ನಟ ಮಿಥುನ್ ಚಕ್ರವರ್ತಿ ಹಾಗೂ ನಟಿ ಶ್ರೀದೇವಿ ಬಹಳಷ್ಟು ಚಿತ್ರಗಳಲ್ಲಿ ಒಟ್ಟಿಗೇ ನಟಿಸಿದ್ದಾರೆ. ಮಿಥುನ್ ಚಕ್ರವರ್ತಿ ಶ್ರೀದೇವಿ ಸೌಂದರ್ಯಕ್ಕೆ ಮನಸೋತು ಅವರನ್ನು ಲವ್ ಮಾಡಲು ಆರಂಭಿಸಿದ್ದರು. ಆದರೆ ತಮ್ಮ ಪ್ರೇಮವನ್ನು ನಟಿ ಶ್ರೀದೇವಿಗೆ ಹೇಳಲು ಅವರು ಬಹಳಷ್ಟು ಕಷ್ಟ ಅನುಭವಿಸಬೇಕಾಯ್ತು.
ಬಾಲಿವುಡ್ ನಟಿ, ಅತಿಲೋಕ ಸುಂದರಿ ಶ್ರೀದೇವಿ ವೈಯಕ್ತಿಕ ಬದುಕು ಕೂಡ ಒಂದು ಮಹಾನ್ ಕಾದಂಬರಿಯೇ ಎನ್ನಬಹುದು. ತಮ್ಮ ಬಾಲ್ಯದಲ್ಲಿ, 5ನೇ ವಯಸ್ಸಿಗೇ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀದೇವಿ ಸ್ಕೂಲ್ ಎಜ್ಯುಕೇಶನ್ ಮಾಡಿದ್ದು ತುಂಬಾ ಕಡಿಮೆ. ಆದರೆ. ಜಗತ್ತನ್ನೇ ತಮ್ಮ ಸ್ಕೂಲ್ ಮಾಡಿಕೊಂಡಿದ್ದರು ಎನ್ನಬಹುದು. ನಟಿ ಶ್ರೀದೇವಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಭಾರತದ ಲೇಡಿ ಸೂಪರ್ ಸ್ಟಾರ್ ಪಟ್ಟವನ್ನು ಮೊದಲು ಪಡೆದ ಏಕೈಕ ನಟಿ ಶ್ರೀದೇವಿ. ಆ ಬಳಿಕ ಹಲವರನ್ನು ಆ ಹೆಸರಿನಿಂದ ಕರೆದರೂ, ಥಟ್ಟನೆ ನೆನಪಾಗುವುದು ಶ್ರೀದೇವಿಯೇ!
ಇಂಥ ನಟಿ ಶ್ರೀದೇವಿ ತಮ್ಮ ಕೆರಿಯರ್‌ನಲ್ಲಿ ಸಿನಿಮಾ ಬಿಟ್ಟು ಬೇರೇನೂ ಮಾಡಲಿಲ್ಲ. ಅವರಿಗೆ ಸಿನಿಮಾವೇ ಬದುಕು, ಸಿನಿಮಾವೇ ಶಿಕ್ಷಣ, ಸಿನಿಮಾವೇ ಹೊಟ್ಟೆಪಾಡು. ಬಾಲನಟಿಯಾಗಿ ಶೂಟಿಂಗ್ ಸೆಟ್‌ಗೆ ಸಹಜವಾಗಿಯೇ ಅಮ್ಮನ ಜತೆ ಬರುತ್ತಿದ್ದ ನಟಿ ಶ್ರೀದೇವಿ, ದೊಡ್ಡವರಾದ ಬಳಿಕ ಕೂಡ ಒಬ್ಬರೇ ಬರುತ್ತಿರಲಿಲ್ಲ. ಅಮ್ಮ ರಾಜೇಶ್ವರಿ ಬಿಟ್ಟರೆ ತಂಗಿ ಶ್ರೀಲತಾ ಜತೆಗೇ ಚಿತ್ರೀಕರಣಕ್ಕೆ ಬರುತ್ತಿದ್ದರು ನಟಿ ಶ್ರೀದೇವಿ. ಹೀಗಾಗಿ ಸಹಜವಾಗಿಯೇ ಶ್ರೀದೇವಿ ಜತೆಗಾದ ಹಲವರ ಕ್ರಶ್ ಹಾಗೂ ಲವ್‌ಗೆ ಬ್ರೇಕ್ ಬಿದ್ದಿತ್ತು. ಅದೇ ರೀತಿ, ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಪಾಡೂ ಸಹ ಆಗಿತ್ತು.
ನಮ್ಮದು ಹಿಂದೂ-ಕ್ರಿಶ್ಚಿಯನ್ ಲವ್ & ಡಬ್ಬಲ್ ಮ್ಯಾರೇಜ್; ನಟಿ ಪ್ರಿಯಾಂಕಾ ಚೋಪ್ರಾ ಹೇಳಿಕೆ ಭಾರೀ ವೈರಲ್!
ನಟ ಮಿಥುನ್ ಚಕ್ರವರ್ತಿ ಹಾಗೂ ನಟಿ ಶ್ರೀದೇವಿ ಬಹಳಷ್ಟು ಚಿತ್ರಗಳಲ್ಲಿ ಒಟ್ಟಿಗೇ ನಟಿಸಿದ್ದಾರೆ. ಮಿಥುನ್ ಚಕ್ರವರ್ತಿ ಶ್ರೀದೇವಿ ಸೌಂದರ್ಯಕ್ಕೆ ಮನಸೋತು ಅವರನ್ನು ಲವ್ ಮಾಡಲು ಆರಂಭಿಸಿದ್ದರು. ಆದರೆ ತಮ್ಮ ಪ್ರೇಮವನ್ನು ನಟಿ ಶ್ರೀದೇವಿಗೆ ಹೇಳಲು ಅವರು ಬಹಳಷ್ಟು ಕಷ್ಟ ಅನುಭವಿಸಬೇಕಾಯ್ತು. ಕಾರಣ, ಆಕೆಯ ಜತೆ ಯಾವಾಗಲೂ ಶೂಟಿಂಗ್ ಜಾಗದಲ್ಲಿ ತಾಯಿ ಅಥವಾ ತಂಗಿ ಇದ್ದೇ ಇರುತ್ತಿದ್ದರು. ಆಗಿನ ಕಾಲದಲ್ಲಿ ಈಗಿನಂತೆ ಮೊಬೈಲ್ ಅಥವಾ ಸೋಷಿಯಲ್ ಮೀಡಿಯಾಗಳು ಇರಲಿಲ್ಲ. ಹೀಗಾಗಿ ಏನೇ ಹೇಳಬೇಕಿದ್ದರೂ ಎದುರೇ ಮಾತನಾಡಬೇಕಿತ್ತು ಅಥವಾ ಪತ್ರವೇ ಗತಿ ಎಂದಾಗಿತ್ತು.
'ಡ್ಯಾಡೀಸ್ ಲಿಟಲ್ ಗರ್ಲ್' ಗುಟ್ಟು ರಟ್ಟು ಮಾಡಿದ ನಟಿ ಪ್ರಿಯಾಂಕಾ ಚೋಪ್ರಾ; ಅಬ್ಬಾ ಇಂಥ ನಟಿಯೇ ಈಕೆ!
ಈ ಎಲ್ಲ ಕಾರಣಗಳಿಂದ ನಟ ಮಿಥುನ್ ಚಕ್ರವರ್ತಿ ನಟಿ ಶ್ರೀದೇವಿಗೆ ಪ್ರೊಪೋಸ್ ಮಾಡಲು ಸಾಧ್ಯವೇ ಆಗಲಿಲ್ಲ. ಆದರೆ, ಛಲ ಬಿಡದ ಮಿಥುನ್ ಹಾಗೊಮ್ಮೆ ಶ್ರೀದೇವಿ ಸಿಕ್ಕಾಗ ತಮ್ಮ ಲವ್ ಬಗ್ಗೆ ಹೇಳಿಕೊಂಡರಂತೆ. ಆದರೆ ಶ್ರೀದೇವಿ ಮಿಥುನ್ ಚಕ್ರವರ್ತಿ ಲವ್ ಪ್ರಪೋಸಲ್ ಅನ್ನು ಒಪ್ಪಿಕೊಳ್ಳಲೇ ಇಲ್ಲವಂತೆ. ಆದರೆ, ಮಿಥುನ್ ಚಕ್ರವರ್ತಿ ಮಾತ್ರ ಆಕೆಯನ್ನು ಒನ್ ವೇ ಲವ್ ಮಾಡುತ್ತಲೇ ಬಹಳಷ್ಟು ಕಾಲ ಕಳೆದರಂತೆ. ಆದರೆ, ಕೊನೆಗೂ ಶ್ರೀದೇವಿ ಅವರನ್ನು ಮದುವೆಯಾಗಲು ಮಿಥುನ್ ಚಕ್ರವರ್ತಿಗೆ ಸಾಧ್ಯವಾಗಲೇ ಇಲ್ಲ. ಶ್ರೀದೇವಿ ಸುತ್ತ ರಕ್ಷಣೆ ಕೋಟೆಯಂತೆ ಆಕೆಯ ತಾಯಿ ಅಥವಾ ತಂಗಿ ಇರುತ್ತಿದ್ದರು' ಎಂದಿದ್ದಾರೆ ಒಮ್ಮೆ ಮಿಥುನ್ ಚಕ್ರವರ್ತಿ.