ಮಗನ ಮದುವೆಯ ಬೆನ್ನಲ್ಲೇ ಎಲ್ಲರ ಕ್ಷಮೆ ಕೋರಿದ ನೀತಾ ಅಂಬಾನಿ: ವಿಡಿಯೋದಲ್ಲಿ ಹೇಳಿದ್ದೇನು?

By Suchethana D  |  First Published Jul 15, 2024, 12:11 PM IST

ಅನಂತ್​ ಅಂಬಾನಿ- ರಾಧಿಕಾ ಮರ್ಚೆಂಟ್​ ಮದುವೆಯ ಬೆನ್ನಲ್ಲೇ ನೀತಾ ಅಂಬಾನಿ ಎಲ್ಲರ ಕ್ಷಮೆ ಕೋರಿದ್ದಾರೆ. ಅವರು ಹೇಳಿದ್ದೇನು?
 


ವಿಶ್ವದಲ್ಲಿಯೇ ಅತ್ಯಂತ ದುಬಾರಿ ಮದುವೆ ಎನ್ನಿಸಿಕೊಂಡಿರುವ ಮುಕೇಶ್​ ಅಂಬಾನಿ ಪುತ್ರ ಅನಂತ್​  ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಮದುವೆ ನೆರವೇರಿದೆ. ಕಳೆದೆರಡು ತಿಂಗಳುಗಳಿಂದ ಈ ಜೋಡಿಯ ನಿಶ್ಚಿತಾರ್ಥ, ಪ್ರೀ ವೆಡ್ಡಿಂಗ್​  ಮತ್ತು ವಿವಾಹದ ಸಮಾರಂಭಗಳು ಇಡೀ ಪ್ರಪಂಚದಾದ್ಯಂತ ಸದ್ದು ಮಾಡಿವೆ. ದೇಶ-ವಿದೇಶಗಳ ಗಣ್ಯಾತಿಗಣ್ಯರು ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪ್ರಧಾನಿ ನರೇಂದ್ರ  ಮೋದಿ ಆದಿಯಾಗಿ ಹಲವಾರು ಕ್ಷೇತ್ರಗಳ ಸೆಲೆಬ್ರಿಟಿಗಳು ನೂತನ ವಧು-ವರರಿಗೆ ಆಶೀರ್ವದಿಸಿದ್ದಾರೆ. ಹೀಗೆ ಕಳೆದ ಕೆಲ ತಿಂಗಳುಗಳಿಂದ ಸದ್ದು ಮಾಡುತ್ತಿದ್ದ ಅಂಬಾನಿ ಪುತ್ರನ ಮದುವೆ ಈಗ ನಿರ್ವಿಘ್ನವಾಗಿ ನೆರವೇರಿದೆ. ಆದರೆ ಮದುವೆಗೆ ಸಂಬಂಧಿಸಿದ ವಿಡಿಯೋಗಳು ಒಂದೊಂದೇ ವೈರಲ್​ ಆಗುತ್ತಿವೆ. 

ಇದೀಗ ವರನ ಅಮ್ಮ ನೀತಾ ಅಂಬಾನಿ, ವಿಡಿಯೋ ಮಾಡುವ ಮೂಲಕ ಜನರ ಕ್ಷಮೆ ಕೋರಿದ್ದಾರೆ. ಇಡೀ ವಿವಾಹ ಕಾರ್ಯಕ್ರಮದಲ್ಲಿ ಹೈಲೈಟ್​ ಆಗಿದ್ದು ನೀತಾ ಅಂಬಾನಿ ಅವರೇ. ಅವರ ಬಟ್ಟೆ, ಒಡವೆ, ಅವರ ಸಿಂಪ್ಲಿಸಿಟಿ, ಅವರ ಆಡಂಬರ... ಹೀಗೆ ನೀತಾ ಅವರನ್ನೇ ಹೈಲೈಟ್​ ಮಾಡಿರುವ ಹಲವಾರು ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ಒಂದೊಂದು ಹಂತದಲ್ಲಿ ಥೇಟ್​ ಮದುಮಗಳಂತೆಯೇ ಕಂಗೊಳಿಸಿದ್ದರು ನೀತಾ. ವರನ ತಾಯಿ ಎಂದು ಹೇಳುವುದು ಕಷ್ಟ ಎನ್ನುವಷ್ಟರ ಮಟ್ಟಿಗೆ ನೀತಾ ವಧುವಿನಂತೆ ಕಾಣಿಸುತ್ತಿರುವ ವಿಡಿಯೋಗಳೂ ಸಾಕಷ್ಟು ಸದ್ದು ಮಾಡುತ್ತಿವೆ. ಇವುಗಳ ನಡುವೆಯೇ ಮದುವೆ ಮುಗಿದ ಬೆನ್ನಲ್ಲೇ ನೀತಾ ಎಲ್ಲರ ಕ್ಷಮೆ ಕೋರಿದ್ದಾರೆ.

Tap to resize

Latest Videos

ಮದುಮಗಳ ಭರ್ಜರಿ ಎಂಟ್ರಿ: ಅಬ್ಬಬ್ಬಾ ವರಮಾಲಾ ಹಾಕಲು ಇಷ್ಟೊಂದು ಸರ್ಕಸ್ಸಾ? ವಿಡಿಯೋ ನೋಡಿ ಸುಸ್ತಾದ ಜನರು!

ಅಷ್ಟಕ್ಕೂ ಅವರು ವಿಡಿಯೋದಲ್ಲಿ ಹೇಳಿದ್ದೇನೆಂದರೆ, 'ಮದುವೆಗೆ ಬಂದು ಆಶೀರ್ವದಿಸಿದ್ದಕ್ಕೆ, ತುಂಬಾ ಪೇಷನ್ಸ್​ನಿಂದ ಕಾರ್ಯಕ್ರಮದಲ್ಲಿ ಅಟೆಂಡ್​ ಆಗಿರುವುದಕ್ಕೆ ಧನ್ಯವಾದ. ಈ ಮದುವೆ ಸಂದರ್ಭದಲ್ಲಿ ಏನಾದರೂ, ಯಾರಿಗಾದರೂ ಕಷ್ಟ ಆಗಿದ್ದರೆ ಕ್ಷಮೆ ಕೋರುತ್ತೇನೆ. ಇದು ಮದುವೆಯ ಮನೆ, ಏನಾದರೂ ಎಡವಟ್ಟು ಆಗಿರಬಹುದು. ಹಾಗೇನಾದರೂ ಆಗಿದ್ದರೆ ದಯವಿಟ್ಟು ಕ್ಷಮಿಸಿಬಿಡಿ' ಎಂದಿದ್ದಾರೆ. ಇದಾಗಲೇ ನೀವು ಮದುವೆಗೆ ಬಂದು ಕಳೆ ಹೆಚ್ಚಿಸಿದ್ದೀರಿ. ವಿವಾಹೋತ್ತರ ಕಾರ್ಯಕ್ರಮಗಳು ಇನ್ನೂ ಜಾರಿಯಲ್ಲಿದ್ದು, ಅವುಗಳಿಗೆ ನೀವೆಲ್ಲಾ ಬಂದು ಆಶೀರ್ವದಿಸಬೇಕು. ಧನ್ಯವಾದ' ಎಂದು ನೀತಾ ಹೇಳಿದ್ದಾರೆ. 

ಇದೇ ವೇಳೆ,  ವಧು ರಾಧಿಕಾ, ಭರ್ಜರಿ ಎಂಟ್ರಿ ಕೊಟ್ಟಿರುವ ವಿಡಿಯೋ ವೈರಲ್​ ಆಗಿದೆ.  ಮೆರವಣಿಗೆಯಲ್ಲಿ ಅವರನ್ನು ಕರೆತಂದಿರುವ ವಿಡಿಯೋ ಜೊತೆ ವರಮಾಲಾದಲ್ಲಿ ಅನಂತ್​ ಅಂಬಾನಿ ಅವರನ್ನು ಹೊತ್ತು ಮಾಲೆ ಹಾಕಿದ್ದ ವಿಡಿಯೋಗಳು ವೈರಲ್​  ಆಗಿದ್ದವು. ಈ ಹಿಂದೆ ಅರಿಶಿಣ ಕಾರ್ಯಕ್ರಮಮದಲ್ಲಿ ರಾಧಿಕಾ ಮರ್ಚೆಂಟ್​ ಧರಿಸಿದ್ದ ಲೆಹಂಗಾದ ದುಪ್ಪಟ್ಟಾ ಮತ್ತು ಆಭರಣಗಳು ಸಕತ್​ ವೈರಲ್​ ಆಗಿದ್ದವು.  ಈ ದುಪ್ಪಟ್ಟಾ ಮತ್ತು ಕೆಲವು ಆಭರಣಗಳು ಸಂಪೂರ್ಣವಾಗಿ ತಾಜಾತಾಜಾ ಮಲ್ಲಿಗೆ ಮತ್ತು ಚೆಂಡು ಹೂವುಗಳಿಂದ ಅಲಂಕರಿಸಲಾಗಿತ್ತು. ರಾಧಿಕಾ ಇಡೀ ಕಾರ್ಯಕ್ರಮದಲ್ಲಿ ಘಮಘಮಿಸುತ್ತಿದ್ದರು. ಅತ್ಯದ್ಭುತವಾಗಿ ಈ ದುಪ್ಪಟ್ಟಾ ಮತ್ತು ಆಭರಣಗಳನ್ನು ತಯಾರು ಮಾಡಲಾಗಿತ್ತು. ಕೆಜಿಗಟ್ಟಲೆ ಮಲ್ಲಿಗೆ  ಮತ್ತು ಚೆಂಡು ಹೂವುಗಳನ್ನು ದುಪ್ಪಟ್ಟಾಕ್ಕೆ ಬಳಸಲಾಗಿತ್ತು. ಮಲ್ಲಿಗೆ ಹೂವುಗಳು ದುಪ್ಪಟ್ಟಾ ಅಲಂಕಿಸಿದ್ದರೆ, ಬಾರ್ಡರ್​ಗೆ ಚೆಂಡುಹೂವುಗಳನ್ನು ಜೋಡಿಸಲಾಗಿತ್ತು. ಜೊತೆಗೆ ಆಭರಣಗಳಿಗೂ ತಾಜಾ  ಮಲ್ಲಿಗೆ ಹೂವುಗಳ ಟಚ್​ ಕೊಡಲಾಗಿತ್ತು.  ಇದು ನಿಜವಾದ ಹೂವುಗಳು ಎಂದು ಹೇಳಿದರೆ ಸುಲಭದಲ್ಲಿ ಯಾರೂ ಒಪ್ಪದ ರೀತಿಯಲ್ಲಿ ಡಿಸೈನ್​ ಮಾಡಲಾಗಿತ್ತು.

ತಾಜಾ ತಾಜಾ ಮಲ್ಲಿಗೆ, ಚೆಂಡು ಹೂವುಗಳಿಂದ ರಾಧಿಕಾ ದುಪ್ಪಟ್ಟಾ, ಆಭರಣ! ಘಮಘಮಿಸಿದ ಮದುಮಗಳ ಝಲಕ್​...

click me!