ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ ನಾಟು ನಾಟು ಪ್ರದರ್ಶನ, ಆದರೆ ಇದಕ್ಕಿದೆ ಒಂದು ಅಡ್ಡಿ!

By Suvarna NewsFirst Published Mar 1, 2023, 3:04 PM IST
Highlights

ಇಡೀ ವಿಶ್ವವೇ ಎದುರು ನೋಡುತ್ತಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಈ ವೇದಿಕೆಯಲ್ಲಿ ನಾಟು ನಾಟು ಹಾಡಿನ ಪ್ರದರ್ಶನ ಈ ಬಾರಿಯ ಹೆಮ್ಮೆ. ಆದರೆ ಇದಕ್ಕೊಂದು ಅಡ್ಡಿ ಇದೆ. ಅದೇನು?

ಆಸ್ಕರ್ ಅಂಗಳಕ್ಕೆ ಹೋಗೋದು ಪ್ರತೀ ಫಿಲಂ ಮೇಕರ್‌ನ ಕನಸು. ಆಸ್ಕರ್ ಅಂಗಳದಲ್ಲಿ ಜಗತ್ತಿನ ವಿವಿಧ ಭಾಷೆಗಳ ವಿವಿಧ ದೇಶಗಳ ನಾನಾ ಮೈ ಬಣ್ಣದ ನಟ ನಟಿಯರ ಮೇಳವೇ ನಡೆಯುತ್ತೆ. ಆದರೆ ಈ ಬಾರಿ ಆಸ್ಕರ್ ನಲ್ಲಿ ಪ್ರಸಿದ್ಧ ಆರ್‌ಆರ್‌ಆರ್ ಸಿನಿಮಾದ್ದೇ ಸುದ್ದಿ. ಹೌದು. ಚಿತ್ರ ಬಂದು ವರ್ಷ ಕಳೆದರೂ ಆರ್‌ಆರ್‌ಆರ್‌ ಚಿತ್ರದ 'ನಾಟು ನಾಟು' ಹಾಡು ಇಡೀ ಜಗತ್ತನ್ನೇ ಕುಣಿಸುತ್ತಿದೆ. ಅದಕ್ಕೆ ಕಿರೀಟದಂತೆ ಇದೀಗ ಆಸ್ಕರ್ ವೇದಿಕೆಯಲ್ಲಿ ಈ ಹಾಡು ಮತ್ತೊಮ್ಮೆ ಮಾರ್ದನಿಸಲಿದೆ. ಮಾರ್ಚ್ 12ಕ್ಕೆ ಲಾಸ್ ಎಂಜಲೀಸ್‌ನಲ್ಲಿ 95ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆ ವೇದಿಕೆ ಮೇಲೆ 'ನಾಟು ನಾಟು' ಲೈವ್ ಪರ್ಫಾರ್ಮೆನ್ಸ್‌ಗೆ ಅವಕಾಶ ಸಿಕ್ಕಿದೆ. ಈ ಹಿಂದೆಯೇ ಈ ಬಗ್ಗೆ ಸುಳಿವು ಸಿಕ್ಕಿತ್ತು. ಇದೀಗ ಅಧಿಕೃತವಾಗಿ ಈ ವಿಚಾರವನ್ನು ಅಕಾಡೆಮಿ ಸ್ಪಷ್ಟಪಡಿಸಿದೆ.

ಚಂದ್ರಬೋಸ್ ಸಾಹಿತ್ಯ ಬರೆದಿರುವ 'ನಾಟು ನಾಟು' ಹಾಡನ್ನು ಗಾಯಕರಾದ ರಾಹುಲ್ ಸಿಪ್ಲಿಗಿಂಜ್ ಹಾಗೂ ಕಾಲ ಭೈರವ ಹಾಡಿದ್ದರು. ಇದೀಗ ಇವರಿಬ್ಬರಿಗೆ ಆಸ್ಕರ್ ವೇದಿಕೆಯಲ್ಲಿ ಮತ್ತೊಮ್ಮೆ ಹಾಡಿನ ಲೈವ್ ಪರ್ಫಾರ್ಮೆನ್ಸ್ ನೀಡುವ ಅವಕಾಶ ಸಿಕ್ಕಿದೆ. ಇದನ್ನು ಟ್ವೀಟ್ ಮಾಡಿ ಅಕಾಡೆಮಿ ಖಚಿತ ಪಡಿಸಿದೆ. ಜೇಮ್ಸ್ ಕ್ಯಾಮರೂನ್‌ನಂತ ಹಾಲಿವುಡ್ ಫಿಲ್ಮ್ ಮೇಕರ್ಸ್ 'RRR' ಸಿನಿಮಾ ನೋಡಿ ಮೆಚ್ಚಿ ಕೊಂಡಾಡಿದ್ದಾರೆ. ಈ ವಾರ ಸಿನಿಮಾ ಅಮೆರಿಕಾದಲ್ಲಿ ರೀ ರಿಲೀಸ್ ಆಗುತ್ತಿದೆ. ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಆದರೆ ಇದಕ್ಕೊಂದು ಸಣ್ಣ ಅಡ್ಡಿ ಇದೆ. ಜಗದ್ವಿಖ್ಯಾತ ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿದವರು. ಅವರು ಈ ಪ್ರತಿಷ್ಠಿತ ವೇದಿಕೆ ಏರಿ ಪರ್ಫಾರ್ಮನ್ಸ್‌ನಲ್ಲಿ ಭಾಗಿ ಆಗುವುದು ಅನುಮಾನ ಎನ್ನಲಾಗ್ತಿದೆ. ಇತ್ತೀಚೆಗೆ ಆರೋಗ್ಯ ಕಾರಣಗಳಿಂದ ವೇದಿಕೆಯಲ್ಲಿ ಪರ್ಫಾರ್ಮೆನ್ಸ್‌ ಕಷ್ಟ ಎಂದು ಕೀರವಾಣಿ ಹೇಳಿದ್ದರು. ಆದರೆ ಇದೊಂದು ಸಣ್ಣ ಸಮಸ್ಯೆ ಅಷ್ಟೇ. ಅವರು ಬಂದರೆ ಆ ಹಾಡಿನ ಘನತೆ ಇನ್ನಷ್ಟು ಹೆಚ್ಚಲಿದೆ.

Latest Videos

ನೈಟ್ ಕ್ಲಬ್ ತೋರಿಸಿದ್ದೆ ಶಾರುಖ್; ಕಿಂಗ್ ಖಾನ್ ಜೊತೆಗಿನ ಸ್ನೇಹ ಬಿಚ್ಚಿಟ್ಟ ಮನೋಜ್ ಬಾಜಪಾಯಿ

'ನಾಟು ನಾಟು' ಹಾಡು ಭಾರತ ಬಿಡಿ, ವಿಶ್ವದಲ್ಲೇ ಸೂಪರ್ ಹಿಟ್ ಆಗಿದೆ. ಈ ಸಿನಿಮಾದ ಕಥೆ ಸ್ವಾತಂತ್ರ್ಯಪೂರ್ವ ಕಾಲಘಟ್ಟದ್ದು. ಆ ಕಾಲದಲ್ಲಿ ಜಾರಿಯಲ್ಲಿತ್ತು ಎನ್ನಲಾದ ಜಾನಪದ ಮಾದರಿಯ ಹಾಡನ್ನೇ ಟಪ್ಪಾಂಗುಚ್ಚಿ ಸ್ಟೈಲ್‌ನಲ್ಲಿ ಬಹಳ ಸೊಗಸಾಗಿ ಪ್ರೆಸೆಂಟ್ (Present) ಮಾಡಿದ್ದು ಈ ಹಾಡಿನ ಹೆಚ್ಚುಗಾರಿಕೆ. ಈ ಹಾಡಿಂದೇ ಒಂದು ತೂಕವಾದರೆ ಅದಕ್ಕೆ ರಾಮ್‌ಚರಣ್ ಹಾಗೂ ಜ್ಯೂ. ಎನ್‌ಟಿಆರ್ ಹಾಕಿರೋ ಜಬರ್ದಸ್ತ್ ಸ್ಟೆಪ್ಸ್ ಗೇ ಮತ್ತೊಂದು ತೂಕ. ಈ ಇಬ್ಬರೂ ದಿಗ್ಗಜ ನಟರು ಈ ಹಾಡಿನ ಮೂಲಕ ಧೂಳೆಬ್ಬಿಸಿದ್ದಾರೆ. ಇತ್ತೀಚೆಗೆ ಈ ಸಾಂಗ್‌ಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿತ್ತು. ಈ ಬಾರಿ ಆಸ್ಕರ್‌ ಪ್ರಶಸ್ತಿಗೂ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ನಾಮಿನೇಟ್ ಆಗಿದೆ. ಪ್ರಶಸ್ತಿ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ. ಅದೇ ನಿಜವಾದರೇ ಭಾರತೀಯ ಸಿನಿರಸಿಕರ ಬಹುದಿನಗಳ ಕನಸು ನನಸಾಗಲಿದೆ. ದಕ್ಷಿಣ ಭಾರತ ಸಿನಿಮಾವೊಂದ ಹಾಡನ್ನು ಆಸ್ಕರ್(Oscar) ವೇದಿಕೆಯಲ್ಲಿ ಕೇಳೋದಕ್ಕಿಂತ ದೊಡ್ಡ ವಿಷ್ಯ ಮತ್ತೇನಿದೆ ಹೇಳಿ.

ಈ ಹಾಡನ್ನು ಉಕ್ರೇನ್‌ನಲ್ಲಿ ಶೂಟ್‌ ಮಾಡಲಾಗಿತ್ತು. ಚಿತ್ರತಂಡ ತಿಂಗಳ ಕಾಲ ಬೀಡುಬಿಟ್ಟು ಸಾಂಗ್ ಸೆರೆ ಹಿಡಿದಿದ್ದರು. ಪ್ರೇಮ್ ರಕ್ಷಿತ್ ಕೊರಿಯೋಗ್ರಫಿಯಲ್ಲಿ ಚರಣ್, ತಾರಕ್ ಟಪ್ಪಾಂಗುಚಿ ಸ್ಟೆಪ್ಸ್(Step) ಹಾಕಿ ರಂಗೇರಿಸಿದ್ದರು. ಇದಕ್ಕಿಂತಲೂ ಕಷ್ಟದ ಸ್ಟೆಪ್ಸ್ ಮಾಡಿ ಇಬ್ಬರಿಗೂ ಅನುಭವ ಇತ್ತು. ಆದರೆ ಇಬ್ಬರು ಒಂದೇ ರೀತಿಯಲ್ಲಿ ಡ್ಯಾನ್ಸ್(Dance) ಮಾಡೋಕೆ ಸಾಕಷ್ಟು ಕಷ್ಟಪಟ್ಟಿದ್ದರು. ಇದಕ್ಕಾಗಿ ಸಾಕಷ್ಟು ಟೇಕ್‌ಗಳನ್ನು ತೆಗೆದುಕೊಂಡಿದ್ದರು. ಮಿಸ್ಟರ್ ಪರ್ಫೆಕ್ಷನಿಸ್ಟ್ ಡೈರೆಕ್ಟರ್ ರಾಜಮೌಳಿ ಅಷ್ಟು ಸೊಗಸಾಗಿ ಸಾಂಗ್ ಚಿತ್ರೀಕರಣ ನಡೆಸಿದ್ದರು. ಅವರೆಲ್ಲರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಈಗ ಸಿಗುತ್ತಿದೆ.

ಅಂದಹಾಗೆ ಕೇವಲ ಹತ್ತೇ ದಿನದಲ್ಲಿ ಅಂದರೆ ಮಾರ್ಚ್ 12ರಂದು ಈ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆ ವೇದಿಕೆಯಲ್ಲಿ ತೆಲುಗು ಸಿನಿಮಾ ಸಾಂಗ್‌ವೊಂದರ ಲೈವ್ ಪರ್ಫಾರ್ಮೆನ್ಸ್ ನಡೆಯುತ್ತಿದೆ ಎನ್ನುವುದು ಸಿನಿರಸಿಕರಿಗೆ ಸಂತಸ ತಂದಿದೆ. ಕಳೆದ ವರ್ಷ ಮಾರ್ಚ್ 25ಕ್ಕೆ 'RRR' ಸಿನಿಮಾ ರಿಲೀಸ್ ಆಗಿತ್ತು. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಬಾಕ್ಸಾಫೀಸ್ ಚಿಂದಿ ಉಡಾಯಿಸಿತ್ತು.

22 ವರ್ಷದ ಮಗಳಿರೋ ಈ ನಟಿಯನ್ನ ನೋಡಿದ್ರೆ ಈಗ್ಲೂ ಜನ ಫಿದಾ ಆಗೋದು ಗ್ಯಾರಂಟಿ

click me!