ್ಕೊಂಡೇ ಮುಗೀತಿಲ್ವಲ್ಲಾ ತಾಯೀ ಎಂದು ನಟಿ ಟ್ರೋಲ್
ಈ ಸೀರಿಸ್ ಕುರಿತಂತೆ ಈಕೆ ಸಿಕ್ಕಾಪಟ್ಟೆ ಟ್ರೋಲ್ಗೆ (Troll) ಒಳಗಾಗುತ್ತಿದ್ದಾರೆ. ಈ ವೆಬ್ ಸೀರಿಸ್ನಲ್ಲಿ ನಿಹಾರಿಕಾ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಇದರ ಟ್ರೈಲರ್ ಬಿಡುಗಡೆಯಾಗಿತ್ತು. ಇದರಲ್ಲಿನ ಒಂದು ಡೈಲಾಗ್‌ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಅದೇನೆಂದರೆ ಈ ಟ್ರೈಲರ್ನಲ್ಲಿ ಈಕೆ 'ನನ್ನ ಬೆಡ್ ಮೇಲೆ ರೋಷನ್ ಇರಬೇಕು. ನನ್ನ ಮೆದುಳಲ್ಲಿ ಭಾರ್ಗವ್ ಇರಬೇಕು ಎಂದು ಬಯಸುತ್ತೇನೆ' ಎಂದಿದ್ದಾರೆ. ಈ ಡೈಲಾಗ್ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದೆ. ಅಂದಹಾಗೆ, ಈ ಟ್ರೈಲರ್ ಗೇಮರ್ಗಳ ಬಗ್ಗೆ ಇದೆ. ಆನ್ಲೈನ್ನಲ್ಲಿ ಗೇಮ್ ಆಡುತ್ತಾ ಯಾವ ಪರಿಸ್ಥಿತಿಗೆ ತಲುಪುತ್ತಾರೆ ಎನ್ನೋದನ್ನು ತೋರಿಸಲಾಗುತ್ತಿದೆ. ಅದರಲ್ಲಿ ಬರುವ ಈ ಡೈಲಾಗ್ ಸಿಕ್ಕಾಪಟ್ಟೆ ಟ್ರೋಲ್ಗೆ ಒಳಗಾಗುತ್ತಿದೆ. ನಿಹಾರಿಕಾ ಕೊನಿಡೆಲಾ ಹೇಳಿದ ಡೈಲಾಗ್ ವಿರುದ್ಧ ಮೆಗಾ ಕುಟುಂಬದ ಅಭಿಮಾನಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಕೆಲವರಂತೂ ನಿಹಾರಿಕಾ ಕೊನಿಡೆಲಾರನ್ನು ಟೀಕಿಸುತ್ತಿದ್ದಾರೆ. ಮತ್ತೆ ಕೆಲವರು ಟ್ರೋಲ್ ಮಾಡುವುದಕ್ಕೂ ಶುರು ಮಾಡಿದ್ದಾರೆ. ಈ ಡೈಲಾಗ್ ಪ್ರೇಕ್ಷಕರಿಗೆ ಯಾವ ರೀತಿಯ ಸಂದೇಶವನ್ನು ರವಾನಿಸುತ್ತದೆ ಅನ್ನೋದರ ಕಡೆಗೆ ಗಮನ ಹರಿಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಕೆಲವರು ಯಶಸ್ಸು ಕಾಣಬೇಕೆಂದರೆ, ಇಂತಹ ಡೈಲಾಗ್‌ಗಳಿಂದ ದೂರ ಇರುವುದೇ ಉತ್ತಮ ಎಂದು ಹೇಳುತ್ತಿದ್ದಾರೆ.
‘ಡೆಡ್ ಪಿಕ್ಸೆಲ್’ ಹೆಸರಿನ ಬ್ರಿಟಿಷ್ ಸೀರಿಸ್ (British Series) ಆಧರಿಸಿ ತೆಲುಗಿನ ‘ಡೆಡ್ ಪಿಕ್ಸೆಲ್’ ಮೂಡಿ ಬಂದಿದೆ. ನಿಹಾರಿಕಾ ಅವರು ಗಾಯತ್ರಿ ಹೆಸರಿನ ಪಾತ್ರ ಮಾಡಿದ್ದಾರೆ. ಆರು ಎಪಿಸೋಡ್ಗಳನ್ನು ಈ ಸೀರಿಸ್ ಒಳಗೊಳ್ಳಲಿದೆ. ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಮೂಲಕ ಇದು ರಿಲೀಸ್ ಆಗುತ್ತಿದೆ. 'ಡೆಡ್ ಪಿಕ್ಸೆಲ್'ನಲ್ಲಿ ನಿಹಾರಿಕಾ ಕೊನಿಡೆಲಾ ಜೊತೆ ಸಾಯಿರೋನಕ್ ಮತ್ತು ಹರ್ಷ ಚೆಮುಡು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದಿತ್ಯ ಮಂಡಾಲ್ ಈ ವೆಬ್ ಸೀರಿಸ್ ಅನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಅಂತೂ ಈ ಟ್ರೋಲ್‌ಗಳಿಗೆಲ್ಲ ನಟಿ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ತಮ್ಮ ವೆಬ್ ಸೀರಿಸ್ ಅನ್ನು ಪ್ರಚಾರ ಮಾಡುವುದರಲ್ಲಿ ನಿರತರಾಗಿದ್ದಾರೆ. ಅಂದ ಹಾಗೆ, ಈ ವೆಬ್ ಸೀರಿಸ್, ಇದೇ ಮೇ 19ರಂದು ಈ ಸಿನಿಮಾ ಓಟಿಟಿ ವೇದಿಕೆ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ರಿಲೀಸ್ ಆಗಲಿದೆ.
Sonali Bendre: ಮಧ್ಯರಾತ್ರಿ ಕರೆ ಮಾಡಿ ಓಡಿಹೋಗೋಣ ಬಾ ಎಂದ: ಭಯಾನಕ ಅನುಭವ ಬಿಚ್ಚಿಟ್ಟ ನಟಿ