ಮತಾಂತರದ ಕುರಿತು ವಿವರಿಸುವ ನೈಜ ಘಟನೆ ಆಧರಿತ ದಿ ಕೇರಳ ಸ್ಟೋರಿಯ ಮೂಲಕ ಖ್ಯಾತಿ ಗಳಿಸಿರುವ ಅದಾ ಶರ್ಮಾ ಹೆಸರೇನು ಗೊತ್ತಾ?
'ದಿ ಕೇರಳ ಸ್ಟೋರಿ' (The Kerala Story) ಚಿತ್ರ ಬಿಡುಗಡೆಯಾದಾಗಿನಿಂದಲೂ ಸುದ್ದಿಯಲ್ಲಿದೆ. ಈ ಚಿತ್ರದ ಬಗ್ಗೆ ಸುದೀರ್ಘ ಚರ್ಚೆ ಇನ್ನೂ ನಡೆಯುತ್ತಿದೆ. ಒಂದು ವಿಭಾಗವು ಚಿತ್ರವನ್ನು ತುಂಬಾ ಇಷ್ಟಪಡುತ್ತಿದ್ದರೆ, ಇನ್ನೊಂದೆಡೆ ಜನರು ಈ ಚಿತ್ರದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಆದರೆ ಚಿತ್ರದ ಬಗೆಗಿನ ಅಭಿಮಾನಿಗಳ ಕ್ರೇಜ್ ಎಷ್ಟರಮಟ್ಟಿಗಿದೆಯೆಂದರೆ ಕೆಲವು ಅಭಿಮಾನಿಗಳು ಈ ಚಿತ್ರವನ್ನು ಹಲವಾರು ಬಾರಿ ವೀಕ್ಷಿಸಲು ಥಿಯೇಟರ್‌ಗಳತ್ತ ಮುಖ ಮಾಡುತ್ತಿದ್ದಾರೆ. ಚಿತ್ರದ ಈ ದೊಡ್ಡ ಯಶಸ್ಸಿನ ಬಗ್ಗೆ ಸ್ವತಃ ಚಿತ್ರದ ನಾಯಕಿ ನಟಿ ಅದಾ ಶರ್ಮಾ ತುಂಬಾ ಸಂತೋಷಪಟ್ಟಿದ್ದಾರೆ. ಇದಾಗಲೇ ಕೆಲವು ಚಿತ್ರಗಳಲ್ಲಿ ನಟಿಸಿದ್ದರೂ ಅದಾ ಶರ್ಮಾ ಅವರಿಗೆ ಹೆಸರು ತಂದುಕೊಟ್ಟ ಸಿನಿಮಾ ದಿ ಕೇರಳ ಸ್ಟೋರಿ. ಅದಾ ಶರ್ಮಾ ಅವರ ಮೊದಲ ಚಿತ್ರವೇ ದಿ ಕೇರಳ ಸ್ಟೋರಿ ಎಂದುಕೊಂಡವರು ಹೆಚ್ಚು ಮಂದಿ. ಆದರೆ ಹಲವರಿಗೆ ಅದಾ ಶರ್ಮಾ ಅವರ ಸಿನಿ ಜರ್ನಿ ಹಾಗೂ ಅವರ ಹೆಸರಿನ ಹಿಂದಿರುವ ಕುತೂಹಲದ ಸ್ಟೋರಿ ಕುರಿತು ತಿಳಿದಿಲ್ಲ. ಅಂದಹಾಗೆ ಈ ಚಿತ್ರದಲ್ಲಿ ಕಾಣಿಸುತ್ತಿರುವಾಕೆ ಅದಾ ಶರ್ಮಾ ಅಲ್ಲ, ಚಾಮುಂಡೇಶ್ವರಿ ಅಯ್ಯರ್ ಎಂದರೆ ನಂಬುವಿರಾ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ.
ಅಂದಹಾಗೆ ಅದಾ ಶರ್ಮಾ (Adah Sharma) 1920 ಹಾರರ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದವರು. ವಿಕ್ರಮ್ ಭಟ್ ನಿರ್ದೇಶನದ ಹಾರರ್ ಮೂವಿ 1920. ಈ ಚಿತ್ರದಲ್ಲಿ ಅವರು ಲಿಸಾ ಎಂಬ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಅದಾ ಅವರ ಕೆಲಸ ತುಂಬಾ ಇಷ್ಟವಾಯಿತು. ಅವರ ಚಿತ್ರ 13 ಕೋಟಿ ಕಲೆಕ್ಷನ್ ಮಾಡಿತ್ತು. ಚಿತ್ರದ ಹಾರರ್ ಕೂಡ ಜನರಿಗೆ ಇಷ್ಟವಾಗಿತ್ತು. ಆದರೆ ಈ ಚಿತ್ರದಲ್ಲಿ ಕೆಲಸ ಮಾಡಿದ ನಂತರವೂ ನಟಿಗೆ ಯಾವುದೇ ವಿಶೇಷ ಕೆಲಸ ಸಿಗಲಿಲ್ಲ. ಅದ್ಭುತ ಅಭಿನಯದ ನಂತರವೂ ಈಕೆಗೆ ಸಿಕ್ಕಿದ್ದು, ಸೈಡ್ ರೋಲ್ಗಳಷ್ಟೇ. ಆದರೆ 'ದಿ ಕೇರಳ ಸ್ಟೋರಿ' ಚಿತ್ರದಿಂದ ಅದಾ ಪಡೆದ ಪ್ರೀತಿ ಮತ್ತು ಮನ್ನಣೆ ಅವರಿಗೆ ಯಾವುದೇ ಚಿತ್ರದಿಂದ ಸಿಗಲಿಲ್ಲ. ಅವರ ವೃತ್ತಿಜೀವನದಲ್ಲಿ ಇಷ್ಟೊಂದು ಅಗಾಧ ಯಶಸ್ಸು ಕಂಡ ಮೊದಲ ಚಿತ್ರ ಇದಾಗಿದೆ. ಧಾರ್ಮಿಕ ಮತಾಂತರದ ವಿಷಯದ ಮೇಲೆ ಸಿನಿಮಾ ಮಾಡಲಾಗಿದೆ.
ಸಂಸದೆಯೇ ದಿ ಕೇರಳ ಸ್ಟೋರಿ ತೋರಿಸಿದ್ರೂ ಬಾರದ ಬುದ್ಧಿ! ಮುಸ್ಲಿಂ ಜೊತೆ ಪರಾರಿಯಾದವಳ ಪಾಡಿದು
ಇತ್ತೀಚೆಗೆ, ಅದಾ ಶರ್ಮಾ ಅವರನ್ನು ವಿಮಾನ ನಿಲ್ದಾಣದಲ್ಲಿ ಗುರುತಿಸಿದಾಗ, ಪಾಪರಾಜಿಗಳು ಪ್ರಶಸ್ತಿಯ ಬಗ್ಗೆ ಅವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ್ದ ನಟಿ, ತಮ್ಮ ಸಿನಿಮಾವನ್ನು ಜನ ಮೆಚ್ಚುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದಿದ್ದಾರೆ. ಇಲ್ಲಿಯವರೆಗೆ, ಬಿಡುಗಡೆಯಾದ ಐದು ವಾರಗಳ ನಂತರವೂ ಚಿತ್ರವು ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿಯನ್ನು ಪಡೆಯುತ್ತಿದೆ. ಪ್ರೇಕ್ಷಕರಿಂದ ಸಿಗುತ್ತಿರುವ ಪ್ರೀತಿಯೇ ನನಗೆ ನಿಜವಾದ ಪ್ರಶಸ್ತಿ ಎಂದಿದ್ದರು. ಅಂದಹಾಗೆ 25 ಕೋಟಿ ಬಜೆಟ್‌ನಲ್ಲಿ ತಯಾರಾದ ದಿ ಕೇರಳ ಸ್ಟೋರಿ ಚಿತ್ರ ಇದುವರೆಗೆ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಅಷ್ಟಕ್ಕೂ ಅದಾ ಶರ್ಮಾ ಅವರ ಹೆಸರು ಅದಾ ಅಲ್ಲ. ಸಂದರ್ಶನವೊಂದರಲ್ಲಿ ಅವರ ನಿಜವಾದ ಹೆಸರನ್ನು ಅದಾ ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ, ಯೂಟ್ಯೂಬರ್ ಪಾವನಿ ಮಲ್ಹೋತ್ರಾ ಅವರಿಗೆ ನೀಡಿದ ಸಂದರ್ಶನದಲ್ಲಿ, ಅದಾ ಶರ್ಮಾ ಅವರ ನಿಜವಾದ ಹೆಸರು 'ಚಾಮಂಡೇಶ್ವರಿ ಅಯ್ಯರ್' (Chamundeshwari Ayyer) ಎಂದು ಹೇಳಿದ್ದಾರೆ. ಇದು ಆಡುಮಾತಿನ ಭಾಷೆಯಲ್ಲಿ ಸ್ವಲ್ಪ ಕಠಿಣ ಮತ್ತು ಕಷ್ಟಕರವಾದ ಹೆಸರು. ಅದಕ್ಕಾಗಿಯೇ ನಾನು ನನ್ನ ಹೆಸರನ್ನು ಬದಲಾಯಿಸಲು ನಿರ್ಧರಿಸಿದೆ. ಅದಾ ಶರ್ಮಾ ಹೆಸರು ನನ್ನ ಪಾಲಿಗೆ ಲಕ್ ಕೊಟ್ಟಿದ್ದು, ಕೇರಳ ಸ್ಟೋರಿಯಿಂದ ಎಂದಿದ್ದಾರೆ.
ಶೂಟಿಂಗ್ ಸ್ಪಾಟ್ಗೆ ಮೊದಲು ನಟಿ ಬಂದ್ರೆ ಏನಾಗತ್ತೆ? ಕೆಟ್ಟ ಅನುಭವ ಬಿಚ್ಚಿಟ್ಟ ಅದಾ ಶರ್ಮಾ