ಮೊಹಮ್ಮದ್ ಅಲಿಯಿಂದ AR ರೆಹಮಾನ್‌ವರೆಗೆ: ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಸ್ಟಾರ್ ಸೆಲೆಬ್ರಿಟಿಗಳಿವರು!

By Mahmad Rafik  |  First Published Sep 15, 2024, 8:11 PM IST

ಇಸ್ಲಾಂ ಧರ್ಮವು ವೇಗವಾಗಿ ಬೆಳೆಯುತ್ತಿರುವ ಧರ್ಮಗಳಲ್ಲಿ ಒಂದಾಗಿದೆ. ತಮ್ಮ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡ ಪ್ರಮುಖ ಸೆಲೆಬ್ರಿಟಿಗಳ ಹೆಸರು ಇಲ್ಲಿದೆ. ಯಾವ ಕಾರಣಕ್ಕಾಗಿ ಮತಾಂತರ ಎಂಬುದರ ಮಾಹಿತಿ ನೋಡೋಣ ಬನ್ನಿ.


ಬೆಂಗಳೂರು: ಇಡೀ ವಿಶ್ವದಲ್ಲಿ ಹಲವು ಧರ್ಮದ ಜನರು ವಾಸಿಸುತ್ತಿದ್ದಾರೆ. ಇತ್ತೀಚಿನ ಕೆಲ ವರದಿಗಳ ಪ್ರಕಾರ, ಇಸ್ಲಾಂ ಅತ್ಯಂತ ವೇಗವಾಗಿ ವಿಸ್ತರಣೆಯಾಗುತ್ತಿರುವ ಧರ್ಮ ಎಂದು ಹೇಳಲಾಗುತ್ತಿದ್ದು, 2050ರೊಳಗೆ ಮುಸ್ಲಿಮರ ಜನಸಂಖ್ಯೆ ಅಧಿಕವಾಗಲಿದೆ ಎಂದು ಹೇಳಲಾಗುತ್ತಿದೆ. ಇತ್ತೀಚಿನ ದೇಶಗಳ ಜನಸಂಖ್ಯಾ ವರದಿಗಳು, ಇಸ್ಲಾಂ ಸಮುದಾಯದ ಜನರ ಸಂಖ್ಯೆ ಹಂತ ಹಂತವಾಗಿ ಏರಿಕೆಯಾಗುತ್ತಿರೋದನ್ನು ದೃಢಪಡಿಸಿವೆ. ಹಾಗಾಗಿಯೇ 2050ರವರೆಗೆ ಮುಸ್ಲಿಂ ಸಮುದಾಯದ ಜನಸಂಖ್ಯೆ ವಿಶ್ವದಲ್ಲಿ ಅಧಿಕವಾಗಿರಲಿದೆ ಎಂದು ಅಂದಾಜಿಸಲಾಗುತ್ತಿದೆ. ಸದ್ಯ ಕ್ರೈಸ್ತ ವಿಶ್ವದ ಅತಿದೊಡ್ಡ ಧರ್ಮವಾಗಿದೆ. ಎರಡನೇ ಸ್ಥಾನದಲ್ಲಿ ಇಸ್ಲಾಂ ಧರ್ಮವಿದೆ. ಭಾರತದ ಕೆಲ ಸೆಲಿಬ್ರಿಟಿಗಳು ವೈಯಕ್ತಿಕ ಕಾರಣಗಳಿಗಾಗಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಆ ಸ್ಟಾರ್ ಕಲಾವಿದರು ಯಾರು ಎಂಬುದರ ಮಾಹಿತಿ ಇಲ್ಲಿದೆ.

ದಿವಂಗತ ಪಾಪ್ ಸಿಂಗರ್ ಮೈಕಲ್ ಜಾಕ್ಸನ್, ತಮ್ಮ ಗಾಯನ ಹಾಗೂ ಡ್ಯಾನ್ಸ್ ಶೈಲಿಯಿಂದಲೇ ಗುರುತಿಸಿಕೊಂಡವರು. ಇಂದಿಗೂ ಇಡೀ ವಿಶ್ವದ ತುಂಬ ಅಪಾರ ಅಭಿಮಾನಿಗಳನ್ನು ಹೊಂದಿರುವ ಮೈಕಲ್ ಜಾಕ್ಸನ್, ಸಂಗೀತ ಲೋಕದಲ್ಲಿ ತಮ್ಮದೇ ಟ್ರೆಂಡ್  ಸೃಷ್ಟಿಸಿದ ಜಾದೂಗಾರ. ಲಾಸ್‌  ಏಂಜ್‌ಲೀಸ್‌ನ ಗೆಳೆಯನೋರ್ವನ ಮನೆಯಲ್ಲಿ ಮೈಕಲ್ ಜಾಕ್ಸನ್ ಇಸ್ಲಾಂಗೆ ಮತಾಂತರವಾಗಿದ್ದರು. ಇದಾದ ಬಳಿಕ ಖುರಾನ್ ಪಠಣೆಯನ್ನು ಶುರು ಮಾಡಿದ್ದರು. 

Latest Videos

undefined

ಭಾರತೀಯ ಸಿನಿ ಲೋಕದ ದೊಡ್ಡ ಸ್ಟಾರ್ ನಟ ಧರ್ಮೇಂದ್ರ,  1979ರಲ್ಲಿ ಹೇಮಾ ಮಾಲಿನಿಯವರನ್ನು ಮದುವೆಯಾಗುವ ಉದ್ದೇಶದಿಂದ ಇಸ್ಲಾಂ ಧರ್ಮವನ್ನು ತಮ್ಮದಾಗಿಸಿಕೊಂಡಿದ್ದರು. ಧರ್ಮೇಂದ್ರ ಮೊದಲ ಮದುವೆ ಪ್ರಕಾಶ ಕೌರ್ ಎಂಬವರ ಜೊತೆಯಾಗಿತ್ತು. ಹಿಂದೂ ವಿವಾಹ ನಿಯಮಗಳ ಪ್ರಕಾರ, ಮೊದಲ ಪತ್ನಿ ಇರುವಾಗಲೇ ಎರಡನೇ ಮದುವೆಯಾಗುವಂತಿಲ್ಲ. ಈ ಕಾರಣದಿಂದ ಧರ್ಮೇಂದ್ರ ಇಸ್ಲಾಂಗೆ ಬಂದಿದ್ದರು.

ಪದ್ಮ ಭೂಷಣ ವಿಜೇತೆ, ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ಮದುವೆಯಾದ ಬಳಿಕ ಇಸ್ಲಾಂಗೆ ಮತಾಂತರಗೊಂಡಿದ್ದರು. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಶರ್ಮಿಳಾ ಟ್ಯಾಗೋರ್, ಮುಸ್ಲಿಂ ಕುಟುಂಬದ ಮನ್ಸೂರ್ ಅಲಿ ಪಟೌಡಿಯವರನ್ನು ಮದುವೆಯಾಗಿ ಆಯೇಶಾ ಬೇಗಂ ಆಗಿದ್ದಾರೆ. ಶರ್ಮಿಲಾ ಟ್ಯಾಗೋರ್-ಮನ್ಸೂರ್ ಅಲಿ ಪಟೌಡಿ ದಂಪತಿಗೆ ಸೈಫ್ ಅಲಿ ಖಾನ್, ಸಬಾ ಅಲಿ ಖಾನ್ ಮತ್ತು  ಸೋಹಾ ಅಲಿ ಖಾನ್ ಎಂಬ ಮೂವರು ಮಕ್ಕಳಿದ್ದಾರೆ.

ಬಿಕಿನಿ ಧರಿಸಿ ಕುಟುಂಬಸ್ಥರಿಂದ ದೂರವಾದೆ ಎಂದ ಮುಸ್ಲಿಂ ನಟಿ

ಇನ್ನು ಸಂಗೀತ ಲೋಕದ ದಿಗ್ಗಜ ಎ.ಆರ್ ರೆಹಮಾನ್ ಸಹ ಹಿಂದೂ ಕುಟುಂಬದಲ್ಲಿ ಜನಿಸಿದವರು. ಇವರ ಮೂಲ ಹೆಸರು ದಿಲೀಪ್ ಕುಮಾರ್. 1984ರಲ್ಲಿ ದಿಲೀಪ್ ಕುಮಾರ್ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರು. ಗುಣಮುಖರಾದ  ಬಳಿಕ ಹರಕೆಯ ಪ್ರಕಾರ, ಇವರ ಹೆಸರನ್ನು ಅಲ್ಲಾಹ-ರಖ್ಖಾ ರೆಹಮಾನ್ ಎಂದು ಹೆಸರಿಡಲಾಯ್ತು. ಅಂದಿನಿಂದ ಇಂದಿಗೂ ರೆಹಮಾನ್ ಹಾಗೂ ಅವರ ಕುಟುಂಬಬಸ್ಥರು ಇಸ್ಲಾಂ ಧರ್ಮವನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ.

ನಟಿ ಅಮೃತಾ ಸಿಂಗ್ ಜನನ ಸಿಖ್-ಮುಸ್ಲಿಂ ಕುಟುಂಬದಲ್ಲಿ ಆಗಿತ್ತು. ಬಾಲ್ಯದಿಂದಲೂ ಅಮೃತಾ ಸಿಂಗ್ ಸಿಖ್ ಧರ್ಮವನ್ನು ಪಾಲನೆ ಮಾಡಿಕೊಂಡು ಬಂದಿದ್ದರು. ನಟ ಸೈಫ್ ಅಲಿ ಖಾನ್ ಜೊತೆ ಮದುವೆ ಬಳಿಕ ಅಮೃತಾ ಸಿಂಗ್  ಇಸ್ಲಾಂಗೆ ಮತಾಂತರಗೊಂಡರು. ಇನ್ನು ಕರೀನಾ ಕಪೂರ್ ಮದುವೆ ಬಳಿಕ ಧರ್ಮವನ್ನು ಬದಲಿಸಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, ಕರೀನಾ ಕಪೂರ್ ಕ್ರೈಸ್ತ ಧರ್ಮ ಅನುಸರಿಸುತ್ತಾರೆ ಎಂದು ವರದಿಯಾಗಿದೆ.

ಖ್ಯಾತ ಬಾಕ್ಸರ್ ಮೊಹಮ್ಮದ್ ಅಲಿ ಜನನ 17 ಜನವರಿ  1942ರಲ್ಲಿ ಕೆಂಟಕಿ ಪ್ರಾಂತ್ಯದ ಲೌಯಿಸ್ವಿಲೆ ಎಂಬಲ್ಲಿ ಆಗಿತ್ತು. ಇವರ ಮೂಲ ಹೆಸರು ಕೈಸಿಯಸ್ ಮಾರ್ಸಲೆಸ್ ಕ್ಲೆ ಜೂನಿಯರ್ ಎಂದಾಗಿತ್ತು. ಮೂರು ಬಾರಿ ವರ್ಲ್ಡ್ ಹೆವಿವೇಟ್ ಚಾಂಪಿಯನ್ ಆಗಿ ದಾಖಲೆ ಬರೆದಿರುವ ಮೊಹಮ್ಮದ್ ಅಲಿ, 1964 ರಲ್ಲಿ, ಫ್ಲೋರಿಡಾದಲ್ಲಿ ಬಾಕ್ಸಿಂಗ್ ಪಂದ್ಯ ನಡೆಯುತ್ತಿತ್ತು, ಆ ಪಂದ್ಯದಲ್ಲಿ ಅಲಿ ಸನ್ನಿ ಲಿಸ್ಟನ್ ಅವರನ್ನು ಸೋಲಿಸುವ ಮೂಲಕ ತಮ್ಮ ಮೊದಲ ವಿಶ್ವ ಹೆವಿವೇಟ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದರು. ಈ ಘಟನೆ ಬಳಿಕ ಹೆಸರು ಮತ್ತು ಧರ್ಮವನ್ನು ಬದಲಿಸಿಕೊಂಡಿರೋದಾಗಿ ಘೋಷಿಸಿಕೊಂಡರು. ಆನಂತರ 6 ಮಾರ್ಚ್ 1964 ರಂದು ಇಸ್ಲಾಂ ಧರ್ಮವನ್ನು ಸ್ವೀಕರಿಸುವುದಾಗಿ ಅಧಿಕೃತ ಹೇಳಿಕೆಯನ್ನು ಬಿಡುಗಡೆಗೊಳಿಸಿದರು.

80ರ ದಶಕದಲ್ಲೇ ಬೋಲ್ಡ್‌ ಆಗಿ ನಟಿಸಿದ ಮುಸ್ಲಿಂ ನಟಿ, ಹಿಂದೂ ಧರ್ಮಕ್ಕೆ ಬದಲಾದ್ರೂ ಮದುವೆ ಭಾಗ್ಯ ಸಿಗ್ಲಿಲ್ಲ!

click me!