ರಾಮನ ಲುಕ್ ಹೀಗಿರುತ್ತಾ? ಪ್ರಭಾಸ್ 'ಆದಿಪುರುಷ್' ಗೆಟಪ್ ಕೆಣಕಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ನಟಿ

By Shruthi KrishnaFirst Published Jun 9, 2023, 5:52 PM IST
Highlights

ರಾಮನ ಲುಕ್ ಹೀಗಿರುತ್ತಾ? ಎಂದು ಪ್ರಭಾಸ್ ಗೆಟಪ್ ಕೆಣಕಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗ್ದಾರೆ ನಟಿ ಕಸ್ತೂರಿ ಶಂಕರ್. 

ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಸಿನಿಮಾತಂಡ ಭರ್ಜರಿ ಪ್ರಚಾರ ಮಾಡುತ್ತಿದ್ದು ಪ್ರಭಾಸ್ ಮತ್ತು ಇಡೀ ತಂಡ ಅನೇಕ ರಾಜ್ಯಗಳನ್ನು ಸುತ್ತಾಡಿ ಪ್ರಮೋಷನ್ ಮಾಡುತ್ತಿದೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದ್ದು ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಮಹಾಕಾವ್ಯವನ್ನು ತೆರೆಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರಾಮನಾಗಿ ಪ್ರಭಾಸ್ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ನಡುವೆ ನಟಿ ಕಸ್ತೂರಿ ಶಂಕರ್ ಪ್ರಭಾಸ್ ಲುಕ್ ಕೆಣಕಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ಮೀಸೆ ಬಿಟ್ಟು ರಾಮನಾಗಿ ಮಿಂಚಿರುವ ಪ್ರಭಾಸ್ ಲುಕ್ ಬಗ್ಗೆ ನಟಿ ಕಸ್ತೂರಿ ಪ್ರಶ್ನೆ ಮಾಡಿದ್ದಾರೆ. ಮೀಸೆ ಬಿಟ್ಟು ರಾಮನನ್ನು ಚಿತ್ರೀಕರಸಿದ್ದು ಸರಿಯಿಲ್ಲ ಎಂದು ಹೇಳಿದ್ದಾರೆ. ಅಷ್ಟೆಯಲ್ಲದೇ ಚಿತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡಿರುವುದು ರಾಮನಿಗಿಂತ ಮಹಾಭಾರತದ ಕರ್ಣನನ್ನು ಹೋಲುತ್ತದೆ ಎಂದು ಕಸ್ತೂರಿ ಶಂಕರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಕಸ್ತೂರಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.  

Latest Videos

'ರಾಮಜೀ ಮತ್ತು ಲಕ್ಷ್ಮಣರನ್ನು ಮೀಸೆ ಮತ್ತು ದಾಡಿಯೊಂದಿಗೆ ಚಿತ್ರಿಸಿದ ಯಾವುದೇ ಸಂಪ್ರದಾಯವಿದೆಯೇ? ಈ ಗೊಂದಲದ ವಿಚಲನ ಏಕೆ? ಶ್ರೀರಾಮನನ್ನು ಲೆಜೆಂಡ್ ನಟರು ಯಾವುದೇ ದೋಷವಿಲ್ಲದೇ ಚಿತ್ರಿಸಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ. 

ಕಸ್ತೂರಿ ಶಂಕರ್ ಟ್ವೀಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಕಸ್ತೂರಿ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಪ್ರಭಾಸ್ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡಿ ಕಸ್ತೂರಿ ಅವರನ್ನು ತರಾಟೆ ತೆಗೆದುಕೊಡಿದ್ದಾರೆ. ಕಸ್ತೂರಿ ಅವರು ಸಿನಿಮಾದ ಬಗ್ಗೆ ಆಳವಾಗಿ ತಿಳಿದುಕೊಂಡು ಕಾಮೆಂಟ್ ಮಾಡಬೇಕು ಎಂದು ಹೇಳುತ್ತಿದ್ದಾರೆ. ಈಗಾಗಲೇ ಆದಿಪುರುಷ್ ಅನೇಕ ವಿಚಾರಗಳಿಗೆ ಸುದ್ದಿಯಾಗಿದೆ. ಇದೀಗ ಕಸ್ತೂರಿ ಶಂಕರ್ ಪ್ರಭಾಸ್ ಅಭಿಮಾನಿಗಳ ಕೆಣಕಿ ಟೀಕೆ ಎದುರಿಸುತ್ತಿದ್ದಾರೆ. 

Adhipurush: ನಿರ್ಗತಿಕ ಮಕ್ಕಳಿಗೆ 10 ಸಾವಿರ ಟಿಕೆಟ್ ಬುಕ್ ಮಾಡಿದ ರಣಬೀರ್ ಕಪೂರ್, ಅಭಿಮಾನಿಗಳ ಮೆಚ್ಚುಗೆ

ಆದಿಪುರುಷ್ ರಾಮಾಯಣ ಮಹಾಕಾವ್ಯದ ಆಧುನಿಕ ರೂಪಾಂತರವಾಗಿದೆ. ಚಿತ್ರದಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಕೃತಿ ಸನೊನ್ ಸೀತೆಯ ಪಾತ್ರದಲ್ಲಿ ಮಿಂಚಿದ್ದಾರೆ. ದೊಡ್ಡ ಬಜೆಟ್ ನಲ್ಲಿ ಈ ಸಿನಿಮಾ ಮೂಡಿ ಬಂದಿದ್ದು ಇದೇ ತಿಂಗಳು ಜೂನ್ 16ರಂದು ರಿಲೀಸ್‌ಗೆ ಸಿದ್ಧವಾಗಿದೆ. ಸೈಫ್ ಅಲಿ ಖಾನ್ ರಾವಣನಾಗಿ ಮಿಂಚಿದ್ದಾರೆ.

Is there ANY tradition where Lord Ramji and Laxman are portrayed with moustache and facial hair? Why this disturbing departure ? Especially in prabhas's telugu home, Sri Rama has been played to perfection by legends.
I feel Prabhas looks like Karna not Rama. pic.twitter.com/glkQZ7nHj9

— Kasturi (@KasthuriShankar)

ಪ್ರಭಾಸ್​, ಕೃತಿ ಫ್ಯಾನ್ಸ್​ಗೆ ಬಂಪರ್​: ಆದಿಪುರುಷ್​ ಚಿತ್ರಕ್ಕೆ 10 ಸಾವಿರ ಉಚಿತ ಟಿಕೆಟ್​

ಒಂದು ಆಸನ ಹನುಮನಿಗೆ ಮೀಸಲು

ಆದಿಪುರುಷ್ ಸಿನಿಮಾ ಪ್ರದರ್ಶನವಾಗುವ ಪ್ರತಿಯೊಂದು ಚಿತ್ರಮಂದಿರಗಳಲ್ಲಿ ಒಂದು ಆಸನವನ್ನು ಹನುಮನಿಗೆ ಮೀಸಲಿಡಲಾಗುತ್ತಿದೆ. ಈ ಬಗ್ಗೆ ಸಿನಿಮಾತಂಡ ಇತ್ತೀಚೆಗಷ್ಟೆ ಬಹಿರಂಗ ಪಡಿಸಿದೆ.  ಒಂದು ಆಸನವನ್ನು ಹನುಮನಿಗೆ ಅರ್ಪಿಸಲು ಸಿನಿಮಾತಂಡ ನಿರ್ಧರಿಸಿದೆ. ಜೂನ್ 16ರಂದು ತೆರೆಗ ಬರುತ್ತಿರುವ ಆದಿಪುರುಷ್ ಸಿನಿಮಾ ಹೇಗಿದೆ, ವಿವಾದಗಳನ್ನು ಬಿದಿಗೊತ್ತಿ ಸೂಪರ್ ಸಕ್ಸಸ್ ಕಾಣುತ್ತಾ ಕಾದು ನೋಡಬೇಕಿದೆ. 

click me!