
ಆಯುಷ್ಮಾನ್ ಖುರಾನಾ ಜೊತೆ ಡ್ರೀಮ್ ಗರ್ಲ್ ಸಿನಿಮಾದಿಂದ ಖ್ಯಾತಿ ಪಡೆದ ನಟಿ ರಿಂಕು ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಅವರು ಚಿದಿಯಘರ್, ಮೇರಿ ಹನಿಕಾರಕ್ ಬಿವಿ ಮತ್ತು ಇತರ ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು.
ಆಯುಷ್ಮಾನ್ ಖುರಾನಾ ಅಭಿನಯದ ಡ್ರೀಮ್‌ಗರ್ಲ್ ನಟಿ ರೈಂಕು ಸಿಂಗ್ ನಿಕುಂಬ್ ಕೊನೆಯ ಬಾರಿಗೆ ಅಮೆಜಾನ್ ಪ್ರೈಮ್‌ನ ಹಲೋ ಚಾರ್ಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಕೋವಿಡ್‌ನಿಂದಾಗಿ ಸಾವನ್ನಪ್ಪಿದ್ದಾರೆ. ಕಳೆದ ಕೆಲವು ದಿನಗಳಿಂದ ಐಸಿಯುನಲ್ಲಿ ಕಳೆದ ನಟಿ ವೈರಸ್ ವಿರುದ್ಧ ಹೋರಾಡುತ್ತಿದ್ದರು.
'ಉರಿ' ನಿರ್ದೇಶಕ ಆದಿತ್ಯ ಜತೆ ದಾಂಪತ್ಯಕ್ಕೆ ಕಾಲಿಟ್ಟ ಯಾಮಿ
ರಿಂಕು ಸೋದರಸಂಬಂಧಿ ಚಂದಾ ಸಿಂಗ್ ನಿಕುಂಬಾ ಅವರು ಸುದ್ದಿಯನ್ನು ಖಚಿತಪಡಿಸಿದ್ದಾರೆ. ಮೇ 25 ರಂದು, ರಿಂಕಸ್ ಕೋವಿಡ್ ವರದಿ ಪಾಸಿಟಿವ್ ಬಂದಿತ್ತು. ನಂತರ ಅವರು ಮನೆಯ ಪ್ರತ್ಯೇಕವಾಗಿದ್ದರು. ಇದರ ನಂತರ ರಿಂಕು ಜ್ವರ ಕಡಿಮೆಯಾಗುತ್ತಿರಲಿಲ್ಲ. ಕೆಲವು ದಿನಗಳ ನಂತರ, ರಿಂಕು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ, ಸ್ವಲ್ಪ ಸಮಯದ ನಂತರ ರಿಂಕು ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು. ನಂತರ ಐಸಿಯುನಲ್ಲಿಯೇ ರಿಂಕು ಸ್ಥಿತಿ ಹದಗೆಟ್ಟಿತು. ರಿಂಕು ಆಸ್ತಮಾದಿಂದ ಬಳಲುತ್ತಿದ್ದರು.
ರಿಂಕು ಹೊರತುಪಡಿಸಿ, ಅವರ ಕುಟುಂಬದ ಅನೇಕ ಸದಸ್ಯರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಮೇ 7 ರಂದು ರಿಂಕು ಮೊದಲ ಬಾರಿಗೆ ಕರೋನಾ ಲಸಿಕೆಯನ್ನು ತೆಗೆದುಕೊಂಡಿದ್ದಾರೆ. ಶೀಘ್ರದಲ್ಲೇ ಎರಡನೇ ಡೋಸ್ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದರು.
ಬೆಂಗಳೂರಿಗೆ 1,500 ಫುಟ್ ಕಿಟ್ ಕಳುಹಿಸಿಕೊಟ್ಟ ಸೋನು ಸೂದ್!
ಕೊರೋನಾ ವೈರಸ್ನ ಎರಡನೇ ಅಲೆ ಚಲನಚಿತ್ರ ಮತ್ತು ಟಿವಿ ಉದ್ಯಮದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಅನೇಕ ನಟ ನಟಿಯರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಕೆಲವರು ಮಾರಕ ವೈರಸ್‌ನಿಂದ ಸಾವನ್ನಪ್ಪಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.