JAWAN: ಶಾರುಖ್​ಗಾಗಿ 16 ವರ್ಷದ ರೂಲ್ಸ್​ ಬ್ರೇಕ್​- ಬಿಕಿನಿಯಲ್ಲಿ ನಟಿ ನಯನತಾರಾ?

Published : Mar 28, 2023, 04:28 PM IST
JAWAN: ಶಾರುಖ್​ಗಾಗಿ 16 ವರ್ಷದ ರೂಲ್ಸ್​ ಬ್ರೇಕ್​- ಬಿಕಿನಿಯಲ್ಲಿ ನಟಿ ನಯನತಾರಾ?

ಸಾರಾಂಶ

16 ವರ್ಷಗಳಿಂದ ಸೀದಾ ಸದಾ ಬಟ್ಟೆ ತೊಟ್ಟು ಅದರಲ್ಲಿಯೇ ಗ್ಲಾಮರಸ್​ ಆಗಿ ಕಾಣಿಸಿಕೊಳ್ಳುತ್ತಿರುವ ನಟಿ ನಯನತಾರಾ ಇದೇಮೊದಲ ಬಾರಿಗೆ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.   

ತಮಿಳು ಚಿತ್ರರಂಗದ ಸ್ಟಾರ್ ನಟಿ ಎಂದೇ ಗುರುತಿಸಿಕೊಂಡಿರುವ ನಟಿ ನಯನತಾರಾ (Nayanthara), ತಮಿಳು ಮಾತ್ರವಲ್ಲದೇ, ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದು ಸೌತ್ ಲೇಡಿ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ.  ಬೆಂಗಳೂರಿನಲ್ಲಿ ಜನಿಸಿರೂ ಈ ನಟಿ  2003 ರಲ್ಲಿ ಮಲಯಾಳಂ ಚಿತ್ರದಿಂದ ಸಿನಿಪಯಣ ಆರಂಭಿಸಿದ್ದರು.  ಇದೀಗ ದಕ್ಷಿಣ ಸಿನಿಮಾ ಇಂಡಸ್ಟ್ರಿಯ ದುಬಾರಿ ನಟಿ ಎನಿಸಿಕೊಂಡಿರೋ ನಯನತಾರಾ ಇತ್ತೀಚೆಗಷ್ಟೇ ಸರೋಗಸಿ ಮೂಲಕ ಅವಳಿ ಮಕ್ಕಳ ಅಮ್ಮನಾಗಿದ್ದಾರೆ. ನಟ ವಿಘ್ನೇಶ್​ ಅವರನ್ನು ಮದುವೆಯಾದ ಮೇಲೂ ಅಷ್ಟೇ ಬೇಡಿಕೆ ಉಳಿಸಿಕೊಂಡಿರುವ ನಟಿ ನಯನತಾರಾ ಹೆಚ್ಚು ಮಂದಿಗೆ ಇಷ್ಟವಾಗಲು ಕಾರಣ ಅವರ ಡ್ರೆಸ್ಸಿಂಗ್​ ಸೆನ್ಸ್​. ಹೆಚ್ಚಿನ ದೇಹ ಪ್ರದರ್ಶನಕ್ಕೆ ಆಸ್ಪದ ಕೊಡದೇ ಸಾದಾ ಸೀದೆ ಬಟ್ಟೆ ತೊಟ್ಟು ಅಪ್ಪಟ ಭಾರತೀಯಳಂತೆ ಕಾಣಿಸಿಕೊಳ್ಳುವುದೇ ಹೆಚ್ಚು ಈ ನಟಿ. ಅದಕ್ಕಾಗಿಯೇ ಈಕೆಗೆ ಇದುವರೆಗೂ ಗೌರವ ಸ್ವಲ್ಪ ಹೆಚ್ಚಾಗಿಯೇ ಇತ್ತು. ಆದರೆ ಇದೀಗ ತಮಗೆ ತಾವು ವಿಧಿಸಿಕೊಂಡಿರುವ ಈ ರೂಲ್ಸ್​ ಅನ್ನು ನಯನತಾರಾ ಬ್ರೇಕ್​  ಮಾಡುತ್ತಿದ್ದಾರೆ. 

ಮೊದಲ ಬಾರಿಗೆ ನಯನತಾರಾ ಹಿಂದಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಆಕ್ಷನ್ ಕಟ್ ಹೇಳುತ್ತಿರುವ ನಟ ಶಾರುಖ್​ ಖಾನ್​ ಅಭಿನಯದ ಜವಾನ್​ ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ನಟ ವಿಜಯ್ ಸೇತುಪತಿ (Vijay Setupathi)ಕೂಡ ಈ ಚಿತ್ರದಲ್ಲಿದ್ದಾರೆ.  ಜವಾನ್‌ ಚಿತ್ರದ ದೃಶ್ಯಗಳು ಇತ್ತೀಚೆಗಷ್ಟೇ ಲೀಕ್​ ಆಗಿದ್ದವು. ಇದರಲ್ಲಿ  ಶಾರುಖ್ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.  ಒಂದು ದೃಶ್ಯದಲ್ಲಿ ಉದ್ದ ದಾಡಿ ಬಿಟ್ಟಿರುವ ಶಾರುಖ್ ಅವರ ಸಾಲ್ಟ್ ಅಂಡ್ ಪೆಪರ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದ ಶಾರುಖ್ ಲೀಕ್ ಆದ ದೃಶ್ಯದಲ್ಲಿ ಫುಲ್ ಮಾಸ್ ಆಗಿ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. 

ಲೇಡಿ ಸೂಪರ್‌ಸ್ಟಾರ್ ಮಕ್ಕಳನ್ನು ನೋಡುವ ಭಾಗ್ಯ ಅಭಿಮಾನಿಗಳಿಗಿಲ್ಲ...

ಈ ಚಿತ್ರ ಬಲು ನಿರೀಕ್ಷೆ ಮೂಡಿಸಿರುವ ಬೆನ್ನಲ್ಲೇ ಈಗ  ನಯನತಾರಾ ಅವರ ಬಗ್ಗೆ ಬಹುದೊಡ್ಡ ಅಪ್​ಡೇಟ್​ ಹೊರಬಂದಿದೆ. ಈ ಮೊದಲು ಪಾತ್ರವನ್ನು ನೋಡಿ  ಆಯ್ಕೆ ಮಾಡಿಕೊಳ್ಳುತ್ತಿದ್ದ ನಟಿ ಈ ಬಾರಿಯೂ ಹಾಗೆಯೇ ಮಾಡಿದ್ದಾರೆ, ಆದರೆ ಒಂದೇ ಒಂದು ವ್ಯತ್ಯಾಸವೆಂದರೆ, ತಮ್ಮ ಇಷ್ಟೂ ವರ್ಷಗಳ ರೂಲ್ಸ್​ ಬ್ರೇಕ್​  ಮಾಡಿದ್ದಾರೆ.  ಶಾರುಖ್ ಖಾನ್ (Shah Rukh Khan) ಅವರ ಚಿತ್ರಕ್ಕಾಗಿ ತಾವು 16 ವರ್ಷಗಳಿಂದ ಮಾಡಿಕೊಂಡಿದ್ದ ರೂಲ್ಸ್ ಇದಾಗಿದೆ. ಜವಾನ್ ಸಿನಿಮಾದಲ್ಲಿ ನಟಿ ನಯನತಾರಾ ಕೂಡ ಗ್ಲಾಮರಸ್​ ಆಗಿ ಕಾಣಿಸಿಕೊಳ್ಳುವ ಹಿನ್ನೆಲೆಯಲ್ಲಿ   ನಯನತಾರಾ ಬಿಕಿನಿ ತೊಡಲಿದ್ದಾರೆ ಎನ್ನಲಾಗಿದೆ. ಸಿನಿಮಾಗಾಗಿ ಬಿಕಿನಿ ತೊಡಲು ನಟಿ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.
 
ನಯನತಾರಾ ಕೂಡ ತುಂಬಾ ಯೋಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.  ಅಂದಹಾಗೆ ನಟಿ,  ಆರಂಭದಲ್ಲಿ ಗ್ಲಾಮರಸ್ (Glamorous) ಪಾತ್ರಗಳಿಂದಲೇ ಹೆಚ್ಚು ಪ್ರಚಲಿತಕ್ಕೆ ಬಂದರು. ಕಳೆದ ಕೆಲವು ವರ್ಷಗಳಿಂದ ಪಾತ್ರಗಳಿಗೆ ಮಹತ್ವ ನೀಡುವ ಅವರು ಮಹಿಳಾ ಪ್ರಧಾನ ಪಾತ್ರಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಗ್ಲಾಮರಸ್ ಆಗಿಯೂ ಅವರು ಕಾಣಿಸಿಕೊಳ್ಳುತ್ತಿಲ್ಲ. ಆದರೆ ಹಿಂದಿಯ ಜವಾನ್‌ ಸಿನಿಮಾಕ್ಕಾಗಿ ನಯನತಾರಾ, ಮತ್ತೆ ಗ್ಲಾಮರಸ್ ಆಗಿ ಮಿಂಚುತ್ತಿದ್ದಾರೆ ಎನ್ನಲಾಗಿದೆ.

ಶಾರುಖ್ ಖಾನ್ 'ಜವಾನ್' ಚಿತ್ರದ ಪ್ರಮುಖ ದೃಶ್ಯಗಳು ಲೀಕ್; ನೆಕ್ಸ್ಟ್ ಲೆವೆಲ್ ಎಂದ ಫ್ಯಾನ್ಸ್
  
ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ಬರಲಿರುವ 'ಜವಾನ್' (Jawan) ಸಿನಿಮಾದಲ್ಲಿ ನಟಿಸಲು ನಯನತಾರಾ ಭರ್ತಿ 10 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವುದಕ್ಕೆ ನಯನತಾರಾ ಅವರು 5 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಆದರೆ 'ಜವಾನ್‌' 10 ಕೋಟಿ ರೂ. ಪಡೆದಿದ್ದಾರೆ ಎನ್ನುವ ಸುದ್ದಿಯೂ ಇದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?