ಮದ್ವೆಗೆ ಜಿಮ್​ ಡ್ರೆಸ್​, ಪಾರ್ಟಿಗೆ ನೈಟ್​ ಡ್ರೆಸ್​- ಇನ್ನು ಇವ್ರ ಡ್ಯಾನ್ಸ್​ ಅಂತೂ ನೋಡೋಕಾಗ್ತಿಲ್ಲ ಅಂತಿದ್ದಾರೆ ನೆಟ್ಟಿಗರು!

By Suvarna News  |  First Published Jan 9, 2024, 2:59 PM IST

ಆಮೀರ್​ ಖಾನ್​ ಪುತ್ರಿ ಇರಾ ಖಾನ್​ ಹಾಗೂ ಅಳಿಯ ನೂಪುರ್​ ವಿಚಿತ್ರವಾಗಿ ಡ್ಯಾನ್ಸ್​ ಮಾಡಿರುವ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.
 


ಮುಂಬೈನ ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಆಮೀರ್​ ಖಾನ್​ ಮತ್ತು ಅವರ ಮೊದಲ ಪತ್ನಿ ರೀನಾ ಅವರ ಪುತ್ರಿ ಇರಾ ಖಾನ್​ ಮತ್ತು  ಬಹುಕಾಲದ ಗೆಳೆಯ ಫಿಟ್ನೆಸ್ ಫ್ರೀಕ್ ನೂಪುರ್ ಶಿಖರೆ ಅವರನ್ನು ಕಳೆದ 3ರಂದು ಮದುವೆಯಾದರು.  2020ರ ಇದೇ ದಿನದಂದು ಅಂದರೆ  ಜನವರಿ 3ರಂದು  ಇರಾ ಮತ್ತು ಶಿಖರೆ ಅವರು ಮೊದಲದು ಭೇಟಿಯಾಗಿದ್ದು, ಪ್ರೇಮಾಂಕುರವಾದದ್ದು. ಮೂರು ವರ್ಷ ಸುತ್ತಾಟ, ಡೇಟಿಂಗ್​ ಮಾಡಿದ ಬಳಿಕ  ಮದುವೆಯಾಗಿದೆ ಜೋಡಿ.   ವಿವಾಹಕ್ಕೆ ಇರಾ ಲೆಹೆಂಗಾ ಹಾಕಿ ಅದ್ದೂರಿಯಾಗಿ ಸಜ್ಜಾಗಿದ್ದರು. ಆಮೀರ್, ಆತನ ಪತ್ನಿಯರು ಎಲ್ಲರೂ ಮಿರಿಮಿರಿ ಮಿಂಚುತ್ತಿದ್ದರು. ಆದರೆ, ಮದುವೆ ವರ ಮಾತ್ರ ಕಪ್ಪು ಬನಿಯನ್, ಬಿಳಿ ಚಡ್ಡಿ ಧರಿಸಿದ್ದಿದು ಬಹಳ ವಿಚಿತ್ರವಾಗಿತ್ತು. ಈ ಸಂಬಂಧ ವಿಡಿಯೋ ವೈರಲ್ ಆದ ಕೂಡಲೇ ನೆಟಿಜನ್‌ಗಳು ಥಹರೇವಾರಿ ಕಮೆಂಟ್​  ಮಾಡಿದ್ದರು. 

ಇದೀಗ ಇರಾ ಖಾನ್​, ನೈಟ್​ ಡ್ರೆಸ್​ನಲ್ಲಿ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪತಿ-ಪತ್ನಿ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್​ ಆಗಿದೆ. ಪತಿ-ಪತ್ನಿ ಇಬ್ಬರೂ ಹುಚ್ಚರಂತೆ ಡ್ಯಾನ್ಸ್​ ಮಾಡಿದ್ದು, ಇದರಿಂದ ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಇಬ್ಬರೂ ಫುಲ್​ ಟೈಟ್​ ಆದ ಹಾಗಿದೆ ಎಂದೆಲ್ಲಾ ಫ್ಯಾನ್ಸ್​ ಕಮೆಂಟ್​ ಮಾಡುತ್ತಿದ್ದಾರೆ. ಮಾಡೋದೆಲ್ಲಾ ಮದ್ವೆಗೂ ಮುನ್ನವೇ ಮಾಡಿ ಆಗಿದ್ದು, ಇನ್ನೇನು ಬಾಕಿ ಇಲ್ಲ ಎಂದು ಇಬ್ಬರೂ ಹುಚ್ಚರಂತೆ ಕುಣಿಯುತ್ತಿದ್ದಾರೆ ಎಂದು ಕೂಡ ಕೆಟ್ಟದಾಗಿಯೂ ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.  ಶಿಖರ್​ಗೆ ಅಂತೂ ಡ್ಯಾನ್ಸ್​ ಮಾಡಲು ಬರುವುದೇ ಇಲ್ಲ, ಆತ ಕೂಡ ಹೆಂಡತಿ ಜೊತೆ ಸೇರಿ ಹುಚ್ಚನಂತೆ ವರ್ತಿಸುತ್ತಿದ್ದಾನೆ ಎನ್ನುತ್ತಿದ್ದಾರೆ ಇನ್ನು ಕೆಲವರು.

Tap to resize

Latest Videos

ಸೂಟ್​-ಬೂಟ್​ ಬದ್ಲು ಚೆಡ್ಡಿ-ಬನಿಯನ್‌ನಲ್ಲಿ ಮದ್ವೆಯಾದ ಗಂಡನ ಬಗ್ಗೆ ಆಮೀರ್​ ಪುತ್ರಿ ಇರಾ ಹೇಳಿದ್ದೇನು?

ಅಷ್ಟಕ್ಕೂ ನೂಪುರ್​ ಮದುವೆಯ ದಿನ ಅಂಗಿ-ಚೆಡ್ಡಿಯಲ್ಲಿ ಬಂದ ಟ್ರೋಲ್​ಗೆ ಉತ್ತರಿಸಿದ್ದ ಇರಾ ಖಾನ್​, ನೂಪುರ್  ಕುದುರೆ ಹತ್ತಿ ದಿಬ್ಬಣದಲ್ಲಿ ಬರಲಿಲ್ಲ. ಮದುವೆ ಸ್ಥಳಕ್ಕೆ ಅವರು ಜಾಗಿಂಗ್​ ಮಾಡಿಕೊಂಡು ಬಂದಿದ್ದ. ಇದೇ ಕಾರಣಕ್ಕೆ ಬನಿಯನ್​-ಚೆಡ್ಡಿ ಧರಿಸಿದ್ದ ಎಂದಿದ್ದರು.  ನೂಪುರ್​ ಇರಾಳನ್ನು ಪ್ರಪೋಸ್​  ಮಾಡುವಾಗಲೂ ಇದೇ ರೀತಿ ಕಾಣಿಸಿಕೊಂಡಿದ್ದರಿಂದ ಮದುವೆಯ ದಿನವೂ ಹೀಗೆಯೇ ಕಾಣಿಸಿಕೊಳ್ಳಬೇಕು ಎಂದು ಈ ರೀತಿಯ ಡ್ರೆಸ್​ ಹಾಕಿಕೊಂಡು ಬಂದಿದ್ದರು ಎಂದೂ ಹೇಳಲಾಗುತ್ತಿದೆ. ಅದೇ ವೇಳೆ ಮದುವೆಯ ದಿನವೇ ಅತ್ಯಂತ ಚಿಕ್ಕ ಡ್ರೆಸ್​ನಲ್ಲಿ ಇರಾ ಕೂಡ ಕಾಣಿಸಿಕೊಂಡಿದ್ದರು. ಮದುಮಗಳ ವರ್ತಿಸೋ ರೀತಿನಾ ಇದು ಎಂದು ಹಲವರು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಒಟ್ಟಿನಲ್ಲಿ ಸದ್ಯ ಇವರಿಬ್ಬರ ಹೊಸ ವಿಡಿಯೋ ವೈರಲ್​ ಆಗುತ್ತಿದೆ. 

ಮದುವೆ   ಮನೆಯಲ್ಲಿ ಮದುಮಗನ ಡ್ರೆಸ್​ ಗಮನ ಸೆಳೆದಂತೆ, ಮತ್ತೊಂದು ಗಮನ ಸೆಳೆದದ್ದು ಆಮೀರ್​ ಖಾನ್​ ಅವರ ಇಬ್ಬರು ಮಾಜಿ ಪತ್ನಿಯರು.  ಮುಂಬೈನ ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಆಮೀರ್​ ಖಾನ್​ ಮತ್ತು ಅವರ ಮೊದಲ ಪತ್ನಿ ರೀನಾ ಅವರ ಪುತ್ರಿ ಇರಾ ಖಾನ್​ ಮದ್ವೆಯಾಗಿದ್ದರೆ, ದ್ವಿತೀಯ ಪತ್ನಿ ಕಿರಣ್​ ರಾವ್​ ಕೂಡ ಗಮನ ಸೆಳೆದರು.  ಇರಾ ಖಾನ್​ ನಟ ಆಮೀರ್​ ಖಾನ್​ ಮತ್ತು ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಪುತ್ರಿ.  ಅಂದಹಾಗೆ ಆಮೀರ್​ ಖಾನ್​ ಅವರು ಎರಡನೆಯ ಪತ್ನಿಯೂ ವಿಚ್ಛೇದನ ನೀಡಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಜೊತೆ 1986–2002ರವರೆಗೆ ಸಂಸಾರ ನಡೆಸಿದ್ದ ಆಮೀರ್​ 2005ರಲ್ಲಿ ಕಿರಣ್​ ರಾವ್​ ಅವರನ್ನು ಮದುವೆಯಾಗಿದ್ದು, 2021ರಲ್ಲಿ ಅವರಿಗೂ ಡಿವೋರ್ಸ್​ ಕೊಟ್ಟಿದ್ದಾರೆ. ಇದೀಗ ಮಗಳ ಮದುವೆಗೆ ಮೊದಲ ಪತ್ನಿ  ಕಿರಣ್​ ಕೂಡ ಹಾಜರಾಗಿದ್ದಾರೆ.  ಇರಾ ಖಾನ್​ ಸ್ಟಾರ್​ ಕಿಡ್​ ಆಗಿದ್ದರೂ ಬಣ್ಣದ ಲೋಕದಿಂದ ದೂರ ಉಳಿದು ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. 
 

ಮದ್ವೆ ಎಂಟ್ರಿ ಅಂದ್ರೆ ಇದಪ್ಪಾ...! ಮದುಮಕ್ಕಳನ್ನು ಬಿಟ್ಟು ಅಂಬಾನಿ ದಂಪತಿಯನ್ನೇ ನೋಡಿದ ಅತಿಥಿಗಳು!

click me!