ಚಿಕನ್ ಪಾಕ್ಸ್‌ಗೆ ಗಾಬರಿ ಬೇಡ, ಏನೇ ಮಾರ್ಕ್‌ ಇದ್ದರೂ ಹೋಗುತ್ತದೆ: ನಟಿ ಆಹಾನ ಕೃಷ್ಣ

Suvarna News   | Asianet News
Published : Jun 05, 2021, 11:52 AM IST
ಚಿಕನ್ ಪಾಕ್ಸ್‌ಗೆ ಗಾಬರಿ ಬೇಡ, ಏನೇ ಮಾರ್ಕ್‌ ಇದ್ದರೂ ಹೋಗುತ್ತದೆ: ನಟಿ ಆಹಾನ ಕೃಷ್ಣ

ಸಾರಾಂಶ

ನಟಿಯರಿಗೆ ಚಿಕನ್ ಪಾಕ್ಸ್ (ಅಮ್ಮ) ಬಂದರೆ ಏಕೆ ಗಾಬರಿ ಆಗುತ್ತಾರೆ? ನನ್ನ ಮುಖ ನೋಡಿ ಹೇಗಾಗಿದೆ ಎಂದ ಮಾಲಯಾಳಂ ನಟಿ ಆಹಾನ.

ಮಲಯಾಳಂ ಚಿತ್ರರಂಗದ ಬೋಲ್ಡ್ ನಟಿ ಆಹಾನ ಕೃಷ್ಣ ಏನೇ ವಿಚಾರ ಇದ್ದರೂ 2.3 ಮಿಲಿಯನ್ ಫಾಲೋವರ್ಸ್‌ ಇರುವ ಇನ್‌ಸ್ಟಾಗ್ರಾಂ ಖಾತೆ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಕಳೆದ ಲಾಕ್‌ಡೌನ್‌ನಲ್ಲಿ ಎದುರಿಸಿದ ಚಿಕನ್ ಪಾಕ್ಸ್‌ ಮಾರ್ಕ್‌ಗಳು ಸಂಪೂರ್ಣವಾಗಿ ಗುಣವಾಗಲು ಎಷ್ಟು ಸಮಯ ತೆಗೆದುಕೊಂಡಿದೆ ಹಾಗೂ ಈಗ ಮುಖ ಹೇಗೆ ಕಾಣಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಖ್ಯಾತ ನಟನ ನಾಲ್ವರು ಪುತ್ರಿಯರಲ್ಲಿ ಈಕೆಗೆ ಇದ್ದಾರೆ ಮಿಲಿಯನ್ ಫಾಲೋವರ್ಸ್!

ಆಹಾನ ಪೋಸ್ಟ್:
'ನಾನು ಮೊದಲು ಹಂಚಿಕೊಂಡಿರುವ ಫೋಟೋ, ನನಗೆ ಚಿಕನ್ ಪಾಕ್ಸ್ ಬಂದ ಕೆಲವು ದಿನಗಳಲ್ಲಿ ಕ್ಲಿಕ್ ಮಾಡಿರುವುದು. ಕಳೆದ ವರ್ಷ ನನಗೆ ಚಿಕನ್ ಪಾಕ್ಸ್ ಆಗಿತ್ತು. ನಾನು ಆಗ ಮೊದಲು ದೇವರಿಗೆ ಪ್ರಾರ್ಥನೆ ಮಾಡಿದ್ದು ಮುಖದ ಮೇಲೆ ಕಡಿಮೆ ಪಾಕ್ಸ್ ಅಗಲಿ ಎಂದು. ಆದರೆ ದೇವರಿಗೆ ನನ್ನ ಪ್ರಾರ್ಥನೆ ಕೇಳಿಸಲಿಲ್ಲ. ಸುಮಾರು 30 ದೊಡ್ಡದು ಮತ್ತು ಸಣ್ಣ ಪಾಕ್ಸ್ ನನ್ನ ಮುಖದ ಮೇಲೆ ಇತ್ತು. ಒಂದು ತಿಂಗಳ ಅವಧಿಯಲ್ಲಿ ನನ್ನ ಮುಖ ನೋಡುವನಂಥ ಸ್ಥಿತಿಯಲ್ಲಿ ಇರಲಿಲ್ಲ.ಲಾಕ್‌ಡೌನ್ ಇದ್ದ ಕಾರಣ ನಾನು ವೈದ್ಯರಿಗೆ ನನ್ನ ಚರ್ಮ ತೋರಿಸಲು ಆಗಲಿಲ್ಲ. ಆದರೆ ನಿಧಾನವಾಗಿ ಮಾರ್ಕ್‌ಗಳು ಕಡಿಮೆ ಆಗಿತ್ತು,' ಎಂದು ಆಹಾನ ಬರೆದುಕೊಂಡಿದ್ದಾರೆ.

'ಎರಡನೇ ಪೋಟೋ ನಾನು ಇತ್ತೀಚಿಗೆ ಕ್ಲಿಕ್  ಮಾಡಿದ್ದು. ಸುಮಾರು ಒಂದು ವರ್ಷವೇ ಕಳೆದಿದೆ. ಯಾವ ಫಿಲ್ಟರ್ ಅಥವಾ ಮೇಕಪ್ ಬಳಸಿಲ್ಲ. ನೀವು ನೋಡುತ್ತಿರುವ ಹಾಗೆ ಎಲ್ಲಾ ಮಾರ್ಕ್‌ಗಳು ಮಾಯಾವಾಗಿವೆ. ನಾನು ಯಾವುದೇ ರೀತಿಯ ಕ್ರೀಮ್ ಬಳಸಿಲ್ಲ, ಮನೆ ಮದ್ದುಗಳನ್ನು ಪ್ರಯೋಗ ಮಾಡಿಲ್ಲ. ಸಮಯ ಕೊಟ್ಟರೆ ನಿಮ್ಮ ತ್ವಚೆ ಸುಧಾರಿಸಿಕೊಳ್ಳುತ್ತದೆ,' ಎಂದಿದ್ದಾರೆ.

ಕೇರಳದಲ್ಲಿ ಅಪ್ಪ ಬಿಜೆಪಿಗೆ ಸೇರ್ಪಡೆ, ಮಗಳ ಕೈ ತಪ್ಪಿತು ಹತ್ತಾರು ಸಿನಿಮಾಗಳ ಆಫರ್.! ಯಾರು ಆ ನಟಿ.? 

'ಚಿಕನ್ ಪಾಕ್ಸ್ ಬಂದರೆ ಯಾವುದೇ ರೀತಿಯ ಪ್ರಯೋಗ ಮಾಡಬೇಡಿ ಎಂದು ಪ್ರಚೋದನೆ ಮಾಡುವುದಕ್ಕೆ ಈ ರೀತಿ ಬರೆದಿಲ್ಲ.  ಯಾದರೆ ಏನೂ ಮಾಡದೆ ನಿಮ್ಮ ತ್ವಚೆ ಸರಿ ಹೋಗುತ್ತದೆ ಎಂದು ಹೇಳುವುದಷ್ಟೆ ನನ್ನ ಗುರಿ.  ಸುಖಾ ಸುಮ್ಮನೆ ಏನೇನೋ ಪ್ರಯೋಗ ಮಾಡಿ ತ್ವಚೆ ಹಾಳು ಮಾಡುವುದು ಬೇಡ. ನನ್ನ ಹೊಟ್ಟೆಯ ಮೇಲೆ ಈಗಲೂ ಮಾರ್ಕ್ ಇದೆ. ನನ್ನ ಪ್ರಕಾರ ಅಲ್ಲಿ ಸಂಪೂರ್ಣವಾಗಿ ಹೋಗುವುದಿಲ್ಲ. ಆದರೆ ಈಗಲೂ ಆ ಪಾಕ್ಸ್ ನೋವಾಗುತ್ತದೆ.  ತುರಿಕೆ ಹೆಚ್ಚಾಗುತ್ತದೆ, ಹಿಂಸೆ ಆಗುತ್ತದೆ ಆದರೂ ಪರವಾಗಿಲ್ಲ. ಎಷ್ಟೇ ಕಷ್ಟ ಎದುರಾದರೂ ನನ್ನ ದೇಹಕ್ಕೆ ಸಹಿಸಿಕೊಳ್ಳುವ ಶಕ್ತಿ ಇದೆ ಎನ್ನುವುದು ನನ್ನ ಧೈರ್ಯ,' ಎಂದು ಆಹಾನ ಹೇಳಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?