ಅನುರಾಗ್ ಕಶ್ಯಪ್ ಪುತ್ರಿಯ ನಿಶ್ಚಿತಾರ್ಥ; ಭಾವಿ ಪತಿ ಜೊತೆ ಆಲಿಯಾ ಲಿಪ್‌ಕಿಸ್ ಫೋಟೋ ವೈರಲ್, ಹುಡುಗ ಯಾರು?

Published : May 21, 2023, 01:08 PM IST
ಅನುರಾಗ್ ಕಶ್ಯಪ್ ಪುತ್ರಿಯ ನಿಶ್ಚಿತಾರ್ಥ; ಭಾವಿ ಪತಿ ಜೊತೆ ಆಲಿಯಾ ಲಿಪ್‌ಕಿಸ್ ಫೋಟೋ ವೈರಲ್, ಹುಡುಗ ಯಾರು?

ಸಾರಾಂಶ

ಅನುರಾಗ್ ಕಶ್ಯಪ್ ಪುತ್ರಿ ಆಲಿಯಾ ಕಶ್ಯಪ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಭಾವಿ ಪತಿ ಜೊತೆ ಆಲಿಯಾ ಲಿಪ್‌ಕಿಸ್ ಫೋಟೋ ಶೇರ್ ಮಾಡಿದ್ದು ವೈರಲ್ ಆಗಿದೆ. 

ಬಾಲಿವುಡ್ ಖ್ಯಾತ ನಿರ್ದೇಶಕ ಒಂದಲ್ಲೊಂದು ವಿಚಾರದ ಮೂಲಕ ಸದ್ದು ಮಾಡುತ್ತಿರುವ ಅನುರಾಗ್ ಕಶ್ಯಪ್ ಪುತ್ರಿ ಆಲಿಯಾ ಕಶ್ಯಪ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತನ್ನ ದೀರ್ಘ ಕಾಲದ ಗೆಳೆಯ ಶೇನ್ ಜೊತೆ ಆಲಿಯಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಶೇನ್ ಜೊತೆ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ಎಂಗೇಜ್ ಆದ ಖುಷಿಯ ವಿಚಾರವನ್ನು ಆಲಿಯಾ ಕಶ್ಯಪ್ ಬಹಿರಂಗ ಪಡಿಸಿದ್ದಾರೆ. ಅಂದಹಾಗೆ ಶೇನ್ ಮತ್ತು ಆಲಿಯಾ ಇಬ್ಬರೂ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದೀಗ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 

22 ವರ್ಷದ ಆಲಿಯಾ ಕಶ್ಯಪ್ ಎರಡು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಭಾವಿ ಪತಿ ಶೇನ್‌ ಉಂಗುರ ಧರಿಸಿರುವ ಸುಂದರ ಫೋಟೋ ಶೇರ್ ಮಾಡಿದ್ರೆ ಮತ್ತೊಂದು ಫೋಟೋದಲ್ಲಿ ಇಬ್ಬರೂ ಲಿಪ್ ಕಿಸ್ ಮಾಡುತ್ತಿರುದ್ದಾರೆ. ಎರಡು ರೊಮ್ಯಾಂಟಿಕ್ ಫೋಟೋ ಮೂಲಕ ಎಂಗೇಜ್ ಆದ ವಿಚಾರವನ್ನು ಬಹಿರಂಗ ಪಡಿಸಿದರು. ಫೋಟೋ ಜೊತೆಗೆ ದೀರ್ಘವಾದ ಸಾಲುಗಳನ್ನು ಹಂಚಿಕೊಂಡಿದ್ದಾರೆ. 

'ಸೋ ಇದು ಸಂಭವಿಸಿತು. ನನ್ನ ಬೆಸ್ಟ್ ಫ್ರೆಂಡ್, ನನ್ನ ಸೋಲ್‌ಮೇಟ್ ಈಗ ಭಾವಿ ಪತಿ. ನನ್ನ ಜೀವನದ ಪ್ರೀತಿ ನೀನು. ನಿಜವಾದ ಪ್ರೀತಿ ಹೇಗಿರುತ್ತೆ ಎಂದು ತೋರಿಸಿದ್ದಕ್ಕಾಗಿ ಧನ್ಯವಾದಗಳು. ನಿನಗೆ ಎಸ್ ಎಂದು ಹೇಳಲು ನನಗೆ ಅತ್ಯಂತ ಸುಲಭವಾದ ಕೆಲಸವಾಗಿದೆ. ನನ್ನ ಉಳಿದ ಜೀವನವನ್ನು ನಿನ್ನೊಂದಿಗೆ ಕಳೆಯಲು ಕಾಯುತ್ತಿದ್ದೀನಿ. ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ' ಎಂದು ಹೇಳಿದ್ದಾರೆ. 

ಅನುರಾಗ್ ಕಶ್ಯಪ್ ಪ್ರತಿಕ್ರಿಯೆ

ಮಗಳ ನಿಶ್ಚಿತಾರ್ಥದ ಫೋಟೋಗೆ ತಂದೆ ಅನುರಾಗ್ ಕಶ್ಯಪ್ ಪ್ರತಿಕ್ರಿಯೆ ನೀಡಿದ್ದಾರೆ. ಅಲಿಯಾ ಶೇರ್ ಮಾಡಿರುವ ಫೋಟೋಗೆ ಅಭಿನಂದನೆ ಸಲ್ಲಿಸಿದ್ದಾರೆ. 'ಅವಳು ಬೆಳೆದಿದ್ದಾಳೆ. ಹಾಗಾಗಿ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ' ಎಂದು ಹೇಳಿದ್ದಾರೆ.

ಮಾಜಿ ಪತ್ನಿ ಮನೆಯಿಂದ ಹೊರಹಾಕಿದ್ಲು, ಫುಟ್‌ಪಾತ್‌ಲ್ಲಿ ಮಲಗ್ತಿದ್ದೆ; ಕಷ್ಟದ ದಿನ ನೆನೆದ ಅನುರಾಗ್ ಕಶ್ಯಪ್

ಇಬ್ಬರ ಪ್ರೀತಿ ಪ್ರಾರಂಭವಾಗಿದ್ದು ಹೇಗೆ 

ಅಲಿಯಾ ಮತ್ತು ಶೇನ್ ಇಬ್ಬರೂ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಮೊದಲ ಪರಿಚಯವಾದರು. ಶೇನ್ ಪ್ರೋಫೈಲ್ ನೋಡಿದ ಅಲಿಯಾ ಇಷ್ಟಪಟ್ಟರು. ಬಳಿಕ ಇಬ್ಬರೂ ಮಾತುಕತೆ ಪ್ರಾರಂಭಿಸಿದರು. ಎರಡು ತಿಂಗಳ ಬಳಿಕ ಇಬ್ಬರೂ ಭೇಟಿಯಾದರು. ಅಲ್ಲಿಂದ ಇಬ್ಬರ ಪ್ರೀತಿ ಪ್ರಾರಂಭವಾಗಿದ್ದು ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ.  

ಸುಶಾಂತ್ ಸಿಂಗ್ ಜೊತೆ ಮಾತನಾಡಲು ನಾನು ನಿರಾಕರಿಸಿದ್ದೆ; ನಿರ್ದೇಶಕ ಅನುರಾಗ್ ಕಶ್ಯಪ್ ಶಾಕಿಂಗ್ ಹೇಳಿಕೆ

ಈ ಆಲಿಯಾ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದರು. 'ನಾನು ಮೊದಲ ಹೆಜ್ಜೆ ಇಟ್ಟೆ. ಎರಡು ತಿಂಗಳ ಮಾತುಕತೆಯ ನಂತರ ನಾವು ಭೇಟಿಯಾದೆವು, ನಾನು ಓ ದೇವರೇ ಎಂದು ಭಾವಿಸಿದೆ, ಅವನು ನನಗೆ ಕಿಸ್ ಮಾಡುತ್ತಾನೆ ಎಂದು ಕಾಯುತ್ತಿದ್ದೆ ಆದರೆ ಅವನು ಹಾಗೆ ಮಾಡಿಲ್ಲ. ತುಂಬಾ ವಿಚಿತ್ರವಾಗಿತ್ತು ಏಕೆಂದರೆ ನಾವು ಮಾತನಾಡುತ್ತಿದ್ದೆವು. ನಾನು ಈ ಬಗ್ಗೆ ತುಂಬಾ ಯೋಚಿಸುತ್ತಿದ್ದೆ ಮತ್ತು ನಾನು ತುಂಬಾ ಹೆದರುತ್ತಿದ್ದೆ' ಎಂದು ಹೇಳಿದ್ದರು. ಇದೀಗ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದು ಸದ್ಯದಲ್ಲೇ ಮದುವೆಯಾಗಲಿದ್ದಾರೆ. 

  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Malaika Arora :ವಯಸ್ಸಿನ ಬಗ್ಗೆ ಯಾಕೆ ಅಷ್ಟೊಂದು ತಲೆಕೆಡಿಸಿಕೊಳ್ತೀರಾ? ಗಂಡಸರಿಗೊಂದು ನ್ಯಾಯ, ಹೆಂಗಸರಿಗೊಂದು ನ್ಯಾಯವೇ?
Epic Teaser: ಅಣ್ಣನ ದಾರಿಯಲ್ಲೇ ತಮ್ಮ.. ವೈಷ್ಣವಿ ಜೊತೆ ಲಿಪ್‌ಲಾಕ್, ಆನಂದ್ ದೇವರಕೊಂಡ ಹೊಸ ಸಿನಿಮಾ ಟೀಸರ್ ರಿಲೀಸ್