ಇಂಥ ಪತ್ನಿಯರೂ ಇರ್ತಾರಾ? ಸವತಿ ಹೇಮಾ ಮಾಲಿನಿಯನ್ನೇ ಹಾಡಿ ಹೊಗಳಿದ್ದ ಧರ್ಮೇಂದ್ರ ಮೊದಲ ಪತ್ನಿ!

By Suvarna News  |  First Published Nov 25, 2023, 12:27 PM IST

ಬಾಲಿವುಡ್​ ನಟ ಧರ್ಮೇಂದ್ರ ಅವರ ಮೊದಲ ಪತ್ನಿ ಪ್ರಕಾಶ್​ ಕೌರ್​ ಅವರು ತಮ್ಮ ಸವತಿ ಹೇಮಾ ಮಾಲಿನಿಯನ್ನು ಹಾಡಿ ಹೊಗಳಿದ್ದಾರೆ. ಅವರು ಹೇಳಿದ್ದೇನು? 
 


ಬಾಲಿವುಡ್‌ನ ಕನಸಿನ ಕನ್ಯೆ ಹೇಮಾ ಮಾಲಿನಿಯೊಂದಿಗಿನ ಧರ್ಮೇಂದ್ರ ಅವರ ಪ್ರೇಮಕಥೆ ಎಲ್ಲರಿಗೂ ತಿಳಿದಿದೆ. ಆದರೆ ಧರ್ಮೇಂದ್ರ ಅವರು ತಮ್ಮ 19ನೇ ವಯಸ್ಸಿನಲ್ಲಿಯೇ ಪ್ರಕಾಶ್​ ಕೌರ್​ ಎನ್ನುವವರನ್ನು ಮದುವೆಯಾದ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ.  ಆದಾಗ್ಯೂ, 70 ರ ದಶಕದಲ್ಲಿ, ಧರ್ಮೇಂದ್ರ ಹೇಮಾ ಮಾಲಿನಿಯನ್ನು ಮದುವೆಯಾಗಲು ನಿರ್ಧರಿಸಿದಾಗ, ಅನೇಕ ಜನರು ಅವರ ನಡವಳಿಕೆಯನ್ನು ಒಪ್ಪಲಿಲ್ಲ ಮತ್ತು ಅವರ ಬಗ್ಗೆ ತೀವ್ರವಾಗಿ ವಾಗ್ದಾಳಿ ನಡೆಸಿದ್ದರು. ಹಲವು ವರ್ಷಗಳ ನಂತರ, ಚಲನಚಿತ್ರ ನಿಯತಕಾಲಿಕದ ಅಪರೂಪದ ಸಂದರ್ಶನದಲ್ಲಿ, ಪ್ರಕಾಶ್ ಕೌರ್ ತನ್ನ ಪತಿ ಧರ್ಮೇಂದ್ರನನ್ನು ಸಮರ್ಥಿಸಿಕೊಂಡಿದ್ದಲ್ಲದೆ ತಮ್ಮ ಸವತಿ ಹೇಮಾ ಮಾಲಿನಿಯವರ  ಸೌಂದರ್ಯವನ್ನು ಹೊಗಳಿದ್ದರು. ಇದು ಅವರ ಹೃದಯ ವೈಶಾಲ್ಯಕ್ಕೆ ಸಾಕ್ಷಿ ಎಂದು ಹಲವರು ಹಾಡಿ ಕೊಂಡಾಡಿದ್ದರು. ಅದೀಗ ಬೆಳಕಿಗೆ ಬಂದಿದೆ. 

ಫಿಲ್ಮ್ ಮ್ಯಾಗಜೀನ್, ಸ್ಟಾರ್‌ಡಸ್ಟ್‌ಗೆ ನೀಡಿದ ಅಪರೂಪದ ಸಂದರ್ಶನದಲ್ಲಿ, ಪ್ರಕಾಶ್ ಕೌರ್ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಅನುಭವಿಸಿದ ಅಗ್ನಿಪರೀಕ್ಷೆಯ ಬಗ್ಗೆ ಮಾತನಾಡಿದರು. ಮೊದಲಿಗೆ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ ಆಕೆ, ‘ತನ್ನ ಇಂಗ್ಲಿಷ್ ಚೆನ್ನಾಗಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಪಾಪರಾಜಿಗಳಿಂದ  ಮತ್ತು ಮಾಧ್ಯಮಗಳಿಂದ ದೂರವಿರಲು ಬಯಸಿದ್ದ ಅವರು, ತಮ್ಮನ್ನು ಸಾಮಾನ್ಯ ಗೃಹಿಣಿ ಎಂದು ಕರೆದುಕೊಂಡಿದ್ದಾರೆ  ಮತ್ತು ತಮ್ಮ ಮನೆ ಮತ್ತು ಮಕ್ಕಳನ್ನು ಹೇಗೆ ಪ್ರೀತಿಸುತ್ತೇನೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. 'ನಾನು ಗೃಹಿಣಿ, ನಾನು ನನ್ನ ಮನೆ ಮತ್ತು ಮಕ್ಕಳನ್ನು ಪ್ರೀತಿಸುತ್ತೇನೆ, ನನ್ನ ಬಗ್ಗೆ ಅಥವಾ ನನ್ನ ಜೀವನ ವಿಧಾನದ ಬಗ್ಗೆ ಯಾರು ಏನು ಹೇಳಬೇಕೆಂದು ನಾನು ಹೆದರುವುದಿಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ಜೀವನಶೈಲಿ ಇದೆ. ನನಗೆ ನನ್ನದು, ನಿಮಗೆ ನಿಮ್ಮದು, ಹಾಗಾದರೆ ಯಾರ ಮೇಲೆ ಬೆರಳು ತೋರಿಸುವುದು ಏಕೆ ಎಂದು ಪ್ರಶ್ನಿಸಿದ್ದಾರೆ. 

Tap to resize

Latest Videos

ಹೇಮಾ ಮಾಲಿನಿ ಪತಿ ಧರ್ಮೇಂದ್ರ ಮೇಲೆ ಶ್ರೀದೇವಿ ಕಣ್ಣು ಹಾಕಿದ್ರಾ? ನಟಿಯ ಖಡಕ್​ ಉತ್ರ ಏನಿತ್ತು?

ಈ ಸಂದರ್ಶನದಲ್ಲಿ, ಪ್ರಕಾಶ್ ಕೌರ್ ತಮ್ಮ ಪತಿ ಧರ್ಮೇಂದ್ರ ಅವರ ಎರಡನೇ ಮದುವೆಯ ಹೇಮಾ ಮಾಲಿನಿ ಬಗ್ಗೆ ಮಾತನಾಡಿದರು. ಪ್ರತಿ ಪುರುಷನಿಗೂ ಡ್ರೀಮ್​ ಗರ್ಲ್​ ಎನ್ನುವವರು ಇರುತ್ತಾರೆ. ಧರ್ಮೇಂದ್ರ ಅವರು ತಮ್ಮ  ಡ್ರೀಮ್ ಗರ್ಲ್ ಹೇಮಾ ಮಾಲಿನಿಯನ್ನು ಆಯ್ಕೆ ಮಾಡಿದ್ದಾರೆ ಅಷ್ಟೇ ಎಂದ ಪ್ರಕಾಶ್​ ಕೌರ್​, ಈ ಮೂಲಕ ಪತಿಯನ್ನು  ಸಮರ್ಥಿಸಿಕೊಂಡಿದ್ದಾರೆ.  ನನ್ನ ಗಂಡ ಮಾತ್ರ ಯಾಕೆ, ಯಾವ ಗಂಡಸಾದರೂ ನನಗಿಂತ ಹೇಮಾಗೆ ಪ್ರಾಶಸ್ತ್ಯ ಕೊಟ್ಟರೆ ಅದು ತಪ್ಪೇ ಅಲ್ಲ.  ಅರ್ಧದಷ್ಟು ಸಿನಿಮಾ ಇಂಡಸ್ಟ್ರಿ ಅದೇ ಕೆಲಸ ಮಾಡುತ್ತಿರುವಾಗ ನನ್ನ ಗಂಡನನ್ನು ಮಾತ್ರ ಟೀಕೆ ಮಾಡುವುದು ಸರಿಯಲ್ಲ. ಬಹುತೇಕ ಎಲ್ಲಾ ಹೀರೋಗಳು ಅಫೇರ್ ಹೊಂದಿ ಎರಡನೇ ಮದುವೆಯಾಗುತ್ತಿದ್ದಾರೆ. ಇದು ಮಾಮೂಲು ಎಂದಿದ್ದಾರೆ. 

ಹೇಮಾ ಮಾಲಿನಿ ಅವರು ತಮ್ಮ ಜೀವನಚರಿತ್ರೆಯಲ್ಲಿ ಒಮ್ಮೆ ಧರ್ಮೇಂದ್ರ ಅವರ ಮೊದಲ ಹೆಂಡತಿಯನ್ನು ಎಂದಿಗೂ ಭೇಟಿಯಾಗಲಿಲ್ಲ ಎಂದು ಬಹಿರಂಗಪಡಿಸಿದ್ದರು. ನಾನು ಯಾರಿಗೂ ತೊಂದರೆ ಕೊಡಲು ಬಯಸುವುದಿಲ್ಲ ಮತ್ತು ಧರ್ಮೇಂದ್ರ ತಮಗಾಗಿ ಮತ್ತು ಅವರ ಹೆಣ್ಣುಮಕ್ಕಳಿಗಾಗಿ ಏನು ಮಾಡಿದರೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದರು.  ಇಂದು ನಾನುನು ದುಡಿಯುವ ಮಹಿಳೆಯಾಗಿದ್ದೇನೆ ಮತ್ತು ಕಲೆ ಮತ್ತು ಸಂಸ್ಕೃತಿಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದರಿಂದ ತನ್ನ ಘನತೆಯನ್ನು ಹೊಂದಿದ್ದೇನೆ ಎಂದು ನಟಿ ಹೇಳಿದ್ದರು.

ಅನಿಮಲ್​ ಟ್ರೇಲರ್​ ಬಿಡುಗಡೆ: ಲಿಪ್​ಲಾಕ್​ ರಶ್ಮಿಕಾಳ ಸೆಕ್ಸಿಸಂ ಕುರಿತು ಪ್ರಶ್ನೆ ಮಾಡ್ತಿದ್ದಾರೆ ನೆಟ್ಟಿಗರು!

click me!