ನಟಿ ಐಶ್ವರ್ಯ ರೈ ಅವರನ್ನು ತಾತ್ಸಾರ ಮಾಡುತ್ತಿರುವ ಅಮಿತಾಭ್ ಮೊಮ್ಮಗಳು ನವ್ಯಾ ನವೇಲಿ ಈಗ ನೀಡಿರುವ ಹೇಳಿಕೆ ಐಶ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಆಕೆ ಹೇಳಿದ್ದೇನು?
ಕೆಲ ತಿಂಗಳಿನಿಂದ ನಟಿ ಐಶ್ವರ್ಯ ರೈ ಬಚ್ಚನ್ ಮತ್ತು ಅಭಿಷೇಕ್ ನಡುವಿನ ವಿಚ್ಛೇದನ ಸುದ್ದಿ ಸದ್ದು ಮಾಡುತ್ತಲೇ ಇದೆ. ಅಷ್ಟಕ್ಕೂ ಐಶ್ವರ್ಯ , ಬಚ್ಚನ್ ಕುಟುಂಬದ ಮುದ್ದಿನ ಸೊಸೆ. ತಮ್ಮ ಸೊಸೆಯ ಬಗ್ಗೆ ಇದಾಗಲೇ ಅಮಿತಾಭ್ ಮತ್ತು ಜಯಾ ಅವರು ಹಾಡಿ ಹೊಗಳಿದ್ದಾರೆ. ಆದರೆ ಅಸಲಿಗೆ ಅವರ ಕುಟುಂಬದಲ್ಲಿ ಎಲ್ಲರಿಗೂ ಐಶ್ವರ್ಯ ಕಂಡ್ರೆ ಇಷ್ಟನಾ ಎನ್ನುವ ಪ್ರಶ್ನೆಗೆ ಇಲ್ಲ ಎನ್ನುವ ಉತ್ತರವೂ ಇದೆ. ಈ ಬಗ್ಗೆ ಬಹಳ ಹಿಂದಿನಿಂದಲೂ ಗುಸುಗುಸು ಸುದ್ದಿಯೇ ಇದೆ. ಅದೇನೆಂದರೆ, ಅಮಿತಾಭ್ ಬಚ್ಚನ್ ಅವರ ಪುತ್ರಿ ಶ್ವೇತಾ ಅವರಿಗೆ ಐಶ್ವರ್ಯ ರೈ ಕಂಡರೆ ಹೊಟ್ಟೆ ಉರಿ ಎನ್ನುವುದು. ಅವರಿಬ್ಬರ ನಡುವೆ ಏನೋ ಸರಿಯಾಗಿಲ್ಲ ಎನ್ನುವ ಚರ್ಚೆ ಮೊದಲಿನಿಂದಲೂ ಇದೆ. ಅದ್ಯಾಕೆ ಎಂದರೆ, ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾರನ್ನು ಮದುವೆಯಾಗುವುದನ್ನು ಶ್ವೇತಾ ಬಯಸಿರಲಿಲ್ಲವಂತೆ. ಅಭಿಷೇಕ್ ಅವರು ತಮ್ಮ ಮಾಜಿ ಗೆಳತಿ ಕರಿಷ್ಮಾ ಕಪೂರ್ ಅವರನ್ನು ಮದುವೆಯಾಗಬೇಕು ಎನ್ನುವುದು ಅವರ ಆಸೆಯಾಗಿತ್ತು. ಇವರಿಬ್ಬರ ಸಂಬಂಧ ಅವರಿಗೆ ಇಷ್ಟವಿತ್ತು. ಏಕೆಂದರೆ ಶ್ವೇತಾ ಯಾವಾಗಲೂ ಕರಿಷ್ಮಾ ಅವರನ್ನು ಪರಿಪೂರ್ಣ ಬಚ್ಚನ್ ಬಹು ಎಂದು ಪರಿಗಣಿಸುತ್ತಿದ್ದರು. ಅಭಿಷೇಕ್ ಕಪೂರ್ ಕುಟುಂಬದ ಅಳಿಯನಾಗಬೇಕೆಂದು ಅವರು ಬಯಸಿದ್ದರು. ಅಭಿಷೇಕ್ ಅವರು ಐಶ್ವರ್ಯರನ್ನು ಮದುವೆಯಾಗುವ ಪಟ್ಟು ಹಿಡಿದಾಗ, ಆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನೆಯವರ ಮೇಲೂ ಶ್ವೇತಾ ಸಾಕಷ್ಟು ಒತ್ತಡ ಹೇರಿದ್ದರು ಎನ್ನಲಾಗಿದೆ. ಅದೇ ಕಾರಣಕ್ಕೆ ಐಶ್ವರ್ಯರನ್ನು ಕಂಡರೆ ಅವರಿಗೆ ಆಗಿ ಬರುವುದಿಲ್ಲ ಎನ್ನುವ ಮಾತಿದೆ.
ಇತ್ತೀಚೆಗೆ, ಅಮಿತಾಭ್ ಬಚ್ಚನ್ ಮೊಮ್ಮಗಳು ಅಂದ್ರೆ ಶ್ವೇತಾ ಅವರ ಪುತ್ರಿ ನವ್ಯಾ ನವೇಲಿ ಕಾಸ್ಮೆಟಿಕ್ ಬ್ರಾಂಡ್ L'Oréal ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಅದರ ವಿಡಿಯೋಗಳನ್ನು ಐಶ್ವರ್ಯ ರೈ ಅವರನ್ನು ಬಿಟ್ಟು ಉಳಿದವರಿಗೆಲ್ಲಾ ಟ್ಯಾಗ್ ಮಾಡಿದ್ದರು! ಆಗಲೇ ನವ್ಯಾಗೂ ಐಶ್ವರ್ಯ ಅವರನ್ನು ಕಂಡರೆ ಆಗುತ್ತಿಲ್ಲ ಎಂದೇ ಹೇಳಲಾಗಿತ್ತು. ಇದಕ್ಕೀಗ ಪುಷ್ಟಿ ಕೊಡಲು ಎಂಬಂತೆ ಇನ್ನೊಂದು ಹೇಳಿಕೆ ನೀಡಿದ್ದು, ಇದೀಗ ಸಕತ್ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಸದ್ಯ ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗಳು, ನವ್ಯಾ ನವೇಲಿ ನಂದಾ ಆಗಾಗ್ಗೆ ಮುಖ್ಯಾಂಶದಲ್ಲಿ ಇರುವ ಅತ್ಯಂತ ಪ್ರೀತಿಯ ಸ್ಟಾರ್ ಕಿಡ್‌ಗಳಲ್ಲಿ ಒಬ್ಬರು. 25 ವರ್ಷದ ಈಕೆ ತಮ್ಮ ತಾಯಿ ಶ್ವೇತಾ ಬಚ್ಚನ್ ಅವರ ಹೆಜ್ಜೆಗಳನ್ನು ಅನುಸರಿಸಿ ಮುಂದೆ ಬರುತ್ತಿದ್ದಾರೆ. ತಮ್ಮದೇ ಆದ ಆರಾ ಹೆಲ್ತ್ ಕಂಪೆನಿಯನ್ನು ಪ್ರಾರಂಭಿಸಿದ್ದಾರೆ.
ಐಶ್ವರ್ಯ ಕಂಡ್ರೆ ಅಮಿತಾಭ್ ಪುತ್ರಿ ಶ್ವೇತಾಗೆ ಹೊಟ್ಟೆ ಉರಿ: ಮೊಮ್ಮಗಳು ನವ್ಯಾ ನವೇಲಿನೂ ಇದೇ ಹಾದಿ ಹಿಡಿದ್ರಾ?
ಇದರ ಜೊತೆಗೆ, ‘ವಾಟ್ ದಿ ಹೆಲ್ ನವ್ಯಾ’ ಹೆಸರಿನ ಪಾಡ್ಕಾಸ್ಟ್ ಆರಂಭಿಸಿದ್ದು, ಅದರಲ್ಲಿ ಅತ್ತೆ ಐಶ್ವರ್ಯ ವಿರುದ್ಧದ ಹೇಳಿಕೆ ನೀಡಿದ್ದಾರೆ. ಆಗಿದ್ದೇನೆಂದರೆ, ಈ ಷೋಗೆ ನವ್ಯಾ ತಾಯಿ ಶ್ವೇತಾ ಹಾಗೂ ಅಜ್ಜಿ ಜಯಾ ಬಚ್ಚನ್ ಆಗಮಿಸಿದ್ದರು. ಈ ವೇಳೆ ನಡೆದ ಮಾತುಕತೆಯಲ್ಲಿ, ಷೋಗೆ ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಅಥವಾ ಅಮಿತಾಭ್ ಬಚ್ಚನ್ ಅವರನ್ನು ಕರೆಸುವ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಇದು ಎರಡನೇ ಸೀ‘ಬಹುಶಃ ಮೂರನೇ ಸೀಸನ್ ಇದ್ದರೆ ನಾನು ಅವವರನ್ನು ಆಮಂತ್ರಿಸುತ್ತೇನೆ. ಕೇವಲ ಕುಟುಂಬದವರು ಮಾತ್ರವಲ್ಲ ಕುಟುಂಬದ ಹೊರಗಿನವರಿಗೂ ಆಮಂತ್ರಣ ನೀಡುತ್ತೇನೆ. ಅದು ಸಖತ್ ಫನ್ ಆಗಿರುತ್ತದೆ. ಬೇರೆ ಬೇರೆ ಕ್ಷೇತ್ರದವರ ಅನುಭವ ತಿಳಿದುಕೊಳ್ಳಲು ಖುಷಿ ಇದೆ’ ಎಂದಿದ್ದಾರೆ.
ಅವರೇನೋ ಸಹಜವಾಗಿಯೇ ಹೇಳಿದ್ದಾರೆ. ಆದರೆ ಇದನ್ನು ಅಭಿಮಾನಿಗಳು ಬೇರೆಯದ್ದೇ ರೀತಿ ಅರ್ಥೈಸಿಕೊಳ್ಳುತ್ತಿದ್ದಾರೆ. ಹೊರಗಿನವರು ಎಂದರೆ ನವ್ಯಾ ಹೇಳಿರುವುದು ಐಶ್ವರ್ಯ ರೈ ಕುರಿತು ಎಂದೇ ಬಿಂಬಿಸಲಾಗುತ್ತಿದೆ. ಈ ಮೊದಲು ನಡೆದಿರುವ ಹಲವಾರು ಘಟನೆಗಳನ್ನು ನೆನಪಿಸಿಕೊಂಡಿರುವ ಐಶ್ ಫ್ಯಾನ್ಸ್, ನವ್ಯಾ ಹೇಳಿರುವುದು ಇದೇ ಉದ್ದೇಶಕ್ಕೆ ಎನ್ನುತ್ತಿದ್ದಾರೆ. ಇದೇ ವೇಳೆ ನವ್ಯಾ, ತಮ್ಮ ಷೋನಲ್ಲಿ ವಿಜ್ಞಾನಿಗಳನ್ನು ಆಮಂತ್ರಿಸಲು ಇಷ್ಟಪಟ್ಟಿದ್ದಾರೆ. ಇಂದು ವಿಜ್ಞಾನದ ಅರ್ಥವೇನು, ನಾವು ಯಾವ ಹೊಸ ಆವಿಷ್ಕಾರಗಳನ್ನು ಹೊಂದಿದ್ದೇವೆ ಎಂಬುದರ ಕುರಿತು ಮಾತನಾಡಲು ನಾನು ಇಷ್ಟಪಡುತ್ತೇನೆ. ನಾನು ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವವರನ್ನು ಕರೆಯಲು ಇಷ್ಟಪಡುತ್ತೇನೆ. ಕೆಲವು ವಿಷಯಗಳ ಬಗ್ಗೆ ಅವರ ಅಭಿಪ್ರಾಯ ಪಡೆಯಲು ನಾನು ಬಯಸುತ್ತೇನೆ ಎಂದಿದ್ದಾರೆ.
ಜ್ಯೋತಿಷಿಯಿಂದ ಹಳ್ಳ ಹಿಡಿಯತ್ತಾ ಅಮೃತಧಾರೆ? ಮತ್ತದೇ ಕಥೆ ಯಾಕೆ... ಫ್ಯಾನ್ಸ್ ತೀವ್ರ ಬೇಸರ!