
ತೆಲುಗಿನ ನಾಗ ಚೈತನ್ಯ (Naga Chaitanya)ಜತೆ ಪೂಜಾ ಹೆಗಡೆ (Pooja Hegde)ರೊಮಾನ್ಸ್ ಮಾಡುವ ಸಮಯ ಬಂದಿದೆ. ಅಂದರೆ, ನಿಜ ಜೀವನದಲ್ಲಿ ಅಲ್ಲ, ಸಿನಿಮಾದಲ್ಲಿ. ಅದನ್ನು ಮೊದಲೇ ಹೇಳಿ ಬಿಡಬೇಕು. ಏಕೆಂದರೆ, ನಟ ನಾಗ ಚೈತನ್ಯ ಹೇಳಿ ಕೇಳಿ ಈಗ ಡಿವೋರ್ಸ್ ಆಗಿರುವ ಸಿಂಗಲ್. ಹೀಗಾಗಿ ನೀವು ಪೂಜಾ ಹೆಗಡೆ ಜತೆ ಸಪ್ತಪದಿ ತುಳಿದು ಮಿಂಗಲ್ ಆಗಲಿದ್ದಾರೆ ಎಂದು ಭಾವಿಸುವ ಸಾಧ್ಯತೆಯೇ ಹೆಚ್ಚು. ಆದರೆ, ಇದು ರಿಯಲ್ ರೊಮಾನ್ಸ್ ಅಲ್ಲ, ರೀಲ್. ವಿರುಪಾಕ್ಷ ನಿರ್ದೇಶಕರ ಜತೆ ನಟ ನಾಗ ಚೈತನ್ಯ ಮುಂದಿನ ಪ್ರಾಜೆಕ್ಟ್ ಮಾಡಲಿದ್ದು, ಅದಕ್ಕೆ ನಾಯಕಿಯಾಗಿ ಪೂಜಾ ಹೆಗಡೆ ನಟಿಸಲಿದ್ದಾರೆ.
2014ರಲ್ಲಿ ನಾಗ ಚೈತನ್ಯ ಹಾಗು ಪೂಜಾ ಹೆಗಡೆ ಜೋಡಿ 'ಒಕ ಲೈಲಾ ಕೋಸಮ್ (Oka Laila Kosam)'ಚಿತ್ರದಲ್ಲಿ ಒಟ್ಟಿಗೇ ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗದಿದ್ದರೂ ನಾಗಚೈತನ್ಯ-ಪೂಜಾ ಹೆಗಡೆ ಜೋಡಿ ಕೆಮೆಸ್ಟ್ರಿ ತುಂಬಾ ಚೆನ್ನಾಗಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಆ ಬಳಿಕ ಈ ಜೋಡಿ ಯಾವುದೇ ಚಿತ್ರದಲ್ಲಿ ಒಟ್ಟಾಗಿ ನಟಿಸಲಿಲ್ಲ. ಹೀಗಾಗಿ ಈ ಜೋಡಿಯ ಅಭಿಮಾನಿಗಳಿಗೆ ತುಂಬಾ ನಿರಾಸೆಯಾಗಿತ್ತು. ಈಗ ಮತ್ತೆ ಆ ಚಾನ್ಸ್ ಮರುಕಳಿಸಲಿದೆ.
ಸಕ್ಸಸ್‌ಫುಲ್ ಆಗಿರುವಾಗ ತುಂಬಾನೇ ಕೇರ್‌ಫುಲ್ ಆಗಿರಬೇಕು; ಹೀಗ್ಯಾಕೆ ಹೀಳಿದ್ರು ರಾಕಿಂಗ್ ಸ್ಟಾರ್ ಯಶ್?
ವಿರುಪಾಕ್ಷಂ ಸಿನಿಮಾ ಡೈರೆಕ್ಟರ್ ಕಾರ್ತಿಕ್ ವರ್ಮಾ ದಂಡು (Karthik Varma Dandu)ತಮ್ಮ ಮುಂದಿನ ಪ್ರಾಜೆಕ್ಟ್‌ಗೆ ಪೂಜಾ ಹೆಗಡೆ ಹಾಗು ನಾಗ ಚೈತನ್ಯ ಜೋಡಿಯನ್ನು ಅಯ್ಕೆ ಮಾಡಿ, ಟ್ರೈಲರ್ ಕೂಡ ರಿಲೀಸ್ ಮಾಡಿದ್ದಾರೆ. ಈ ಪ್ರಾಜೆಕ್ಟ್ ಮೈಥಾಲಾಜಿ, ಅಂದರೆ ಸುಪರ್ ನ್ಯಾಚುರಲ್ ಪವರ್‌ಗೆ ಸಂಬಂಧಿಸಿದ್ದು, ಹೈ ಬಜೆಟ್ ಸಿನಿಮಾ ಆಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಲು ಪ್ಲಾನ್ ಕೂಡ ಮಾಡಲಾಗಿದೆ ಎಂಬ ಮಾಹಿತಿಯಿದೆ.
ಸಾಯುವ ಮೊದಲು ಅದೆಂಥಾ ಲೈಪ್ ಲೆಸನ್ ಟಿಪ್ಸ್ ಕೊಟ್ಟು ಹೋಗಿದ್ದಾರೆ ನೋಡಿ ಸುಶಾಂತ್ ಸಿಂಗ್ ರಜಪೂತ್!
ಒಟ್ಟಿನಲ್ಲಿ, ನಟಿ ಸಮಂತಾ ಜತೆ ಡಿವೋರ್ಸ್ ಆದ ಮೇಲೆ ನಟ ನಾಗ ಚೈತನ್ಯ ತಮ್ಮ ಸಿನಿಮಾ ಕೆರಿಯರ್ ಎಂದಿನಂತೆ ಮುಂದುವರೆಸಿದ್ದಾರೆ. ಆದರೆ, ಸಮಂತಾ ಅವರಿಗೆ ಅನಾರೋಗ್ಯ ಕಾಡಿದ್ದು, ಅವರು ಮೆಯೋಸಿಟಿಸ್ ಖಾಯಿಲೆಗೆ ಅಮೆರಿಕಾದಲ್ಲಿ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ. ಈ ಕಾರಣದಿಂದ ಅವರು ಸದ್ಯ ಸಿನಿಮಾ ನಟನೆಯಿಂದ ಚಿಕ್ಕ ಬ್ರೇಕ್ ತೆಗೆದುಕೊಂಡಿದ್ದಾರೆ. ಇದೀಗ ನಟ ನಾಗ ಚೈತನ್ಯರ ಮುಂದಿನ ಪ್ರಾಜೆಕ್ಟ್ ಅನೌನ್ಸ್ ಆಗಿದ್ದು, ಅದಕ್ಕೆ ಪೂಜಾ ಹೆಗಡೆ ಸಾಥ್ ನೀಡಲಿದ್ದಾರೆ. ಬರೋಬ್ಬರಿ 10 ವರ್ಷಗಳ ಬಳಿಕ ಮತ್ತೆ ನಾಗ ಚೈತನ್ಯ-ಪೂಜಾ ಹೆಗಡೆ ತೆರೆ ಹಂಚಿಕೊಳ್ಳಲಿದ್ದಾರೆ.
ನಾನು ಪ್ರತಿದಿನವೂ ಹೊಸ ಕೆಲಸವನ್ನು ಮಾಡಲು ಬಯಸುತ್ತೇನೆ; ಸಮಂತಾ ಹೇಳಿಕೆ ಮರ್ಮ ಏನಿರಬಹುದು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.