ತಮಿಳು ಚಿತ್ರರಂಗದ ಸಿಂಪಲ್ ನಟ ಸಿಂಬು ಅವರಿಗೆ ವೈರಲ್ ಸೋಂಕು ತಗುಲಿದ್ದು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ ಹಾಗೂ ಕೋವಿಡ್ ಟೆಸ್ಟ್‌ನಲ್ಲಿಯೂ ನೆಗೆಟಿವ್ ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತಮಿಳು (Kollywood) ಚಿತ್ರರಂಗದ ಸಿಂಪಲ್ ನಟ ಸಿಂಬು (Simbu) ಅವರಿಗೆ ವೈರಲ್ ಸೋಂಕು ತಗುಲಿದ್ದು, ಇಂದು (ಡಿ.11) ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಂಬು ಅವರಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ ಹಾಗೂ ಕೊರೋನಾ ವೈರಸ್ (CoronaVirus) ನೆಗೆಟಿವ್ (Negative) ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸಿಂಬು ಅವರು ತಮ್ಮ ಮುಂಬರುವ ಚಿತ್ರ 'ವೆಂದು ತನಿಂಧತು ಕಾಡು' (Vendhu Thanindhathu Kaadu) ಚಿತ್ರೀಕರಣದಲ್ಲಿದ್ದಾರೆ ಎಂದು ವರದಿಯಾಗಿದೆ. ಆಸ್ಪತ್ರೆಗೆ ದಾಖಲಾಗುವ ಮೊದಲು ನಟನಿಗೆ ಜ್ವರ (Fever) ಮತ್ತು ಗಂಟಲಿನ ಸೋಂಕು (Throat Infection) ಕಾಣಿಸಿಕೊಂಡಿದೆ ಎಂದು ವರದಿಗಳು ಸೂಚಿಸಿವೆ.
ಸಿಂಬು ಅವರಿಗೆ ವೈರಲ್ ಸೋಂಕು ಇದೆ ಎಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರು ಸಿಂಬುಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ. ಜೊತೆಗೆ ಕೋವಿಡ್ ಟೆಸ್ಟ್‌ನಲ್ಲಿಯೂ ನೆಗೆಟಿವ್ ಬಂದಿದೆ ಎಂದು ಹೇಳಿರುವ ವಿಚಾರವನ್ನು ಸಿಂಬು ಅವರ ಪಿಆರ್ ತಂಡವು (PR team) ಖಚಿತಪಡಿಸಿದೆ. ಹಾಗೂ ಸಿಂಬು ಅವರು ಶೀಘ್ರ ಗುಣಮುಖರಾಗಲಿ ಎಂದು ಅನೇಕ ಅಭಿಮಾನಿಗಳು (Fans) ಸಾಮಾಜಿಕ ಜಾಲತಾಣಗಳಲ್ಲಿ (Social Media) ಹಾರೈಸಿದ್ದಾರೆ.
Maanadu:ವೇದಿಕೆ ಮೇಲೆ ಗಳ-ಗಳನೆ ಅತ್ತ ನಟ ಸಿಂಬು!
ಇತ್ತೀಚೆಗೆ ಸಿಂಬು ಅಭಿನಯದ 'ವೆಂದು ತನಿಂಧತು ಕಾಡು' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಗೌತಮ್ ವಾಸುದೇವ್ ಮೆನನ್ (Gautham Vasudev Menon) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಆಕ್ಷನ್ ಥ್ರಿಲ್ಲರ್ ಹೊಂದಿರುವ ಈ ಚಿತ್ರವು ಇಶಾರಿ ಕೆ ಗಣೇಶ್ ಮತ್ತು ಅಶ್ವಿನ್ ಕುಮಾರ್ ಅವರು ವೆಲ್ಸ್ ಫಿಲ್ಮ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಎ.ಆರ್.ರೆಹಮಾನ್ (A.R.Rahman) ಸಂಗೀತ ಸಂಯೋಜಿಸುತ್ತಿದ್ದು, ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಸಿಂಬು ಇತ್ತೀಚೆಗೆ ಪಾಲಿಟಿಕಲ್ ಫಿಕ್ಷನ್ 'ಮಾನಾಡು' (Maanaadu) ಚಿತ್ರದಲ್ಲಿ ಮುಸ್ಲಿಂ ಯುವಕ ಅಬ್ದುಲ್ ಖಾಲಿಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಿರ್ದೇಶಕ ವೆಂಕಟ್ ಪ್ರಭು (Venkat Prabhu) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಈ ಚಿತ್ರವು ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಧೂಳೆಬ್ಬಿಸಿ, ಸಿನಿರಸಿಕರಿಂದ ಹಾಗೂ ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಯುವನ್ ಶಂಕರ್ ರಾಜ (Yuvan Shankar Raja) ಸಂಗೀತವಿರುವ ಈ ಚಿತ್ರದಲ್ಲಿ ಭಾರತಿರಾಜ, ಕರುಣಾಕರನ್, ಕಲ್ಯಾಣಿ ಪ್ರಿಯದರ್ಶನ್ ಮತ್ತು ಪ್ರೇಮ್ಗಿ ಅಮರನ್, ಸೇರಿದಂತೆ ಪೊಲೀಸ್ ಪಾತ್ರದಲ್ಲಿ ಎಸ್‌ಜಿ ಸೂರ್ಯ ನಟಿಸಿದ್ದಾರೆ. 'ಮಾನಾಡು' ಯಶಸ್ಸಿನಲ್ಲಿರುವ ಸಿಂಬು ಮತ್ತು ನಿರ್ದೇಶಕ ವೆಂಕಟ್ ಪ್ರಭು ಕಾಂಬಿನೇಷನ್‌ನಲ್ಲಿ 'ಮಾನಾಡು 2' ಚಿತ್ರವನ್ನು ಶುರು ಮಾಡುತ್ತಾರೆ ಎಂದು ವರದಿಯಾಗಿದೆ.
ಇದ್ದಕ್ಕಿದ್ದಂತೆ 15 ಕೆಜಿ ತೂಕ ಇಳಿಸಿಕೊಂಡ ನಟ ಸಿಂಬು; ಅಭಿಮಾನಿಗಳಿಗೆ ಬಿಗ್ ಶಾಕ್!
ಇನ್ನು ಸಿಂಬು 'ಮಾನಾಡು' ಪ್ರೆಸ್‌ಮೀಟ್‌ನಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದರು. ಅಭಿಮಾನಿಗಳು ನನ್ನನ್ನು ನೋಡಿಕೊಳ್ಳಬೇಕು. ನಾನು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವೆ ನೀವೇ ನನ್ನನ್ನು ಬೆಳಸಬೇಕು ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಸಿಂಬು ಅಳುತ್ತಿರುವ ವಿಡಿಯೋ ವೈರಲ್ ಆಗಿತ್ತು. ಸಿಂಬು ವೃತ್ತಿ ಜೀವನದಲ್ಲಿ ಇಂತಹ ಅದ್ಭುತ ಸಿನಿಮಾ ಮಾಡಿರಲಿಲ್ಲ ಖಂಡಿತ 100 ದಿನಗಳು ಉಳಿಯುತ್ತದೆ ಎಂದು ನೆಟ್ಟಿಗರು ಟ್ವಿಟರ್‌ನಲ್ಲಿ (Twitter) ವಿಮರ್ಶೆ ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೆ ಸುರೇಶ್ ಬಂಡವಾಳ ಹಾಕಿದ್ದಾರೆ.