Bipin Rawat Death ಸಿಡಿಎಸ್ ಸಾವು ಸಂಭ್ರಮಿಸಿದವರ ವಿರುದ್ಧ ಆಕ್ರೋಶ, ಹಿಂದೂ ಧರ್ಮಕ್ಕೆ ನಿರ್ದೇಶಕ ಅಲಿ ಅಕ್ಬರ್ ಮತಾಂತರ!

By Suvarna News  |  First Published Dec 11, 2021, 7:06 PM IST
  • ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಖ್ಯಾತ ನಿರ್ದೇಶಕ
  • ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಾವು ಸಂಭ್ರಮಿಸಿದವರ ವಿರುದ್ಧ ಅಕ್ಬರ್ ಆಕ್ರೋಶ
  • ಕೆಲ ಮುಸ್ಲಿಮರಿಂದ ರಾವತ್ ಸಾವು ಸಂಭ್ರಮ, ಅಗ್ರ ನಾಯಕರು ಮೌನ
  • ಇಸ್ಲಾಂ ಧರ್ಮದ ಮೇಲಿನ ನಂಬಿಕೆ ಕಳೆದುಕೊಂಡಿದ್ದೇನೆ ಎಂದು ಆಕ್ಬರ್ ಅಲಿ

ಕೊಚ್ಚಿ(ಡಿ.11):  ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಾವನ್ನು(Bipin Rawat Death) ಕೆಲ ಕಿಡಿಗೇಡಿಗಳು ಸಂಭ್ರಮಿಸಿದ್ದಾರೆ. ಹೀಗೆ ಸಂಭ್ರಮಿಸಿದ ಬೆರಳೆಣಿಕೆ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇನ್ನೂ ಹಲವರು ರಾವತ್ ಸಾವನ್ನು ಸಂಭ್ರಮಿಸುತ್ತಲೇ ಇದ್ದಾರೆ. ಹೀಗೆ ಕೆಲ ಮುಸ್ಲಿಮರು ರಾವತ್ ಸಾವನ್ನು ಸಂಭ್ರಮಿಸಿದ್ದಕ್ಕೆ ಮಲೆಯಾಳಂ(Malayalam Director) ಖ್ಯಾತ ನಿರ್ದೇಶಕ ಅಕ್ಬರ್ ಆಲಿ(Akbar Ali) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರ ಆಕ್ರೋಶ ಕೇವಲ ಸಾಮಾಜಿಕ ಜಾಲತಾಣಕ್ಕೆ(Social Media) ಸೀಮಿತವಾಗಿಲ್ಲ. ಇಸ್ಲಾಂ(Islam) ಧರ್ಮದ ಮೇಲಿನ ನಂಬಿಕೆಯನ್ನೇ ಕಳೆದುಕೊಂಡ ಅಕ್ಬರ್ ಆಲಿ ಕುಟುಂಬ ಸಮೇತ ಹಿಂದೂ ಧರ್ಮಕ್ಕೆ(Hindu) ಮತಾಂತರವಾಗಿದ್ದಾರೆ.

ದೇಶದ ವೀರ ಯೋಧ, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಾವನ್ನು ಕೆಲ ಮುಸ್ಲಿಮರು(Muslims celebrate Rawat death) ಸಂಭ್ರಮಿಸುತ್ತಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಬರಹಗಳ ಮೂಲಕ ಸಂಭ್ರಮಿಸಿದ್ದಾರೆ. ಮತ್ತೂ ಕೆಲವರೂ ಇಮೋಜಿ ಸ್ಮೈಲ್ ಹಾಕಿ ತಮ್ಮ ಸಂತಸ ಹೊರಹಾಕುತ್ತಿದ್ದಾರೆ.  ಓರ್ವ ಯೋಧನ ಸಾವನ್ನು ಹೀಗೆ ಸಂಭ್ರಮಿಸುತ್ತಿರುವ ಇವರು ದೇಶದ್ರೋಹಿಗಳು(Anti nationals). ಈ ಮುಸ್ಲಿಮರ ವಿರುದ್ದ ಇಸ್ಲಾಂ ನಾಯಕರು ಮೌನವಹಿಸಿದ್ದಾರೆ. ಯಾವುದೇ ಖಂಡನೆ ವ್ಯಕ್ತಪಡಿಸಿಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ. ನನಗೆ ಇಸ್ಲಾಂ ಮೇಲಿನ ನಂಬಿಕೆ ಇಲ್ಲವಾಗಿದೆ. ಹೀಗಾಗಿ ಹಿಂದೂ ಧರ್ಮಕ್ಕೆ(Convert to  Hinduism) ಮತಾಂತರವಾಗುತ್ತಿದ್ದೇನೆ ಎಂದು ಅಕ್ಬರ್ ಆಲಿ ಫೇಸ್‌ಬುಕ್(Facebook) ಮೂಲಕ ಹೇಳಿಕೊಂಡಿದ್ದಾರೆ. 

Tap to resize

Latest Videos

 

இன்று முதல் நான் முஸ்லிம் அல்ல பாரதியன் நானும் என் குடும்பமும் He was known as Ali Akbar. A Muslim by birth.

On the death of Gen.Bipin Rawat, many people made celebrations in Kerala on social platforms.

By being deeply hurt with the facts pic.twitter.com/vJ2wvCdxmM

— 𓄂𖤍Bhairavi Nachiyar𖤍 பாண்டிய நாட்டு இளவரசி 🇮🇳 (@Bhairavinachiya)

Conversion Case: ನೂರಾರು ಹಿಂದೂ ಹೆಣ್ಮಕ್ಕಳ ಮತಾಂತರ, ದೂರು ದಾಖಲು ಬಯಲಾಯ್ತು ಶಾಕಿಂಗ್ ಮಾಹಿತಿ!

ಅಕ್ಬರ್ ಆಲಿ ಫೇಸ್‌ಬುಕ್ ಪೋಸ್ಟ್ ಹಾಕಿದ ಬೆನ್ನಲ್ಲೇ ಬಾರಿ ಸಂಚಲನ ಸೃಷ್ಟಿಸಿದೆ. ಪರ ವಿರೋಧಗಳು ವ್ಯಕ್ತವಾಗಿದೆ. ಹಲವು ಇಸ್ಲಾಂ ಧರ್ಮಗುರುಗಳು, ಮುಸಲ್ಮಾನರು ಅಕ್ಬರ್ ಆಲಿ ನಿರ್ಧಾರವನ್ನು ಟೀಕಿಸಿದ್ದಾರೆ. ಇತ್ತ ಹಲವು ಹಿಂದೂ ಸಂಘಟನೆಗಳು ಅಕ್ಬರ್ ಆಲಿ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಇಷ್ಟೇ ಅಲ್ಲ ಬಿಪಿನ್ ರಾವತ್ ಸಾವು ಸಂಭ್ರಮಿಸುವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಫೇಸ್‌ಬುಕ್ ಪೋಸ್ಟ್ ಭಾರಿ ಕೋಲಾಹಲಕ್ಕೂ ಕಾರಣವಾಗಿದೆ. ಬಳಿಕ ಈ ಪೋಸ್ಟ್ ಡಿಲೀಟ್ ಮಾಡಲಾಗಿದೆ. ಆದರೆ ಅಕ್ಬರ್ ಆಲಿ ರಾವತ್ ಸಾವನ್ನು ಸಂಭ್ರಮಿಸಿ ಇಮೋಡಿ ಸ್ಮೈಲ್ ಹಾಕಿದವರ ಲಿಸ್ಟ್‌ನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. 

ಹೆಂಡತಿಯ ಮತಾಂತರ ಮಾಡಿಸಿದನಾ ನವಾಜುದ್ದೀನ್‌ ಸಿದ್ದಿಕಿ?

ರಾವತ್ ಸಾವನ್ನು ಸಂಭ್ರಮಿಸಿದ ಬಹುತೇಕರು ಮುಸ್ಲಿಮರು. ಸಾಮಾಜಿಕ ಜಾಲತಾಣದಲ್ಲಿ ರಾವತ್ ಸಾವಿನ ಬಳಿಕ ದೇಶ ವಿರೋಧಿ ಚಟುವಟಿಕೆ ನಡೆಯುತ್ತಿದೆ. ಬಿಪಿನ್ ರಾವತ್ ಪಾಕಿಸ್ತಾನ ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹಿಸಲು ಕಠಿಣ ಕ್ರಮ ಕೈಗೊಂಡಿದ್ದಾರೆ. ಆದರೆ ಇಲ್ಲಿನ ಕೆಲ ಮುಸ್ಲಿಮರು ತಮ್ಮ ಮೇಲೆ ಕ್ರಮಕೈಗೊಂಡ ರೀತಿ ವರ್ತಿಸುತ್ತಿದ್ದಾರೆ. ಓರ್ವ ವೀರಯೋಧನಿಗೆ ನೀಡುವ ಗೌರವ ಇದಲ್ಲ ಎಂದು ಅಕ್ಬರ್ ಆಲಿ ಹೇಳಿದ್ದಾರೆ.

ಅಕ್ಬರ್ ಆಲಿ ಹಾಗೂ ಪತ್ನಿ ಲೂಸಿಯಮ್ಮ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ. ಆದರೆ ಇಬ್ಬರು ಪುತ್ರಿಯರು ಮತಾಂತರವಾಗಿಲ್ಲ. ಅವರನ್ನು ಮತಾಂತರ ಮಾಡಲು ಬಲವಂತ ಮಾಡಿಲ್ಲ. ಪುತ್ರಿಯರು ಇಸ್ಲಾಂ ಧರ್ಮದಲ್ಲಿ ಇರಬೇಕೋ ಅಥವಾ ಬೇರೆ ಧರ್ಮಕ್ಕೆ ಮತಾಂತರವಾಗಬೇಕು ಅನ್ನೋದನ್ನು ಅವರೇ ನಿರ್ಧರಿಸುತ್ತಾರೆ.  ಪುತ್ರಿಯರು ಸ್ವತಂತ್ರರು ಎಂದು ಅಕ್ಬರ್ ಆಲಿ ಹೇಳಿದ್ದಾರೆ. ಶೀಘ್ರದಲ್ಲೇ ದಾಖಲೆಗಳನ್ನು ಬದಲಾಯಿಸುತ್ತೇನೆ ಎಂದು ಅಕ್ಬರ್ ಆಲಿ ಹೇಳಿದ್ದಾರೆ.

ಕೇರಳ ರಾಜ್ಯ ಬಿಜೆಪಿ ಕಮಿಟಿ ಸದಸ್ಯರಾಗಿದ್ದ ಅಕ್ಬರ್ ಆಲಿ ಅಕ್ಟೋಬರ್ ತಿಂಗಳಲ್ಲಿ ರಾಜೀನಾಮೆ ನೀಡಿ ಪಕ್ಷದಿಂದ ಹೊರಬಂದಿದ್ದಾರೆ. ಪಕ್ಷದೊಳಗಿನ ಕೆಲ ವಿಚಾರಗಳಲ್ಲಿ ಒಡಕು ಮೂಡಿದ ಕಾರಣ ಬಿಜೆಪಿಯಿಂದ ಹೊರಬಂದಿದ್ದಾರೆ. ಇದೀಗ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಭಾರಿ ಸಂಚಲನ ಸೃಷ್ಟಿಸಿದ್ದಾರೆ. 

2015ರಲ್ಲಿ ಅಕ್ಬರ್ ಆಲಿ ಇಸ್ಲಾಂ ಮದರಸಾದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಳಿಕ ಹಲವು ಮುಸ್ಲಿಮರು ಅಕ್ಬರ್ ಆಲಿಗೆ ಬೆದರಿಕೆ ಒಡ್ಡಿದ್ದರು

click me!