ಯಶ್ ಪ್ರೊಡಕ್ಷನ್ ಚಿತ್ರದಲ್ಲಿ ರಣಬೀರ್ ಡಬಲ್ ರೋಲ್: ಸಿನಿಪ್ರಿಯರಿಗೆ ರಾಕಿಂಗ್ ಸ್ಟಾರ್ ಕಡೆಯಿಂದ ಬಿಗ್ ಗಿಫ್ಟ್‌

By Govindaraj S  |  First Published Sep 15, 2024, 6:59 PM IST

ಯಶ್ ಪ್ರೊಡಕ್ಷನ್ಸ್ ನ  ಈ ಸಿನಿಮಾದ ಶೂಟಿಂಗ್ ಭರದಿಂದ ನಡೀತಾ ಇದ್ದು, ಶೂಟಿಂಗ್ ಅಡ್ಡದಿಂದ ಬಿಗ್ ನ್ಯೂಸ್ ವೊಂದು ಬಂದಿದೆ. ಕೆಜಿಎಫ್ -2 ನಂತ್ರ ರಾಕಿ ಭಾಯ್ ಯಾಕಿಷ್ಟು ಸೈಲೆಂಟ್ ಆಗಿದ್ದಾರೆ ಅಂತ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. 


ಬಾಲಿವುಡ್ನಲ್ಲಿ  ಬಿಗ್ ಸ್ಟಾರ್ ಕಾಸ್ಟ್ ನ ,  ಬಿಗ್ ಬಜೆಟ್ ನ ಮೂರು ಪಾರ್ಟ್ ಗಳ ರಾಮಾಯಣ ಸಿನಿಮಾ ಬರ್ತಿರೋದು ನಿಮಗೆ ಗೊತ್ತೇ ಇದೆ. ರಣಬೀರ್ ಕಪೂರ್ ರಾಮನಾಗಿ ನಟಿಸಲಿರೋ ಈ ಸಿನಿಮಾದಲ್ಲಿ ಯಶ್ ರಾವಣನಾಗಿ ಮಿಂಚಲಿದ್ದಾರೆ. ಅಷ್ಟೇ ಅಲ್ಲ ಈ ಮೆಗಾ ಪ್ರಾಜೆಕ್ಟ್ ಗೆ ರಾಕಿಭಾಯ್ ಸಹ ನಿರ್ಮಾಪಕ ಕೂಡ ಹೌದು. ಸದ್ಯ ಯಶ್ ಪ್ರೊಡಕ್ಷನ್ಸ್ ನ  ಈ ಸಿನಿಮಾದ ಶೂಟಿಂಗ್ ಭರದಿಂದ ನಡೀತಾ ಇದ್ದು, ಶೂಟಿಂಗ್ ಅಡ್ಡದಿಂದ ಬಿಗ್ ನ್ಯೂಸ್ ವೊಂದು ಬಂದಿದೆ. ಕೆಜಿಎಫ್ -2 ನಂತ್ರ ರಾಕಿ ಭಾಯ್ ಯಾಕಿಷ್ಟು ಸೈಲೆಂಟ್ ಆಗಿದ್ದಾರೆ ಅಂತ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ದೊಡ್ಡದೇನಾದ್ರು ಮಾಡಬೇಕು ಅಂದ್ರೆ ಹೆಚ್ಚು ಕಾಯಬೇಕು ಅಂತ ಉತ್ತರ ಕೊಟ್ಟಿರೋ ಯಶ್, ನಿಜಕ್ಕೂ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಿಗೆ ಕೈ ಹಾಕಿದ್ದಾರೆ. 

ಈಗಾಗ್ಲೇ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಶುರು ಮಾಡಿರೋ ರಾಕಿಂಗ್ ಸ್ಟಾರ್, ಕೋಟಿ ವೆಚ್ಚದ ಸೆಟ್ ಗಳಲ್ಲಿ ಹೆಸರಾಂತ ತಂತ್ರಜ್ಞರ ಜೊತೆಗೆ ಸಿನಿಮಾ ಶೂಟ್ ಮಾಡ್ತಾ ಇದ್ದಾರೆ. ಇತ್ತ ಬೆಂಗಳೂರಿನಲ್ಲಿ ಟಾಕ್ಸಿಕ್ ಶೂಟ್ ನಡೀತಾ ಇದ್ರೆ ಅತ್ತ ಮುಂಬೈನಲ್ಲಿ ಯಶ್ ಪ್ರೊಡಕ್ಷನ್ ನ ರಾಮಾಯಣ ಕೂಡ ಭರದಿಂದ ಶೂಟ್ ಆಗ್ತಾ ಇದೆ. ಬಾಲಿವುಡ್ ನ ಹೆಸರಾಂತ ನಿರ್ಮಾಪಕ ನಿಮಿತ್ ಮಲ್ಹೋತ್ರಾ ಜೊತೆ ಸೇರಿ ರಾಕಿಂಗ್ ಸ್ಟಾರ್ ಯಶ್ ರಾಮಾಯಣ ಸಿನಿಮಾವನ್ನ ನಿರ್ಮಾಣ ಮಾಡ್ತಾ ಇದ್ದಾರೆ. ನಿತೇಶ್ ತಿವಾರಿ ನಿರ್ದೇಶನದಲ್ಲಿ ಬಾಲಿವುಡ್ನಲ್ಲಿ ದೊಡ್ಡ ಬಜೆಟ್ನಲ್ಲಿ ರಾಮಾಯಣವನ್ನ ತೆರೆಗೆ ತರಲಾಗ್ತಾ ಇದೆ. ನಿರ್ದೇಶಕ ನಿತೇಶ್ ತಿವಾರಿ ರಾಮಾಯಣವನ್ನ ವಿಸ್ಕ್ರತವಾಗಿ ತೋರಿಸೋದಕ್ಕೆ ಸಜ್ಜಾಗಿದ್ದು ಮೂರು ಪಾರ್ಟ್ಗಳಲ್ಲಿ ಸಿನಿಮಾ ಮೂಡಿಬರದಲಿದೆ. ಸದ್ಯ ಮುಂಬೈನಲ್ಲಿ ಮೊದಲ ಭಾಗದ ಚಿತ್ರೀಕರಣ  ಭರದಿಂದ ನಡೀತಾ ಇದೆ. 

Tap to resize

Latest Videos

undefined

ಟಾಕ್ಸಿಕ್ ನಷ್ಟೇ ಗುಟ್ಟಾಗಿ ಈ ಸಿನಿಮಾದ ಶೂಟಿಂಗ್ ಕೂಡ ನಡೀತಾ ಇದೆ. ರಣ್ ಬೀರ್ ಕಪೂರ್ ಈ ಸಿನಿಮಾದಲ್ಲಿ ರಾಮನ ಅವತಾರದಲ್ಲಿ ಮಿಂಚಿದ್ರೆ ಸೌತ್ ಬ್ಯೂಟಿ ಸಾಯಿ ಪಲ್ಲವಿ ಸೀತಾಮಾತೆಯಾಗಿ ಕಾಣಿಸಿಕೊಳ್ತಾ ಇದ್ದಾರೆ. ಇವರಿಬ್ಬರೂ ರಾಮ ಸೀತೆ ಗೆಟಪ್ ನಲ್ಲಿರೋ ಕೆಲ ಫೋಟೋಸ್ ಶೂಟಿಂಗ್ ಅಡ್ಡದಿಂದ  ಲೀಕ್ ಆಗಿದ್ದು, ಅವುಗಳನ್ನ ನೋಡಿ ಫ್ಯಾನ್ಸ್ ಅಕ್ಷರಶಃ ಥ್ರಿಲ್ ಆಗಿದ್ದಾರೆ. ಇದೀಗ ಇದೇ ರಾಮಾಯಣ ಸೆಟ್ ನಿಂದ ಮತ್ತೊಂದು ಬಿಗ್ ಖಬರ್ ಲೀಕ್ ಆಗಿದೆ. ಅದನ್ನ ಕೇಳಿ ಸಿನಿಪ್ರಿಯರು ಮತ್ತಷ್ಟು ಎಕ್ಸೈಟ್ ಆಗಿದ್ದಾರೆ. ಈ ಸಿನಿಮಾದಲ್ಲಿ ರಣ್ ಬೀರ್ ರಾಮನಾಗಿ ಕಾಣಿಸಿಕೊಳ್ಳೋದ್ರ ಜೊತೆಗೆ ಪರಶುರಾಮನ ಪಾತ್ರ ಕೂಡ ಮಾಡಲಿದ್ದಾರಂತೆ. ಆ ಮೂಲಕ ಇದೇ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಮಿಂಚಲಿದ್ದಾರೆ. 

ರಾಮ ಮತ್ತು ಪರಶುರಾಮ ಇಬ್ಬರೂ ವಿಷ್ಣುವಿನ ಅವತಾರ ಅನ್ನೋದು ರಾಮಾಯಣ ಬಲ್ಲವರಿಗೆಲ್ಲಾ ಗೊತ್ತೇ ಇದೆ. ಸೋ ನಿರ್ದೇಶಕ ನಿತೇಶ್ ತಿವಾರಿ ಈ ಎರಡೂ ಪಾತ್ರಗಳನ್ನ ರಣ್  ಬೀರ್ ಕೈಯಲ್ಲೇ ಮಾಡಿಸೋಕೆ ಪ್ಲಾನ್ ಮಾಡಿದ್ದಾರೆ. ರಣ್ ಬೀರ್ ಕೂಡ ಇದಕ್ಕೆ ಯೆಸ್ ಅಂದಿದ್ದಾರಂತೆ. ಪರಶುರಾಮನ ಪಾತ್ರಕ್ಕಾಗಿ ರಣ್ ಬೀರ್ ತುಂಬಾನೇ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅಲ್ಲಿಗೆ ರಾಮಾಯಣದಲ್ಲಿ ರಣ್ ಬೀರ್ ಫ್ಯಾನ್ಸ್ ಗೆ ಡಬಲ್ ಧಮಾಕಾ ಸಿಗಲಿದೆ. ಇನ್ನೂ ರಾಮ, ಪರಶುರಾಮರ ವಿಷ್ಯ ಏನೋ ಗೊತ್ತಾಯ್ತು. ರಾವಣನ ವಿಷ್ಯ ಏನೂ ಇಲ್ವಾ ಅಂತ ಕೇಳ್ತಾ ಇದ್ದೀರಾ.. 

ಪಾಲಿಟಿಕ್ಸ್ ಎಂಟ್ರಿಗೆ ಅಡಿಪಾಯ ಹೇಗಿರುತ್ತೆ ವಿಜಯ್ 69.?: ದಳಪತಿ ನಟನೆಯ ಕೊನೆ ಸಿನಿಮಾಗೆ ಕನ್ನಡಿಗರ ಸಾರಥ್ಯ!

ಹೌದು ಈ ಸಿನಿಮಾದಲ್ಲಿ ಯಶ್ ಎಂಟ್ರಿ ಯಾವಾಗ ಅಂತ ಎಲ್ಲರೂ ಪ್ರಶ್ನೆ ಮಾಡ್ತಾ ಇದ್ದಾರೆ. ಮೂಲಗಳ ಪ್ರಕಾರ ಮೊದಲ ಭಾಗದಲ್ಲಿ ರಾಮನ ಬಾಲ್ಯ, ವಿಧ್ಯಾಭ್ಯಾಸ ,ಸೀತಾ ಸ್ವಯಂವರದ ಕಥೆ ಇರಲಿದೆ. ಸೋ ಮೊದಲ ಭಾಗದಲ್ಲಿ ರಾವಣ ಬರೋದಿಲ್ಲ. ಸೋ ಯಶ್ ಕೂಡ ಪಾರ್ಟ್-1ನಲ್ಲಿ ನಟಿಸೋದಿಲ್ಲ. ಈಗಾಗ್ಲೇ ಯಶ್ ಟಾಕ್ಸಿಕ್ ಶೂಟ್ನಲ್ಲಿ ಭಾಗಿಯಾಗಿದ್ದು ಮುಂದಿನ ವರ್ಷದ ವರೆಗೂ ಅದ್ರಲ್ಲೇ ಬ್ಯುಸಿಯಾಗಲಿದ್ದಾರೆ. ಯಶ್ ಟಾಕ್ಸಿಕ್ ಮುಗಿಯುತ್ತಲೇ ರಾಮಾಯಣದ ಸೆಕೆಂಡ್ ಪಾರ್ಟ್ ನಲ್ಲಿ ಭಾಗಿಯಾಗಲಿದ್ದಾರಂತೆ.   ಒಟ್ಟಾರೆ ಯಶ್ ಬರಲಿರುವ ದಿನಗಳಲ್ಲಿ ಸಿನಿಪ್ರಿಯರಿಗೆ ದೊಡ್ಡ ದೊಡ್ಡ ಉಡುಗೊರೆಗಳನ್ನೇ ಕೊಡಲಿದ್ದಾರೆ. ಬರೀ ನಟನೆಯ ಸಿನಿಮಾಗಳಷ್ಟೇ ಅಲ್ಲದೇ ತಮ್ಮ ಮಾನ್ ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆ ಮೂಲಕ ಬಿಗ್ ಗಿಫ್ಟ್ ಕೊಡೋಕೆ ಸಜ್ಜಾಗಿದ್ದಾರೆ. ರಾಕಿ ರಾಮಾಯಣನ ನೋಡೋಕೆ ನೀವು ಕೂಡ ಸಜ್ಜಾಗಿ.

click me!