
ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಮತ್ತು ಕಾಜೋಲ್ ಪುತ್ರಿ ನಿಸಾ ದೇವಗನ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸಿನಿಮಾರಂಗಕ್ಕೆ ಇನ್ನೂ ಎಂಟ್ರಿ ಕೊಟ್ಟಿಲ್ಲವಾದರೂ ನಿಸಾ ಸದಾ ಸುದ್ದಿಯಲ್ಲಿರುತ್ತಾರೆ. ಪಾರ್ಟಿ, ಫ್ರೆಂಡ್ಸ್, ಟ್ರಿಪ್ ಅಂತ ಓಡಾಡುವ ನಿಸಾ ಸದ್ಯ ಲಂಡನ್‌ನಲ್ಲಿದ್ದಾರೆ. ತನ್ನ ಬಾಯ್ ಫ್ರೆಂಡ್ಸ್ ಜೊತೆ ನಿಸಾ ಲಂಡನ್ ಹಾರಿದ್ದು ಮಸ್ತ್ ಮಜಾ ಮಾಡುತ್ತಿದ್ದಾರೆ. ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಿರುವ ಸ್ಟಾರ್ ಕಿಡ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿಸಾ ಅವರ ಬೆಸ್ಟ್ ಫ್ರೆಂಡ್‌ಗಳಲ್ಲಿ ಅರ್ಹಾನ್ ಅವತ್ರಮಣಿ ಕೂಡ ಒಬ್ಬರು. ಈತ ಕೂಡ ಸಿನಿಮಾರಂಗದಲ್ಲಿ ಇಲ್ಲ. ಆದರೂ ಸ್ಟಾರ್ ಕಿಡ್‌ಗಳ ಜೊತೆ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ. ಫ್ಯಾಷನ್ ಕ್ರೇಸ್ ಅರ್ಹಾನ್ ಮತ್ತು ನಿಸಾ ಇಬ್ಬರೂ ಸಿಕ್ಕಾಪಟ್ಟೆ ಕ್ಲೋಸ್ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಅಂದಹಾಗೆ ಇಬ್ಬರ ಫೋಟೋಗಳನ್ನು ಸ್ವತಃ ಅರ್ಹಾನ್ ಅವರೇ ಶೇರ್ ಮಾಡಿದ್ದಾರೆ. ಲಂಡನ್ ಕ್ಲಬ್‌ನಲ್ಲಿ ಪಾರ್ಟಿ ಮಾಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಬಾಲಿವುಡ್‌ನ ಸ್ಟಾರ್ ಕಿಡ್ಸ್ ಸಾಮಾನ್ಯವಾಗಿ ಅಲ್ಲೇ ಪಾರ್ಟಿ ಮಾಡುತ್ತಾರೆ. ಇದೀಗ ನಿಸಾ ಕೂಡ ಎಲ್ಲೇ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಿದ್ದಾರೆ. ನಿಸಾ ಫೋಟೋಗಳಿಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ಫೋಟೋಗಳು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿವೆ.
ಕಾರಿಂದ ಇಳಿಯುವಾಗ ಜಾರಿ ಭದ್ರತಾ ಸಿಬ್ಬಂದಿ ಮೇಲೆ ಬಿದ್ದ ಕಾಜಲ್ ಪುತ್ರಿ; ನಿಸಾ ದೇವಗನ್ ವಿಡಿಯೋ ವೈರಲ್
ನಿಸಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಬಗ್ಗೆ ಇನ್ನೂ ನಿರ್ಧರವಾಗಿಲ್ಲ. ಆದರೆ ನಿಸಾ ಯಾವುದೇ ಸ್ಟಾರ್‌ಗಳಿಗಿಂತ ಕಡಿಮೆ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಿಜಾ ಸದಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಮಗಳ ಬಗ್ಗೆ ಕಾಜೋಲ್ ಹೆಮ್ಮೆ ವ್ಯಕ್ತಪಡಿಸಿದ್ದರು. 'ನನ್ನ ಮಗಳ ಬಗ್ಗೆ ಹೆಮ್ಮೆ ಇದೆ. ಅವಳಿಗೆ 19 ವರ್ಷ ಆಗಿದೆ ಮೋಜು, ಮಸ್ತಿ ಮಾಡುತ್ತಿದ್ದಾಳೆ. ಅವಳು ಏನು ಮಾಡಬೇಕೆಂದು ಬಯಸುತ್ತದೋ ಅದನ್ನು ಮಾಡುವ ಹಕ್ಕನ್ನು ಹೊಂದಿದ್ದಾಳೆ ಮತ್ತು ನಾನು ಯಾವಾಗಲೂ ಅವಳನ್ನು ಬೆಂಬಲಿಸುತ್ತೇನೆ' ಎಂದು ಹೇಳಿದ್ದರು.
ನೈಸಾ ಜೊತೆ ಕಾಜೋಲ್ ಫೋಟೋಶೂಟ್; ಅಮ್ಮ ಮಗಳ ಜೋಡಿಗೆ ಹಾಟ್ ಎಂದ ನೆಟ್ಟಿಗರು!
ನಿಸಾ ಅನೇಕ ಬಾರಿ ಟ್ರೋಲ್‌ಗೆ ಗುರಿಯಾಗಿದ್ದರು. ಬಾಡಿ ಶೇಮಿಂಗ್, ಮೇಕಪ್ ವಿಚಾರವಾಗಿ ನಿಸಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಕೆಲವು ತಿಂಗಳ ಹಿಂದೆ ನಿಸಾ ಫೇಸ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುವ ವಿಚಾರ ಕಳೆದ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಟ್ರೇಲಿಗರಿಗೆ ನಟಿ ಕಾಜೋಲ್ ಸರಿಯಾಗಿ ತಿರುಗೇಟು ನೀಡುವ ಮೂಲಕ ಬಾಯಿ ಮುಚ್ಚಿಸಿದ್ದರು. ನಿಸಾ ದೇವಗನ್ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಾರೆ ಎನ್ನುವ ಸುದ್ದಿ ಇದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.