ಮಹೇಶ್ ಬಾಬು ನಮ್ಮ ಸಂಬಂಧ ಒಪ್ಪಿಕೊಂಡಿದ್ದಾರೆ, ಅವರಿಗೆ ಪವಿತ್ರಾ ಲೋಕೇಶ್ ಕೈ ರುಚಿ ತುಂಬಾ ಇಷ್ಟ: ನರೇಶ್

Published : May 21, 2023, 02:34 PM IST
ಮಹೇಶ್ ಬಾಬು ನಮ್ಮ ಸಂಬಂಧ ಒಪ್ಪಿಕೊಂಡಿದ್ದಾರೆ, ಅವರಿಗೆ ಪವಿತ್ರಾ ಲೋಕೇಶ್ ಕೈ ರುಚಿ ತುಂಬಾ ಇಷ್ಟ: ನರೇಶ್

ಸಾರಾಂಶ

ಮಹೇಶ್ ಬಾಬು ನಮ್ಮ ಸಂಬಂಧ ಒಪ್ಪಿಕೊಂಡಿದ್ದಾರೆ, ಅವರಿಗೆ ಪವಿತ್ರಾ ಲೋಕೇಶ್ ಕೈ ರುಚಿ ತುಂಬಾ ಇಷ್ಟ: ನರೇಶ್    

ಕನ್ನಡದ ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಜೋಡಿ ಮತ್ತೆ ಸದ್ದು ಮಾಡುತ್ತಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ನರೇಶ್ ಮತ್ತು ಪವಿತ್ರಾ ಲೋಕೇಶ್ ಸಂಬಂಧ ಬೀದಿ ರಂಪಾಟವಾಗಿತ್ತು. ಮೂರನೇ ಪತ್ನಿ ರಮ್ಯಾ, ನರೇಶ್ ಮತ್ತು ಪವಿತ್ರಾ ಲೋಕೇಶ್ ವಿರುದ್ಧ ಸಿಡಿದೆದ್ದಿದ್ದರು. ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ರದ್ಧಾಂತವೇ ಆಗಿತ್ತು. ಬಳಿಕ ಪವಿತ್ರಾ ಮತ್ತು ನರೇಶ್ ಇಬ್ಬರೂ ಸೈಲೆಂಟ್ ಆಗಿದ್ದರು. ಇಬ್ಬರ ಸಂಬಂಧ ಈಗ ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಸದ್ಯ ಮಳ್ಳಿ ಪೆಳ್ಳಿ ಕನ್ನಡದಲ್ಲಿ ಮತ್ತೆ ಮದುವೆ  ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಅಂದಹಾಗೆ ಮತ್ತೆ ಮದುವೆ ಮೂಲಕ ತಮ್ಮದೇ ಕತೆ ಹೇಳುತ್ತಿದ್ದಾರೆ ಈ ಜೋಡಿ. 

ಸದ್ಯ ನರೇಶ್ ಮತ್ತು ಪವಿತ್ರಾ ಲೋಕೇಶ್ ಇಬ್ಬರೂ ಮತ್ತೆ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಆಂಧ್ರ ಮತ್ತು ಕರ್ನಾಟಕ ಸೇರಿದಂತೆ ಅನೇಕ ಕಡೆ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರ ವೇಳೆ ನರೇಶ್ ಮತ್ತು ಪವಿತ್ರಾ ತಮ್ಮ ಸಂಬಂಧದ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ. ಮಹೇಶ್ ಹಾಗೂ ತಂದೆ ದಿವಂಗತ ಸೂಪರ್‌ಸ್ಟಾರ್ ಕೃಷ್ಣ ಅವರು ಈ ಸಂಬಂಧ ಒಪ್ಪಿಕೊಂಡಿರುವ ಬಗ್ಗೆ ನರೇಶ್ ರಿವೀಲ್ ಮಾಡಿದ್ದಾರೆ.

ಮಹೇಶ್ ಬಾಬು ಮತ್ತು ಕುಟುಂಬ ಗ್ರೀನ್ ಸಿಗ್ನಲ್ 

ಪವಿತ್ರಾ ಲೋಕೇಶ್ ಅವರನ್ನು ಕುಟುಂಬದವರು ಒಪ್ಪಿಕೊಂಡಿಲ್ಲ ಎನ್ನಲಾಗಿತ್ತು ಆದರೆ ಈ ಬಗ್ಗೆ ಮಾತನಾಡಿದ ನರೇಶ್ ತಮ್ಮ ಕುಟುಂಬ ಹಾಗೂ ಮಹೇಶ್ ಬಾಬು ತಮ್ಮ ಸಂಬಂಧವನ್ನು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ. 'ಕೃಷ್ಣ ಗಾರು ಮತ್ತು ಮಹೇಶ್ ಬಾಬು ಅವರ ಕುಟುಂಬ ನಮ್ಮನ್ನು ಮತ್ತು ನಮ್ಮ ಸಂಬಂಧವನ್ನು ಒಪ್ಪಿಕೊಂಡಿದೆ' ಎಂದು ಹೇಳಿದರು.

ನಟಿಯಾಗಿ ನೋಡಿ, ಮನೆಯೊಳಗೆ ಇಣುಕಬೇಡಿ: ಪವಿತ್ರಾ ಲೋಕೇಶ್‌

ಕುಟುಂಬಕ್ಕೆ ಪವಿತ್ರಾ ಅಡುಗೆ ತುಂಬಾ ಇಷ್ಟ

ಪವಿತ್ರಾ ಲೋಕೇಶ್ ಮಾಡಿರುವ ಅಡುಗೆಯನ್ನು ನರೇಶ್ ಕುಟುಂಬ ತುಂಬಾ ಇಷ್ಟ ಪಡುತ್ತಾರಂತೆ. ಕೃಷ್ಣ ಅವರು ಬದುಕಿದ್ದಾಗ ಪವಿತ್ರಾ ಲೋಕೇಶ್ ಕೈ ರುಚಿ ತುಂಬಾ ಇಷ್ಟ ಪಡುತ್ತಿದ್ದರು ಎಂದು ಬಹಿರಂಗ ಪಡಿಸಿದ್ದಾರೆ. 'ಪವಿತ್ರಾ ಅವರ ಕೈ ರುಚಿಯನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ಅವರು ಮಾಡಿದ ಅಡುಗೆಯನ್ನು ಆನಂದಿಸುತ್ತಾರೆ' ಎಂದು ನರೇಶ್ ಹೇಳಿದ್ದಾರೆ. 

ದೇವ್ರು ರಾಜರು 2-3 ಮದ್ವೆ ಆಗಿಲ್ವಾ?; ಪವಿತ್ರಾ ಲೋಕೇಶ್‌ 3ನೇ ಮದುವೆ ಗಾಸಿಪ್‌ಗೆ ಸಿಕ್ಕ ಉತ್ತರವಿದು

ನರೇಶ್ ಬಗ್ಗೆ ಪವಿತ್ರಾ ಮಾತು

'ನಾನು ನನ್ನ ವೈಯಕ್ತಿಕ ವಿಷಯಗಳನ್ನು ನನ್ನಲ್ಲಿಯೇ ಇಟ್ಟುಕೊಳ್ಳಲು ಇಷ್ಟಪಡುತ್ತೇನೆ. ದೇವರು ನಮ್ಮನ್ನು ಸೃಷ್ಟಿಸಿದ್ದಕ್ಕಾಗಿ ನಾವು ಧನ್ಯರು' ಎಂದು ಪವಿತ್ರಾ ಲೋಕೇಶ್, ನರೇಶ್ ಬಗ್ಗೆ ಹೇಳಿದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?