ಸಮಂತಾರಿಂದ ದೂರಾಗಿ 3 ವರ್ಷದ ಬಳಿಕ ಹೊಸ ಮನೆ ಖರೀದಿಸಿದ ನಟ ನಾಗ ಚೈತನ್ಯ

Published : Mar 18, 2023, 12:03 PM IST
ಸಮಂತಾರಿಂದ ದೂರಾಗಿ 3 ವರ್ಷದ ಬಳಿಕ ಹೊಸ ಮನೆ ಖರೀದಿಸಿದ ನಟ ನಾಗ ಚೈತನ್ಯ

ಸಾರಾಂಶ

ಸಮಂತಾರಿಂದ ದೂರಾಗಿ 3 ವರ್ಷದ ಬಳಿಕ ನಟ ನಾಗಚೈತನ್ಯ  ಹೊಸ ಮನೆ ಖರೀದಿಸಿದ್ದಾರೆ.  

ಟಾಲಿವುಡ್ ಸ್ಟಾರ್ ನಾಗ ಚೈತನ್ಯ ಸದ್ಯ ಸಿಂಗಲ್ ಆಗಿ ಬದುಕುತ್ತಿದ್ದಾರೆ. ಪತಿ ಸಮಂತಾ ಅವರಿಂದ ದೂರಾದ ಬಳಿಕ ನಟ ನಾಗ ಚೈತನ್ಯ ತಂದೆ ನಾಗಾರ್ಜುನ ಮನೆಗೆ ಶಿಫ್ಟ್ ಆಗಿದ್ದರು. ಇದೀಗ ಹೊಸ ಮನೆ ಖರೀಸಿದ್ದಾರೆ ಎನ್ನುವ ಸುದ್ದು ಕೇಳಿ ಬಂದಿದೆ. ನಾಗ ಚೈತನ್ಯ ನಟಿ ಸಮಂತಾ ಅವರನ್ನು ಮದುವೆಯಾದ ಬಳಿಕ ಹೈದರಾಬಾದ್ ನ ಪ್ರತಿಷ್ಠಿತ ಏರಿಯಾ ಜುಬಿಲಿ ಹಿಲ್ಸ್ ನಲ್ಲಿ ವಾಸಿಸುತ್ತಿದ್ದರು. 2020ರಲ್ಲಿ ಇಬ್ಬರೂ ವಿಚ್ಛೇದನ ಪಡೆದು ದೂರಾದ ಬಳಿಕ ನಾಗ ಚೈತನ್ಯ ಆ ಮನೆಯಿಂದ ಹೊರಹೋಗಿದ್ದರು. ಬಳಿಕ ಅವರ ತಂದೆ ಜೊತೆ ಇದ್ದರು ಎನ್ನಲಾಗಿದೆ. ಇದೀಗ ತಮ್ಮ ಕನಸಿನ ಮನೆ ಖರೀದಿಸಿದ್ದಾರೆ. 

ಇತ್ತೀಚಿಗಷ್ಟೆ ಚೈ ಹೊಸ ಮನೆ ಖರೀದಿಸಿದ್ದು ಮನೆಯ ಕೆಲಸ ಸಂಪೂರ್ಣವಾಗುವವರೆಗೂ ಹೈದರಾಬಾದ್‌ನ ಪ್ರತಿಷ್ಠಿತ ಹೋಟೆಲ್ ನಲ್ಲಿ ತಂಗಿದ್ದರು. ಇದೀಗ ಅಧಿಕೃತವಾಗಿ ಹೊಸ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ಸಮಂತಾ ಮತ್ತು ನಾಗ್ ಇಬ್ಬರೂ ಮದುವೆ ನಂತರ ಹೊಸ ಮನೆ ಖರೀದಿಸಿದ್ದರು. ಇಬ್ಬರೂ ಬೇರೆ ಬೇರೆ ಆದ ಬಳಿಕ ಆ ಮನೆಯಲ್ಲಿ ಸಮಂತಾ ವಾಸವಿದ್ದರು ಎನ್ನಲಾಗಿತ್ತು. ಬಳಿಕ ಆ ಮನೆಯನ್ನು ಮಾರಾಟ ಮಾಡಿ ಸಮಂತಾ ಬೇರೆ ಮನೆಗೆ ಶಿಫ್ಟ್ ಆದರು ಎನ್ನುವ ಸುದ್ದಿ ಕೇಳಿ ಬಂದಿತ್ತು. ಆದರೀಗ ನಾಗ್ ತಂದೆ ಜೊತೆ ಇದ್ದರು. ವಿಚ್ಛೇದನ ಪಡೆದು 3 ವರ್ಷದ ಬಳಿಕ ಹೊಸ ಮನೆ ಖರೀದಿಸಿದ್ದಾರೆ. 

ಸಮಂತಾ ಎದುರಿಗೆ ಬಂದ್ರೆ ಏನ್ಮಾಡ್ತೀರಿ? ನಾಗಚೈತನ್ಯ ಶಾಕಿಂಗ್ ರಿಯಾಕ್ಷನ್

ನಾಗ ಚೈತನ್ಯ ಸದ್ಯ ಕಸ್ಟಡಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಕಸ್ಟಡಿ ಸಿನಿಮಾದ ಲುಕ್ ಈಗಾಗಲೇ ವೈರಲ್ ಆಗಿದ್ದು ನಾಗ್ ಪೊಲೀಸ್ ಆಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ವೆಂಕಟ್ ಪ್ರಭು ಸಾರಥ್ಯದಲ್ಲಿ ಸಿನಿಮಾ ಮೂಡಿಬಂದಿದೆ. ಈ ಸಿನಿಮಾದಲ್ಲಿ ನಾಗ್ ಚೈತನ್ಯ ಅವರಿಗೆ ಜೋಡಿಯಾಗಿ ಕೃತಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ಈ ಸಿನಿಮಾ ಸದ್ಯದಲ್ಲೇ ತೆರೆಗೆ ಬರುತ್ತಿದೆ. 

ಬಾಲಿವುಡ್ ಸ್ಟಾರ್ ನಿರ್ದೇಶಕರ ಆಫೀಸ್‌ನಲ್ಲಿ ನಾಗಚೈತನ್ಯ; ಕುತೂಹಲ ಮೂಡಿಸಿದ ಭೇಟಿ

ನಾಗ್ ಚೈತನ್ಯ ಮತ್ತು ಸಾಯಿ ಪಲ್ಲವಿ ನಟನೆಯ ಲವ್ ಸ್ಟೋರಿ ಸಿನಿಮಾ ತಕ್ಕ ಪಟ್ಟಿಗೆ  ಯಶಸ್ಸು ತಂದು ಕೊಟ್ಟಿತು. ಬಳಿಕ ಬಂದ   ಥ್ಯಾಂಕ್ ಯೂ ಸಿನಿಮಾ ನೆಲಕಚ್ಚಿತು. ಅದೇ ಸಮಯದಲ್ಲಿ ಸಮಂತಾ ಅವರಿಂದ ದೂರ ಆಗಿ ದೊಡ್ಡ ಹಿನ್ನಡೆ ಅನುಭವಿಸಿದರು. ಹೊಸ ಮನೆಯಿಂದನೂ ಹೊರಬಂದಿರು. ಇದೀಗ ಮೂರು ವರ್ಷಗಳ ಬಳಿಕ ತಮ್ಮ ಕನಸಿನ ಮನೆ ಖರೀದಿಸಿದ ಸಂತಸದಲ್ಲಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2026ರಲ್ಲಿ ಹಾಟ್ ಆಗಿರಬೇಕಾ, ಪ್ರೆಗ್ನೆಂಟ್ ಆಗಿಬಿಡಲೇ? ಸಲಹೆ ಕೇಳಿದ ನಟಿಗೆ ಭರ್ಜರಿ ಕಮೆಂಟ್
ಯೂಟ್ಯೂಬ್‌ನಲ್ಲಿರುವ ಟಾಕ್ಸಿಕ್ ಟೀಸರ್ ವಿರುದ್ಧ ಅಸಮಾಧಾನಕ್ಕೆ ಸೆನ್ಸರ್ ಬೋರ್ಡ್ ಮಹತ್ವದ ಹೇಳಿಕೆ