ಮೊಘಲರ ಬಗ್ಗೆ ತಪ್ಪು ಕಲ್ಪನೆ ಇದೆ, ತಾಜ್ ಮಹಲ್, ಕೆಂಪು ಕೋಟೆ ಕೆಡವಿ; ನಸೀರುದ್ದೀನ್ ಶಾ ಶಾಕಿಂಗ್ ಹೇಳಿಕೆ

By Shruthi Krishna  |  First Published Mar 1, 2023, 5:41 PM IST

ಮೊಘಲರ ಬಗ್ಗೆ ತಪ್ಪು ಕಲ್ಪನೆ ಇದೆ, ತಾಜ್ ಮಹಲ್, ಕೆಂಪು ಕೋಟಿ ಕೆಡವಿ ಎಂದು ಬಾಲಿವುಡ್ ನಟ ನಸೀರುದ್ದೀನ್ ಶಾ ಶಾಕಿಂಗ್ ಹೇಳಿಕೆ ನೀಡಿದ್ದಾರೆ. 


ಬಾಲಿವುಡ್ ಖ್ಯಾತ ಹಿರಿಯ ನಟ ನಸೀರುದ್ದೀನ್ ಶಾ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು. ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಸಿನಿಮಾ ಜೊತೆಗೆ ನಸೀರುದ್ದೀನ್ ಶಾ ಆಗಾಗ ತನ್ನ ಹೇಳಿಕೆಗಳ ಮೂಲಕವೂ ಸುದ್ದಿಯಲ್ಲಿರುತ್ತಾರೆ. ತಮಗನಿಸಿದ್ದನ್ನು ನೇರವಾಗಿ ಹೇಳುವ ನಸೀರುದ್ದೀನ್ ಶಾ ಇದೀಗ ಅಕ್ಬರ್ ಬಗ್ಗೆ ಕೆಲವು ತಪ್ಪು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಸದ್ಯ ನಸೀರುದ್ದೀನ್ ಶಾ ‘ತಾಜ್: ಡಿವೈಡೆಡ್ ಬೈ ಬ್ಲಡ್’ ಎಂಬ ವೆಬ್ ಸೀರೀಸ್‌ನಲ್ಲಿ ಅಭಿನಯಿಸುತ್ತಿದ್ದಾರೆ. ಈ ವೆಬ್ ಸೀರೀಸ್‌ನಲ್ಲಿ ಮೊಘಲರ ಚಕ್ರವರ್ತಿ ಅಕ್ಬರ್ ಆಗಿ ನಸೀರುದ್ದೀನ್ ಶಾ ಕಾಣಿಸಿಕೊಂಡಿದ್ದಾರೆ. ಈ ವೆಬ್ ಸೀರೀಸ್‌ನಲ್ಲಿ ಅಭಿನಯಿಸಿದ ನಂತರ ಅಕ್ಬರ್ ಬಗ್ಗೆ ತನಗಿದ್ದ ತಿಳುವಳಿಕೆ ಬದಲಾಯಿತು ಎಂದು ಹೇಳಿದ್ದಾರೆ. 

ಅಕ್ಬರ್ ಬಗ್ಗೆ ಇತಿಹಾಸದ ಪುಸ್ತಕಗಳಲ್ಲಿ ಕೆಲ ತಪ್ಪು ಮಾಹಿತಿ ಇವೆ. ಅಕ್ಬರ್ ತನ್ನದೇ ಆದ ಧರ್ಮವನ್ನು ಸ್ಥಾಪಿಸಲು ಬಯಸಿದ್ದ ಎಂದು ಕೆಲ ಪುಸ್ತಕಗಳಲ್ಲಿವೆ. ಇದು ತಪ್ಪು ಮಾಹಿತಿ ನಾನ್ ಸೆನ್ಸ್  ಎಂದು ಹೇಳಿದರು. 

Tap to resize

Latest Videos

ಈ ಬಗ್ಗೆ ಮಾತನಾಡಿದ ನಸೀರುದ್ದೀನ್ ಶಾ, 'ಆಗಿನ್ನೂ ಬ್ರಿಟೀಷರ ಪ್ರಭಾವಿತ್ತು. 50-60ರ ದಶಕದಲ್ಲಿ ಇತಿಹಾಸವನ್ನು ಅಧ್ಯಯನ ಮಾಡಿದ ಎಲ್ಲಾ ವಿದ್ಯಾರ್ಥಿಗಳಲ್ಲಿ ಅದೇ ರೀತಿಯ ತಿಳುವಳಿಕೆ ಇತ್ತು. ನಮ್ಮಲ್ಲಿ ಐರಿಶ್ ಶಿಕ್ಷಕರು, ಇಂಗ್ಲೀಷ್‌ ಬೋಧಕರು ಇದ್ದರು. ಅಕ್ಬರ್ ಅಂದ್ರೆ ಸಹೃದಯಿ, ವಿಶಾಲ ಹೃದಯಿ, ಪ್ರಗತಿಪರ ಆಡಳಿತಗಾರ. ತನ್ನದೇ ಆದ ಹೊಸ ಧರ್ಮವನ್ನು ಸ್ಥಾಪಿಸುವ ಬಯಕೆ ಅಕ್ಬರ್‌ಗಿತ್ತು ಎಂಬುದರ ಬಗ್ಗೆ ಓದಿದ್ದೇವೆ. ಇದು ನಾನ್ ಸೆನ್ಸ್‌' ಎಂದು ಹೇಳಿದ್ದಾರೆ. 

'ನಾನು ಇದನ್ನು ಅಧಿಕೃತ ಇತಿಹಾಸಕಾರರೊಂದಿಗೆ ಪರಿಶೀಲಿಸಿದ್ದೇನೆ ಮತ್ತು ಅಕ್ಬರ್ ಎಂದಿಗೂ ಹೊಸ ಧರ್ಮವನ್ನು ಪ್ರಾರಂಭಿಸಲು ಪ್ರಯತ್ನಿಸಲಿಲ್ಲ. ಇದು ದಿನ್-ಇ ಇಲಾಹಿ ಎಂಬ ನಮ್ಮ ಇತಿಹಾಸ ಪುಸ್ತಕಗಳಲ್ಲಿದ್ದಿದ್ದು ಸತ್ಯ. ಆದರೆ ಅಕ್ಬರ್ ಎಂದಿಗೂ ದಿನ್-ಇ ಇಲಾಹಿ ಎಂಬ ಪದವನ್ನು ಬಳಸಲಿಲ್ಲ. ಅವರು ಅದನ್ನು ವಹ್ದತ್-ಇ ಇಲಾಹಿ ಎಂದು ಕರೆದರು, ಅಂದರೆ ಸೃಷ್ಟಿಕರ್ತನ ಏಕತೆ. ನೀವು ಕಲ್ಲನ್ನು ಪೂಜಿಸಬಹುದು, ಶಿಲುಬೆಗೇರಿಸಬಹುದು, ಕಾಬಾಕ್ಕೆ ತಲೆಬಾಗಬಹುದು, ಉದಯಿಸುವ ಸೂರ್ಯನನ್ನು ಆರಾಧಿಸಬಹುದು ಮತ್ತು ನಿಮಗೆ ಇಷ್ಟವಾದದ್ದನ್ನು ಮಾಡಬಹುದು, ಆದರೆ ನೀವು ಒಂದೇ ವಿಷಯವನ್ನು ಪೂಜಿಸುತ್ತೀರಿ. ಅದು ಅವನ ನಂಬಿಕೆಯಾಗಿತ್ತು. ಇದನ್ನೇ ನಾನು ಕಂಡುಕೊಂಡೆ'  ಎಂದು ನಸೀರುದ್ದೀನ್ ಶಾ ಹೇಳಿದರು. 

ಪ್ರಧಾನಿ ಮೋದಿ ಮುಂದೆ ಬಂದು ದ್ವೇಷದ ವಿಷವನ್ನು ತಡೆಯುವ ಅಗತ್ಯವಿದೆ: ನಾಸಿರುದ್ದೀನ್ ಶಾ

ಕೆಂಪು ಕೋಟೆ, ತಾಜ್ ಮಹಲ್ ಕೆಡವಿ 

ಮೊಘಲ್ ಸಾಮ್ರಜ್ಯ ಲೂಟಿ ಮಾಡಲು ಬಂದಿತ್ತು ಎಂದು ಹೇಳುವ ಜನರನ್ನು ಅವರು ತರಾಟೆಗೆ ತೆಗೆದುಕೊಂಡರು. ರಾಷ್ಟ್ರವು ತಾಜ್ ಮಹಲ್ ಮತ್ತು ಕೆಂಪು ಕೋಟೆಯನ್ನು ಬಳಸಬಾರದು ಆ ಸ್ಮಾರಕಗಳನ್ನು ಕೆಡವಬೇಕು ಎಂದರು. ಮೊಘಲ್ ದೊರೆಗಳು ಒಳ್ಳೆಯವರಲ್ಲದಿದ್ದರೆ ಭಾರತದ ಜನರು ಕೆಂಪು ಕೋಟೆಯನ್ನು ಪವಿತ್ರ ಸ್ಥಳವೆಂದು ಏಕೆ ಪರಿಗಣಿಸುತ್ತಾರೆ. ಸ್ವಾತಂತ್ರ್ಯ ನಂತರ ಪ್ರಧಾನಿಯವರು ಅದೇ ಸ್ಥಳದಲ್ಲಿ ಧ್ವಜಾರೋಹಣ ಮಾಡುತ್ತಾರೆ ಎಂದು ನಸೀರಿದ್ದೀನ್ ಶಾ ಹೇಳಿದರು. 

Onomatomania: ನಾಸಿರುದ್ದೀನ್ ಶಾಗೆ ಈ ವಿಚಿತ್ರ ಕಾಯಿಲೆ ಇದೆಯಂತೆ!

ರಾಷ್ಟ್ರವು ತಾಜ್ ಮಹಲ್ ಮತ್ತು ಕೆಂಪು ಕೋಟೆಯನ್ನು ಬಳಸಬಾರದು ಮತ್ತು "ಆ ಸ್ಮಾರಕಗಳನ್ನು ಕೆಡವಬೇಕು" ಎಂದು ಹೇಳಿದ ಅವರು ಮೊಘಲ್ ರಾಜವಂಶವು ಲೂಟಿ ಮಾಡಲು ಇಲ್ಲಿದ್ದಾರೆ ಎಂದು ಹೇಳುವ ಜನರನ್ನು ಅವರು ತರಾಟೆಗೆ ತೆಗೆದುಕೊಂಡರು. ಮೊಘಲ್ ದೊರೆಗಳು ಒಳ್ಳೆಯವರಲ್ಲದಿದ್ದರೆ ಭಾರತದ ಜನರು "ಕೆಂಪು ಕೋಟೆಯನ್ನು ಪವಿತ್ರ ಸ್ಥಳವೆಂದು ಏಕೆ ಪರಿಗಣಿಸುತ್ತಾರೆ" ಎಂದು ಅವರು ಕೇಳಿದರು ಮತ್ತು ಸ್ವಾತಂತ್ರ್ಯ ದಿನದಂದು ಪ್ರಧಾನಿಯವರು ಸ್ಥಳದಲ್ಲಿ ಧ್ವಜಾರೋಹಣ ಮಾಡುತ್ತಾರೆ.

click me!