KPAC Lalitha Passes Away : ಖ್ಯಾತ ಮಲಯಾಳಂ ನಟಿ ಕೆಪಿಎಸಿ ಲಲಿತಾ ಇನ್ನಿಲ್ಲ

By Suvarna News  |  First Published Feb 23, 2022, 12:06 AM IST

ಚಿತ್ರರಂಗದಲ್ಲಿ ಆರು ದಶಕಗಳ ಕಾಲ ಸೇವೆ
74ನೇ ಜನ್ಮದಿನಕ್ಕೆ ಮೂರು ದಿನಗಳಿರುವಾಗ ನಿಧನ
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಖ್ಯಾತ ನಟಿ


ಕೊಚ್ಚಿ (ಫೆ. 22): ರಂಗಭೂಮಿ, ಸಿನಿಮಾ ಮತ್ತು ಕಿರುತೆರೆಯಲ್ಲಿ ರಂಜಿಸಿದ ಖ್ಯಾತ ಮಲಯಾಳಂ ನಟಿ ಕೆಪಿಎಸಿ ಲಲಿತಾ (KPAC Lalitha), ತಮ್ಮ 74ನೇ ಜನ್ಮದಿನಕ್ಕೆ ಮೂರು ದಿನಗಳ ಮುನ್ನ ಕೊಚ್ಚಿಯಲ್ಲಿ ನಿಧನರಾದರು. ಅವರು ಕಳೆದ ಕೆಲವು ತಿಂಗಳುಗಳಿಂದ ಯಕೃತ್ತು ವೈಫಲ್ಯ ಮತ್ತು ಇತರ ಹಲವಾರು ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರು.

ಮಲಯಾಳಂ ಸುದ್ದಿವಾಹಿನಿಗಳು ಲಲಿತಾ ಅವರು ತಮ್ಮ ಮಗ, ನಟ ಮತ್ತು ನಿರ್ದೇಶಕ ಸಿದ್ಧಾರ್ಥ್ (Sidharth) ಅವರ ಮನೆಯಲ್ಲಿ ನಿಧನರಾದರು ಎಂದು ವರದಿ ಮಾಡಿದೆ. ಲಲಿತಾ ಅವರು ಮಗಳು ಶ್ರೀಕುಟ್ಟಿ (Sreekutty)ಅವರನ್ನೂ ಕೂಡ ಅಗಲಿದ್ದಾರೆ. 1980 ರ ದಶಕದಲ್ಲಿ ಪ್ರಾರಂಭವಾದ ಮಲಯಾಳಂನ ಹೊಸ ಅಲೆಯ ಸಿನೆಮಾದ ಅತ್ಯಂತ ಪ್ರಸಿದ್ಧ ನಿರ್ದೇಶಕರಲ್ಲಿ ಒಬ್ಬರಾದ ಲಲಿತಾ ಅವರ ಪತಿ ಭರತನ್ (Bharathan) 1998 ರಲ್ಲಿ ನಿಧನರಾಗಿದ್ದರು.

ಕೆಪಿಎಸಿ ( KPAC) ಲಲಿತಾ ಅವರು ಫೆಬ್ರವರಿ 25, 1948 ರಂದು ಮಹೇಶ್ವರಿ ಅಮ್ಮಾ ಹೆಸರಿನಲ್ಲಿ ಜನಿಸಿದರು. ಅವರು ಸಹಜವಾದ ಅಭಿನಯಕ್ಕಾಗಿ ತಮ್ಮ ಸಾಮರ್ಥ್ಯವನ್ನು ಮತ್ತು ರಂಗಭೂಮಿಯ ಮೂಲಕ ತಮ್ಮ ಪಾತ್ರಗಳಿಗೆ ಆಳವನ್ನು ಒದಗಿಸುವ ಪ್ರತಿಭೆಯನ್ನು ಹೆಚ್ಚಿಸಿಕೊಂಡಿದ್ದರು. ಅವರು ಎಡಪಂಥೀಯ ನಾಟಕ ಗುಂಪು ಕೇರಳ ಪೀಪಲ್ಸ್ ಆರ್ಟ್ಸ್ ಕ್ಲಬ್‌ನೊಂದಿಗೆ (Kerala People’s Arts Club) ತಮ್ಮ ಕೆಲಸದ ಪರಂಪರೆಯನ್ನು ಮುಂದುವರಿಸಿದ್ದ ಲಲಿತಾ, ತಮ್ಮ ಹೆಸರಿನ ಮುಂದೆ  ಕೆಪಿಎಸಿ ಎಂದು ಸೇರಿಸಿಕೊಂಡಿದ್ದರು.

Rest in peace Lalitha aunty! It was a privilege to have shared the silver screen with you! One of the finest actors I’ve known. 🙏💔 pic.twitter.com/zAGeRr7rM0

— Prithviraj Sukumaran (@PrithviOfficial)


1969 ರಲ್ಲಿ ಕೆ ಎಸ್ ಸೇತುಮಾಧವನ್ ಅವರ ಕೂಟ್ಟುಕುಡುಂಬಂ ಚಿತ್ರದ ಮೂಲಕ ಅವರ ಚಲನಚಿತ್ರ ವೃತ್ತಿಜೀವನ ಪ್ರಾರಂಭವಾಗಿತ್ತು. 1970 ರ ದಶಕದ ಲಲಿತಾ ಅವರ ಚಲನಚಿತ್ರಗಳಲ್ಲಿ ತೊಪ್ಪಿಲ್ ಭಾಸಿ ಅವರ ನಿಂಗಲೆನ್ನೆ ಕಮ್ಯುನಿಸ್ಟಕ್ಕಿ, ಅನುಭವಗಳ್ ಪಾಲಿಚಕಲ್ , ಒರು ಸುಂದರಿಯುಡೆ ಕಥಾ, ಪೊನ್ನಿ ಮತ್ತು ಚಕ್ರವಾಕಂ, ಅಡೂರ್ ಗೋಪಾಲಕೃಷ್ಣನ್ ಅವರ ಸ್ವಯಂವರಂ ಮತ್ತು ಕೊಡಿಯೆಟ್ಟಂ, ಮಧು ಅವರ ಮಾನ್ಯಶ್ರೀ ವಿಶ್ವಾಮಿತ್ರನ್ ಮತ್ತು ಮೆಲತ್ತೂರು ರವಿವರ್ಮ ಅವರ ಅನುಗ್ರಹಂ ಮುಂತಾದವುಗಳಾಗಿವೆ.

ಲಲಿತಾ ಅವರ ಪತಿ ಭರತನ್ 1975ರಲ್ಲಿ ಪ್ರಯಾಣಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.ಅವರೊಂದಿಗೆ 1978ರಲ್ಲಿ ರಥಿನಿರ್ವೇದಂ ಚಿತ್ರದಲ್ಲಿ ನಟಿಸಿದ್ದರು. ಹದಿಹರೆಯದ ಹುಡುಗನ ಲೈಂಗಿಕ ಜಾಗೃತಿಯ ಸ್ಪಷ್ಟ ಚಿತ್ರಣಕ್ಕಾಗಿ ಆ ಸಮಯದಲ್ಲಿ ಈ ಚಿತ್ರ ದೊಡ್ಡ ವಿವಾದಕ್ಕೆ ಈಡಾಗಿತ್ತು. 1978 ರಲ್ಲಿ ಲಲಿತಾ ಹಾಗೂ ಭರತನ್ ವಿವಾಹವಾಗಿದ್ದರು. ಭರತನ್ ನಿರ್ದೇಶನದಲ್ಲಿ ಲಲಿತಾ ಅವರು ಆರವಂ, ನಿದ್ರಾ, ಮರ್ಮರಮ್, ಓರ್ಮಕಯ್ಯಿ, ಕಟ್ಟಾತೆ ಕಿಲಿಕ್ಕೂಡು, ಎಂಟೆ ಉಪಾಸನಾ, ಚಿಲಂಬು, ನೀಲ ಕುರಿಂಜಿ ಪೂತಪ್ಪೋಲ್, ವೆಂಕಲಂ ಮತ್ತು ಅಮರಂ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದರು. 1970 ರ ದಶಕದ ಅಂತ್ಯದಿಂದ ಭರತನ್ ಅವರ ಹಠಾತ್ ಮರಣದವರೆಗೂ ಲಲಿತಾ ಅವರು ನಟಿಸಿದ ಈ ಎಲ್ಲಾ ಚಿತ್ರಗಳೂ ಹಿಟ್ ಆಗಿದ್ದವು.

Gangubai Kathiawadi ಮೇರಿ ಜಾನ್‌ ಹಾಡು ರೀಲಿಸ್‌ ನಟನೊಂದಿಗೆ ಆಲಿಯಾ ಭಟ್ ರೊಮ್ಯಾನ್ಸ್!
ತನ್ನ ವೃತ್ತಿಜೀವನದುದ್ದಕ್ಕೂ ಹೆಚ್ಚು ವಿಶೇಷ ಪಾತ್ರಗಳಲ್ಲಿ ನಟಿಸಿದ್ದ ಲಲಿತಾ ನಂತರದ ವರ್ಷಗಳಲ್ಲಿ ದೂರದರ್ಶನದಲ್ಲಿ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಅಡೂರ್ ಗೋಪಾಲಕೃಷ್ಣನ್ ಅವರ ಮತಿಲುಗಳು (1990) ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ತಮ್ಮ ಧ್ವನಿಯನ್ನು ನೀಡಿದ್ದರು. ಇಡೀ ಚಿತ್ರದಲ್ಲಿ ಎಲ್ಲಿಯೂ ನಾಯಕಿಯ ಪಾತ್ರ ಪರೆದೆಯ ಮೇಲೆ ಬರುವುದಿಲ್ಲ. ಕೇವಲ ಧ್ವನಿಯ ಮೂಲಕ ಮಾತ್ರ ಇರುವ ಪಾತ್ರಕ್ಕೆ ಲಲಿತಾ ಧ್ವನಿ ನೀಡಿದ್ದರು. ಪ್ರಿಯದರ್ಶನ್ ಅವರ ಮುಕುಂತೇಟ್ಟ ಸುಮಿತ್ರಾ ವಿಲಿಕ್ಕುನ್ನು (1988), ಸಿಬಿ ಮಲಾಯಿಲ್ ಅವರ ಹಿಸ್ ಹೈನೆಸ್ ಅಬ್ದುಲ್ಲಾ (1990), ಕೊಟ್ಟಾಯಂ ಕುಂಜಾಚನ್ (1990), ಸಿದ್ದಿಕ್-ಲಾಲ್ ಅವರ ವಿಯೆಟ್ನಾಂ ಕಾಲೋನಿ (1993) ರೀತಿಯ ಹಾಸ್ಯ ಚಿತ್ರಗಳಲ್ಲೂ ನಟಿಸಿ ಪ್ರಖ್ಯಾತಿ ಪಡೆದಿದ್ದರು.

KGF 2: 'ಕೆಜಿಎಫ್ ಪಾರ್ಟ್ 2  ನೋಡಲು ಮೋದಿ ಉತ್ಸುಕ'  ನಕಲಿ ಲೆಟರ್ ಹೆಡ್ ಅಸಾಮಿ ಸೆರೆ
ಲಲಿತಾ 1991 ರಲ್ಲಿ ಅಮರಂ ಮತ್ತು 2001 ರಲ್ಲಿ ಜಯರಾಜ್ ಅವರ ಶಾಂತಂ ಚಿತ್ರದಲ್ಲಿನ  ಪಾತ್ರಗಳಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಒಳಗೊಂಡಂತೆ ತಮ್ಮ ಜೀವಿತಾವಧಿಯಲ್ಲಿ ಹಲವಾರು ಗೌರವಗಳನ್ನು ಪಡೆದಿದ್ದಾರೆ. ಅವರ ಇತ್ತೀಚಿನ ಚಲನಚಿತ್ರಗಳಲ್ಲಿ ಅಡೂರ್ ಗೋಪಾಲಕೃಷ್ಣನ್ ಅವರ ಪಿನ್ನೆಯುಮ್ (2016), ಕಮಲ್ ಅವರ ಆಮಿ (2018), ಸತ್ಯನ್ ಅಂತಿಕಾಡ್ ಅವರ ಜ್ಞಾನ ಪ್ರಕಾಶನ ಸೇರಿವೆ. (2018), ಮಾರ್ಟಿನ್ ಪ್ರಕ್ಕತ್ ಅವರ ಚಾರ್ಲಿ (2015) ಮತ್ತು ರೋಜಿನ್ ಥಾಮಸ್ ಅವರ ಹೋಮ್ (2021) ಕೊನೆಯ ಚಿತ್ರವಾಗಿದೆ.

Tap to resize

Latest Videos

click me!