Mira trolled for feet: ಕಾಲಿನ ವಿಚಾರಕ್ಕೆ ಕಾಲೆಳೆದರವ ಬೆವರಿಳಿಸಿದ ಮೀರಾ

Suvarna News   | Asianet News
Published : Dec 12, 2021, 10:53 AM ISTUpdated : Dec 12, 2021, 10:54 AM IST
Mira trolled for feet: ಕಾಲಿನ ವಿಚಾರಕ್ಕೆ ಕಾಲೆಳೆದರವ ಬೆವರಿಳಿಸಿದ ಮೀರಾ

ಸಾರಾಂಶ

Mira Rajput Trolled: ಬಾಲಿವುಡ್ ನಟ ಶಾಹೀದ್ ಪತ್ನಿಯನ್ನು ಇತ್ತೀಚೆಗೆ ನೆಟ್ಟಿಗರು ಟ್ರೋಲ್ ಮಾಡಿದ್ದರು. ಅದೂ ಕಾಲಿನ ವಿಚಾರದಲ್ಲಿ.ಈಗ ಮೀರಾ ಟ್ರೋಲ್‌ಗೆ ತಕ್ಕ ಉತ್ತರ ಕೊಟ್ಟಿದ್ದಾರೆ.

ಇತ್ತೀಚೆಗಷ್ಟೇ ನಟ ಶಾಹೀದ್ ಕಪೂರ್(Shahid Kapoor) ಅವರ ಪತ್ನಿಯನ್ನು ನೆಟ್ಟಿಗರು ಟ್ರೋಲ್ ಮಾಡಿದ್ದರು. ಮೀರಾ ಅವರ ಕಾಲಿನ ಬಣ್ಣಕ್ಕಾಗಿ ಟ್ರೋಲ್ ಮಾಡಲಾಗಿತ್ತು. ನಟಿಯ ಮುಖದ ಬಣ್ಣ ಹಾಗೂ ಕಾಲಿನ ಬಣ್ಣವನ್ನು ಹೋಲಿಕೆ ಮಾಡಿ ಬೇಕಾಬಿಟ್ಟಿಯಾಗಿ ಕಮೆಂಟ್ ಮಾಡಿದ್ದರು ನೆಟ್ಟಿಗರು. ಆದರೆ ಮೀರಾ ಅವರು ಈಗ ಅದಕ್ಕೆಲ್ಲ ಉತ್ತರ ಕೊಟ್ಟಿದ್ದಾರೆ. ತಮ್ಮ ಕಾಲೆಳೆದವರಿಗೆ ಖಡಕ್ ಉತ್ತರ ಕೊಟ್ಟ ಮೀರಾ  ರಜಪೂತ್(Mira Rajput) ಅವರ ಪೋಸ್ಟ್ ಈಗ ವೈರಲ್ ಆಗಿದೆ. ಶಾಹಿದ್ ಕಪೂರ್ ಅವರ ಪತ್ನಿ ಮೀರಾ ರಜಪೂತ್ ಅವರು ತಮ್ಮ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ಕ್ರೂರವಾಗಿ ಟ್ರೋಲ್ ಮಾಡಲ್ಪಟ್ಟರು. ಮೀರಾ ಸನ್ ಕಿಸ್ಸಿಂಗ್(Sun kissing) ಫೋಟೋವನ್ನು ಹಂಚಿಕೊಂಡಿದ್ದರು. ಅದರಲ್ಲಿ ತನ್ನ ಮೂರು ವರ್ಷದ ಝೈನ್ ಕ್ಯಾಮೆರಾಗೆ ಪೋಸ್ ನೀಡುತ್ತಿರುವಾಗ ತನ್ನ ಮಮ್ಮಿ ಹಿಂದೆ ಅಡಗಿಕೊಂಡಿರುವುದು ಕಂಡುಬಂದಿದೆ. ಮೀರಾ ಅವರ ಶೀರ್ಷಿಕೆಯೊಂದಿಗೆ, ಅನೇಕ ಅಭಿಮಾನಿಗಳು ಚಿತ್ರದಲ್ಲಿ ಝೈನ್ ಅನ್ನು ಗುರುತಿಸಿದ್ದಾರೆ.

ಆದರೂ ಫೋಟೋದಲ್ಲಿ ಅವರ ದೇಹದ ಉಳಿದ ಭಾಗಗಳಿಗಿಂತ ಕಪ್ಪಾಗಿ ಕಾಣುತ್ತಿದ್ದ ಅವರ ಪಾದಗಳನ್ನು(Feet) ಗಮನಿಸಿದ ಅನೇಕರು ಟ್ರೋಲ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಒಬ್ಬರು, ನಿಮ್ಮ ಪಾದಗಳು ನಿಮ್ಮ ದೇಹಕ್ಕೆ ಹೊಂದಿಕೆಯಾಗುತ್ತಿಲ್ಲ ಎಂದು ಬರೆದರೆ, ಮತ್ತೊಬ್ಬರು ಇಲ್ಲೊಂದು ಕಡೆ ಮೇಕಪ್ ಬಾಕಿ ಇದೆ ಎಂದು ಕಾಮೆಂಟ್ ಮಾಡಿದ್ದಾರೆ.

Mira Rajput Trolled ಕಾಲಿನಿಂದಾಗಿ ಟ್ರೋಲ್ ಆದ್ರು ಸಂದರಿ ಮೀರಾ

ಟ್ರೋಲ್‌ಗಳನ್ನು(Troll) ಗಮನಿಸಿರುವ ಮೀರಾ ಅವರು ಸೂರ್ಯನ ಬೆಳಕಿನಲ್ಲಿ ಕ್ಲಿಕ್ ಮಾಡಿದ ಮತ್ತೊಂದು ಫೋಟೋದೊಂದಿಗೆ ಖಡಕ್ ಉತ್ತರವನ್ನು ನೀಡಿದ್ದಾರೆ. ಟ್ರೋಲ್‌ಗಳಿಗೆ ಪ್ರತಿಕ್ರಿಯಿಸಲು ಮೀರಾ ಸ್ಮಾರ್ಟ್ ಕ್ಯಾಪ್ಶನ್ ಬರೆದಿದ್ದರು. ಯಾವಾಗಲೂ ನನ್ನ ಪಕ್ಕದಲ್ಲಿರುವ ನನ್ನ ತೋಳುಗಳಿಗೆ, ಯಾವಾಗಲೂ ನನ್ನನ್ನು ಬೆಂಬಲಿಸಿದ್ದಕ್ಕಾಗಿ ನನ್ನ ಕಾಲುಗಳಿಗೆ ಮತ್ತು ನನ್ನ ಬೆರಳುಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಏಕೆಂದರೆ ನಾನು ಯಾವಾಗಲೂ ಅವುಗಳನ್ನು ನಂಬಬಹುದು. ನನ್ನ ಪಾದಗಳು, ಯಾವಾಗಲೂ ನನ್ನನ್ನು ಆಧಾರವಾಗಿರಿಸಿಕೊಳ್ಳುವುದಕ್ಕಾಗಿ ನಾನು ಅವುಗಳನ್ನು ನಂಬಬಹುದು ಎಂದಿದ್ದಾರೆ.

ಮೀರಾ ಅವರ ಅಭಿಮಾನಿಗಳು ಅವರನ್ನು ಬೆಂಬಲಿಸಿದ್ದಾರೆ. ಅತ್ಯುತ್ತಮ ಪ್ರತ್ಯುತ್ತರ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು , ಹಹಹಾ! ಬೆಸ್ಟ್ ಕ್ಲಾಪ್ ಬ್ಯಾಕ್ ಎವರ್ ಎಂದಿದ್ದಾರೆ. ಮೀರಾ ರಜಪೂತ್ ಅವರ ಪೋಸ್ಟ್‌ನಲ್ಲಿ ಅವರು ಕೊಟ್ಟ ಉತ್ತರಕ್ಕೆ ಬಹಳಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2015 ರಲ್ಲಿ, ಮೀರಾ ರಜಪೂತ್ ಶಾಹಿದ್ ಕಪೂರ್ ಮದುವೆಯಾದರು. ಲವ್ ಬರ್ಡ್ಸ್ 2016 ರಲ್ಲಿ ಫೋಷಕರಾದರು. ಅವರ ಪುಟ್ಟ ಮಗಳು ಮಿಶಾ ಅವರನ್ನು ಸ್ವಾಗತಿಸಿದರು. ಮಿಶಾ ಅವರ ಐದನೇ ಹುಟ್ಟುಹಬ್ಬದಂದು ದಂಪತಿಗಳು ಇತ್ತೀಚೆಗೆ ಸಣ್ಣ ಸೆಲೆಬ್ರೇಷನ್ ನಡೆಸಿದರು.

ಶರ್ಟ್‌ ಕೆಳಗಿದ್ದ ಚಡ್ಡಿ ಕಾಣಿಸುತ್ತಿಲ್ಲ: ನಟ ಶಾಹಿದ್ ಪತ್ನಿ ಮೀರಾ ಫುಲ್ ಟ್ರೋಲ್....

ಮೀರಾ ಏನು ಪೋಸ್ಟ್ ಮಾಡಿದ್ದಾರೆ?

ಮೀರಾ ರಜಪೂತ್ ತಮ್ಮ ಫ್ಯಾಶನ್ ಸೆನ್ಸ್‌ನಿಂದ ಅಭಿಮಾನಿಗಳನ್ನು ಮೆಚ್ಚಿಸಲು ಎಂದಿಗೂ ವಿಫಲರಾಗುವುದಿಲ್ಲ. ಗಂಟೆಗಳ ಹಿಂದೆ, ಅವರು ಲ್ಯಾವೆಂಡರ್ ಜಂಪ್‌ಸೂಟ್ ಧರಿಸಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಮೀರಾ ತನ್ನ ಉಡುಪಿನ ಏಕತಾನತೆಯನ್ನು ಹಳದಿ ಸ್ಲಿಂಗ್ ಬ್ಯಾಗ್‌ನೊಂದಿಗೆ ಮ್ಯಾಚ್ ಮಾಡಿದ್ದರು. ಕ್ಲಿಕ್‌ನಲ್ಲಿ ಮಗ ಝೈನ್ ತನ್ನ ಹಿಂದೆ ಅಡಗಿಕೊಂಡಿದ್ದು, ಮೀರಾ ಫೋಟೋಗೆ, ನಾಚಿಕೆಯಿಂದ ಫೋಟೋ ಬಾಂಬರ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಆದರೆ ಫೋಟೋದಲ್ಲಿ ಆಕೆಯ ಪಾದಗಳು ಹೇಗೆ ಕಾಣಿಸಿಕೊಂಡಿವೆ ಎಂಬುದನ್ನು ನೆಟ್ಟಿಗರು ತಕ್ಷಣ ಗಮನಿಸಿದ್ದಾರೆ. ಇದು ಬಹುಶಃ ಸೂರ್ಯನ ಬಿಸಿಲು ನೆರಳಿನ ಪ್ರಭಾವದಿಂದಾಗಿರಬಹುದು.

ಕಾಲಿನ ಬಣ್ಣಕ್ಕಾಗಿ ಟ್ರೋಲ್:

ನಿಮ್ಮ ಪಾದಕ್ಕೂ ಮೇಕಪ್ ಮಾಡಿ ಮ್ಯಾಮ್ ಪ್ಲೀಸ್ ಎಂದು ಒಬ್ಬರು ಕಮೆಂಟಿಸಿದರೆ, ಇನ್ನೊಬ್ಬರು ಮುಖ ಇಷ್ಟೊಂದು ಹೊಳೆಯುತ್ತಿದೆ, ಕಾಲಿಗೂ ಮೇಕಪ್ ಮಾಡಬಹುದಿತ್ತು ಎಂದಿದ್ದಾರೆ. ಮತ್ತೊಬ್ಬರು ನಿಮ್ಮ ಕಾಲಿಗೇನಾಯ್ತು ಎಂದರೆ, ಇನ್ನೊಬ್ಬರು ನಿಮ್ಮ ಕಾಲು ಕಪ್ಪಗೆ ಕಾಣುತ್ತಿದೆ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?