ಮೊನ್ನೆ ಮೊನ್ನೆ ನಾಗ ಚೈತನ್ಯ ಶೋಭಿತಾ ಎಂಗೇಜ್‌ಮೆಂಟ್ ಆಯ್ತು. ಇದೀಗ ಖ್ಯಾತ ಬಾಲಿವುಡ್ ನಿರ್ದೇಶಕನ ಜೊತೆಗೆ ಸಮಂತಾ ಹೆಸರು ಕೇಳಿ ಬರುತ್ತಿದೆ. ರಿಯಲೀ ಏನ್ ನಡೀತಿದೆ?
ನಟಿ ಸಮಂತಾ ರುತ್ ಪ್ರಭು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚೆಚ್ಚು ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಅವರು ದಕ್ಷಿಣದ ನಟ ನಾಗ ಚೈತನ್ಯ ಅವರನ್ನು ಮದುವೆಯಾಗಿದ್ದು ಒಂದು ಲೆವೆಲ್‌ನ ಹೈಪ್ ಕ್ರಿಯೇಟ್ ಮಾಡಿದರೆ, ನಾಲ್ಕೇ ವರ್ಷಗಳಲ್ಲಿ ಈ ಜೋಡಿ ತಮ್ಮ ಸಂಬಂಧಕ್ಕೆ ಗುಡ್‌ಬೈ ಹೇಳಿದ್ದು ಇವರ ಅಗಲಿಕೆ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಅಷ್ಟಕ್ಕೇ ಮುಗೀತಾ ಅಂದ್ರೆ ಊಹೂಂ, ಖಂಡಿತಾ ಇಲ್ಲ. ಇವರಿಬ್ರೂ ವೈಯುಕ್ತಿಕವಾಗಿ ಪರಸ್ಪರರ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದಾರೋ ಗೊತ್ತಿಲ್ಲ, ಆದರೆ ಇವರ ಅಭಿಮಾನಿಗಳಂತೂ ತೊಡೆ ತಟ್ಟಿ ಫೈಟ್ ಮಾಡಿದ್ದೇ ಮಾಡಿದ್ದು. ಅದು ಈ ಇಬ್ಬರು ಕಲಾವಿದರ ಪರ್ಸನಲ್ ಲೈಫನ್ನು ಬೀದಿಗೆ ತಂದು ನಿಲ್ಲಿಸಿತು, ಮಾನ ಮರ್ಯಾದೆ ಹರಾಜು ಹಾಕಿತು ಅಂತ ಸಪರೇಟಾಗೇನೂ ಹೇಳಬೇಕಿಲ್ಲ ತಾನೇ? ಇದೀಗ ಈ ಜೋಡಿ ಮತ್ತೊಂದು ಲೆವೆಲ್‌ಗೆ ಹೋಗಿದೆ. ಯಾವತ್ತಾದ್ರೂ ಇವರಿಬ್ಬರು ಮತ್ತೆ ಒಂದಾಗಬಹುದು ಅಂದುಕೊಂಡಿದ್ದ ನಿರೀಕ್ಷೆ ಹುಸಿಯಾಗಿದೆ.
ಎಸ್. ಮೊನ್ನೆ ಮೊನ್ನೆ ನಾಗ ಚೈತನ್ಯ ಅವರು ನಟಿ ಶೋಭಿತಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡರು. ಆಗ ಚೈ ಬಗ್ಗೆ ಏಕಾಏಕಿ ನೆಗೆಟಿವ್ ಕಾಮೆಂಟ್ ಹರಿದಾಡಿತು. ಇದು ಅವರ ಅಭಿಮಾನಿಗಳಿಗೆ ಬೆಂಕಿ ಇಟ್ಟ ಹಾಗಾಗಿದೆ ಎನ್ನಲಾಗಿದೆ. ಸಮಂತಾ ಜೊತೆಗಿನ ಸಂಬಂಧದಿಂದ ಹೊರಬಂದ ಮೇಲೆ ನಾಗಚೈತನ್ಯ ಸ್ವತಂತ್ರರು ತಾನೇ, ಅವರು ತನಗೆ ಬೇಕಾದ ಸಂಗಾತಿ ಆಯ್ಕೆ ಮಾಡಿರೋದ್ರಲ್ಲಿ ತಪ್ಪೇನಿದೆ ಅಂತ ಅವರ ಅಭಿಮಾನಿಗಳು ಸ್ಪಷ್ಟೀಕರಣ ಕೊಟ್ಟರು. ಆದರೆ ಇದೆಲ್ಲ ಈ ರೀತಿ ಆರೋಗ್ಯಕರ ಲೆವೆಲ್‌ನಲ್ಲಿ ಮುಗಿಯೋ ಸಂಗತಿಗಳಾ ಅಲ್ಲಾ, ಕೆಸರೆರೆಚಾಟ ಮುಂದುವರೀತಾನೇ ಇತ್ತು. ಇದನ್ನು ಸಹಿಸಲಾಗದ ಚೈ ಫ್ಯಾನ್ಸ್ ಸಮಂತಾ ಹೆಸರು ಹಾಳು ಮಾಡಲು ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ ಅಂತ ಸುದ್ದಿ. ಹಾಗಂತ ಇದು ಬರೀ ಹಬ್ಬಿಸಿರೋ ಸುದ್ದಿನಾ ಅಂದರೆ ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾಗಿರುವ ಕೆಲವು ಫೋಟೋಗಳು ಇದಕ್ಕೆ ನೋ ನೋ ಅಂತಿವೆ.
ಪ್ರಕಾಶ್ ರಾಜ್ ಜೊತೆ ಕೆಲಸ ಮಾಡುವ ಅನುಭವ ಹೇಗಿರತ್ತೆ? ಪ್ರಿಯಾಮಣಿ ಓಪನ್ ಮಾತಿದು...
ಅಷ್ಟಕ್ಕೂ ವಿಷಯ ಏನಪ್ಪ ಅಂದರೆ ಬಾಲಿವುಡ್‌ನಲ್ಲಿ ಫೇಮಸ್ ನಿರ್ದೇಶಕ ಅಂತ ಕರೆಸಿಕೊಂಡಿರೋ ರಾಜ್ ನಿಡಿಮೋರು ಜೊತೆ ಸಮಂತಾ ಹೆಸರು ಕೇಳಿ ಬರ್ತಿದೆ. ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿ ಆಗಿದೆ. ‘ದಿ ಫ್ಯಾಮಿಲಿ ಮ್ಯಾನ್ 2’ ಸೀರಿಸ್ನ ರಾಜ್ ಹಾಗೂ ಡಿಕೆ ಒಟ್ಟಾಗಿ ನಿರ್ದೇಶನ ಮಾಡಿದ್ದರು. ರಿಲೀಸ್ಗೆ ರೆಡಿ ಇರುವ ‘ಸಿಟಾಡೆಲ್ ಹನಿ ಬನಿ’ ವೆಬ್ ಸೀರಿಸ್ ಕೂಡ ರಾಜ್ ಹಾಗೂ ಡಿಕೆ ಸಾರಥ್ಯದಲ್ಲಿ ಬರುತ್ತಿದ್ದು, ಸಮಂತಾ ಇದರಲ್ಲಿ ನಟಿಸಿದ್ದಾರೆ. ಹೀಗಿರುವಾಗ ಸಮಂತಾ ಅವರ ಜೊತೆ ಓಡಾಡ್ತಿರೋದು ಕ್ಯಾಮರದಲ್ಲಿ ಸೆರೆಯಾಗಿದೆ. ಸಮಂತಾ ಯಾಕೆ ಪದೇ ಪದೇ ನಿರ್ದೇಶಕರ ಜೊತೆ ಓಡಾಡ್ತಿದ್ದಾರೆ ಅನ್ನೋ ಪ್ರಶ್ನೆ ಬಂದಿದೆ. ಹೀಗೆಲ್ಲ ನಡೀತಿರೋವಾಗ ಸಿಕ್ತಲ್ಲಪ್ಪಾ ಜಾಕ್‌ಪಾಟ್ ಅಂತ ನಾಗಚೈತನ್ಯ ಅಭಿಮಾನಿಗಳು ಇದನ್ನೇ ಗುರಾಣಿಯಾಗಿ ಬಳಸಿಕೊಂಡು ಸಮಂತಾರನ್ನು ಹಿಗ್ಗಾಮಗ್ಗಾ ಝಾಡಿಸ್ತಿದ್ದಾರಂತೆ.
ಪಾಲಕ್ಗೆ ನಿಮಿಷ ನಿಮಿಷಕ್ಕೂ ಒಬ್ಬ ಬೇಕು, ಅಫೇರ್ಸ್ಗೆ ಲೆಕ್ಕವೇ ಇಲ್ಲ: ಮಗಳ ಬಗ್ಗೆ ಕಿರುತೆರೆ ನಟಿ ಇದೆಂಥ ಹೇಳಿಕೆ!
ಆದರೆ ಸಮಂತಾ ಈಗಾಗಲೇ ವೈಯುಕ್ತಿಕ ಬದುಕಿನಲ್ಲಿ ಸಾಕಷ್ಟು ನೋವು ತಿಂದಿದ್ದಾರೆ. ಒಂದು ಹಂತದಲ್ಲಿ ರಾಜ್ ಅವರು ಬೆಂಬಲಕ್ಕೆ ನಿಂತರು ಎನ್ನಲಾಗಿದೆ. ಅವರ ಆ ಎಮೋಶನ್ ದಿಕ್ಕು ತಪ್ಪಿತಾ ಅನ್ನೋದರ ಬಗ್ಗೆ ಮಾಹಿತಿ ಇಲ್ಲ. ಇವರಿಬ್ಬರೂ ಆ ಬಗ್ಗೆ ಗಪ್‌ಚುಪ್ ಅಂದಿಲ್ಲ. ಜೊತೆಗೆ ರಾಜ್ ಅವರಿಗೆ ಈಗಾಗಲೇ ಮದುವೆ ಆಗಿದೆ. ಈ ಸಂಬಂಧ ಇದ್ದರೆ ಅವರ ಮದುವೆ ಮುರಿದುಬೀಳುತ್ತಾ ಅನ್ನೋ ಪ್ರಶ್ನೆಯೂ ಇದೆ. ಈಗಾಗಲೇ ಸಂಬಂಧ ಮುರಿದುಕೊಂಡು ಆಚೆ ಬಂದಿರುವ ಸಮಂತಾ ಮತ್ತೆ ಈ ಥರದ ಸಂಬಂಧಕ್ಕೆ ಅಸ್ತು ಅಂತಾರಾ, ನಿಜಕ್ಕೂ ರಾಜ್ ಹಾಗೂ ಸಮಂತಾ ಡೇಟಿಂಗ್ ಮಾಡುತ್ತಿದ್ದಾರಾ? ಇವರ ವಿವಾಹ ನೆರವೇರಲಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಸೋ ಸದ್ಯಕ್ಕಂತೂ ಈ ಗೊಂದಲ ಬಗೆಹರೀತಿಲ್ಲ. ಯಾವ ಹೂವು ಯಾರ ಮುಡಿಗೋ ಅನ್ನೋ ಹಾಡು ಹಾಡೋದ್ರಲ್ಲೇ ಸಮಂತಾ ಅಭಿಮಾನಿಗಳು ಮುಳುಗಿಹೋಗಿದ್ದಾರೆ.