
ಇತ್ತೀಚೆಗೆ ಕಿರುತೆರೆಯ ಖ್ಯಾತ ನಟ ಅಲಿ ಗೋನಿ ಜನರ ಕೋಪವನ್ನು ಎದುರಿಸಬೇಕಾಯಿತು.ಇದಕ್ಕೆ ಕಾರಣ, ಗಣೇಶ ಚತುರ್ಥಿ ಆಚರಣೆಯ ಸಮಯದಲ್ಲಿ ಅವರು ಗೆಳತಿ ಜಾಸ್ಮಿನ್ ಭಾಸಿನ್ ಮತ್ತು ಸ್ನೇಹಿತೆ ನಿಯಾ ಶರ್ಮಾ ಅವರೊಂದಿಗೆ ಕಾಣಿಸಿಕೊಂಡಿದ್ದರು. ಆದರೆ, ಆ ಸಮಯದಲ್ಲಿ ಎಲ್ಲರೂ ಗಣಪತಿ ಬಪ್ಪಾ ಮೋರಿಯಾ ಎಂದು ಹೇಳುತ್ತಿದ್ದಾಗ, ನಟ ಅಲಿ ಗಣಪತಿಯ ಹೆಸರನ್ನು ತೆಗೆದುಕೊಂಡಿರಲಿಲ್ಲ. ಆದರೆ ಚ್ಯೂಯಿಂಗ್ ಗಮ್ ತಿನ್ನುತ್ತಿದ್ದರು. ಇದರಿಂದ ಅವರು ಬಹಳ ಟ್ರೋಲ್ಗೆ ಒಳಗಾಗಿದ್ದಾರೆ. ಅವರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳ ಸುರಿಮಳೆಯೇ ಆಗುತ್ತದೆ. ಇದೀಗ ಅಲಿ ಗೋನಿ (Aly Goni) ಟ್ರೋಲ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಟ್ರೋಲ್ ಹೆಚ್ಚಾದ ಕಾರಣ, ಈ ಬಗ್ಗೆ ಅವರು ಮೌನ ಮುರಿದಿದ್ದಾರೆ.
ಇದನ್ನೂ ಓದಿ: ಬಾನು ಮುಷ್ತಾಕ್ ಅದ್ಭುತ ಲೇಖಕಿ... Dasara ಉದ್ಘಾಟನೆ ವಿವಾದದ ಬಗ್ಗೆ ನಟ ಅವಿನಾಶ್ ಹೇಳಿದ್ದೇನು?
ನಾನು ಎಲ್ಲಾ ಧರ್ಮವನ್ನೂ ಪ್ರೀತಿಸುತ್ತೇನೆ. ನನಗೆ ಎಲ್ಲಾ ಧರ್ಮದಲ್ಲಿಯೂ ಪ್ರೀತಿ ಇದೆ. ಆದರೆ ನಾನು ಮುಸ್ಲಿಂ ಆಗಿರುವ ಕಾರಣದಿಂದ ನಮ್ಮಲ್ಲಿ ಮೂರ್ತಿ ಪೂಜೆಗೆ ಅವಕಾಶ ಇಲ್ಲ. ಕೇವಲ ಪ್ರಚಾರಕ್ಕಾಗಿ ನಾನು ಹಿಂದೂ ದೇವರ ಹೆಸರನ್ನು ಹೇಳಲಾರೆ. ಗಣೇಶ ಚತುರ್ಥಿ ಆಚರಣೆಯ ಸಮಯದಲ್ಲಿ ನನ್ನನ್ನು ಏಕೆ ಟ್ರೋಲ್ ಮಾಡಲಾಯಿತು ಎಂದು ಆರಂಭದಲ್ಲಿ ಅರ್ಥವಾಗಲಿಲ್ಲ. ಆದರೆ ನಾನು ಗಣಪತಿ ಬಪ್ಪಾ ಮೋರಿಯಾ ಎಂದು ಹೇಳದ ಕಾರಣ ಟ್ರೋಲ್ ಮಾಡಲಾಗಿದೆ. ಆದರೆ ಓರ್ವ ಮುಸ್ಲಿಮ್ ಆಗಿ ನಾನು ಇದನ್ನು ಒಪ್ಪುವುದಿಲ್ಲ. ನನ್ನ ಧರ್ಮ ಏನು ಹೇಳುತ್ತದೆಯೋ ಅದನ್ನೇ ಮಾಡುತ್ತೇನೆ. ಯಾರನ್ನೋ ಓಲೈಸಲು ನನ್ನ ಧರ್ಮ ಬಿಡಲು ಆಗುವುದಿಲ್ಲ. ನಾನು ಗಣಪತಿ ಆಚರಣೆಯಲ್ಲಿ ಭಾಗವಹಿಸಿದ್ದು ಇದೇ ಮೊದಲು. ಅಲ್ಲಿಗೆ ಹೋದಾಗ ಹೀಗೆ ಸನ್ನಿವೇಶ ಇರುತ್ತದೆ ಎಂದು ತಿಳಿದಿರಲಿಲ್ಲ. ಆದರೆ ಎಲ್ಲರೂ ಗಣಪತಿ ಬಪ್ಪಾ ಮೋರಿಯಾ ಎಂದಾಗ ನನಗೆ ಅದನ್ನು ಹೇಳಲು ಆಗಲಿಲ್ಲ. ಏಕೆಂದರೆ ನನ್ನ ಧರ್ಮದ ವಿರುದ್ಧ ನಾನು ಹೋಗಲಾರೆ ಎಂದಿದ್ದಾರೆ.
ಯಾರಿಗಾದರೂ ಇದರಿಂದ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ನಟ ಅಲಿ ಹೇಳಿದ್ದಾರೆ. "ನನ್ನ ಧರ್ಮ ಇದನ್ನು ಅನುಮತಿಸುವುದಿಲ್ಲ. ನಾವು ಪೂಜಿಸುವುದಿಲ್ಲ. ನಮಗೆ ಒಂದೇ ನಂಬಿಕೆ ಇದೆ - ನಾವು ನಮಾಜ್ ಓದುತ್ತೇವೆ, ಪ್ರಾರ್ಥಿಸುತ್ತೇವೆ ಮತ್ತು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ. ನಾವು ಎಲ್ಲರನ್ನೂ ಗೌರವಿಸಬೇಕು ಎಂದು ಕುರಾನ್‌ನಲ್ಲಿ ಬರೆಯಲಾಗಿದೆ, ಮತ್ತು ನಾನು ಸಹ ಗೌರವಿಸುತ್ತೇನೆ, ಕುರಾನ್ ಏನು ಹೇಳಿದ್ಯೋ ಅದನ್ನು ನಾನು ಮಾಡುತ್ತೇನೆ ಎಂದಿದ್ದಾರೆ.
ಅವರು ಸ್ಪಷ್ಟನೆ ಕೊಟ್ಟ ಬಳಿಕವೂ ಸಾಕಷ್ಟು ಟ್ರೋಲ್ಗೆ ಒಳಗಾಗುತ್ತಿದೆ. ಕ್ರಿಶ್ಚಿಯನ್ ಹುಡುಗಿಯ ಜೊತೆ ಡೇಟಿಂಗ್ ಮಾಡಲು, ಬೇರೆಯವರನ್ನು ಲವ್ ಜಿಹಾದ್ ಮೂಲಕ ಮತಾಂತರಗೊಳಿಸಲು ಅನುಮತಿಯನ್ನು ನಿಮ್ಮ ಧರ್ಮ ನೀಡುತ್ತದೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಅದಕ್ಕೆ ಕೆಲವರು ಕೆಂಡಾಮಂಡಲವಾಗಿದ್ದು, ನಾವು ಯಾರನ್ನೂ ಲವ್ ಜಿಹಾದ್ (Love Jihad) ಮಾಡುವುದಿಲ್ಲ. ಅವರಾಗಿಯೇ ಒಪ್ಪಿದರೆ ಮಾತ್ರ ಮತಾಂತರ ಮಾಡುತ್ತೇವೆ. ಅದಕ್ಕೆ ಅವರ ಅನುಮತಿಯನ್ನು ಪಡೆಯುತ್ತೇವೆ. ಇಲ್ಲದಿದ್ದರೆ ನಾವು ಯಾವ ಹೆಜ್ಜೆಯನ್ನೂ ಮುಂದಕ್ಕೆ ಇಡುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ದಸರಾ ಉದ್ಘಾಟನೆ ಹೈಕೋರ್ಟ್ ಅಂಗಳಕ್ಕೆ: Banu Mushtaq ವಿರುದ್ಧ ಆರೋಪ- ಅರ್ಜಿಯಲ್ಲಿ ಏನಿದೆ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.