8 ತಿಂಗಳಲ್ಲಿ ನನ್ನ ಜೀವನ ಬದಲಾಗಿದೆ; Myositis ಕಾಯಿಲೆ ಬಗ್ಗೆ ಮೌನ ಮುರಿದ ಸಮಂತಾ

By Vaishnavi Chandrashekar  |  First Published Mar 28, 2023, 1:28 PM IST

ಅಭಿಮಾನಿಗಳು, ನಿರ್ದೇಶಕರು ಹಾಗೂ ನಿರ್ಮಾಪಕು ಕೊಟ್ಟ ಪ್ರೀತಿಯಿಂದ ನಾನು ಚೇತರಿಸಿಕೊಂಡು ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿರುವೆ ಎಂದು ಸಮಂತಾ ಹೇಳಿದ್ದಾರೆ. 
 


ಟಾಲಿವುಡ್ ಬ್ಯೂಟಿ ಸಮಂತಾ ಮತ್ತು ಅಲ್ಲು ಅರ್ಜುನ್ ಪುತ್ರಿ ಅಭಿನಯಿಸಿರುವ ಶಾಕುಂತಲಂ ಸಿನಿಮಾ ಏಪ್ರಿಲ್ 14ರಂದು ಬಿಡುಗಡೆ ಕಾಣಲು ಸಜ್ಜಾಗಿದೆ. ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿರುವ ಸಮಂತಾ ತಮ್ಮ ಆರೋಗ್ಯದ ಬಗ್ಗೆ ಹಂಚಿಕೊಂಡಿದ್ದಾರೆ.

'Myositis ಎಂಬ ಅಪರೂಪದ ಕಾಯಿಲೆಯಿಂದ ಚೇತರಿಸಿಕೊಳ್ಳುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ಕೆಲಸ ಮಾಡಬೇಕು ಅನ್ನೋ ಚಲ ನನ್ನಲ್ಲಿ ಹೆಚ್ಚಿರುವ ಕಾರಣ ಹೆಚ್ಚಿನ ದಿನಗಳ ಕಾಲ ಸುಮ್ಮನೆ ಕುಳಿತುಕೊಳ್ಳಲು ಮನಸ್ಸು ಇಲ್ಲ. ಆರೋಗ್ಯ ವಿಚಾರದಲ್ಲಿ ಪ್ರತಿ ಕ್ಷಣ ಹೊರಾಟ ಮಾಡುತ್ತಿದ್ದೆ ಅದು ಕೆಲಸ ಮಾಡಬೇಕು ಎಂದು. ನಾನು ಸಹಿ ಮಾಡಿದ ಪ್ರಾಜೆಕ್ಟ್‌ ನಿರ್ದೇಶಕರು ಮತ್ತು ನಿರ್ಮಾಪಕರು ನನ್ನ ಕಷ್ಟ ನನ್ನ ನೋವನ್ನು ಅರ್ಥ ಮಾಡಿಕೊಂಡು ಸಹಾಯ ಮಾಡಿದರು. ಸೆಟ್‌ನಲ್ಲಿ ಪೇಶೆಂಟ್ ಇರುವ ಪ್ರತಿಯೊಂದು ದಿನವೂ ವಿಭಿನ್ನವಾಗಿರುತ್ತದೆ ಚಾಲೆಂಜಿಂಗ್ ಅಗಿರುತ್ತದೆ ಒಂದು ದಿನ ತುಂಬಾ ಚೆನ್ನಾಗಿರುತ್ತದೆ ಮತ್ತೊಂದು ದಿನ ತುಂಬಾ ಕಷ್ಟ ಹೇಳಿಕೊಳ್ಳಲು ಆಗದಷ್ಟು ಕಷ್ಟ ಇರುತ್ತದೆ.  ಈ ಸಮಯದಲ್ಲಿ ನನಗೆ ಸಪೋರ್ಟ್‌ ಬೇಕು ಅದನ್ನು ನಮ್ಮ ತಂಡ ಪ್ರೀತಿಯಿಂದ ಕೊಟ್ಟಿದೆ. ಜನರ ಪ್ರೀತಿ ನೋಡಿ ನಾನು ಈ ಕಾಯಿಲೆಯನ್ನು ಧೈರ್ಯದಿಂದ ಹೋರಾಡಲು ಸಾಧ್ಯವಾಗಿದ್ದು. ಇದಕ್ಕಿಂತ ದೊಡ್ಡ ಚಾಲೆಂಜ್‌ ಜೀವನದಲ್ಲಿ ನನಗೆ ಬೇಡ' ಎಂದು ಸಮಂತಾ ಪಿಕ್‌ವಿಲ್ಲ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Tap to resize

Latest Videos

ಸಮಂತಾ 'ಊ ಅಂಟಾವಾ ಮಾವ' ಒಂದು ಹಾಡಾ?; ಗಾಯಕಿ ಎಲ್‌ ಆರ್‌ ಈಶ್ವರಿ ಗರಂ

'ಮೊದಲೇ ಜೀವನದಲ್ಲಿ ತುಂಬಾ ಕಷ್ಟಗಳನ್ನು ನೋಡಿರುವೆ ಇಷ್ಟೇ ಸಾಕು ಅಂತ ನಿರ್ಧಾರ ಮಾಡಿದ ಆ ಸಮಯದಲ್ಲಿ Myositis ಎಂಬ ಅಪರೂಪದ ಕಾಯಿಲೆ ಬಂತು. ಕಳೆದ 8 ತಿಂಗಳಗಳಲ್ಲಿ ಜೀವನ ಅಂದ್ರೆ ಏನು ಅಂತ ಈ Myositis  ತೋರಿಸಿಬಿಟ್ಟಿದೆ' ಎಂದು ಸಮಂತಾ ಹೇಳಿದ್ದಾರೆ.

'ಶಕುಂತಲಾ ಬಗ್ಗೆ ಜನರಿಗೆ ಚೆನ್ನಾಗಿ ಗೊತ್ತಿದೆ. ಶಕುಂತಲಾ 5ನೇ ಶತಮಾನದ ವ್ಯಕ್ತಿ ಆಗಿದ್ದರೂ ಈಗಿನ ಜನರೇಷನ್‌ ವ್ಯಕ್ತಿಯಾಗಿರುವ ನನಗೆ ಕನಕ್ಟ್‌ ಆಗಿದೆ ಅಂದ್ರೆ ಖಂಡಿತಾ ವೀಕ್ಷಕರು ಇಷ್ಟ ಪಡುತ್ತಾರೆ. ಅಕೆ ಸದಾ ಪ್ರೀತಿ ಬಯಸುತ್ತಿದ್ದಳು, ಇಂಡಿಪೆಂಡೆಂಟ್ ಆಗಿದ್ದಳು..ಹೀಗಾಗಿ ಪ್ರತಿಯೊಬ್ಬರಿಗೂ ಸಿನಿಮಾ ಇಷ್ಟವಾಗುತ್ತದೆ. ಕಾಡಿನ ಸೆಟ್‌ ಹಾಕಿದ್ದರು ಹೊರತು ಪಡಿಸಿದರೆ ಪ್ರತಿಯೊಬ್ಬರಿಗೂ ಈಗಿನ ಕಾಲದ ಸಿನಿಮಾ ರೀತಿ ಅನಿಸುತ್ತದೆ. ಆರಂಭದಲ್ಲಿ ನಾನು ಶಕುಂತಲಾ ಪಾತ್ರ ಮಾಡಲು ಆಗುವುದಿಲ್ಲ ಅಂದುಕೊಂಡೆ ಆದರೆ ಚೆನ್ನಾಗಿ ಮೂಡಿ ಬಂದಿದೆ. ಈ ಸಿನಿಮಾ ಮಾತ್ರವಲ್ಲ ಅನೇಕ ಸಿನಿಮಾಗಳ ಪಾತ್ರ ಕಷ್ಟ ಎಂದು ಹೇಳಿ ಚೆನ್ನಾಗಿ ಮಾಡಿರುವೆ. ಆರಂಭದಲ್ಲಿ ಯಾಕೆ ನಾನು ಇಲ್ಲ ಎಂದು ಹೇಳುವೆ ಅಂದ್ರೆ ಸಾಮಾನ್ಯವಾಗಿ ಒಪ್ಪಿಕೊಂಡಿರುವ ಪಾತ್ರವನ್ನೇ ಒಪ್ಪಿಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ ಹೀಗಾಗಿ ಸೆಲ್ಫ್‌ ಡೌಟ್‌ ಇರುತ್ತದೆ. ಕಲಾವಿದೆ ಅಂದ್ಮೇಲೆ ಪ್ರತಿ ವರ್ಷವೂ ನಾವು ಬದಲಾಗುತ್ತೀವಿ' ಎಂದಿದ್ದಾರೆ ಸಮಂತಾ.

ನೋವು ನಷ್ಟ ಸಂಕಟ; ಕಷ್ಟ ದಿನಗಳಿಂದ ಹೊರ ಬಂದಿದ್ದು ಹೇಗೆಂದು ಹಂಚಿಕೊಂಡ ಸಮಂತಾ

ಮೈಯೋಸಿಟಿಸ್ ಎಂದರೇನು?
ಮೈಯೋಸಿಟಿಸ್ ಸ್ವಯಂ ನಿರೋಧಕ ಅಸ್ವಸ್ಥತೆಯಾಗಿದೆ. ಆದರೆ ಇದು ಒಂದೇ ರೋಗವಲ್ಲ, ಆದರೆ ಅನೇಕ ರೋಗಗಳ ಗುಂಪು. ಇದು ದೇಹವನ್ನು (Body) ನಿಧಾನವಾಗಿ ಒಡೆಯುತ್ತದೆ ಮತ್ತು ದೊಡ್ಡ ಸಮಸ್ಯೆ ಎಂದರೆ ವೈದ್ಯರು ಇದಕ್ಕೆ ಯಾವುದೇ ನಿರ್ಧಿಷ್ಟ ಚಿಕಿತ್ಸೆಯನ್ನು ಹೊಂದಿಲ್ಲ. ಮೈಯೋಸಿಟಿಸ್, ಇದು ನಿಮ್ಮ ರೋಗನಿರೋಧಕ ವ್ಯವಸ್ಥೆಯು ಸ್ನಾಯುಗಳ ಮೇಲೆ ದಾಳಿ ಮಾಡುವ ಸ್ಥಿತಿಯಾಗಿದೆ. ಸ್ನಾಯುಗಳಲ್ಲಿ ಉರಿಯೂತಕ್ಕೆ ಕಾರಣವಾಗುವ ಒಂದು ಅಥವಾ ಹೆಚ್ಚಿನ ಬಹು ಪರಿಸ್ಥಿತಿಗಳಿಂದ ಈ ರೋಗವು ಉಂಟಾಗಬಹುದು. ಇದರ ಮುಖ್ಯ ಲಕ್ಷಣಗಳು ಸ್ನಾಯು ನೋವು ಮತ್ತು ದೌರ್ಬಲ್ಯ, ಇದು ಕಾಲಾನಂತರದಲ್ಲಿ ಪರಿಸ್ಥಿತಿ ಕೆಡುಕಾಗುತ್ತಾ ಹೋಗುತ್ತದೆ. ಈ ಲಕ್ಷಣಗಳನ್ನು ಹೊಂದಿದವರು ಸಾಕಷ್ಟು ಮುಗ್ಗರಿಸಬಹುದು ಅಥವಾ ಬೀಳಬಹುದು ಅಥವಾ ನಡೆದಾಡಿದ ನಂತರವೂ ಸುಸ್ತಾಗಬಹುದು.
 
WebMD ಪ್ರಕಾರ, ಡರ್ಮಾಟೋಮೈಯೋಸಿಟಿಸ್, ಪಾಲಿಮೈಯೋಸಿಟಿಸ್ ಮತ್ತು ಇನ್ಕ್ಲೂಷನ್ ಬಾಡಿ ಮೈಯೋಸಿಟಿಸ್‌ನಂತಹ ಉರಿಯೂತದ ಪರಿಸ್ಥಿತಿಗಳು ತೀವ್ರವಾದ ಮೈಯೋಸಿಟಿಸ್‌ಗೆ ಕಾರಣವಾಗಬಹುದು. ಲೂಪಸ್, ಸ್ಕ್ಲೀರೋಡರ್ಮಾ ಮತ್ತು ರುಮಟಾಯ್ಡ್ ಸಂಧಿವಾತ ಸಹ ಈ ಸ್ಥಿತಿಯನ್ನು ಉಂಟುಮಾಡಬಹುದು. ಕೆಲವು ಔಷಧಿಗಳು ಮತ್ತು ತೀವ್ರವಾದ ದೈಹಿಕ ಗಾಯಗಳ (Injury) ಜೊತೆಗೆ ವೈರಲ್ ಸೋಂಕುಗಳು (Virus) ಸಹ ಈ ಸ್ಥಿತಿಗೆ ಕಾರಣವಾಗಬಹುದು.

click me!