ಮೀರ್ ರಜಪೂತ್ ನಿನ್ನೆ 'ಇನ್‌ಸ್ಟಾಗ್ರಾಂ'ನಲ್ಲಿ (08 ಜನವರಿ 2024) ಆಸ್ಕ್ ಮಿ ಎನಿಥಿಂಗ್ (ಎಎಮ್‌ಎ) ಸೆಷನ್‌ನಲ್ಲಿ ಭಾಗವಹಿಸಿ ಹಲವಾರು ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡರು.
ಮೀರಾ ರಜಪೂತ್, ಬಾಲಿವುಡ್ ಹ್ಯಾಂಡ್‌ಸಮ್ ಬಾಯ್ ಶಾಹಿದ್ ಕಪೂರ್ ಹೆಂಡತಿ ಸದ್ಯ ಟ್ರೆಂಡಿಂಗ್‌ನಲ್ಲಿ ಇದ್ದಾಳೆ. ಮೀರ್ ರಜಪೂತ್ ನಿನ್ನೆ 'ಇನ್‌ಸ್ಟಾಗ್ರಾಂ'ನಲ್ಲಿ (08 ಜನವರಿ 2024) ಆಸ್ಕ್ ಮಿ ಎನಿಥಿಂಗ್ (ಎಎಮ್‌ಎ) ಸೆಷನ್‌ನಲ್ಲಿ ಭಾಗವಹಿಸಿ ಹಲವಾರು ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡರು. ಮೀರಾ ರಜಪೂತ್ ಸ್ವತಃ ತಮ್ಮ ಬಗ್ಗೆ, ಗಂಡ ಶಾಹಿದ್ ಕಪೂರ್ ಬಗ್ಗೆ ಹಾಗೂ ಬಾಲಿವುಡ್ ಕಿಂಗ್ ಖಾನ್ ಖ್ಯಾತಿಯ ನಟ ಶಾರುಖ್ ಖಾನ್ ಬಗ್ಗೆ ಮಾತನಾಡಿದ್ದಾರೆ.
ಹೌದು, ಆಸ್ಕ್ ಮಿ ಎನಿಥಿಂಗ್ ಕಾನ್ಸೆಪ್ಟ್ ಇರುವಂತೆಯೇ, ಮೀರಾ ರಜಪೂತ್ (Mira Rajput)ಅವರಿಗೆ ಹಲವಾರು ವಿಭಿನ್ನ ಪ್ರಶ್ನೆಗಳು ತೂರಿ ಬಂದಿವೆ. ಯಾರೋ ಒಬ್ಬರು ಅಭಿಮಾನಿ 'ನಿಮ್ಮಿಬ್ಬರಲ್ಲಿ ಯಾರು ಚೆನ್ನಾಗಿ ಡಾನ್ಸ್ ಮಾಡುತ್ತೀರಾ? ನೀವಾ ಇಲ್ಲ ನಿಮ್ಮ ಗಂಡ ಶಾಹಿದ್ ಅವರಾ?' ಎಂಬ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಮೀರಾ 'ನನಗೆ 2 ಎಡಗಾಲಿದೆ' ಎಂಬ ಫನ್ನಿ ಉತ್ತರ ಕೊಟ್ಟಿದ್ದಾರೆ. ಜತೆಗೆ, 'ಇಬ್ಬರಿಗೂ ಬೇಕಾಗುವಷ್ಟು ಚೈತನ್ಯವಿದೆ' ಎಂದಿದ್ದಾರೆ. ಅಂದರೆ, ಇಬ್ಬರೂ ಚೆನ್ನಾಗಿಯೇ ಡಾನ್ಸ್ ಮಾಡುತ್ತಾರೆ ಎಂದೇ ಅವರ ಉತ್ತರ ಇರಬಹುದು.
ಪರಮ ಭಕ್ತನ ಸಾತ್ ಪಡೆದ 'ಹನು-ಮಾನ್' ಸಿನಿಮಾ; ತೇಜ ಸಜ್ಜಾ ಮೀಟ್ಸ್ ಧ್ರುವ ಸರ್ಜಾ
ಮೀರಾ ರಜಪೂತ್ ತಮ್ಮ ಗಂಡನನ್ನು ನಟ ಶಾರುಖ್ ಭೇಟಿಯಾದರೆ ಯಾಕೆ 'ಪದ್ಮಶ್ರೀ, ಡಾಕ್ಟರ್, ಸರ್ ಜೀ' ಮುಂತಾದ ಹೆಸರುಗಳಿಂದ ಕರೆಯುತ್ತಾರೆ ಎಂಬ ಸೀಕ್ರೆಟ್‌ಅನ್ನು ಕೂಡ ರಿವೀಲ್ ಮಾಡಿದ್ದಾರೆ. ಈ ಬಗ್ಗೆ ಒಂದೇ ವಾಕ್ಯದಲ್ಲಿ ಉತ್ತರಿಸಿರುವ ಮೀರಾ ರಜಪೂತ್ 'ನನ್ನ ಗಂಡ ಶಾಹಿದ್ ನಟಿಸಿರುವ ಸಿನಿಮಾ ಹೆಸರುಗಳು ಮತ್ತು ಪಾತ್ರಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಶಾರುಖ್ ಅದೇ ಹೆಸರುಗಳಿಂದ ಕರೆಯುತ್ತಾರೆ'ಎಂದಿದ್ದಾರೆ. ಜತೆಗೆ, ಶಾರುಖ್ ನಮ್ಮನ್ನು ಭೇಟಿಯಾದಾಗಲೆಲ್ಲ ಅದೇ ಹೆಸರುಗಳಿಂದ ಶಾಹಿದ್‌ನನ್ನು ಕರೆಯುತ್ತಾರೆ' ಎಂದು ಹೇಳಿ ಲವ್ ಇಮೋಜಿ ಕೂಡ ಇಟ್ಟಿದ್ದಾರೆ ಮೀರಾ ರಜಪೂತ್.
ಮತ್ತೆ ಬಂತು ನಾಮಿನೇಷನ್ ಭೂತ; ಫಿನಾಲೆಗೆ ಬಲಗಾಲಿಟ್ಟು ಹೋಗಲಿರುವ ಸ್ಪರ್ಧಿ ಇವರಾ ಅವರಾ?!
ಅಂದಹಾಗೆ, ಫರ್ಜಿ ಖ್ಯಾತಿಯ ನಟಿ ಶಾಹಿದ್ ಕಪೂರ್ (Shahid Kapoor),ಸೌತ್ ಸ್ಟಾರ್ ನಟ ವಿಜಯ್ ದೇವರಕೊಂಡ ನಟನೆಯ ಸೂಪರ್ ಹಿಟ್ ಚಿತ್ರ 'ಅರ್ಜುನ್ ರೆಡ್ಡಿ' ರೀಮೇಕ್ 'ಕಬೀರ್ ಸಿಂಗ್ ಚಿತ್ರದಲ್ಲಿ ನಟಿಸಿದ್ದರು. ಬಳಿಕ ಅವರು ಜೆರ್ಸಿ (Jersey)ಹಾಗೂ ಬ್ಲಡಿ ಡ್ಯಾಡಿ (Bloody Daddy) ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೇಚೆಗೆ ಕಾಮಿಡಿ ನೈಟ್ಸ್ ವಿತ್ ಕಪಿಲ್' ಶೋದಲ್ಲಿ ಕೂಡ ಭಾಗವಹಿಸಿ ಅಲ್ಲಿ ಮಾತುಕತೆ ನಡೆಸಿದ್ದಾರೆ. ಒಟ್ಟಿನಲ್ಲಿ ನಟ ಶಾಹಿದ್ ಕಪೂರ್ ತಮ್ಮ ವೃತ್ತಿ ಜೀವನದಲ್ಲಿ ತಕ್ಕಮಟ್ಟಿಗೆ ಬ್ಯುಸಿ ಆಗಿದ್ದಾರೆ.