ನಟಿಯರಿಗೆ ತೆರೆ ಮೇಲೆ ಅತಿ ಹೆಚ್ಚು ಕಿಸ್ ಕೊಟ್ಟ ಇಮ್ರಾನ್; ಹೆಂಡತಿ ಸಿಟ್ಟು ಕಮ್ಮಿ ಅಗೋದೆ ಕೈಗೆ ಈ ಗಿಫ್ಟ್ ಕೊಟ್ಮೇಲೆ!

By Vaishnavi Chandrashekar  |  First Published Jul 15, 2024, 11:35 AM IST

ತೆರೆ ಮೇಲೆ ಕಿಸ್ ಕೊಟ್ಟು...ಮನೆಯಲ್ಲಿ ಹೆಂಡತಿಯಿಂದ ಎಕ್ಸೇಪ್ ಆಗಲು ನಟ ಇಮ್ರಾನ್ ಹಶ್ಮಿ ಮಾಡೋ ಸೇಫ್‌ ಟ್ರಿಕ್ ಏನು ಗೊತ್ತಾ?


ಬಾಲಿವುಡ್ ಕಿಸ್ಸಿಂಗ್ ಸ್ಟಾರ್ ಇಮ್ರಾನ್ ಹಶ್ಮಿ ಬೇಡ ಬೇಡ ಅಂದ್ರು ನಿರ್ದೇಶಕರ ಒತ್ತಾಯಕ್ಕೆ ರೊಮ್ಯಾನ್ಸ್‌ ಸೀನ್ ಮಾಡಿರುವ ಘಟನೆಯೂ ಇದೆ. ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿರುವ ಇಮ್ರಾನ್ ಇಷ್ಟೋಂದು ರೊಮ್ಯಾನ್ಸ್ ಮಾಡಿದರೆ ಫ್ಯಾಮಿಲಿ ಹೇಗೆ ರಿಯಾಕ್ಟ್ ಮಾಡುತ್ತೆ? ಮನೆಯಲ್ಲಿರುವ ಪತ್ನಿ ಈ ಕಿಸ್ಸಿಂಗ್‌ ಸೀನ್‌ಗೆ ಓಕೆನಾ? ಗಂಡ ಎಷ್ಟೇ ರೊಮ್ಯಾನ್ಸ್ ಮಾಡಿದ್ದರೂ ಇದು ಕೇವಲ ಸಿನಿಮಾ ಅಂತ ಸುಮ್ಮನಾಗಿ ಬಿಡುತ್ತಾರಾ? ....ಇಷೆಲ್ಲಾ ಪ್ರಶ್ನೆಗಳಿಗೆ ಸ್ವತಃ ಇಮ್ರಾನ್ ಉತ್ತರಿಸಿದ್ದಾರೆ. 

ಇಮ್ರಾನ್ ಹಶ್ಮಿ ರೊಮ್ಯಾಂಟಿಕ್ ಸಿನಿಮಾಗಳು ಅಥವಾ ಕಿಸ್ಸಿಂಗ್ ದೃಶ್ಯಗಳನ್ನು ಮನೆಯಲ್ಲಿ ಪ್ರಸಾರ ಮಾಡುವಂತಿಲ್ಲ. ಇಮ್ರಾನ್ ಸಿನಿಮಾ ನೋಡುವಾಗ ಕಿಸ್ಸಿಂಗ್ ಅಥವಾ ರೊಮ್ಯಾನ್ಸ್‌ ದೃಶ್ಯ ಬಂದರೆ ಮಕ್ಕಳು ಎದ್ದು ರೋಮಿಗೆ ಹೋಗಬೇಕು ಇಲ್ಲವಾದರೆ ಟಿವಿ ಆಫ್ ಮಾಡಲಾಗುತ್ತದೆ. ಇದುವರೆಗೂ ತಮ್ಮ ಮಕ್ಕಳಿಗೆ ರೊಮ್ಯಾಂಟಿಕ್ ಸೀನ್ ನೋಡಲು ಫ್ಯಾಮಿಲಿಯಲ್ಲಿ ಅನುಮತಿ ಇಲ್ಲವಂತೆ. ಇನ್ನೂ ಪತ್ನಿ ಇದೆಲ್ಲಾ ಓಕೆ ನಾ? 

Tap to resize

Latest Videos

ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ನಟ ರಕ್ಷಿತ್ ಶೆಟ್ಟಿ ವಿರುದ್ಧ FIR ದಾಖಲು; ಹಾಡು ಕದ್ದಿದ್ದು ನಿಜವೇ?

ಸಾಧ್ಯವೇ ಇಲ್ಲ ಅಂತಾರೆ ಇಮ್ರಾನ್. ಇತ್ತೀಚಿಗೆ ನಡೆದ ಖಾಸಗಿ ಸಂದರ್ಶನದಲ್ಲಿ ಇಮ್ರಾನ್ ಹಶ್ಮಿ ರೊಮ್ಯಾನ್ಸ್‌ ಸೀನ್‌ ಅಥವಾ ಕಿಸ್ಸಿಂಗ್ ಸೀನಸ್‌ ನೋಡಿ ಪತ್ನಿ ಹೇಗೆ ರಿಯಾಕ್ಟ್ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದಾಗ. ಆಕೆ ಸಿಟ್ಟು ಮಾಡಿಕೊಳ್ಳುತ್ತಾರೆ ಆದರೆ ಅದನ್ನು ಕಡಿಮೆ ಮಾಡಲು ನಾನು ದುಬಾರಿ ಅಥವಾ ಟ್ರೆಂಡ್‌ನಲ್ಲಿರುವ ಬ್ಯಾಗ್‌ಗಳನ್ನು ಗಿಫ್ಟ್‌ ಆಗಿ ನೀಡುವೆ. ಆಕೆ ತುಂಬಾ ಖುಷಿಯಾಗಿ ಬಿಡುತ್ತಾಳೆ ಎಂದಿದ್ದಾರೆ. 

ಹಿಂದು ಹುಡುಗನ ಕೈ ಹಿಡಿದ ಮೇಲೆ ಕೊರಗಜ್ಜನ ಕ್ಷೇತ್ರಕ್ಕೆ ಕಾಲಿಟ್ಟ ನಟಿ ಕತ್ರಿನಾ ಕೈಫ್; ಕೋಲಾ ನೋಡಿದ್ರಾ?

'ನಾವು 18 ವರ್ಷಗಳಿಂದ ಖುಷಿಯಾಗಿ ಇದ್ದೀವಿ. ನನ್ನ ಪತ್ನಿಯನ್ನು ಗೌರವಿಸುತ್ತೀನಿ ಆಕೆಯನ್ನು ಎಂದೂ ಬಿಡುವುದಿಲ್ಲ. ಸೋಷಿಯಲ್ ಮೀಡಿಯಾ ಬರುವ ಮುನ್ನ ಜನರಿಗೆ ಆನ್‌ಸ್ಕ್ರೀನ್‌ ಮತ್ತು ಆಫ್‌ಸ್ಕ್ರೀನ್‌ ಎರಡೂ ಬೇರೆ ವ್ಯಕ್ತಿತ್ವ ಇರುತ್ತದೆ ಎಂದು ಗೊತ್ತಿರಲಿಲ್ಲ ಹೀಗಾಗಿ ನನ್ನನ್ನು ಪಾತ್ರದ ರೀತಿ ನೋಡುತ್ತಿದ್ದರು ಅಲ್ಲದೆ ನಾನು ಮದುವೆಯಾಗಿರುವೆ ಎಂದು ಅದೆಷ್ಟೋ ಮಂದಿಗೆ ಗೊತ್ತಿರಲಿಲ್ಲ. ನನ್ನ ಪತ್ನಿ ಸದಾ ಬೈಯುತ್ತಾಳೆ ಆದರೆ ಆಕೆ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾಳೆ. ಆಕೆ ಸಪೋರ್ಟ್‌ ಇಲ್ಲದೆ ನಾನು ಈ ರೀತಿ ಪಾತ್ರಗಳನ್ನು ಮಾಡಲು ಆಗುತ್ತಿರಲಿಲ್ಲ' ಎಂದು ಪತ್ನಿ ಬಗ್ಗೆ ಇಮ್ರಾನ್ ಹಶ್ಮಿ ಮಾತನಾಡಿದ್ದರು. 

click me!