ಅಮಿತಾಭ್ ಬಚ್ಚನ್ ಮತ್ತು ರೇಖಾ ಅವರ ಲವ್ ಬ್ರೇಕ್ ಅಪ್ ಆಗಿದ್ದಾರೆ ಎರಡು ಉಂಗುರಗಳನ್ನು ರೇಖಾ ವಾಪಸ್ ಕೊಟ್ಟಿದ್ದರು. ಏನಿದು ಕಥೆ?
ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ (Amithabh Bhacchan) ಮತ್ತು ಒಂದು ಕಾಲದಲ್ಲಿ ಬಾಲಿವುಡ್ ಆಳಿದ್ದ ಕೃಷ್ಣ ಸುಂದರಿ ರೇಖಾ ಅವರ ಪ್ರೇಮಕಥೆ ಯಾವ ಸಿನಿಮಾಗೂ ಕಡಿಮೆಯೇನಿಲ್ಲ. ಇದು ಜಗಜ್ಜಾಹೀರವಾಗಿದ್ದರೂ ಅಮಿತಾಭ್ ಮಾತ್ರ ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲೇ ಇಲ್ಲ, ಆದರೆ ರೇಖಾ ತಮ್ಮ ಪ್ರೇಮ ಕಥೆಯ ಬಗ್ಗೆ ಹಲವಾರು ವೇದಿಕೆಗಳಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಈ ಜೋಡಿಯ ಪ್ರೇಮಕಥೆ ಯಾರೂ ಮರೆಯಲು ಸಾಧ್ಯವಿಲ್ಲ. 70 ರ ದಶಕದಲ್ಲಿ, ಅಮಿತಾಭ್ ಬಚ್ಚನ್ ಮತ್ತು ರೇಖಾ ಅವರ ಸಂಬಂಧವು ಬಹಳ ಚರ್ಚಿತ ವಿಷಯವಾಗಿತ್ತು. ಅವರ ಪ್ರೇಮ ಪ್ರಕರಣಗಳ ಬಗ್ಗೆ ಗಾಸಿಪ್‌ಗಳು ಚಿತ್ರದ ಸೆಟ್‌ಗಳಲ್ಲಿ ನಡೆಯುತ್ತಲೇ ಇದ್ದವು. ಚಿತ್ರರಂಗದಲ್ಲಿ ಡೇಟಿಂಗ್, ಸಂಬಂಧ, ಮದುವೆ, ವಿಚ್ಛೇದನ ಎಲ್ಲವೂ ಮಾಮೂಲಾಗಿದ್ದರೂ, ಬಿಗ್ ಬಿ ಮತ್ತು ರೇಖಾ ನಡುವಿನ ಪ್ರೇಮಕಥೆಯು 40 45 ವರ್ಷಗಳ ಬಳಿಕವೂ ಸದ್ದು ಮಾಡುತ್ತಲೇ ಇದೆ. ಆಗಲೂ ಈ ಸಂಬಂಧ ಗುಟ್ಟಾಗಿಯೇ ಚರ್ಚೆಯಾಗುತ್ತಿತ್ತು ಮತ್ತು ಇಂದಿಗೂ. ಇಮಾನ್ ಧರಂ', 'ಖೂನ್ ಪಸಿನ' , 'ಗಂಗಾ ಕಿ ಸೌಗಂಧ್', 'ಮುಕದ್ದರ್ ಕ ಸಿಕಂದರ್' , 'ಮಿಸ್ಟರ್ ನಟವರ್‌ಲಾಲ್', 'ಸುಹಾಗ್', ' ರಾಮ್ ಬಲರಾಮ್' ಸೇರಿದಂತೆ ಹಲವು ಚಿತ್ರಗಳಲ್ಲಿ ತೆರೆ ಹಂಚಿಕೊಂಡ ಈ ಜೋಡಿ ಅಭಿಮಾನಿಗಳ ಹಿಟ್ ಜೊಡಿಯಾಗಿತ್ತು. ದೋ ಅಂಜಾನೆ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗಿನಿಂದಲೂ ಇವರಿಬ್ಬರ ಸುದ್ದಿ ಬಿ ಟೌನ್ದಲ್ಲಿ ಹರಿದಾಡುತ್ತಲೇ ಇತ್ತು. ಇದು ಕೇವಲ ಗಾಸಿಪ್ ಆಗಿರಲಿಲ್ಲ, ಬದಲಿಗೆ ಇಬ್ಬರೂ ಪ್ರೀತಿಸುತ್ತಿದ್ದುದು ಕೂಡ ನಿಜವೇ ಆಗಿತ್ತು. ಬೆಳ್ಳಿ ಪರದೆಯ ಮೇಲೆ ಈ ಜೋಡಿಯ ಕೆಮೆಸ್ಟ್ರಿಯನ್ನು ಹಾಡಿ ಕೊಂಡಾಡಿದ್ದ ಅಭಿಮಾನಿಗಳು, ನಿಜ ಜೀವನದಲ್ಲಿಯೂ ಇವರಿಬ್ಬರು ಜೋಡಿಯಾಗಲಿ ಎಂದೇ ಹಾರೈಸಿದ್ದರು. ಆದರೆ ವಿಧಿಯ ಲೀಲೆಯೇ ಬೇರೆಯಾಗಿತ್ತು. ಒಬ್ಬರನ್ನೊಬ್ಬರು ಬಿಟ್ಟಿರದ ಜೋಡಿ ಕೊನೆಗೆ ಹಾವು ಮುಂಗುಸಿಯಾಗಿತ್ತು. ಇವರಿಬ್ಬರ ನಡುವೆ ಜಯಾ ಬಾಧುರಿ (Jaya Badhuri) ಎಂಟ್ರಿ ಕೊಟ್ಟಿದ್ದರು. ಅಮಿತಾಭ್ ಬಚ್ಚನ್ ಹಾಗೂ ಜಯಾ ಅವರು 1973ರಲ್ಲಿ ಮದುವೆಯಾದರು. ಅಮಿತಾಭ್ ಬಚ್ಚನ್ ಅವರ ಮದುವೆ ಜಯಾ ಅವರ ಜೊತೆಗೆ ಆದ ನಂತರ ರೇಖಾ ಜರ್ಜರಿತರಾಗಿದ್ದ ಸುದ್ದಿ ಇಂದಿಗೂ ಬಹುತೇಕ ಚರ್ಚಿತ ವಿಷಯವೇ.
ಇದೀಗ ಎರಡು ಉಂಗುರಗಳ ಘಟನೆಯೊಂದು ಸಕತ್ ವೈರಲ್ ಆಗುತ್ತಿದೆ. ಅದೇನೆಂದರೆ, ಅಮಿತಾಭ್ ಒಮ್ಮೆ ರೇಖಾ (Rekha)ಅವರಿಗೆ ಎರಡು ಉಂಗುರಗಳನ್ನು ಉಡುಗೊರೆಯಾಗಿ ನೀಡಿದ್ದರು. ಅದನ್ನು ನಟಿ ಮಲಗುವಾಗಲೂ ತಮ್ಮ ಬಳಿ ಇಟ್ಟುಕೊಳ್ಳುತ್ತಿದ್ದರು. ಆದರೆ ಅವರು ಆ ಎರಡೂ ಉಂಗುರಗಳನ್ನು ಬಿಗ್ ಬಿಗೆ ಹಿಂದಿರುಗಿಸುವ ಸಮಯ ಬಂದಿದ್ದ ವಿಷಯ ಇದಾಗಿದೆ. ಅಮಿತಾಭ್ ಬಚ್ಚನ್ ಧರಿಸಿರುವ ಉಂಗುರಗಳ (Finger rings) ಕುರಿತು ರೇಖಾ ಪ್ರಸ್ತಾಪಿಸಿದ್ದಾರೆ. ಆ ಎರಡೂ ಉಂಗುರಗಳಿಗೆ ತಾನು ಎಷ್ಟು ಅಂಟಿಕೊಂಡಿದ್ದೇನೆ ಮತ್ತು ಅಮಿತಾಭ್ ಅವರ ನಿರ್ಧಾರದ ನಂತರ ತಾವು ಕೋಪದಿಂದ ಆ ಎರಡು ಉಂಗುರಗಳನ್ನು ಹಿಂದಿರುಗಿಸಲು ನಿರ್ಧರಿಸಿರುವ ಬಗ್ಗೆ ರೇಖಾ ಬಹಿರಂಗಪಡಿಸಿದ್ದಾರೆ.
ಅಮಿತಾಭ್ ಪ್ರೀತಿ ತೊರೆದ ಮೇಲೆ... ನೋವಿನ ಸರಮಾಲೆ ತೆರೆದಿಟ್ಟ ನಟಿ ರೇಖಾ!
ರೇಖಾ ಒಮ್ಮೆ 'ಸ್ಟಾರ್‌ಡಸ್ಟ್'ಗೆ ನೀಡಿದ ಸಂದರ್ಶನದಲ್ಲಿ (Interview) ತಮ್ಮ ನೋವನ್ನು ಹೇಳಿಕೊಂಡಿದ್ದರು. ಆ ಸಂದರ್ಶನದಲ್ಲಿ ರೇಖಾ ಹೇಳಿದ್ದು, 'ಅಮಿತ್ ಜೀ ಈಗ ನನ್ನ ಜೊತೆ ಯಾವುದೇ ಹೊಸ ಸಿನಿಮಾ ಮಾಡುವುದಿಲ್ಲ ಎಂದು ನಿರ್ಮಾಪಕರಿಗೆ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಸುದ್ದಿಯಾಗಿದೆ. ಆದರೆ ಅವರು ಈ ಬಗ್ಗೆ ನನ್ನೊಂದಿಗೆ ಒಂದು ಮಾತನ್ನೂ ಹೇಳಲಿಲ್ಲ. ನಾನು ಈ ವಿಷಯಗಳನ್ನು ಇತರರಿಂದ ಕೇಳುತ್ತಿದ್ದೇನೆ, ನಾನು ಈ ಬಗ್ಗೆ ಅವರನ್ನು ಕೇಳಿದಾಗ, ನಾನು ಏನನ್ನೂ ಹೇಳುವುದಿಲ್ಲ ಎಂದು ಹೇಳಿಬಿಟ್ಟಿದ್ದರು. ನನ್ನನ್ನು ಕೇಳಬೇಡ. ಇದರಿಂದ ನಾನು ತುಂಬಾ ದುಃಖಿತನಾಗಿದ್ದೆ ಎಂದಿದ್ದರು. ಆ ಸಂದರ್ಭದಲ್ಲಿ ನಾನು‘ಖೂಬ್‌ಸೂರತ್’ ಚಿತ್ರದ ಶೂಟಿಂಗ್‌ನಲ್ಲಿದ್ದೆ ಎಂದು ರೇಖಾ ನೆನಪಿಸಿಕೊಂಡಿದ್ದಾರೆ.
ಇನ್ನು ರೇಖಾ, 'ಚಿತ್ರದ ಕೊನೆಯ ಭಾಗದಲ್ಲಿ ನನ್ನ ಕೈಯಲ್ಲಿ ಎರಡು ಉಂಗುರಗಳಿರಲಿಲ್ಲ ಎಂಬುದನ್ನು ನೀವು ಗಮನಿಸಿರಬಹುದು. ಅದನ್ನು ಅವರು (ಅಮಿತಾಭ್ ಬಚ್ಚನ್) ನನಗೆ ನೀಡಿದರು, ಅದನ್ನು ನಾನು ಎಂದಿಗೂ ತೆಗೆದಿರಲಿಲ್ಲ, ಮಲಗುವಾಗಲೂ ಜೊತೆಯಲ್ಲಿಯೇ ಇಟ್ಟುಕೊಳ್ಳುತ್ತಿದ್ದೆ. ಆದರೆ ನಾವು ಬೇರೆಯಾದಾಗ, ನಾನು ಉಂಗುರವನ್ನು ಅವರಿಗೆ ಹಿಂತಿರುಗಿಸಿದೆ ಎಂದು ರೇಖಾ ಹೇಳಿದ್ದಾರೆ. 1984 ರಲ್ಲಿ, ಫಿಲ್ಮ್‌ಫೇರ್ ಸಂದರ್ಶನದಲ್ಲಿ, ರೇಖಾ ಅವರ ಬಗ್ಗೆ ಅಮಿತಾಭ್ ಅವರನ್ನು ಪ್ರಶ್ನಿಸಿದ್ದಾಗ, ರೇಖಾ ಜೊತೆಗಿನ ಸಂಬಂಧವನ್ನು ಅವರು ನಿರಾಕರಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ರೇಖಾ, 'ಅವರು ತಮ್ಮ ಇಮೇಜ್, ಕುಟುಂಬ ಮತ್ತು ಮಕ್ಕಳಿಗಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಇದು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ, ಆದರೆ ಇದು ನನಗೆ ಮುಖ್ಯವಲ್ಲ. ಅವರು ನನ್ನನ್ನು ಪ್ರೀತಿಸುತ್ತಾರೆ ಮತ್ತು ನಾನು ಅವರನ್ನು ಪ್ರೀತಿಸುತ್ತೇನೆ, ಅಷ್ಟೆ. ಆಗ ಅವರು ನನ್ನೊಂದಿಗೆ ಖಾಸಗಿಯಾಗಿ ಹೇಳಿದ್ದರೆ ನಾನು ನಿರಾಶೆಗೊಳ್ಳುತ್ತಿದ್ದೆ. ಬಚ್ಚನ್ ಅವರು ಇನ್ನೂ ಹಳೆಯ ಶೈಲಿಯಲ್ಲಿದ್ದಾರೆ. ಅವರು ಯಾರನ್ನೂ ನೋಯಿಸಲು ಬಯಸುವುದಿಲ್ಲ. ಹಾಗಾದರೆ ಪತ್ನಿಯನ್ನು ಹೇಗೆ ನೋಯಿಸುತ್ತಾರೆ ಎಂದು ಕೇಳಿದರು.
ಜೀವದ ಗೆಳೆಯ ಅಮಿತಾಭ್ ಸಿಗದಿದ್ರೂ ಸೊಸೆ, ಮೊಮ್ಮಗಳಿಗೆ ಪ್ರೀತಿಯ ಅಪ್ಪುಗೆ ನೀಡಿದ ರೇಖಾ
ಅಮಿತಾಭ್ ಮತ್ತು ರೇಖಾ ಅವರ ಕೊನೆಯ ಚಿತ್ರ 'ಸಿಲ್ಸಿಲಾ' (Silsila). ಇವರಿಬ್ಬರ ಈ ಚಿತ್ರ ತೆರೆ ಮೇಲೆ ಫ್ಲಾಪ್ ಆಗಿದ್ದರೂ ಈ ಸಿನಿಮಾ ಅವರ ವೃತ್ತಿ ಬದುಕಿನ (Career) ಅತ್ಯಂತ ಜನಪ್ರಿಯ ಚಿತ್ರವಾಯಿತು. ತ್ರಿಕೋನ ಪ್ರೇಮವನ್ನು (Triangle Love Story) ಆಧರಿಸಿದ ಈ ಚಿತ್ರದಲ್ಲಿ ಜಯಾ ಬಚ್ಚನ್ ಕೂಡ ಇದ್ದರು. ಈ ಚಿತ್ರದ ನಂತರ ರೇಖಾ ಮತ್ತು ಅಮಿತಾಬ್ ಬೆಳ್ಳಿತೆರೆಯಲ್ಲಿ (Silver Screen) ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. 2014 ರಲ್ಲಿ ಸಂದರ್ಶನವೊಂದರಲ್ಲಿ, ಅಮಿತಾಭ್ ಅವರನ್ನು ಪ್ರಶ್ನಿಸಲಾಗಿತ್ತು. ರೇಖಾ ಜೊತೆಗೆ ಮತ್ಯಾವ ಚಿತ್ರ ಮಾಡಲಿದ್ದೀರಿ ಎಂದಿದ್ದಾಗ ಅವರು, 'ಅಂತಹ ಯಾವುದೇ ಕಥೆ ಕಂಡುಬಂದಿಲ್ಲ, ಅಂತಹ ಕಥೆ ಬಂದರೆ, ಒಳ್ಳೆಯ ಆಫರ್ ಬಂದರೆ ಖಂಡಿತಾ ಅವರ ಜೊತೆ ಸಿನಿಮಾ ಮಾಡುತ್ತೇನೆ ಎಂದಿದ್ದರು.