ರಾಜಕೀಯ ಅಖಾಡಕ್ಕೆ ಹೊರಟು ನಿಂತಿರೋ ವಿಜಯ್ ರ ಕೊನೆ ಸಿನಿಮಾ ತುಂಬಾನೇ ಅದ್ದೂರಿಯಾಗಿರಲಿದೆ ಅನ್ನೋದು ಈಗಾಗ್ಲೇ ಗೊತ್ತಿದೆ. ಜೊತೆಗೆ ಈ ಅದ್ದೂರಿ ಸಿನಿಮಾ ನಿರ್ಮಿಸೋದು ಯಾರು ಅನ್ನೋದು ಕೂಡ ಈಗ ರಿವೀಲ್ ಆಗಿದೆ.
ದಳಪತಿ ವಿಜಯ್ ಗೋಟ್ ಬಳಿಕ ಇನ್ನೊಂದು ಸಿನಿಮಾದಲ್ಲಿ ನಟಿಸಿ ಚಿತ್ರರಂಗಕ್ಕೆ ವಿದಾಯ ಹೇಳಲಿದ್ದಾರೆ. ರಾಜಕೀಯ ಅಖಾಡಕ್ಕೆ ಹೊರಟು ನಿಂತಿರೋ ವಿಜಯ್ ರ ಕೊನೆ ಸಿನಿಮಾ ತುಂಬಾನೇ ಅದ್ದೂರಿಯಾಗಿರಲಿದೆ ಅನ್ನೋದು ಈಗಾಗ್ಲೇ ಗೊತ್ತಿದೆ. ಜೊತೆಗೆ ಈ ಅದ್ದೂರಿ ಸಿನಿಮಾ ನಿರ್ಮಿಸೋದು ಯಾರು ಅನ್ನೋದು ಕೂಡ ಈಗ ರಿವೀಲ್ ಆಗಿದೆ. ವಿಜಯ್ ಕೊನೆ ಸಿನಿಮಾಗೆ ಬಂಡವಾಳ ಹೂಡೋ ಚಾನ್ಸ್ ಯಶ್ ರ ನೆಚ್ಚಿನ ನಿರ್ಮಾಣ ಸಂಸ್ಥೆ ಹೆಗಲೇರಿದೆ. ಕಾಲಿವುಡ್ ನಲ್ಲಿ ಕೋಟಿ ಕೋಟಿ ಅಭಿಮಾನಿಗಳನ್ನ ಹೊಂದಿರೋ ದಳಪತಿ ವಿಜಯ್ ರಾಜಕೀಯ ರಣ ಕಣಕ್ಕೆ ಇಳೀತಾ ಇದ್ದಾರೆ. ತಮಿಳಿಗ ವೆಟ್ರಿ ಕಳಗಂ ಅನ್ನೋ ಪಾರ್ಟಿ ಕಟ್ಟಿರೋ ವಿಜಯ್ ಪಕ್ಷದ ಸಂಘಟನೆಯಲ್ಲಿ ಫುಲ್ ಬ್ಯುಸಿ.
2026ರ ತಮಿಳುನಾಡು ವಿಧಾನಸಭಾ ಚುನಾವಣೆ ವಿಜಯ್ ಟಾರ್ಗೆಟ್.. ಆದ್ರೆ ಅಷ್ಟರಲ್ಲಾಗಲೇ ವಿಜಯ್ ರ ಬೆಳ್ಳಿತೆರೆ ಕೊನೇ ಜರ್ನಿಗೆ ಸಿನಿಮಾ ಅನೌನ್ಸ್ ಆಗಿದೆ. ಗೋಟ್ ಸಿನಿಮಾ ನಿರೀಕ್ಷೆಗೆ ತಕ್ಕ ಹಾಗಿರಲಿಲ್ಲ ಅಂತ ಬೇಸರಿಕೊಂಡಿರೋ ದಳಪತಿ ಫ್ಯಾನ್ಸ್, ವಿಜಯ್ ಕೊನೆ ಸಿನಿಮಾ ಮಾತ್ರ ನಭೂತೋ ನಭವಿಷ್ಯತಿ ಅನ್ನೋ ತರಹ ಇರಬೇಕು ಅಂತ ತಾಕೀತು ಮಾಡಿದ್ದಾರೆ. ವಿಜಯ್ ಕೂಡ ಕೊನೆ ಸಿನಿಮಾ ಅವಿಸ್ಮರಣೀಯ ಆಗಬೇಕು, ಫ್ಯಾನ್ಸ್ ಹುಚ್ಚೆದ್ದು ಕುಣೀಬೇಕು, ಎಲ್ಲಕ್ಕಿಂತ ಹೆಚ್ಚಾಗಿ ಪಾಲಿಟಿಕ್ಸ್ ಭವಿಷ್ಯಕ್ಕೆ ಬುನಾದಿ ಹಾಕಬೇಕು ಅಂತ ಫಿಕ್ಸ್ ಆಗಿದ್ದಾರೆ. ದಳಪತಿಯ ಈ ಕೊನೆ ಸಿನಿಮಾಗೆ ಚದುರಂಗ ವೆಟ್ಟೈ ಖ್ಯಾತಿಯ ನಿರ್ದೇಶಕ ಎಚ್.ವಿನೋದ್ ಆಕ್ಷನ್ ಕಟ್ ಹೇಳೋದು ಫಿಕ್ಸ್ ಆಗಿದೆ.
BIG ಬಜೆಟ್ನಲ್ಲಿ ಚಿತ್ರ ನಿರ್ಮಿಸೋ ಪ್ರೊಡಕ್ಷನ್ ಹೌಸ್ ಯಾವುದು ಅನ್ನೋ ಪ್ರಶ್ನೆ ಕಾಲಿವುಡ್ ನಲ್ಲಿ ಹುಟ್ಟಿಕೊಂಡಿತ್ತು. ಆ ಪ್ರಶ್ನೆಗೀಗ ಉತ್ತರ ಸಿಕ್ಕಾಗಿದೆ. ವಿಜಯ್ 69ಗೆ ನಮ್ಮ ಕನ್ನಡದ KVN ಪ್ರೊಡಕ್ಷನ್ಸ್ ಬಂಡವಾಳ ಹೂಡಲಿದೆ. ಸಖತ್ ಸಿನಿಮಾದಿಂದ ಕನ್ನಡದಲ್ಲಿ ಚಿತ್ರ ನಿರ್ಮಾಣಕ್ಕಿಳಿದ ವೆಂಕಟ್ ನಾರಾಯಣ್ ಒಡೆತನದ KVN ಪ್ರೊಡಕ್ಷನ್ಸ್ ಮತ್ತೊಂದು ಮೆಗಾಬಜೆಟ್ ಪ್ರಾಜೆಕ್ಟ್ ಗೆ ಕೈ ಹಾಕಿದೆ. ಈಗಾಗ್ಲೇ ಪ್ರೊಡಕ್ಷನ್ ಹಂತದಲ್ಲಿರೋ KVN ಸಿನಿಮಾಗಳೆಲ್ಲಾ ಮೆಗಾಪ್ರಾಜೆಕ್ಟ್ ಗಳೇ.
ಜೋಗಿ ಪ್ರೇಮ್ ನಿರ್ದೇಶನ, ಌಕ್ಷನ್ ಪ್ರಿನ್ಸ್ ಧ್ರುವ ನಟನೆಯ KD ಸಿನಿಮಾಗೆ ನೂರು ಕೋಟಿಗೂ ಅಧಿಕ ಬಂಡವಾಳ ಹೂಡಿದೆ KVN ಸಂಸ್ಥೆ. KD ಸಿನಿಮಾದಲ್ಲಿ ಧ್ರುವ ಜೊತೆಗೆ ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಸೇರಿದಂತೆ ದೊಡ್ಡ ತಾರಾಗಣ ಇದೆ. ಈ ಸಿನಿಮಾದ ಆಡಿಯೋನೇ ಬರೊಬ್ಬರಿ 17 ಕೋಟಿಗೆ ಸೇಲ್ ಆಗಿದ್ದು ಇದೇ ಡಿಸೆಂಬರ್ ಗೆ KD ಪ್ಯಾನ್ ಇಂಡಿಯಾ ತೆರೆಗೆ ಬರಲಿದೆ. ಇನ್ನೂ ರಾಕಿಂಗ್ ಸ್ಟಾರ್ ಯಶ್ ಕನಸಿನ ಪ್ರಾಜೆಕ್ಟ್ ಟಾಕ್ಸಿಕ್ ಗೂ ಬಂಡವಾಳ ಹೂಡ್ತಾ ಇರೋದು ಇದೇ KVN ಸಂಸ್ಥೆ. ರಾಕಿಭಾಯ್ ಒಡೆತನದ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜೊತೆಗೂಡಿ ಟಾಕ್ಸಿಕ್ ನ KVN ನಿರ್ಮಾಣ ಮಾಡ್ತಾ ಇದೆ.
ಪ್ರಭಾಸ್ ನಟನೆಯ ಈ ಚಿತ್ರಕ್ಕೆ ಮೊದಲು ನಾಯಕಿಯಾಗಿದ್ದು ನಟಿ ರಕುಲ್... ಆದರೆ ನಿರ್ಮಾಪಕ ದಿಲ್ ರಾಜು ಮಾಡಿದ್ದೇ ಬೇರೆ!
ಇಂಥಾ ಎರಡೆರಡು ಬಿಗ್ ಬಜೆಟ್ ಸಿನಿಮಾಗಳ ಜೊತೆಗೆ ದಳಪತಿ ವಿಜಯ್ ರ ಸಿನಿಮಾ ನಿರ್ಮಾಣಕ್ಕೂ KVN ವೆಂಕಟ್ ನಾರಾಯಣ ಕೈ ಹಾಕಿದ್ದಾರೆ. ಮೂಲಗಳ ಪ್ರಕಾರ ಈ ಸಿನಿಮಾದ ಬಜೆಟ್ ಭರ್ತಿ 500 ಕೋಟಿ ಅಂತೆ. ಒಂದು ಕಡೆ ಬಿಗ್ ಸಿನಿಮಾಗಳ ವಿತರಣೆ ಜೊತೆಗೆ, ಬಹುಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಚಿತ್ರಗಳನ್ನ KVN ಸಂಸ್ಥೆ ನಿರ್ಮಿಸ್ತಾ ಇದ್ದು ಹೊಂಬಾಳೆ ಫಿಲಮ್ಸ್ ಹಾದಿಯಲ್ಲೇ ಮುನ್ನುಗ್ತಾ ಇದೆ. KD, ಟಾಕ್ಸಿಕ್ ನಂತರ ದಳಪತಿ ವಿಜಯ್ ಸಿನಿಮಾ ಶುರುಮಾಡಿದ್ದು ಮತ್ತೊಂದು ವಿಜಯಯಾತ್ರೆಗೆ ಸಜ್ಜಾಗಿದೆ. ವಿಶೇಷ ಅಂದ್ರು ಇದು ಕನ್ನಡಿಗರ ನಿರ್ಮಾಣ ಸಂಸ್ಥೆ ಅನ್ನೋದು ದೊಡ್ಡ ಹೆಗ್ಗಳಿಕೆ.