ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಪತ್ನಿ ಅಲಿಯಾ ಮತ್ತೆ ಸಿಡಿದೆದ್ದಿದ್ದಾರೆ. ಪತಿ ಮತ್ತು ಅವರ ಕುಟುಂಬದವರು ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಅಲಿಯಾ ಮತ್ತೆ ಆರೋಪಿಸಿದ್ದಾರೆ.
ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಪತ್ನಿ ಅಲಿಯಾ ಮತ್ತೆ ಸಿಡಿದೆದ್ದಿದ್ದಾರೆ. ಪತಿ ಮತ್ತು ಅವರ ಕುಟುಂಬದವರು ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಅಲಿಯಾ ಮತ್ತೆ ಆರೋಪಿಸಿದ್ದಾರೆ. ನವಾಜುದ್ದೀನ್ ಸಿದ್ದಿಕಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲಾಗಿದ್ದು ಈ ಪ್ರಕರಣ ಸದ್ಯ ಕೋರ್ಟ್ನಲ್ಲಿದೆ. ಸಿದ್ಧಿಕಿ ಪತ್ನಿ ಆಲಿಯಾ ನವಾಜುದ್ದೀನ್ ವಿರುದ್ಧ ನಿರಂತರ ಆರೋಪ ಮಾಡುತ್ತಿದ್ದಾರೆ. ಆಲಿಯಾ ಪರ ವಕೀಲರು ನವಾಜುದ್ದೀನ್ ಹಾಗೂ ಅವರ ಕುಟುಂಬ ಏನೆಲ್ಲ ಹಿಂಸೆ ಮಾಡಿದೆ ಎಂದು ವಿವರಿಸಿದ್ದಾರೆ. ವಕೀಲರ ಹೇಳಿಕೆ ಈಗ ಅಚ್ಚರಿ ಮೂಡಿಸಿದೆ.
ಆಲಿಯಾ ಸಿದ್ದಿಕಿ ಅವರ ವಕೀಲರು, ನಟ ಮತ್ತು ಅವರ ಕುಟುಂಬ ಸದಸ್ಯರು ತಮ್ಮ ಕಕ್ಷಿದಾರರಿಗೆ ಕಳೆದ ವಾರದಿಂದ 'ಆಹಾರ, ಹಾಸಿಗೆ, ಸ್ನಾನ ಮಾಡಲು ಸ್ನಾನಗೃಹ' ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಶ್ರೀ 'ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬ ಸದಸ್ಯರು ನನ್ನ ಕಕ್ಷಿದಾರರಾದ ಆಲಿಯಾ ಸಿದ್ದಿಕಿ ಅವರನ್ನು ಮನೆಯಿಂದ ಹೊರಹಾಕಲು ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದಾರೆ. ಆಕೆಯ ವಿರುದ್ಧ ಕ್ರಿಮಿನಲ್ ದೂರು ಕೂಡ ದಾಖಲಿಸಿದ್ದಾರೆ. ಪೊಲೀಸರ ಮೂಲಕ ಅವರು ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಪ್ರತಿದಿನ ರಾತ್ರಿ ಆಕೆಯನ್ನು ಪೊಲೀಸ್ ಠಾಣೆಗೆ ಕರೆಯುತ್ತಿದ್ದರು' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸ್ ಇಲಾಖೆಯ ಕಾರ್ಯವೈಖರಿ ಮತ್ತು ವೈಫಲ್ಯಗಳನ್ನು ನೇರವಾಗಿ ಹೇಳಿಲ್ಲವಾದರೂ, ಪೊಲೀಸ್ ಅಧಿಕಾರಿಗಳು ತನ್ನ ಕಕ್ಷಿದಾರರಿಗೆ ಯಾವುದೇ ರಕ್ಷಣೆ ನೀಡಿಲ್ಲ ಎಂದು ಬಹಿರಂಗ ಪಡಿಸಿದ್ದಾರೆ. ಆಲಿಯಾ ನೀಡಿದ ಐಪಿಸಿ ಸೆಕ್ಷನ್ 509ರ ಅಡಿಯಲ್ಲಿ ನೀಡಿದ ದೂರಿನ ಮೇರಿಗೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.
'ರಿಷಬ್ ಶೆಟ್ಟಿ ಮೇಲೆ ನನಗೆ ಹೊಟ್ಟೆಕಿಚ್ಚು' ಎಂದ ನವಾಝುದ್ದೀನ್ ಸಿದ್ದಿಕಿ; ಕಾಂತಾರ ಶಿವನ ರಿಯಾಕ್ಷನ್ ವೈರಲ್
ವಕೀಲ ರಿಜ್ವಾನ್ ಹೇಳಿಕೆಯಲ್ಲಿ, 'ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬ ಸದಸ್ಯರು ಕಳೆದ ಏಳು ದಿನಗಳಲ್ಲಿ ತನ್ನ ಕ್ಲೈಂಟ್‌ಗೆ ಯಾವುದೇ ಆಹಾರ, ಹಾಸಿಗೆ ಮತ್ತು ಸ್ನಾನ ಮಾಡಲು ಸ್ನಾನಗೃಹವನ್ನು ನೀಡಿಲ್ಲ ಎಂದಿದ್ದಾರೆ. 'ಅವರು (ಸಿದ್ಧಿಕಿ ಕುಟುಂಬ) ನನ್ನ ಕ್ಲೈಂಟ್ ಸುತ್ತಲೂ ಅನೇಕ ಪುರುಷ ಅಂಗರಕ್ಷಕರನ್ನು ನಿಯೋಜಿಸಿದ್ದಾರೆ ಮತ್ತು ಹಾಲ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿದ್ದಾರೆ, ಅಂಥ ಜಾಗದಲ್ಲಿ ನನ್ನ ಕ್ಲೈಂಟ್ ತನ್ನ ಅಪ್ರಾಪ್ತ ಮಕ್ಕಳೊಂದಿಗೆ ಇದ್ದಾರೆ' ಎಂದು ಅವರು ಬಹಿರಂಗಪಡಿಸಿದರು.
ಮಂಗಳಮುಖಿಯಾಗಿ ಬದಲಾದ ಖ್ಯಾತ ನಟ; ಯಾರೆಂದು ಗುರುತಿಸಬಲ್ಲಿರಾ?
‘ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧದ ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧ ಪಟ್ಟ ಹಾಗೆ ಆಲಿಯಾರಿಂದ ಸಹಿ ಪಡೆಯಬೇಕಿತ್ತು ಆದರೆ ಅದಕ್ಕೂ ಅವಕಾಶ ಸಿಗಲಿಲ್ಲ. ಆದರೂ ನಮ್ಮ ತಂಡ ಸಾಹಸ ಮಾಡಿ ಸಹಿ ಪಡೆದಿದೆ. ಆಲಿಯಾ ರಕ್ಷಣೆಗೆ ಯಾವುದೇ ಪೊಲೀಸ್ ಅಧಿಕಾರಿ ಬರಲಿಲ್ಲ’ ಎಂದು ಆಲಿಯಾ ಪರ ವಕೀಲರು ದೂರಿದ್ದಾರೆ.